ಜೋಪಾನ ಕಣೋ ಅಶೋಕಾ... ಭಾರ್ಗವಿ ಆಂಟಿ ನಿನ್ ಮೇಲೆ ಕಣ್ಣು ಹಾಕಿದ್ದಾಳೆ ಅಂತಿರೋದ್ಯಾಕೆ ನೆಟ್ಟಿಗರು?
ಸೀತಾರಾಮ ಸೀರಿಯಲ್ ಪಾತ್ರಧಾರಿಗಳಾದ ಭಾರ್ಗವಿ ಮತ್ತು ಅಶೋಕ್ ರೀಲ್ಸ್ ಮಾಡಿದ್ದು, ತರ್ಲೆ ನೆಟ್ಟಿಗರು ಏನೆಂದು ಕಮೆಂಟ್ ಮಾಡಿದ್ದಾರೆ ನೋಡಿ...
ಸೀತಾರಾಮ ಸೀರಿಯಲ್ ಕುತೂಹಲದ ಘಟ್ಟ ತಲುಪಿದೆ. ರಾಮ್ ಮತ್ತು ಸೀತಾ ಒಂದಾಗುವ ಕಾಲ ಬಂದಾಗಿದೆ. ಇಬ್ಬರ ಮದುವೆಯ ಬಗ್ಗೆ ಮಾತುಕತೆಯೂ ನಡೆಯುತ್ತಿದೆ. ಅದೇ ಇನ್ನೊಂದೆಡೆ ಸೀತಾಳ ಹುಟ್ಟುಹಬ್ಬಕ್ಕೆ ರಾಮ್ ಭರ್ಜರಿ ತಯಾರಿಯನ್ನೂ ಮಾಡುತ್ತಿದ್ದಾನೆ. ಸಿಂಪಲ್ ಸೀತಾಗೆ ಗ್ರ್ಯಾಂಡ್ ಪಾರ್ಟಿ ಎಲ್ಲಾ ಇಷ್ಟವಿಲ್ಲ. ಆದರೂ ಬಿಡದೇ ಗ್ರ್ಯಾಂಡ್ ಆಗಿಯೇ ಮಾಡುವ ಪ್ಲ್ಯಾನ್ ಮಾಡುತ್ತಿದ್ದಾನೆ. ಇವರಿಬ್ಬರ ಮದುವೆ ಮುಗಿಯುತ್ತಿದ್ದಂತೆಯೇ ಇಬ್ಬರನ್ನೂ ಬೇರೆ ಮಾಡುವ ಸಂಚು ರೂಪಿಸ್ತಿದ್ದಾಳೆ ಚಿಕ್ಕಿ ಭಾರ್ಗವಿ. ರಾಮ್ ಮತ್ತು ಸೀತಾರ ಮದುವೆಯನ್ನು ನೊಲ್ಲಿಸಲು ಶತ ಪ್ರಯತ್ನ ಮಾಡಿದರೂ ಅದು ಸಾಧ್ಯವಾಗಲಿಲ್ಲ. ಮಾಡಿದ ಸಂಚೆಲ್ಲಾ ವಿಫಲವಾಗುತ್ತಿದ್ದಂತೆಯೇ, ಮದುವೆಯಾದ ಮೇಲೆ ಇಬ್ಬರನ್ನೂ ಬೇರೆ ಮಾಡಲು ಯೋಚಿಸುತ್ತಿದ್ದಾರೆ.
ಮತ್ತೊಂದೆಡೆ, ರಾಮ್ನ ಕಾಪಾಡಲು ಹೋಗಿದ್ದ ಅಶೋಕ್ ಮೇಲೆ ಎಟ್ಯಾಕ್ ಆಗಿರುತ್ತದೆ. ಇದನ್ನು ಯಾರು ಮಾಡಿಸಿದ್ದಾರೆ ಎನ್ನುವ ಕುತೂಹಲ ಕಾಡ್ತಿದೆ. ಇದರ ನಡುವೆಯೇ, ಸೋಷಿಯಲ್ ಮೀಡಿಯಾದಲ್ಲಿ ಅಶೋಕ್ ಮತ್ತು ಚಿಕ್ಕಿ ಭಾರ್ಗವಿಯವರ ರೀಲ್ಸ್ ಒಂದು ವೈರಲ್ ಆಗಿದ್ದು, ನೆಟ್ಟಿಗರು ಇದಕ್ಕೆ ತಮಾಷೆಯ ಉತ್ತರ ಕೊಡುತ್ತಿದ್ದಾರೆ. ಕಿರುತೆರೆ ನಟ-ನಟಿಯರು ರೀಲ್ಸ್ ಮಾಡುವುದು ಹೊಸ ವಿಷಯವೇನಲ್ಲ. ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಆಗಿದ್ದಾರೆ. ಸೀತಾ ರಾಮ ತಂಡದ ಸದಸ್ಯರು ಇದಾಗಲೇ ಹಲವಾರು ರೀಲ್ಸ್ ಮಾಡಿದ್ದಾರೆ. ಇದೀಗ ಅಶೋಕ್ ಮತ್ತು ಭಾರ್ಗವಿ ಪಾತ್ರಧಾರಿಗಳು ರೀಲ್ಸ್ ಮಾಡಿದ್ದಾರೆ.
ಅಶೋಕಂಗೆ ಕರಿಮಣಿ ಮಾಲೀಕ ನೀನಲ್ಲ ಎನ್ನೋದಾ ಪ್ರಿಯಾ: ಹೀಗೆಲ್ಲಾ ಹೇಳ್ಬೇಡಿ ಪ್ಲೀಸ್ ಅಂತಿದ್ದಾರೆ ಫ್ಯಾನ್ಸ್
ಆರಂಭದಲ್ಲಿ ಇಬ್ಬರೂ ಹತ್ತಿರ ಬನ್ನಿ ಎಂದಾಗ ಇಬ್ಬರೂ ಹತ್ತಿರ ಬರುತ್ತಾರೆ. ಸ್ಮೈಲ್ ಎಂದಾಗ ಇಬ್ಬರೂ ನಗುತ್ತಾರೆ. ಹೆಗಲ ಮೇಲೆ ಕೈಇಡಿ ಎಂದಾಗ ಅಶೋಕ್ ತನ್ನ ಹೆಗಲ ಮೇಲೆ ಕೈಯಿಟ್ಟರೆ ಭಾರ್ಗವಿ ಅಶೋಕ್ ಹೆಗಲ ಮೇಲೆ ಕೈಇಡುತ್ತಾಳೆ. ಇದರಿಂದ ಸಿಟ್ಟುಗೊಂಡ ಭಾರ್ಗವಿ ಅಶೋಕ್ಗೆ ಹೊಡೆಯುತ್ತಾಳೆ. ಈ ರೀಲ್ಸ್ ವೈರಲ್ ಆಗುತ್ತಿದ್ದಂತೆಯೇ ತರ್ಲೆ ನೆಟ್ಟಿಗರು ಲೋ ಅಶೋಕಾ... ಭಾರ್ಗವಿ ಆಂಟಿಗೆ ನಿನ್ ಮೇಲೆ ಲವ್ ಆಗಿದೆ ಕಣೋ, ಕಣ್ಣು ಹಾಕಿದ್ದಾಳೆ ಕಣೋ ಹುಷಾರು ಎನ್ನುತ್ತಿದ್ದಾರೆ.
ಅಂದಹಾಗೆ ಅಶೋಕ್ ಅವರ ನಿಜವಾದ ಹೆಸರು ಕೂಡ ಅಶೋಕ್ ಶರ್ಮಾ ಆಗಿದೆ. ಅಶೋಕ್ ಅವರು ಸಿನಿಮಾ, ಸೀರಿಯಲ್ ಕಲಾವಿದ, ಗಾಯಕನಾಗಿಯೂ ಗಮನ ಸೆಳೆದಿದ್ದಾರೆ. ಇನ್ನು ಭಾರ್ಗವಿ ಪಾತ್ರಧಾರಿಯ ಕುರಿತು ಹೇಳುವುದಾದರೆ, ಇವರ ನಿಜವಾದ ಹೆಸರು ಪೂಜಾ ಲೋಕೇಶ್. ನಟ ಲೋಕೇಶ್ ಹಾಗೂ ಗಿರಿಜಾ ಲೋಕೇಶ್ ಅವರ ಪುತ್ರಿ ಪೂಜಾ ಲೋಕೇಶ್ ಅವರ ಪುತ್ರಿ. ಸೀತಾ ರಾಮ’ ಧಾರಾವಾಹಿಯಲ್ಲಿ ಪೂಜಾ ಲೋಕೇಶ್ ಅವರು ಎರಡು ಶೇಡ್ನ ಪಾತ್ರ ಮಾಡುತ್ತಿದ್ದಾರೆ. ಒಮ್ಮೆ ಕೆಟ್ಟವರಾಗಿ ಕಾಣಿಸುವ ಅವರು ಮತ್ತೊಮ್ಮೆ ಒಳ್ಳೆಯವರಂತೆ ನಟಿಸುತ್ತಾರೆ. ನೆಗೆಟಿವ್ ಪಾತ್ರಗಳಿಗೆ ಯಾವುದೇ ಸೀಮಾ ರೇಖೆ ಇಲ್ಲ. ಹೇಗೆ ಬೇಕಿದ್ದರೂ ಅದನ್ನು ಮಾಡಬಹುದು. ಕನ್ನಡದಲ್ಲಿ ನಾನು ಈ ರೀತಿ ಪಾತ್ರ ಮಾಡುತ್ತಿರುವುದು ಇದೇ ಮೊದಲು ಎಂದಿರುವ ಪೂಜಾ ಅವರು ಎರಡು ಶೇಡ್‌ನಲ್ಲಿ ಪಾತ್ರ ಮಾಡಲು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದಾರೆ. ಎಲ್ಲೂ ಏರುಪೇರು ಆಗದಂತೆ ನೋಡಿಕೊಳ್ಳಬೇಕಿತ್ತು ಎಂದಿರುವ ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುತ್ತಿದ್ದು, ಇತ್ತೀಚಿಗೆ ಅವರು ಜೀ ಕುಟುಂಬ ಅವಾರ್ಡ್ಸ್ನಲ್ಲಿ ಬೆಸ್ಟ್ ವಿಲನ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಪ್ರಿಯಾ- ಅಶೋಕ್ ಫಸ್ಟ್ನೈಟ್ ಶೂಟಿಂಗ್ ಹೇಗಿತ್ತು? ವಿಡಿಯೋ ಮೂಲಕ ಫುಲ್ ಡಿಟೇಲ್ಸ್ ನೀಡಿದ ನಟಿ