ಕನ್ನಡದ ಜನಪ್ರಿಯ ಸೀರಿಯಲ್ 'ಸತ್ಯ'ದಲ್ಲಿ ನಾಯಕಿ ಸತ್ಯಳ ಅಕ್ಕ ದಿವ್ಯಾ ಪಾತ್ರದಲ್ಲಿ ಮಿಂಚುತ್ತಿದ್ದ ಪ್ರಿಯಾಂಕಾ ಶಿವಣ್ಣ ಕಂಪನಿ ನಾಟಕಗಳಲ್ಲಿ ಕಾಣಿಸಿಕೊಳ್ತಿದ್ದಾರೆ. ಅಂದರೆ ಕಿರುತೆರೆಗೆ ಗುಡ್ ಬೈ ಹೇಳ್ತಿದ್ದಾರಾ?
ಕಿರುತೆರೆ(Serial), ಸಿನಿಮಾ(Cinema) ನಟಿಯರು ನಾಟಕ(Drama)ಗಳಲ್ಲಿ ಕಾಣಿಸಿಕೊಳ್ಳೋದು ಹೊಸತಲ್ಲ. ಆದರೆ ಕಂಪನಿ ನಾಟಕ(Company Drama0 ಗಳಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ಕೆಲವೊಮ್ಮೆ ವಯಸ್ಸಾದ ನಟ ನಟಿಯರು ಕಂಪನಿ ನಾಟಕಗಳಲ್ಲಿ ನಟಿಸಿದರೂ ಚಿಕ್ಕ ವಯಸ್ಸಿನವರು ಇಂಥ ಕಡೆ ನಟಿಸೋದು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ. ಆದರೆ ಇದೀಗ 'ಸತ್ಯ'(Sathya), 'ಅಗ್ನಿಸಾಕ್ಷಿ'(Agnisakshi)ಯಂಥಾ ಜನಪ್ರಿಯ ಸೀರಿಯಲ್‌ಗಳಲ್ಲಿ ನಟಿಸಿರುವ, ಬಿಗ್‌ಬಾಸ್(Bigboss) ಸ್ಪರ್ಧಿಯಾಗಿದ್ದ ಪ್ರಿಯಾಂಕಾ ಶಿವಣ್ಣ (Priyanka Shivanna)ನಾಟಕ ಕಂಪನಿ ಸೇರಿಕೊಂಡಿದ್ದಾರೆ. ಅಂಥದ್ದೇನಾಯ್ತು, ಈ ನಟಿ ಸೀರಿಯಲ್ ಬಿಟ್ಟೇ ಬಿಟ್ರಾ ಅನ್ನೋ ಮಾತು ವೀಕ್ಷಕರಿಂದ ಕೇಳಿಬರುತ್ತಿದೆ.
ಹಾಗೆ ನೋಡಿದರೆ ಒಂದಿಷ್ಟು ಸೀರಿಯಲ್ ನಟಿಯರು ನಾಟಕದ ಹಿನ್ನೆಲೆಯಿಂದ ಬಂದವರಿದ್ದಾರೆ. ಆದರೆ ಅವರದು ಹವ್ಯಾಸಿ ರಂಗಭೂಮಿ(Amateur Thartre). ಹವ್ಯಾಸಿ ರಂಗಭೂಮಿಯಲ್ಲಿ ಸಿನಿಮಾದ ನಾಯಕ ನಟರೂ ಭಾಗವಹಿಸೋದಿದೆ. ಇತ್ತೀಚಿನ ನಟರಲ್ಲಿ ಯಶ್(Yash), ನೀನಾಸಂ ಸತೀಶ್(Neenasam Satheesh) ಮೊದಲಾದವರೆಲ್ಲ ಥಿಯೇಟರ್ ಹಿನ್ನೆಲೆಯಿಂದ ಬಂದವರು. ಅವರೆಲ್ಲ ಕಲಾವಿದರಾಗಿ ಹೊರಹೊಮ್ಮಲು ಮುಖ್ಯ ಕಾರಣವಾದದ್ದು ಹವ್ಯಾಸಿ ರಂಗಭೂಮಿ. ಸಿನಿಮಾ, ಸೀರಿಯಲ್‌ನಲ್ಲಿ ನಟಿಸಬೇಕು ಅನ್ನೋ ಕಾರಣಕ್ಕೆ ನಟನೆ ಕಲಿಕೋದಕ್ಕಂತಲೇ ಹವ್ಯಾಸಿ ನಾಟಕ ತಂಡಕ್ಕೆ ಸೇರುವವರಿದ್ದಾರೆ. ಆದರೆ ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿದ ಮೇಲೆ ಕಂಪನಿ ನಾಟಕಗಳಲ್ಲಿ ನಟಿಸುವ ಕಲಾವಿದರು ಸಿಗೋದಿಲ್ಲ. ಆದರೆ ಪ್ರಿಯಾಂಕ ಇದೀಗ ಅಂಥದ್ದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.
ಸೋರುವ ಶೀಟ್ ಮನೆಯಲ್ಲಿರೊ ಹುಡುಗ ಇಂದು ಜನಪ್ರಿಯ ನಿರೂಪಕ; V J ಸುಬ್ಬು ಕಥೆ
ಪ್ರಿಯಾಂಕಾ ಶಿವಣ್ಣ ಕನ್ನಡ ಸೀರಿಯಲ್ ವೀಕ್ಷಕರಿಗೆ ಪರಿಚಯವಾದದ್ದು 'ಅಗ್ನಿಸಾಕ್ಷಿ' ಸೀರಿಯಲ್‌ನ ಚಂದ್ರಿಕಾ ಅನ್ನೋ ವಿಲನ್(Villon) ಪಾತ್ರದ ಮೂಲಕ. ಈ ಪಾತ್ರವನ್ನು ಮೊದಲು ರಾಜೇಶ್ವರಿ ನಿಭಾಯಿಸುತ್ತಿದ್ದರು. ಆದರೆ ಅವರು ಪತಿ ಜೊತೆಗೆ ಅಮೇರಿಕಾಗೆ ಹೊರಟ ಬಳಿಕ ಈ ಪಾತ್ರದಲ್ಲಿ ಕಾಣಿಸಿಕೊಂಡವರು ಪ್ರಿಯಾಂಕಾ ಶಿವಣ್ಣ. ಚಂದ್ರಿಕಾ ಪಾತ್ರದಲ್ಲಿ ರಾಜೇಶ್ವರಿ ಅವರನ್ನೇ ಆರಂಭದಿಂದ ನೋಡುತ್ತಿದ್ದ ಜನಕ್ಕೆ ಇವರ ನಟನೆ ಶುರುವಲ್ಲಿ ಕೊಂಚ ಇರಿಟೇಟ್ ಆದರೂ ಆಮೇಲೆ ಅಡ್ಜೆಸ್ಟ್ ಆದರು. ನೆಗೆಟಿವ್ ಶೇಡ್‌ನ ಪಾತ್ರದಲ್ಲಿ ಇವರ ನಟನೆ ಕ್ರಮೇಣ ಜನರಿಗೆ ಅಭ್ಯಾಸ ಆಗತೊಡಗಿತು. ಜೀ ಕನ್ನಡದ ಜನಪ್ರಿಯ ಸೀರಿಯಲ್ 'ಸತ್ಯ' ದಲ್ಲಿ ನಾಯಕಿ ಸತ್ಯಳ ಅಕ್ಕನ ಪಾತ್ರದಲ್ಲಿ ದಿವ್ಯಾ ಕಾಣಿಸಿಕೊಂಡಿದ್ದಾರೆ. ಇದೂ ನೆಗೆಟಿವ್ ಶೇಡ್ ಇರುವ ಪಾತ್ರ. ಸತ್ಯ ಅಪ್ಪನ ನಿಧನದ ನಂತರ ಮೆಕ್ಯಾನಿಕ್ ಶಾಪ್ ನಲ್ಲಿ ಮೆಕ್ಯಾನಿಕ್ ಆಗಿ ದುಡಿಯುತ್ತಾ ಮನೆಯವರನ್ನು ಸಾಕುತ್ತಾ, ಅಕ್ಕನ ಮದುವೆಗೆ ದುಡ್ಡು ಕೂಡಿಡುತ್ತಿದ್ದರೆ ಈಕೆ ಮಾತ್ರ ಆರಂಭದಿಂದಲೂ ಧಿಮಾಕಿನಲ್ಲೇ ಮೆರೆದವಳು. ಪ್ರೀತಿಸುವ ಬಾಲ ಎಂಬ ಯುವಕ ಬಡವ ಅನ್ನೋ ಕಾರಣಕ್ಕೆ ಅವನನ್ನು ರಿಜೆಕ್ಟ್ ಮಾಡಿ, ಧನವಂತ ಕಾರ್ತಿಕ್ ಮದುವೆಯಾಗಲು ಮುಂದಾದವಳು. ಆದರೆ ವಿಧಿ ಬೇರೆಯೇ ಇತ್ತು. ಇವಳು ಹಣದ ದುರಾಸೆಗೆ ಮದುವೆಯಿಂದ ಓಡಿಹೋಗಿದ್ದಾಳೆ. ತನ್ನನ್ನು ಪ್ರೀತಿಸುತ್ತಿದ್ದ ಬಾಲ ಆಡಿದ ಶ್ರೀಮಂತಿಕೆಯ ನಾಟಕಕ್ಕೆ ಬಲಿಯಾಗಿದ್ದಾಳೆ. ಈಗ ಇನ್ನೇನು ಬಾಲನ ಬಂಡವಾಳ ಬಯಲಾಗಲಿದೆ. ಆಕೆ ಈಕೆ ಏನು ಮಾಡಬಹುದು ಅನ್ನೋದು ಕುತೂಹಲ.
ಇಂಥಾ ಟೈಮಲ್ಲೇ ದಿವ್ಯಾ ಪಾತ್ರಧಾರಿ ಪ್ರಿಯಾಂಕಾ ವೀಕ್ಷಕರಿಗೆ ಶಾಕಿಂಗ್(Shocking) ಸುದ್ದಿ ಕೊಟ್ಟಿದ್ದಾರೆ. ಅದು ಕಂಪನಿ ನಾಟಕದಲ್ಲಿ ನಟಿಸೋ ಮೂಲಕ. ಉತ್ತರ ಕನ್ನಡದ ನಾಟಕ ಕಂಪನಿಯ 'ಖಾನಾವಳಿ ಚೆನ್ನಿ' ಅನ್ನೋ ನಾಟಕದಲ್ಲಿ ಅವರು ನಟಿಸುತ್ತಿದ್ದಾರೆ. ಇತ್ತೀಚೆಗೆ ಶಿರಸಿ(Sirsi)ಯ ಹೊಸಪೇಟೆಯಲ್ಲಿ ಈ ನಾಟಕ ನಡೆದಿದೆ. ಇದರಲ್ಲಿ ಪ್ರಿಯಾಂಕಾ ಖಾನಾವಳಿ ಚೆನ್ನಿಯಾಗಿ ಹವಾ ಸೃಷ್ಟಿಸಿದ್ದಾರೆ.
ಹಾಗಾದ್ರೆ ಪ್ರಿಯಾಂಕಾ ಸೀರಿಯಲ್ ಬಿಟ್ಟರಾ, ನಾಟಕ ಕಂಪನಿ ಸೇರಿಕೊಂಡರಾ ಅಂದರೆ ಖಂಡಿತಾ ಇಲ್ಲ. ಅವರು ಸಣ್ಣ ಚೇಂಜ್‌ಗಾಗಿ ಇದರಲ್ಲಿ ನಟಿಸೋಕೆ ಒಪ್ಪಿಕೊಂಡಿದ್ದಾರೆ. ಈ ಕಾರಣಕ್ಕೆ ತಾನು ಸೀರಿಯಲ್ ಬಿಟ್ಟಿಲ್ಲ ಅಂತ ಅವರು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ವೀಕ್ಷಕರು ಗೊಂದಲಕ್ಕೆ ಬೀಳಬೇಕಾಗಿಲ್ಲ.
ನನಗೂ ಮದುವೆಯಾಗೊ ಆಸೆಯಾಗಿದೆ ಎಂದ ಅನುಶ್ರೀ; ಹಸೆಮಣೆ ಏರಲು ಸಜ್ಜಾದ್ರಾ ಖ್ಯಾತ ನಿರೂಪಕಿ?
