ಸರಿಗಮಪ ವಿಶೇಷ ಸಂಚಿಕೆ: ಜನ್ಮ ಕೊಟ್ಟೋಳು ನಮ್ಮಮ್ಮ... ಜೀವಕೊಟ್ಟೋಳು ಕನ್ನಡಮ್ಮ...
ಈ ಬಾರಿಯ ಸರಿಗಮಪ ಕಾರ್ಯಕ್ರಮವು ಕನ್ನಡ ರಾಜ್ಯೋತ್ಸವದ ವಿಶೇಷ ಸಂಚಿಕೆಯಾಗಿ ಹೊರಹೊಮ್ಮಲಿದ್ದು, ಈ ಕುರಿತು ಪ್ರೊಮೋ ಬಿಡುಗಡೆಯಾಗಿದೆ.
ಜೀ ಕನ್ನಡ ಚಾನೆಲ್ನಲ್ಲಿ (Zee Kannada Channel) ವಾರಾಂತ್ಯದಲ್ಲಿ ಎಲ್ಲರ ಮೆಚ್ಚುಗೆ ಗಳಿಸುತ್ತಿರುವ ಸರಿಗಮಪ ಸಂಗೀತ ರಿಯಾಲಿಟಿ ಷೋ ಈಗ 20ನೇ ಕಂತಿಗೆ ಕಾಲಿಟ್ಟಿದೆ. ಅಪಾರ ಪ್ರಮಾಣದಲ್ಲಿ ಜನ ಮೆಚ್ಚುಗೆ ಗಳಿಸಿರುವ ಈ ಷೋದಲ್ಲಿ ರಾಜ್ಯಗಳ ವಿವಿಧ ಮೂಲೆಗಳ ಸಂಗೀತ ಪ್ರತಿಭೆಗಳನ್ನು ವಾಹಿನಿ ಪರಿಚಯಿಸಿದೆ. ಇದಾಗಲೇ 19 ಸರಣಿಗಳನ್ನು (season) ಪೂರೈಸಿದ್ದು, ಇದೀಗ 20ನೇ ಸೀಸನ್ ಶುರುವಾಗಿದೆ. ಈ ಬಾರಿ, ಹೊಸತನಕ್ಕೆ ಕೈಹಾಕಲಾಗಿದೆ. ಇಲ್ಲಿಯವರೆಗೆ ಕರ್ನಾಟಕದಲ್ಲಿ ಆಡಿಷನ್ ನಡೆದಿದೆ. ಇಲ್ಲಿ ಆಡಿಷನ್ ನಡೆದಿರುವ ಸಂದರ್ಭದಲ್ಲಿ ಕರ್ನಾಟಕದ ಹೊರ ರಾಜ್ಯಗಳ ಪ್ರತಿಭೆಗಳೂ ಪಾಲ್ಗೊಂಡಿದ್ದು, ಹಲವರಿಗೆ ಈ ಕಾರ್ಯಕ್ರಮದಲ್ಲಿ ಹಾಡುವ ಅವಕಾಶ ದೊರಕಿದೆ. ಇದೀಗ ಹೊಸ ಪ್ರಯತ್ನಕ್ಕೆ ಕೈಹಾಕಿರುವ ತಂಡ, ಕನ್ನಡದ ಕಂಪನ್ನು ಹೊರ ದೇಶಗಳಿಗೂ ಬಿತ್ತರಿಸುವ ಪ್ರಯತ್ನಕ್ಕೆ ಮುಂದಾಗಿದೆ.
ಇದರ ನಡುವೆಯೇ ಈ ವಾರಾಂತ್ಯದಲ್ಲಿ ಕನ್ನಡ ರಾಜ್ಯೋತ್ಸವದ ವಿಶೇಷ ಸಂಚಿಕೆ ಪ್ರಸಾರವಾಗ್ತಿದೆ. ಇದರಲ್ಲಿ ಸ್ಪರ್ಧಿಗಳು ಕನ್ನಡ ನಾಡಿನ ಹಿರಿಮೆ ಗರಿಮೆಯನ್ನು ಕೊಂಡಾಡುವ ಹಾಡುಗಳನ್ನು ಆಯ್ದುಕೊಂಡು ಅದರ ರಸದೌತಣವನ್ನು ಉಣಬಡಿಸಿದ್ದಾರೆ. ಎಲ್ಲಾ ಸ್ಪರ್ಧಾಳುಗಳ ಕಂಠ ಮಾಧುರ್ಯದಿಂದ ಸುಮಧುರ ಕನ್ನಡದ ನುಡಿಗಳನ್ನು ಕೇಳುವ ಅವಕಾಶ ಈ ಬಾರಿಯ ಸರಿಗಮಪ ಕಾರ್ಯಕ್ರಮದಲ್ಲಿ ಸಿಗಲಿದೆ.
SARIGAMAPA: ಕುರಿಗಾಹಿಯ ನಾಲಿಗೆ ಮೇಲೆ ಕಲಾಸರಸ್ವತಿ- ಕಂಠ ಮಾಧುರ್ಯಕ್ಕೆ ಕಣ್ಣೀರಾದ ಹಂಸಲೇಖ
ಇದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಕನ್ನಡ ರಾಜ್ಯೋತ್ಸವದ ಕಂಪಿನಲ್ಲೇ ಮಹಾ ಮನರಂಜನೆ ಹೊತ್ತು ತಂದ ಸಂಗೀತ ವೇದಿಕೆ ಎಂಬ ಶೀರ್ಷಿಕೆಯಡಿ ಪ್ರೊಮೋ ಬಿಡುಗಡೆಯಾಗಿದ್ದು, ಇದರಲ್ಲಿ ಕಲಾವಿದರು ಕನ್ನಡದ ಕುರಿತಾದ ಹಾಡುಗಳನ್ನು ಹಾಡಿರುವುದನ್ನು ಕೇಳಬಹುದು. ಅದೇ ವೇಳೆ ಪುಟಾಣಿಯೊಬ್ಬ ತನ್ನ ತೊದಲು ನುಡಿಗಳಿಂದ ಜನ್ಮ ಕೊಟ್ಟೋಳು ನಮ್ಮಮ್ಮ... ಜೀವಕೊಟ್ಟೋಳು ಕನ್ನಡಮ್ಮ ಎಂದು ಹೇಳಿದ್ದು, ಇದನ್ನು ಕೇಳಲು ತುಂಬಾ ಆನಂದ ಎನಿಸುತ್ತದೆ.
ಇದಾಗಲೇ ಹಲವಾರು ಹೊರನಾಡಿನ ಸ್ಪರ್ಧಿಗಳು ತಮ್ಮ ಕಲಾಪ್ರತಿಭೆಯನ್ನು ಈ ಷೋನಲ್ಲಿ ತೋರಿಸಿದ್ದಾರೆ. ಸರಿಗಮಪದ ಈ 20ನೇ ಸಂಚಿಕೆ ಈಗ ವಿಶ್ವ ಸಂಭ್ರಮವಾಗಲಿದೆ, ಕನ್ನಡದ ಸರಿಗಮಪ ಈಗ ವಿಶ್ವಕ್ಕೆ ವಿಸ್ತರಿಸಲಿದೆ. ಇಂಗ್ಲೆಂಡ್, ಅಮೆರಿಕ ಸೇರಿದಂತೆ ಬೇರೆ ಬೇರೆ ದೇಶದಲ್ಲಿ ಇರೋ ಕನ್ನಡಿಗರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಇದಾಗಲೇ ಕಳೆದ 19 ಸೀಸನ್ನಲ್ಲಿ ಹಾಡಿರುವ ಹಲವು ಗಾಯಕರು ಸಂಗೀತ ಆಲ್ಬಂಗಳಿಗೆ ಆಯ್ಕೆಯಾದವರಿದ್ದಾರೆ. ಹಿನ್ನೆಲೆ ಗಾಯಕರಾಗಿಯೂ ಅವರಿಗೆ ಅವಕಾಶ ಸಿಕ್ಕಿದೆ. ಇದೀಗ ಹೊರ ದೇಶಗಳ ಪ್ರತಿಭೆಗಳನ್ನು ಹುಡುಕಿ ಅವರಿಗೆ ಅವಕಾಶ ನೀಡಲಾಗಿದೆ. ಇದರಲ್ಲಿ ಇದಾಗಲೇ ಹಲವಾರು ಕ್ಷೇತ್ರದ ಪ್ರತಿಭೆಗಳ ಕಂಠಮಾಧುರ್ಯಕ್ಕೆ ಪ್ರೇಕ್ಷಕರು ಮನಸೋತಿದ್ದಾರೆ. ಉತ್ತಮ ಕಂಠಸಿರಿ ಹೊಂದಿದ್ದರೂ ಎಲ್ಲಿಯೂ ವೇದಿಕೆಯೇ ಸಿಗದಿದ್ದ ಕಲಾವಿದರೂ ತಮ್ಮ ಗಾಯನದಿಂದ ಮಂತ್ರಮುಗ್ಧಗೊಳಿಸುತ್ತಿದ್ದಾರೆ.
JODI NO. 1 ವೇದಿಕೆಯಲ್ಲಿ ಹರಿದಾಡ್ತಿವೆ ಭಯಾನಕ ಹಾವುಗಳು! ಸರ ಸರ ನಾಗಪ್ಪ ಹೇಗಿದೆ ನೋಡಿಬಿಡಿ...