- Home
- Entertainment
- TV Talk
- Master Anand Home: ಮಾಸ್ಟರ್ ಆನಂದ್ ಹೊಸ ಮನೆ ಹೈಟೆಕ್ ಕಿಚನ್ ನೋಡಿ ಬೆಕ್ಕಸ ಬೆರಗಾದ 'ಗಿಚ್ಚಿ ಗಿಲಿಗಿಲಿ' ಟೀಂ
Master Anand Home: ಮಾಸ್ಟರ್ ಆನಂದ್ ಹೊಸ ಮನೆ ಹೈಟೆಕ್ ಕಿಚನ್ ನೋಡಿ ಬೆಕ್ಕಸ ಬೆರಗಾದ 'ಗಿಚ್ಚಿ ಗಿಲಿಗಿಲಿ' ಟೀಂ
Master Anand New Home: ಕನ್ನಡದ ಅನೇಕ ಸಿನಮಾಗಳಲ್ಲಿ ಬಾಲನಟನಾಗಿ ನಟಿಸಿದ್ದ ಮಾಸ್ಟರ್ ಆನಂದ್ ಅವರು ಸಾಕಷ್ಟು ಧಾರಾವಾಹಿಗಳ ನಿರ್ದೇಶನ, ನಿರ್ಮಾಣ ಮಾಡಿದ್ದಾರೆ. ಅಂದಹಾಗೆ ಸಾಕಷ್ಟು ಶೋಗಳ ನಿರೂಪಣೆ ಕೂಡ ಮಾಡಿದ್ದಾರೆ. ಈಗ ಅವರು ಹೊಸ ಮನೆಗೆ ಕಾಲಿಟ್ಟಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಮಾಸ್ಟರ್ ಆನಂದ್ ಹೊಸ ಮನೆ
ಮಾಸ್ಟರ್ ಆನಂದ್ ಅವರು ಹೊಸ ಮನೆಗೆ ಕಾಲಿಟ್ಟಿದ್ದಾರೆ, ಗೃಹ ಪ್ರವೇಶ ಆಗಿದೆ ಎಂಬ ಪೋಸ್ಟ್‌ಗಳು ಹರಿದಾಡುತ್ತಿವೆ. ಆದರೆ ವಿಷಯ ಬೇರೆ ಇದೆ.
ಸತ್ಯನಾರಾಯಣ ಪೂಜೆ
ಮಾಸ್ಟರ್ ಆನಂದ್ ಹಾಗೂ ಯಶಸ್ವಿನಿ ಅವರು ಮನೆಯಲ್ಲಿ ಸತ್ಯನಾರಾಯಣ ಸ್ವಾಮಿ ಪೂಜೆ ಮಾಡಿದ್ದಾರೆ.
ಕಿರುತೆರೆ ಕಲಾವಿದರಿಗೆ ಆಹ್ವಾನ
ಸತ್ಯನಾರಾಯಣ ಪೂಜೆ ಮಾಡಿದ್ದು, ಕಿರುತೆರೆ ಕಲಾವಿದರಿಗೆ ಆಹ್ವಾನ ನೀಡಿದ್ದರು. ಹೀಗಾಗಿ ಗಿಚ್ಚಿ ಗಿಲಿಗಿಲಿ ಶೋ ಸ್ಪರ್ಧಿಳು ಕೂಡ ಬಂದಿದ್ದರು.
ಹಾಲು ಉಕ್ಕಿಸುವ ಶಾಸ್ತ್ರ
ಮಾಸ್ಟರ್ ಆನಂದ್ ದಂಪತಿಯು ಹಾಲು ಉಕ್ಕಿಸುವ ಶಾಸ್ತ್ರ ಮಾಡಿದ್ದಾರೆ.
ದೈವ ಭಕ್ತರು
ಮಾಸ್ಟರ್ ಆನಂದ್ ದಂಪತಿಯು ದೈವ ಭಕ್ತರು. ಸದ್ಯ ಆನಂದ್ ಅವರು ಆಧ್ಯಾತ್ಮಿಕಕ್ಕೆ ಸಂಬಂಧಪಟ್ಟಂತೆ ಪಾಡ್‌ಕಾಸ್ಟ್ ಮಾಡುತ್ತಿದ್ದಾರೆ.
ಹಳೆ ಮನೆ ಬದಲಾವಣೆ
ಮಾಸ್ಟರ್ ಆನಂದ್ ದಂಪತಿಯು ಹಳೆ ಮನೆಯನ್ನು alteration ಮಾಡಿಸಿದ್ದಾರೆ ಎನ್ನಲಾಗಿದೆ. ಹೊಸ ಮನೆ ಎನ್ನುವ ಹಾಗೆ ಅಷ್ಟು alteration ಮಾಡಿಸಿದ್ದಾರಂತೆ.
ಕಿಚನ್
ಈಗ ಕಿಚನ್‌ನಿಂದ ಹಿಡಿದು ಮನೆಯಲ್ಲಿ ಸಾಕಷ್ಟು ತಂತ್ರಜ್ಞಾನ, ವ್ಯವಸ್ಥೆಗಳು ಬರುತ್ತಿವೆ. ಅದರಂತೆ ಕಾಲಕ್ಕೆ ತಕ್ಕಂತೆ ಮಾಸ್ಟರ್ ಆನಂದ್ ಮನೆಯನ್ನು ಕೂಡ ಬದಲಾವಣೆ ಮಾಡಲಾಗಿದೆ.
ಅದ್ದೂರಿ ಮನೆ
ಕಿಚನ್‌ನಲ್ಲಿ ಸ್ಟೋರೇಜ್ ರೂಮ್‌ನ್ನು ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಮಾಡಿದ್ದಾರೆ. ಪಾತ್ರೆಗಳು, ಡಬ್ಬಗಳನ್ನು ನೀಟ್ ಆಗಿ ಇಡಲು ಅನುಕೂಲವಾಗುವಂತೆ ರ್ಯಾಕ್ಸ್ ಮಾಡಿದ್ದಾರೆ. ಇದನ್ನು ನೋಡಿ ಎಲ್ಲರಿಗೂ ಸರ್ಪ್ರೈಸ್ ಆಗಿದೆ.
ಅನೇಕರಿಂದ ಶುಭಾಶಯ
ಮನೆ ಅಲ್ಟ್ರೇಶನ್ ಮಾಡಿಸಿದ್ದು ನೋಡಿ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ, ಶುಭಾಶಯ ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

