ಸತ್ಯ ಸೀರಿಯಲ್​ ಟೀಂ ರೀಲ್ಸ್​  ಮಾಡಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ಒರಿಜಿನಲ್​  ಸತ್ಯಳನ್ನು ನೋಡಿ ಫ್ಯಾನ್ಸ್​ ಅಚ್ಚರಿ ಹೊರಹಾಕುತ್ತಿದ್ದಾರೆ.  

ಕಾರ್ತಿಕ್​ ಮೇಲೆ ಡ್ರಗ್ಸ್​ ಮಾಫಿಯಾ ಆರೋಪ ಬಂದಿದ್ದು, ಖುದ್ದು ಇನ್ಸ್​ಪೆಕ್ಟರ್​ ಸತ್ಯ ಆತನನ್ನು ಜೈಲಿಗೆ ತಳ್ಳಿದ್ದಾಳೆ. ಇದರ ಹಿಂದಿನ ರೂವಾರಿ ಕೀರ್ತನಾ ಎಂದು ತಿಳಿಯಲು ಇನ್ನು ಕೆಲವೇ ಹೆಜ್ಜೆಗಳು ಬಾಕಿ ಇವೆ. ಆದರೆ ಇದರ ನಡುವೆಯೇ, ಕಾರ್ತಿಕ್​ನನ್ನು ಸತ್ಯ ಜೈಲಿಗೆ ಹಾಕಿದ್ದರಿಂದ ಇತ್ತ ಅತ್ತೆಯ ಮನೆಯವರೂ ಸತ್ಯಳನ್ನು ಹೊರಕ್ಕೆ ಹಾಕಿದ್ದರೆ, ತವರಿನಲ್ಲಿಯೂ ಸತ್ಯಳಿಗೆ ಜಾಗ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಸತ್ಯಳ ಫ್ರೆಂಡ್ಸ್​ ಸೇರಿ ಈ ಡ್ರಗ್ಸ್ ಮಾಫಿಯಾ ಬೇಧಿಸಲು ಸಹಾಯ ಮಾಡಿದ್ದಾರೆ. ಇದರಿಂದ ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಸತ್ಯ ಸೀರಿಯಲ್​ಗೆ ಸಕತ್​ ಟ್ವಿಸ್ಟ್​ ಬಂದಿದೆ.

ಇನ್ನು ಸತ್ಯ ಪಾತ್ರಧಾರಿ ಗೌತಮಿ ಜಾಧವ್ ಅವರ ರಗಡ್​ ಲುಕ್​ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಎಲ್ಲಾ ಅಡೆತಡೆಗಳನ್ನು ಎದುರಿಸಿ ಸತ್ಯ ಪೊಲೀಸ್​ ಅಧಿಕಾರಿಯಾಗುತ್ತಿದ್ದಾಳೆ. ಈಕೆ ಪೊಲೀಸ್​ ಪರೀಕ್ಷೆ ಬರೆದು ಪಾಸಾದರೂ ಅತ್ತ ಸೀತಮ್ಮನಿಗೆ ಯಾಕೋ ಪೊಲೀಸ್​​ ಕೆಲಸಕ್ಕೆ ಸೊಸೆಯನ್ನು ಸೇರಿಸುವ ಮನಸ್ಸು ಇಲ್ಲ. ಆದರೂ ಎಲ್ಲರನ್ನೂ ಒಪ್ಪಿಸಿ ಸತ್ಯ ಇದನ್ನು ಚಾಲೆಂಜ್​ ಆಗಿ ತೆಗೆದುಕೊಂಡಿದ್ದಾಳೆ. ತನ್ನ ತಂದೆಗೆ ಕೊಟ್ಟ ಮಾತನ್ನು ಉಳಿಸಿಕೊಂಡು ಪೊಲೀಸ್​ ಅಧಿಕಾರಿಯಾಗುವ ಪಣ ತೊಟ್ಟಿದ್ದು, ಅದನ್ನು ಸಾಧಿಸಿ ತೋರಿಸಿದ್ದಾಳೆ ಸತ್ಯ. ಇನ್​ಸ್ಪೆಕ್ಟರ್​ ಪಾತ್ರಕ್ಕೆ ಗೌತಮಿ ಅವರು ಸಕತ್​ ವರ್ಕ್​ಔಟ್​ ಮಾಡಿದ್ದಾರೆ. ನಿಜವಾಗಿಯೂ ಪೊಲೀಸ್​ ಇಲಾಖೆಯಲ್ಲಿ ಸೇರಲು ಬೇಕಾಗಿರುವ ಕೆಲವೊಂದು ಟ್ರೇನಿಂಗ್​ ಕೂಡ ಪಡೆದಿದ್ದು, ಅದರ ವಿಡಿಯೋಗಳನ್ನು ಜೀ ಕನ್ನಡ ವಾಹಿನಿ ಈ ಹಿಂದೆ ಶೇರ್​ ಮಾಡಿತ್ತು. 

ಸತ್ಯ ಸೀರಿಯಲ್​ನಲ್ಲಿ ಪೊಲೀಸ್​ ಪಾತ್ರಕ್ಕೆ ಇಷ್ಟು ಕಷ್ಟಪಟ್ಟಿದ್ದಾರಾ ನಟಿ? ತೆರೆಯ ಹಿಂದಿನ ವಿಡಿಯೋ ರಿಲೀಸ್​

ಇದೀಗ ಇಡೀ ಸತ್ಯ ತಂಡ ಪ್ರಖ್ಯಾತ ತಕಿಟ ತಕಿಟ ಹಾಡಿಗೆ ರೀಲ್ಸ್​ ಮಾಡಿದೆ. ಇದರಲ್ಲಿ ಸತ್ಯ ಸೀರಿಯಲ್​ನ ಬಹುತೇಕ ನಟಿಯರು ಇದ್ದಾರೆ. ಸತ್ಯ ಟೀಂ ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಇದೆ. ಇದೀಗ ರೀಲ್ಸ್ ಮಾಡುವ ಮೂಲಕ ನೆಟ್ಟಿಗರಿಂದ ಪ್ರಶಂಸೆ ಗಳಿಸಿದೆ ಟೀಂ. ಈ ರೀಲ್ಸ್​ನಲ್ಲಿ ಸತ್ಯಳೇ ಕಾಣಿಸುತ್ತಿಲ್ಲ ಎಂದು ಅನ್ನಿಸುವುದು ಉಂಟು. ಇದಕ್ಕೆಕಾರಣ ಸೀರಿಯಲ್​ನಲ್ಲಿ ಗಂಡುಬೀರಿಯಂತೆ ಬಾಯ್​ ಕಟ್​​ನಲ್ಲಿರೋ ಸತ್ಯಳದ್ದೇ ರೂಪ ಕಾಣಿಸುವುದು. ಆದರೆ ಅಸಲಿಗೆ ಗೌತಮಿ ಅವರಿಗೆ ಉದ್ದನೆಯ ಕೂದಲು ಇದ್ದು, ಅವರನ್ನು ಕಂಡುಹಿಡಿದ ಬಳಿಕ ನೆಟ್ಟಿಗರು ಒಹ್​ ನೀವು ಇಲ್ಲಿ ಇದ್ದೀರಾ, ಗೊತ್ತೇ ಆಗುವುದಿಲ್ಲ ಎನ್ನುತ್ತಿದ್ದಾರೆ.

ಅಂದಹಾಗೆ, ಗೌತಮಿ ಜಾಧವ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಜೀ ಕನ್ನಡದ ಸತ್ಯ ಧಾರಾವಾಹಿಯ ಟಾಮ್ ಬಾಯ್ ಪಾತ್ರದ ಮೂಲಕ ಗೌತಮಿ ಕರ್ನಾಟಕದ ಮನೆಮಾತಾಗಿದ್ದಾರೆ. ಬೆಂಗಳೂರಿನಲ್ಲಿ 1993 ಆಗಸ್ಟ್ 22 ರಂದು ಜನಿಸಿದ ಗೌತಮಿ ಅವರು, ಕನ್ನಡದ ಖ್ಯಾತ ಸಿನಿಮಾ ಛಾಯಾಗ್ರಾಹಕ ಅಭಿಷೇಕ್ ಕಾಸರಗೋಡ್ ಅವರನ್ನು ವಿವಾಹವಾಗಿದ್ದಾರೆ. ಗೌತಮಿ ನಟಿಸಿದ ಮೊದಲ ಚಿತ್ರ 2018 ರಲ್ಲಿ ತೆರೆಕಂಡ ಕಿನಾರೆ. ನಂತರ ಆದ್ಯ ಚಿತ್ರದಲ್ಲಿ ನಟಿಸಿದ್ದಾರೆ. ಕೆಲ ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ.

ಜೋಪಾನ ಕಣೋ ಅಶೋಕಾ... ಭಾರ್ಗವಿ ಆಂಟಿ ನಿನ್​ ಮೇಲೆ ಕಣ್ಣು ಹಾಕಿದ್ದಾಳೆ ಅಂತಿರೋದ್ಯಾಕೆ ನೆಟ್ಟಿಗರು?

Satya serial actresses new instagram reels ‎