Asianet Suvarna News Asianet Suvarna News

ಸತ್ಯ ಸೀರಿಯಲ್​ ರಿತುಗೆ ಹುಟ್ಟುಹಬ್ಬದ ಸಂಭ್ರಮ: ನಟಿಯ ಕುರಿತು ಕೆಲವೊಂದು ಇಂಟರೆಸ್ಟಿಂಗ್​ ವಿಷ್ಯ ಇಲ್ಲಿವೆ...

ಸತ್ಯ ಸೀರಿಯಲ್​ ರಿತು ಪಾತ್ರಧಾರಿ ರಕ್ಷಿತಾ ಭಾಸ್ಕರ್‌ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ: ನಟಿಯ ಕುರಿತು ಕೆಲವೊಂದು ಇಂಟರೆಸ್ಟಿಂಗ್​ ವಿಷ್ಯ ಇಲ್ಲಿವೆ...
 

Satya serial Ritu  Rakshita Bhaskar celebrates her birthday interesting facts here suc
Author
First Published Dec 25, 2023, 1:06 PM IST

ರಿತು ಎಂದಾಕ್ಷಣ ಸೀರಿಯಲ್​ ಪ್ರಿಯರ ಗಮನ ಹೋಗುವುದು ಸತ್ಯ ಸೀರಿಯಲ್​ ನಾಯಕ ಕಾರ್ತಿಕ್​ ತಂಗಿ ಅಂದ್ರೆ ಚಿಕ್ಕಪ್ಪನ ಮಗಳು. ರಾಕಿ (ರಾಕೇಶ್​) ಲವರ್​. ಕಾಲೇಜಿಗೆ ಹೋಗುವಾಗಲೇ ಲವ್​ನಲ್ಲಿ ಬಿದ್ದು ಒದ್ದಾಡಿದ ರಿತು ಈಗ ಸದ್ಯ ಮನೆಯವರ ಮಾತು ಕೇಳಿ ತಣ್ಣಗಾಗಿದ್ದಾಳೆ. ಅತ್ತಿಗೆ ಸತ್ಯಳ ಬಗ್ಗೆ ಮನೆಯ ಬಹುತೇಕರು ತಾತ್ಸಾರ ಮಾಡುತ್ತಿದ್ದಾಗ, ಸದಾ ಆಕೆಯ ಪರ ನಿಂತ ಕ್ಯಾರೆಕ್ಟರ್​ ರಿತು ಅವಳದ್ದು. ಅಂದಹಾಗೆ ರಿತು ನಿಜವಾದ ಹೆಸರು ರಕ್ಷಿತಾ ಭಾಸ್ಕರ್‌ (Rakshitha Bhaskar). ಇಂದು ರಕ್ಷಿತಾ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಕುರಿತು ಜೀ ಕನ್ನಡ ವಾಹಿನಿ, ಸೋಷಿಯಲ್​ ಮೀಡಿಯಾದಲ್ಲಿ ಶುಭಾಶಯ ಕೋರಿದೆ. 

ಅಷ್ಟಕ್ಕೂ ರಕ್ಷಿತಾ ಅವರ ಕಲಾ ಪ್ರತಿಭೆ ಅಮೋಘವಾದದ್ದು. ಇವರ ಪ್ರತಿಭೆ ಕೇವಲ ನಟನೆಗೆ ಸೀಮಿತವಾಗಿಲ್ಲ. ಈ ಸೀರಿಯಲ್​ನಲ್ಲಿ ರಿತು ಹಾಡನ್ನು ಕೂಡ ಹಾಡಿದ್ದಾರೆ. ಅದು ಅವರ ಕಂಠದಿಂದಲೇ ಬಂದಿರುವ ಹಾಡು. ಇದು ಬೇರೆ ಯಾವುದೇ ಕಲಾವಿದೆ ಕಂಠದಾನ ಮಾಡಿದ್ದಲ್ಲ. ಅಂಥ ಅದ್ಭುತ ಕಂಠ ಅವರದ್ದು. ಇವರು ಹಲವಾರು ಗಾಯನ ಷೋಗಳಲ್ಲಿ ಅಪಾರ ಬಹುಮಾನ ಪಡೆದಿದ್ದಾರೆ. 2006 ಮತ್ತು 2007ರಲ್ಲಿ ಕನ್ನಡದ ಎದೆ ತುಂಬಿ ಹಾಡುವೆನು ಮತ್ತು ತೆಲುಗಿನ ಪಾಡಾಲಾನಿ ರಿಯಾಲಿಟಿ ಷೋಗಳಲ್ಲಿ ವಿಜೇತರಾಗಿದ್ದಾರೆ. ಬಾಲ್ಯದಲ್ಲಿಯೇ ಸಂಗೀತ ಮತ್ತು ನೃತ್ಯ ಪ್ರವೀಣೆ ಇವರು. ಕ್ಲಾಸಿಕಲ್ ಡ್ಯಾನ್ಸರ್ ಆಗಿರುವ ರಕ್ಷಿತಾ, ಹಲವಾರು ಡ್ಯಾನ್ಸ್ ಕಾರ್ಯಕ್ರಮಗಳನ್ನು ಸಹ ನೀಡಿದ್ದಾರೆ. ಅಲ್ಲದೇ ಇವರು ನಟನೆಯನ್ನು ತರಗತಿಗೆ ಹೋಗುವ ಮೂಲಕ ಅಭ್ಯಾಸ ಮಾಡಿದ್ದಾರೆ. ರಕ್ಷಿತಾ ಇಂದಿಗೂ   ಬೆನಕ ಥಿಯೇಟರ್ ಎನ್ನುವ ರಂಗತಂಡದಲ್ಲಿ ಕಾರ್ಯನಿರತರಾಗಿದ್ದು, ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಾರೆ. 

ವಂದನೆ ವಂದನೆ 'ಪುನೀತ ಕನ್ನಡಿಗರೇ' ನಿಮಗೆ ವಂದನೆ: 'ಕ್ವಾ' ಅವಾರ್ಡ್​ ಖುಷಿಯಲ್ಲಿ ನಟಿ ಅನುಶ್ರೀ ಮಾತಿದು...

ಅಂದಹಾಗೆ ರಕ್ಷಿತಾ ಅವರು, ಇದಾಗಲೇ ಕೆಲವು ಕಿರುತೆರೆಗಳಲ್ಲಿ ನಟಿಸಿದ್ದಾರೆ.  ʻರಾಜಾ ರಾಣಿʼ ಸೀರಿಯಲ್ ಮೂಲಕ ಖ್ಯಾತಿ ಪಡೆದ ನಟಿ ಚಂದನಾ ಅನಂತಕೃಷ್ಣ ಮತ್ತು ರಕ್ಷಿತಾ ಹೂಮಳೆ ಧಾರಾವಾಹಿಯಲ್ಲಿ ಜತೆಯಾಗಿ ನಟಿಸಿದ್ದರು. ಇದಾದ ಬಳಿಕ ಸತ್ಯ ಸೀರಿಯಲ್​ ಇವರಿಗೆ ಅಪಾರ ಕೀರ್ತಿ ತಂದುಕೊಟ್ಟಿದೆ.  ಕ್ಲಾಸಿಕಲ್ ಡ್ಯಾನ್ಸರ್​ ಕೂಡ ಆಗಿರುವ ರಕ್ಷಿತಾ ಇದಾಗಲೇ ಹಲವು ಕಡೆಗಳಲ್ಲಿ ಕಾರ್ಯಕ್ರಮ ಕೊಟ್ಟು ಸೈ ಎನಿಸಿಕೊಂಡಿದ್ದಾರೆ. ಇವರ ಈ ಪ್ರತಿಭೆಯನ್ನು ಅವರ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ನೋಡಬಹುದು.  ಡ್ಯಾನ್ಸ್‌ ವಿಡಿಯೋ ಜೊತೆ ಸುಮಧುರ ಹಾಡುಗಳನ್ನು ಅವರು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ.
 
ಜೀ ಕನ್ನಡ ವಾಹಿನಿ ಶೇರ್​ ಮಾಡಿಕೊಂಡಿರುವ ಮಾಹಿತಿಗೆ ರಿತು ಅಲಿಯಾಸ್​ ರಕ್ಷಿತಾ ಅವರಿಗೆ ಶುಭಾಶಯಗಳ ಸುರಿಮಳೆಯೇ ಆಗುತ್ತಿದೆ. ಇವರ ನಟನೆಗೆ ಫ್ಯಾನ್ಸ್​ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಮಾಡಿರುವ ಸಾಧನೆ ಕುರಿತು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನು ಸೀರಿಯಲ್​ ಪ್ರಿಯರು ಆದಷ್ಟು ಬೇಗ ನಿಮ್ಮ ರಾಕಿ ನಿಮಗೆ ಸಿಗಲಿ ಎಂದೂ ಹಾರೈಸುತ್ತಿದ್ದಾರೆ. 

ಯುವಕನಂತೆ ಮೇಕಪ್​ ಮಾಡ್ಕೊಂಡು ಸುಸ್ತಾದ್ರಾ ಶಾರುಖ್? ಮುಂದಿನ ಚಿತ್ರದ ಹೇಳಿಕೆಗೆ ಫ್ಯಾನ್ಸ್​ ಬೇಸರ!

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Follow Us:
Download App:
  • android
  • ios