Asianet Suvarna News Asianet Suvarna News

ಸತ್ಯಳ ಅತ್ತೆ ಸೀತಂಗೆ ಬಸ್​ಸ್ಟ್ಯಾಂಡ್​ನಲ್ಲಿ ಲೈನ್​ ಹೊಡೆದ ಆಸಾಮಿ! ಮುಂದೇನಾಯ್ತು ನೋಡಿ...

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಜೋಡಿ ನಂಬರ್​ 1 ಷೋನಲ್ಲಿ ಬಸ್​ಸ್ಟ್ಯಾಂಡ್​ನಲ್ಲಿ ಲೈನ್​ ಹೊಡೆಯುವ ಸೀನ್​ ಕ್ರಿಯೇಟ್​ ಮಾಡಲಾಗಿದೆ. ಇಲ್ಲಿದೆ ನೋಡಿ ವಿಡಿಯೋ... 
 

Scene of  bus stand love story has been created in Jodi Number 1 of Zee Kannada suc
Author
First Published Dec 31, 2023, 4:41 PM IST

ಬಸ್​ಸ್ಟ್ಯಾಂಡ್​ನಲ್ಲಿ ನಿಂತಾಗ ಯಾರೋ ಬಂದು ಲೈನ್​ ಹೊಡೆಯುವುದು, ಇನ್ನಾರೋ ಬಂದು ಹೀರೋ ಆಗಿ ತಪ್ಪಿಸೋದು  ಇವೆಲ್ಲವೂ ಆಗ್ಗಾಗ್ಗೆ ಕೇಳಿಬರುತ್ತಲೇ ಇರುತ್ತದೆ. ಬಸ್‌ಸ್ಟ್ಯಾಂಡ್‌ನಲ್ಲಿ ನಡೆಯೋ ಈ ಬ್ಯೂಟಿಫುಲ್ ಲವ್ ಸ್ಟೋರಿಯನ್ನ ನೀವು ಯಾವತ್ತೂ ನೋಡಿಲ್ಲ ಬಿಡಿ ಅಂತ ಶೀರ್ಷಿಕೆ ಕೊಟ್ಟು ಇದನ್ನೇ ಮರುರೂಪಿಸಿದೆ ಜೀ ಕನ್ನಡ ವಾಹಿನಿಯ ಜೋಡಿ ನಂ.1 ಕಾರ್ಯಕ್ರಮ. ಅಷ್ಟಕ್ಕೂ ಇಲ್ಲಿ ಲೈನ್​ ಹೊಡೆಸಿಕೊಳ್ಳುವವರು ಬೇರೆ ಯಾರೂ ಅಲ್ಲ, ಸತ್ಯ ಸೀರಿಯಲ್​ ಸತ್ಯನ ಅತ್ತೆ ಸಂಪ್ರದಾಯಸ್ಥ ಮಹಿಳೆ ಸೀತಾ ಅರ್ಥಾತ್​ ಮಾಲತಿ ಸರ್​ದೇಶ್​ಪಾಂಡೆ. ಈ ಬಾರಿ ಜೋಡಿ ನಂಬರ್​-1 ನಲ್ಲಿ ಸತ್ಯ ಸೀರಿಯಲ್​ನಲ್ಲಿ ಸೀತಾಳ ಮೈದುನ ಲಕ್ಷ್ಮಣ ಪಾತ್ರಧಾರಿ ಅಭಿಜಿತ್​ ಅವರೂ ಹಾಜರಿದ್ದು ಬಸ್​ಸ್ಟ್ಯಾಂಡ್​ನಲ್ಲಿ ಲೈನ್​ ಹೊಡೆಯುವ ದೃಶ್ಯವನ್ನು ಹಾಸ್ಯದ ರೂಪದಲ್ಲಿ ಬಿಂಬಿಸಲಾಗಿದೆ.

ಇದೇ ವೇದಿಕೆಯ ಮೇಲೆ ಅಭಿಜಿತ್​ ಅವರು ಮಾಲತಿ ಸರ್​ದೇಶಪಾಂಡೆ ಕುರಿತು ಮಾತನಾಡಿದ್ದಾರೆ. ಅವರು ತುಂಬಾ ದೊಡ್ಡ ಕಲಾವಿದೆ. ಇವತ್ತಿನವರೆಗೂ ಸೆಟ್​ನಲ್ಲಿ ಯಾರೊಬ್ಬರನ್ನೂ ನೋವು ಉಂಟು ಮಾಡಿಲ್ಲ. ಅವರನ್ನು ನೋಡಿ ಕಲಿಯಬೇಕಾದದ್ದು ತುಂಬಾ ಇದೆ ಎಂದಿದ್ದರೆ, ಅಭಿಜಿತ್​ ಅವರನ್ನು ಹೊಗಳಿದ ಮಾಲತಿ ಅವರು, ಸರ್​ ಅವರನ್ನು ನೋಡಿಯೇ ನಾವು ಬೆಳೆದದ್ದು. ವಿಷ್ಣು ಸರ್​ ಜೊತೆ ಇವರ ಆ್ಯಕ್ಟಿಂಗ್​ ಅದನ್ನು ನೋಡಿ ಬೆಳೆದಿದ್ದೆ. ಇನ್ನೊಂದು ಚೂರು ಬೇಗ ಹುಟ್ಟಿದ್ದರೆ ಬಹುಶಃ ಎಲ್ಲರ ಜೊತೆ ಆ್ಯಕ್ಟ್​ ಮಾಡುತ್ತಿದ್ದೆ.  ಆದರೆ ಮಿಸ್​  ಮಾಡಿಕೊಂಡೆ ಎಂದರು. 

ಅಬ್ಬಬ್ಬಾ.. ಈ ಪರಿ ರೊಮ್ಯಾನ್ಸಾ? ವಿಡಿಯೋ ನೋಡಿ ಕಂಟ್ರೋಲ್​.. ಕಂಟ್ರೋಲ್​ ಅಂತಿದ್ದಾರೆ ಫ್ಯಾನ್ಸ್​!

ಸತ್ಯ ಸೀರಿಯಲ್​ ಬಗ್ಗೆ ಹೇಳಿದ ಮಾಲತಿ ಸರ್​ದೇಶಪಾಂಡೆ ಅವರು, ಸತ್ಯ ಸೀರಿಯಲ್​ನಲ್ಲಿ ಇವರು ನನ್ನ ಮೈದುನನ ಪಾತ್ರ ಮಾಡುತ್ತಾರೆ ಎಂದಾಗ ಅಂಥ ಕಲಾವಿದನ ಜೊತೆ ನಾನು ಪಾರ್ಟ್​ ಮಾಡುವುದು ಕೇಳಿ ತುಂಬಾ ಸಂತೋಷವಾಯಿತು. ಅವರು ತುಂಬಾ ಒಳ್ಳೆಯ ಸಿಂಗರ್ ಕೂಡ ಎಂದರು. ಇಷ್ಟಾಗುತ್ತದ್ದಂತೆಯೇ ಆ್ಯಂಕರ್​ ಶ್ವೇತಾ ಅವರು ಬಸ್​ಸ್ಟ್ಯಾಂಡ್​ ಲವ್​ ಸೀನ್​ ಕ್ರಿಯೇಟ್​ ಮಾಡಿ ಅಲ್ಲಿ ಸಕತ್​ ತಮಾಷೆ ಮಾಡಿದರು. 

ಮಾಲತಿ ಸರ್​ದೇಶಪಾಂಡೆ ಅವರು ತಮ್ಮ ಪತಿ ರಂಗಭೂಮಿ ಕಲಾವಿದ  ಸರ್​ದೇಶಪಾಂಡೆ ಅವರೊಂದಿಗೆ ಜೋಡಿ ನಂ.1 ಷೋನಲ್ಲಿ ಭಾಗವಹಿಸಿದ್ದು, ಹಲವು ವಾರಗಳು ಕಳೆದಿವೆ. ಇನ್ನು ಸರ್​ದೇಶಪಾಂಡೆ ಕುರಿತು ಹೇಳುವುದಾದರೆ, ಇವರು,  ನಾಟಕ, ಸಿನಿಮಾ, ಸೀರಿಯಲ್‌ನಲ್ಲಿಯೂ ಮಿಂಚು ಹರಿಸಿ ನಗು ಉಕ್ಕಿಸುವವರು.  ಈ ಷೋನಲ್ಲಿ ಈ ಜೋಡಿ ಇದಾಗಲೇ ತಮ್ಮ ಹಲವು ರೋಚಕ ಘಟನೆಗಳನ್ನು  ತಿಳಿಸಿದ್ದು,   ಬಾಲ್ಯದಲ್ಲಿಯೇ ಕಳುವು ಮಾಡುತ್ತಿದ್ದ ಬಗ್ಗೆ ಯಶವಂತ್​ ಅವರು ಹಾಸ್ಯದ ಲೇಪ ಕೊಟ್ಟು ಹೇಳಿ ಕೆಲ ವಾರಗಳ ಹಿಂದೆ ನಗು ಉಕ್ಕಿಸಿದ್ದರು. 

ಹೊಸ ವರ್ಷಕ್ಕೆ ನಟಿ ಅದಿತಿ ಕಲಿಸಿಕೊಟ್ರು ಸುಲಭದಲ್ಲಿ ಮಾಡುವ ಬನಾನಾ ವಾಲ್​ನಟ್​ ಕೇಕ್​

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Follow Us:
Download App:
  • android
  • ios