Asianet Suvarna News Asianet Suvarna News

JODI NO. 1 ವೇದಿಕೆಯಲ್ಲಿ ಹರಿದಾಡ್ತಿವೆ ಭಯಾನಕ ಹಾವುಗಳು! ಸರ ಸರ ನಾಗಪ್ಪ ಹೇಗಿದೆ ನೋಡಿಬಿಡಿ...

ಈ ಬಾರಿಯ ಜೋಡಿ ನಂ.1 ಕಾರ್ಯಕ್ರಮದಲ್ಲಿ ಸರ ಸರ ನಾಗಪ್ಪನ ವಿಶೇಷತೆ ಇದೆ. ಏನಿದು ಕುತೂಹಲ?
 

Sara Sara Nagappa is special in Jodi No one program this time suc
Author
First Published Nov 2, 2023, 2:51 PM IST

ವಯಸ್ಸು ಎಷ್ಟೇ ಆದರೂ, ಮಗುವಿನ ಮನಸ್ಸು ಎಲ್ಲರ ಒಳಗೂ ಇದ್ದೇ ಇರುತ್ತದೆ. ಮಕ್ಕಳಂತೆ ಆಟವಾಡುವ ಹಂಬಲವೂ ದೊಡ್ಡವರಿಗೆ ಇರುತ್ತದೆ. ಆದರೆ ಯಾರು ಏನು ಅಂದುಕೊಂಡಾರೋ ಎನ್ನುವ ಮುಜುಗರದಲ್ಲಿಯೇ ಇರುವವರು ಅದೆಷ್ಟೋ ಮಂದಿ. ದೊಡ್ಡವರಿಗಾಗಿ ಏರ್ಪಡಿಸುವ ಕಾರ್ಯಕ್ರಮಗಳಲ್ಲಿ ಅಥವಾ ಕಚೇರಿಗಳಲ್ಲಿ ನಡೆಯುವ ಸಭೆ ಸಮಾರಂಭಗಳಲ್ಲಿ ದೊಡ್ಡವರೂ ಮಕ್ಕಳಾಗುವುದನ್ನು ಕಾಣಬಹುದು. ಅಂಥದ್ದೇ ಒಂದು ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ ಜೀ ಕನ್ನಡ ಚಾನೆಲ್​. ಇಲ್ಲಿ ಪ್ರತಿ ವಾರಾಂತ್ಯದಲ್ಲಿ ಪ್ರಸಾರ ಆಗ್ತಿರೋ ಜೋಡಿ ನಂ.1 ಈ ಬಾರಿ ವಿಶೇಷ ಸಂಚಿಕೆಯೊಂದಿಗೆ ಹೊರಬಂದಿದೆ. ಇಲ್ಲಿ ಸ್ಪರ್ಧಾಳುಗಳು ಮಕ್ಕಳಂತೆ ಕುಣಿದಾಡಿದ್ದಾರೆ, ಜಿಗಿದಾಡಿದ್ದಾರೆ. ಮಕ್ಕಳಂತೆ ಆಟವಾಡಿದ್ದು, ವೀಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುವಂತಿದೆ.

ಇದರ ಪ್ರೋಮೋವನ್ನು ವಾಹಿನಿ ಬಿಡುಗಡೆ ಮಾಡಿದೆ. 'ಸರ ಸರ ನಾಗಪ್ಪ' ಆಟದಲ್ಲಿ ಯಾವ ಯಾವ ನಾಗಪ್ಪ ಎಷ್ಟೆಷ್ಟು ತಿಂದ್ರಪ್ಪ ಅಂತ ನೋಡಿ! ಜೋಡಿ ನಂ.1 'ಜೋಡಿ ಉತ್ಸವ' ಎಂಬ ಶೀರ್ಷಿಕೆಯಲ್ಲಿ ಪ್ರೊಮೋ ಬಿಡುಗಡೆಯಾಗಿದ್ದು, ಇದನ್ನು ನೋಡಿದರೆ ನಕ್ಕೂ ನಕ್ಕೂ ಸುಸ್ತಾಗುವುದಂತೂ ಗ್ಯಾರೆಂಟಿ. ಇದರಲ್ಲಿ ಪುರುಷ ಸ್ಪರ್ಧಿಗಳಿಗೆ ಟಾರ್ಗೆಟ್​ ನೀಡಲಾಗಿದೆ. ಅದೇನೆಂದರೆ ಎಲ್ಲರನ್ನೂ ಒಂದು ಚೀಲದಲ್ಲಿ ತುಂಬಿಸಲಾಗಿದೆ. ಅವರೆಲ್ಲರೂ ಹಾವಿನಂತೆ ನುಸುಳುತ್ತಾ ಬಂದು ಅಲ್ಲಿ ಇಟ್ಟಿರುವ ತಿಂಡಿಗಳನ್ನು ತಿನ್ನಬೇಕು. ಕಣ್ಣಿಗೂ ಬಟ್ಟೆ ಕಟ್ಟಿ ಬಿಡಲಾಗಿದೆ. ತಿಂಡಿಯ ರೂಪದಲ್ಲಿ ಗುಲಾಬ್​ ಜಾಮೂನು, ಹಿಟ್ಟು ಎಲ್ಲವನ್ನೂ ಇಡಲಾಗಿದೆ. ಅವುಗಳನ್ನು ಗಬಗಬ ಎಂದು ತಿನ್ನುವುದು ಟಾರ್ಗೆಟ್​. ಹೀಗೆ ತಿನ್ನುವ ವೇಳೆ ಕಣ್ಣನ್ನು ಕಟ್ಟಿರುವ ಕಾರಣ, ತಿಂಡಿ ಎಲ್ಲಿ ಇಡಲಾಗಿದೆ ಎಂದು ಸ್ಪರ್ಧಿಗಳಿಗೆ ತಿಳಿಯುವುದಿಲ್ಲ.

ಜೋಡಿ ನಂ.1: ಫಸ್ಟ್ ನೈಟ್ ಅನುಭವ ಹಂಚಿಕೊಂಡ ನಟ ಶಶಿ, ಲಾವಣ್ಯ ಭಾವುಕ!

ಈ ರೀತಿ ಸ್ಪರ್ಧಿಗಳು ಆಟವಾಡಿದ್ದಾರೆ. ಮೂತಿಗೆಲ್ಲಾ ಹಿಟ್ಟು, ತಿಂಡಿ ಮೆತ್ತಿಕೊಂಡು ಅವರು ಪರದಾಡಿದರೆ ನೋಡುಗರು ನಕ್ಕೂ ನಕ್ಕೂ ಸುಸ್ತಾಗುವಂತಿದೆ. ಸಕತ್​ ಕಾಮಿಡಿಯ ಸ್ಪರ್ಧೆ ಇದಾಗಿದ್ದು. ಈ ಜೋಡಿ ಉತ್ಸವ ಹೇಗಿರಲಿದೆ, ಯಾವ ಹಾವು ಎಷ್ಟು ತಿಂಡಿ ತಿಂದಿತು ಎನ್ನುವ ಕಾತರ ಈ ಪ್ರೊಮೋ ನೋಡಿದವರಿಗೆ ಉಂಟಾಗಲಿದೆ. ಇದೇ ವಾರಾಂತ್ಯದಲ್ಲಿ ಇದರ ಸಂಪೂರ್ಣ ಷೋ ಅನ್ನು ವಾಹಿನಿಯಲ್ಲಿ ಸವಿಯಬಹುದಾಗಿದೆ. ಇವರ ಆಟ ನೋಡಿದ ತೀರ್ಪುಗಾರರಲ್ಲಿ ಒಬ್ಬರಾಗಿರುವ ಪ್ರೇಮ್​ ಅವರು, ಮಕ್ಕಳ ಮನಸ್ಸಿರುವವರಿಗೆ ಮಾತ್ರ ಇದು ಸಾಧ್ಯ ಎಂದಿದ್ದು, ಇದು ಅಕ್ಷರಶಃ ನಿಜ ಎನಿಸುವಂತಿದೆ.  

ಅಂದಹಾಗೆ ಈ ಸ್ಪರ್ಧೆಯಲ್ಲಿ ಸುನೇತ್ರಾ ಪಂಡಿತ್ - ರಮೇಶ್ ಪಂಡಿತ್, ಲಾವಣ್ಯ - ಶಶಿ ಹೆಗ್ಡೆ, ಮಂಜುನಾಥ್ -ಅನುಷಾ, ನೇತ್ರಾವತಿ -ಸದಾನಂದ, ಸಂಜು ಬಸಯ್ಯ -ಪಲ್ಲವಿ, ಆನಂದ್ - ಚೈತ್ರಾ, ಚಿದಾನಂದ - ಕವಿತಾ, ಮಾಲತಿ ಸರ್ ದೇಶಪಾಂಡೆ - ಯಶವಂತ್ ಸರ್ ದೇಶಪಾಂಡೆ ಹಾಗೂ ಗಣೇಶ್ ಕಾರಂತ್ - ವಿದ್ಯಾ ಜೋಡಿಗಳು ಭಾಗವಹಿಸಿವೆ. 

ಕೊಡವ ನೃತ್ಯದಲ್ಲಿ ಕಂಗೊಳಿಸಿದ ನಟಿ ಹರ್ಷಿಕಾ ಪೂಣಚ್ಚ: ವಿಡಿಯೋ ನೋಡಿ ಶ್ಲಾಘನೆಗಳ ಮಹಾಪೂರ

Follow Us:
Download App:
  • android
  • ios