ಸೀತಾ ಮತ್ತು ರಾಮ್ ಲವ್ ಶುರುವಾಗಿದೆ. ಇಬ್ಬರೂ ಪ್ರೀತಿಯನ್ನು ಹಂಚಿಕೊಂಡಿದ್ದಾರೆ. ಈ ಕ್ಯೂಟ್ ಪ್ರೊಮೋಗೆ ನೆಟ್ಟಿಗರು ಏನೆಲ್ಲಾ ಹೇಳಿದ್ರು ನೋಡಿ...
ಸೀತಾ ರಾಮ ಲವ್ ಸ್ಟೋರಿ ಶುರುವಾಗಿಬಿಟ್ಟಿದೆ. ಆದರೆ ಮನೆಯಲ್ಲಿ ಇದನ್ನು ಹೇಳುವ ಧೈರ್ಯವಿಲ್ಲ. ಅದೇ ಇನ್ನೊಂದೆಡೆ, ಹಿಂದಿನ ಪ್ರೀತಿ ಪ್ರೇಮ ಎಲ್ಲವನ್ನೂ ಮರೆತು ನಾನು ಹೇಳುವ ಹುಡುಗಿಯ ಜೊತೆ ಮದ್ವೆಯಾಗು ಎಂದು ತಾತ ಹೇಳಿದ್ದಾರೆ. ಇದನ್ನು ಕೇಳಿ ರಾಮ್ಗೆ ಆಕಾಶವೇ ಬಿದ್ದ ಅನುಭವವಾಗಿದೆ. ಹಿಂದಿನ ಪ್ರೇಯಸಿಯನ್ನು ಮರೆತು ಸೀತಾಳ ಜೊತೆ ಬದುಕು ಕಟ್ಟಿಕೊಳ್ಳಲು ಕಾಯುತ್ತಿದ್ದ ರಾಮ್ಗೆ ತಾತನ ಮುಂದೆ ಏನು ಹೇಳಬೇಕೋ ತಿಳಿದಿರಲಿಲ್ಲ. ಏಕೆಂದರೆ ಸೀತಾ ಇದುವರೆಗೆ ತನ್ನನ್ನು ಒಪ್ಪಿಕೊಂಡಿರುವ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಮನಸ್ಸಿನಲ್ಲಿಯೇ ರಾಮ್ನನ್ನು ಪ್ರೀತಿಸುತ್ತಿದ್ದರೂ ಸೀತಾ, ಇದನ್ನು ರಾಮ್ಗೆ ಹೇಳಿರಲಿಲ್ಲ. ಹೀಗಿರುವಾಗ ರಾಮ್ ಬೆಟ್ಟದ ಮೇಲೆ ಹೋಗಿದ್ದ. ಇದು ಸೀತಾಳಿಗೆ ತಿಳಿದು ಆತ ಸಾಯಲು ಹೊರಟ ಎಂದುಕೊಂಡು ಓಡಿಹೋಗಿ ರಾಮ್ನನ್ನು ತಬ್ಬಿಕೊಂಡಿದ್ದಳು. ರಾಮ್ ಕೂಡ ಬಂದು ನೀವು ನನ್ನನ್ನು ಪ್ರೀತಿಸ್ತಿದ್ದೀರಾ ಎಂದು ಕೇಳಿದಾಗ ಕೊನೆಗೂ ಸೀತಾ ರಾಮ್ನನ್ನು ತಬ್ಬಿಕೊಂಡು ಪ್ರೀತಿಯನ್ನು ಒಪ್ಪಿಕೊಂಡಿದ್ದಾಳೆ.
ನಂತರ, ಅಶೋಕ್ ಮತ್ತು ಪ್ರಿಯಾರಿಗಾಗಿ ರೆಡಿ ಮಾಡಿರುವ ಸ್ಥಳಕ್ಕೆ ರಾಮ್ ಸೀತಾಳನ್ನು ಕರೆದುಕೊಂಡು ಬಂದಿದ್ದಾನೆ. ನಂತರ ಜೋರಾಗಿ ನಕ್ಕು, ನೀನ್ಯಾಕೆ ಅಷ್ಟೊಂದು ಹೆದರಿಕೊಂಡಿದ್ದಿ, ನಾನು ಸಾಯಲು ಹೊರಟೆ ಅಂದುಕೊಂಡಿದ್ಯಾ? ನಾನು ಹಾಗೆಲ್ಲಾ ಮಾಡಿಕೊಳ್ತೀನಾ ಎಂದು ಜೋರಾಗಿ ನಕ್ಕಿದ್ದಾನೆ. ಇದನ್ನು ಕೇಳಿ ಹುಸಿಮುನಿಸು ತೋರಿರುವ ಸೀತಾ ಅವನಿಗೆ ಬೈದಿದ್ದಾಳೆ. ಕೊನೆಗೆ ಇಬ್ಬರ ನಡುವೆ ಮಾತುಕತೆಯಾಗಿದೆ. ಸೀತಾ ತನ್ನ ಪ್ರೀತಿಯನ್ನು ಮತ್ತೊಮ್ಮೆ ರಾಮ್ಗೆ ಹೇಳಿದ್ದಾಳೆ. ಆದರೆ ಒಂದು ಮಗುವಿನ ತಾಯಿಯಾಗಿರುವ ತನ್ನನ್ನು ರಾಮ್ನ ಮನೆಯವರು ಒಪ್ಪುತ್ತಾರೋ ಇಲ್ಲವೋ ಎನ್ನುವ ಅಳುಕು ಅವಳಿಗೂ ಇದೆ. ಜೊತೆಗೆ ಚಾಂದನಿಯ ಬಗ್ಗೆಯೂ ರಾಮ್ನನ್ನು ಪ್ರಶ್ನಿಸಿದ್ದಾಳೆ.
ಈ ಅಮ್ಮ-ಮಗನ ಬಾಂಧವ್ಯಕ್ಕೆ ಯಾರ ಕಣ್ಣೂ ಬೀಳದಿರಲಪ್ಪ ಅಂತಿದ್ದಾರೆ ಅಭಿಮಾನಿಗಳು!
ಮುಂದೆ? ಈ ಚೆಂದ ಅನುಭವಕೆ ನೀವೇ ಒಂದು ಹೆಸರಿಡಿ! ಬೆಸ್ಟ್ ಕ್ಯಾಪ್ಷನ್‌ನ ಸೆಲೆಕ್ಟ್ ಮಾಡಿ ನಿಮ್ಮನ್ನ ಟ್ಯಾಗ್ ಮಾಡ್ತೀವಿ ಎಂದು ಜೀ ಕನ್ನಡ ವಾಹಿನಿ ಪ್ರೊಮೋ ಶೇರ್ ಮಾಡಿದೆ. ಇಲ್ಲಿಗೆ ಸೀತಾ ಮತ್ತು ರಾಮ್ ಒಂದಾಗಿದ್ದಾರೆ. ಆದರೆ ಮುಂದೆ? ಗೊತ್ತಿಲ್ಲ. ಮುಂದಿರುವುದು ಬೆಟ್ಟದಷ್ಟು ಸವಾಲುಗಳು. ಒಂದೆಡೆ ರಾಮ್ನ ಚಿಕ್ಕಮ್ಮ ಮತ್ತು ಚಾಂದನಿ ಸೇರಿ ಪ್ಲ್ಯಾನ್ ಮಾಡಿದ್ದಾರೆ. ಚಿಕ್ಕಮ್ಮ ಅಂತೂ ರಾಮ್ನನ್ನು ಮುಗಿಸುವ ತನಕ ಹೋಗಿದ್ದಾಳೆ. ತಾತನಿಗೆ ಸೀತಾಳ ಮೇಲೆ ಇಷ್ಟವಿದ್ದರೂ ಆಕೆ ಒಂದು ಮಗುವಿನ ತಾಯಿ ಎನ್ನುವ ಸತ್ಯ ಗೊತ್ತಿಲ್ಲ. ಅದು ಗೊತ್ತಾದರೆ ಮದುವೆಗೆ ಒಪ್ಪುವುದು ಕಷ್ಟವೇ. ಪರಿಸ್ಥಿತಿ ಹೀಗೆಲ್ಲಾ ಇರುವಾಗ ಮುಂದೇನು ಎಂದು ಪ್ರಶ್ನೆ ಕಾಡುವುದು ಸಹಜ.
ಆದರೆ ಇದರ ನಡುವೆಯೇ ಇವರ ಜೋಡಿ ಹೀಗೆಯೇ ಇರಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. ಮತ್ತೆ ಕೆಲವರು ಕಾಲೆಳೆದು, ಪ್ರೀತಿ ಬೇಡ ಬೇಡ ಅಂತಿದ್ದೋಳು, ಲವ್ ಶುರುವಾಗುವ ಮೊದಲೇ ಹೋಗಿ ತಬ್ಬಿಕೊಂಡಿದ್ದಾಳಲ್ಲಾ ಎನ್ನುತ್ತಿದ್ದಾರೆ. ಲವ್ ಶುರುವಾಗೋಕು ಮುನ್ನ ಹೀಗೆ ತಬ್ಬಿಕೊಳ್ಳೋದಾ ಎಂದು ಮತ್ತೆ ಕೆಲವರು ಪ್ರಶ್ನಿಸುತ್ತಿದ್ದಾರೆ. ಮತ್ತೆ ಹಲವರಂತೂ ಈ ಪ್ರೀತಿಗೆ ಸುಂದರ ಶೀರ್ಷಿಕೆ ಕೊಟ್ಟು ಪೋಸ್ಟ್ ಮಾಡುತ್ತಿದ್ದಾರೆ. ಪೋಸ್ಟ್ಗಳ ಸುರಿಮಳೆಯೇ ಆಗುತ್ತಿದೆ. ಆದರೆ ಇವರ ಪ್ರೀತಿಯ ಭವಿಷ್ಯ ಮಾತ್ರ ಯಾರಿಗೂ ಗೊತ್ತಿಲ್ಲ.
ದಯವಿಟ್ಟು ಫೇಕ್ನ್ಯೂಸ್ ಹರಡಬೇಡಿ ಎಂದು 'ಕರಿಮಣಿ ಮಾಲಿಕ' ವಿಕ್ಕಿ ಮನವಿ: ಆದ್ರೆ ಅಲ್ಲಾಗಿದ್ದೇ ಬೇರೆ!
