ಡಿಯರ್ ವಿಕ್ರಮ್ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಸತೀಶ್. ಸೂಪರ್ ಹಿಟ್ ಅಗಲಿ ಎಂದು ವಿಶ್ ಮಾಡಿದ ಮಾಜಿ ಸಿಎಂ.. 

ಕನ್ನಡ ಚಿತ್ರರಂಗ ಸಿಂಪಲ್ ಆಂಡ್ ಹಂಬಲ್ ನಟ ಸತೀಶ್ ನೀನಾಸಂ ಮತ್ತು ಶ್ರದ್ಧಾ ಶ್ರೀನಾಥ್ ಅಭಿನಯಿಸಿರುವ ಡಿಯರ್ ವಿಕ್ರಮ್ ಸಿನಿಮಾ ಜೂನ್ 30ರಂದು ಓಟಿಟಿಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. ವೂಟ್‌ ಸೆಲೆಕ್ಟ್‌ನಲ್ಲಿ ಪ್ರಸಾರವಾಗುತ್ತಿರುವ ಈ ಸಿನಿಮಾವನ್ನು ಮಾಜಿ ಸಿಎಂ ಸಿದ್ಧರಾಮಯ್ಯ ಅವರು ವೀಕ್ಷಿಸಬೇಕು ಎಂದು ಸತೀಶ್ ಆಂಡ್ ಟೀಂ ಅವರನ್ನು ಭೇಟಿ ಮಾಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗುತ್ತಿದೆ.

ಸಿದ್ಧು ಮಾತು:

'ಚಿತ್ರನಟ ಸತೀಶ್ ನೀನಾಸಂ ಅವರು ಇಂದು ನನ್ನನ್ನು ಭೇಟಿ ಮಾಡಿ ಜೂನ್ 30ರಂದು ತೆರೆ ಕಾಣಲಿರುವ ತಾವು ನಾಯಕ ನಟನಾಗಿ ಅಭಿನಯಿಸಿರುವ ಕೆಎಸ್‌ ನಂದೀಶ್ ನಿರ್ದೇಶನ ಡಿಯರ್ ವಿಕ್ರಮ್ ಸಿನಿಮಾ ವೀಕ್ಷಿಸಲು ಅಹ್ವಾನ ನೀಡಿದ್ದರು. ಪ್ರಗತಿಪರ ಆಶಯಗಳೊಂದಿಗೆ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುವ ಉದ್ದೇಶದಿಂದ ನಿರ್ಮಾಣಗೊಂಡಿರುವ ಈ ಚಿತ್ರ ಯಶಸ್ವಿಯಾಗಲಿ, ಇಂಥಾ ಚಿತ್ರಗಳ ಸಂಖ್ಯೆ ನೂರಾಗಲಿ. ಸಾಹಿತಿ ನಟರಾಜ್‌ ಹುಳಿಯಾರ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು' ಎಂದು ಸಿದ್ಧರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.

ಕರ್ನಾಟಕದಲ್ಲಿ ಕಾಣಿಸಿಕೊಂಡ ಶ್ರದ್ಧಾ ಶ್ರೀನಾಥ್; ಡಿಯರ್ ವಿಕ್ರಮ್ ಯಾರು?

'ನಿಮ್ಮ ಪ್ರೀತಿಗೆ ನಮ್ಮ ತಂಡ ಆಭಾರಿ' ಎಂದು ಸತೀಶ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. 

'ಕೆಎಸ್‌ ನಂದೀಶ್ ನಿರ್ದೇಶನ ಮತ್ತು ಸತೀಶ್ ನೀನಾಸಂ ನಾಯಕತ್ವದ ಡಿಯರ್ ವಿಕ್ರಮ್ ಸಿನಿಮಾ ತಂಡ ಮಾನ್ಯ ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗಿ ಚರ್ಚಿಸಿತು. ಪ್ರಗತಿಪರ ಆಶಯಗಳ ಸಿನಿಮಾ ಜೂನ್ 30ರಂದು ತೆರೆಕಾಣುತ್ತಿದೆ. ಕ್ರಾಂತಿಕಾರಿ ಲವ್ ಸ್ಟೋರಿ ಸಿನಿಮಾ ಯಶಸ್ಸಾಗಲಿ ಎಂದು ಹಾರೈಸುವೆ. ಕನ್ನಡ ಬೆಳ್ಳಿ ಪರದದೆ ಜನಪರ ಆಶಯಗಳಿಂದ ಬೆಳಗಲಿ' ಎಂದು ಪ್ರಕಾಶ್ ರಾಥೋಡ್‌ ಟ್ವೀಟ್ ಮಾಡಿದ್ದಾರೆ.

Scroll to load tweet…

ಕಲರ್ಸ್‌ ಕನ್ನಡ ವಾಹಿನಿಯ ಕ್ಲಸ್ಟರ್‌ ಹೆಡ್‌ ಪರಮೇಶ್ವರ ಗುಂಡ್ಕಲ್‌, ‘ವೂಟ್‌ ಸೆಲೆಕ್ಟ್ ಓಟಿಟಿಯಲ್ಲಿ ಎಲ್ಲಾ ರೀತಿಯ ಕಥೆಗಳು, ವಿಷಯಗಳು ಇರಬೇಕು ಎಂಬ ಉದ್ದೇಶದ ಭಾಗವಾಗಿ ಡಿಯರ್‌ ವಿಕ್ರಮ್‌ ರಿಲೀಸ್‌ ಆಗುತ್ತಿದೆ’ ಎಂದರು. ಹಲವು ಉತ್ತಮ ಚಿತ್ರಗಳನ್ನು ನಿರ್ದೇಶಿಸಿರುವ ಜೇಕಬ್ ವರ್ಗೀಸ್ ತಂಡದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವಿರುವ ಕೆ ಎಸ್ ನಂದೀಶ್ ‘ಡಿಯರ್ ವಿಕ್ರಮ್’ ಸಿನಿಮಾವನ್ನು ಬರೆದು ನಿರ್ದೇಶಿಸಿದ್ದಾರೆ. 'ಬಿಗಿಯಾದ ಚಿತ್ರಕಥೆ ಹಾಗೂ ಕಲಾವಿದರ ಉತ್ತಮ ನಟನೆಯಿಂದಾಗಿ ಈ ಸಿನಿಮಾ ರೆಗ್ಯುಲರ್ ಕಮರ್ಶಿಯಲ್ ಸಿನಿಮಾಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ. ಕಾಲೇಜು ಕಲಿಸೋ ಪಾಠಗಳೇ ಬೇರೆ, ಜೀವನ ಕಲಿಸೋ ಪಾಠಗಳೇ ಬೇರೆ ಎಂದು ಮನಮುಟ್ಟುವಂತೆ ಹೇಳಲಾಗಿದೆ' ಎನ್ನುತ್ತಾರೆ ನಂದೀಶ್‌.

ನನ್ನ ಮಗಳು ಸಖತ್ ಹೈಪರ್; ಪುತ್ರಿ ಬಗ್ಗೆ ಸತೀಶ್ ನೀನಾಸಂ ಮೊದಲ ಮಾತು

ಕೆ.ಎಸ್. ನಂದೀಶ್ ನಿರ್ದೇಶನ ಮತ್ತು @sathishninasam ನಾಯಕತ್ವದ "ಡಿಯರ್ ವಿಕ್ರಮ್" ಸಿನಿಮಾ ತಂಡ ಮಾನ್ಯ ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗಿ ಚರ್ಚಿಸಿತು. ಪ್ರಗತಿಪರ ಆಶಯಗಳ ಸಿನಿಮಾ ಜೂನ್ 30 ರಂದು ತೆರೆಕಾಣುತ್ತಿದೆ. ಕ್ರಾಂತಿಕಾರಿ ಲವ್ ಸ್ಟೋರಿಯ ಸಿನಿಮಾ ಯಶಸ್ಸಾಗಲಿ ಎಂದು ಹಾರೈಸುವೆ. ಕನ್ನಡ ಬೆಳ್ಳಿ ಪರದೆ ಜನಪರ ಆಶಯಗಳಿಂದ ಬೆಳಗಲಿ. pic.twitter.com/7atjGFG8ui

— Prakash Rathod (@PRathod_INC) June 27, 2022

ನಟಿ ಶ್ರದ್ಧಾ ಶ್ರೀನಾಥ್ ಮಾತನಾಡಿ, 'ವಾಸ್ತವವನ್ನು ಬಣ್ಣದ ಕನ್ನಡಕದೊಳಗಿನಿಂದ ಮಾತ್ರ ನೋಡಿ ಬೆಳೆದ ಹುಡುಗಿಯ ಪಾತ್ರ ನನ್ನದು. ಈ ಪಾತ್ರವನ್ನು ಎಂದೂ ಮರೆಯೋಕಾಗಲ್ಲ. ಈ ಸಿನಿಮಾ ರಿಲೀಸ್ ಆಗುತ್ತಿರುವುದು ನನಗೆ ತುಂಬ ಖುಷಿ ಆಗಿದೆ. 2017ರಲ್ಲಿ ಈ ಸಿನಿಮಾದ ಕಥೆ ಕೇಳುವಾಗ ನಾನು ಎಷ್ಟು ಎಕ್ಸೈಟ್ ಆಗಿದ್ದೇನೋ, ಈಗಲೂ ಅಷ್ಟೇ ಎಕ್ಸೈಟ್‌ಮೆಂಟ್ ಇದೆ. ಐದು ವರ್ಷದಿಂದಲೂ ಈ ಸಿನಿಮಾ ಬಂದೇ ಬರುತ್ತದೆ ಎಂದು ಎಲ್ಲರಿಗೂ ಹೇಳಿದ್ದೇನೆ. ಈ ಸಿನಿಮಾ ಒಪ್ಪಿಕೊಳ್ಳಲು ಕಥೆಯೇ ಕಾರಣ. ನಾವೆಲ್ಲರೂ ತುಂಬ ತಾಳ್ಮೆಯಿಂದ ಕಾದಿದ್ದೇವೆ ಎಂದು ಅವರು ತಿಳಿಸಿದರು. ಜೂಡಾ ಸ್ಯಾಂಡಿ ಸಂಗೀತ ಚಿತ್ರಕ್ಕಿದೆ.