ಸರಿಗಮಪ ಸೀಸನ್‌ 15ರ ಮೂಲಕ ಜನಪ್ರಿಯತೆ ಪಡೆದ ಹಾವೇರಿ ಹೈದ ಹನುಮಂತು ಇದೀಗ ಬಿಗ್ ಬಾಸ್‌ ಸೀಸನ್‌ 8ರಲ್ಲಿ ಭಾಗಿಯಾಗಲಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. 

ಸ್ಟೇಜ್‌ ಮೇಲೆ ಮಾತ್ರವಲ್ಲ ಸಿನಿಮಾಗೂ ಹನುಮಂತು ಹಾಡಲಿದ್ದಾರೆ! 

ಕಿರುತೆರೆ ಪ್ರಪಂಚಕ್ಕೆ ಕಾಲಿಡುವುದು ಕಷ್ಟ. ಆದರೆ ಒಂದು ಸಲ ಎಂಟ್ರಿ ಕೊಟ್ಟ ಮೇಲೆ ಅವರದ್ದೇ ಹವಾ! ಎಲ್ಲಿ ನೋಡಿದರೂ ಅವರದ್ದೇ ಖದರ್‌. ಸರಿಗಮಪ ಶೋ ನಂತರ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ನಲ್ಲಿ ಹೆಜ್ಜೆ ಹಾಕಿದ ಹನುಮಂತು ಇದೀಗ ಕಂಬದ ರಂಗಯ್ಯ ಜೊತೆ ಚಿತ್ರವೊಂದಕ್ಕೆ ಧ್ವನಿ ನೀಡುತ್ತಿದ್ದಾರೆ.

ಕೆಲವು ಮೂಲಗಳ ಪ್ರಕಾರ ಬಿಗ್ ಬಾಸ್‌ ತಂಡದಿಂದ ಹನುಮಂತುಗೆ ಆಫರ್‌ ನೀಡಿದ್ದಾರೆ ಎನ್ನಲಾಗಿದೆ. ದಿನದ ಸಂಭಾವನೆ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಹನುಮಂತು ಇನ್ನೂ ಒಪ್ಪಿಗೆ ಸೂಚಿಸಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಸಹ ಹನುಮಂತು ಸ್ಪರ್ಧಿಸಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಪ್ರತಿ ಸೀಸನ್‌ನಲ್ಲೂ ಒಬ್ಬ ಗಾಯಕನಾದರೂ ಇದ್ದೇ ಇರುತ್ತಾರೆ, rapper ಚಂದನ್‌ ಶೆಟ್ಟಿ, ಗಾಯಕ ನವೀನ್ ಸಜ್ಜು ಬಂದಿದಾಯ್ತು ಈಗ  rapper ಅಲೋಕ್‌ನನ್ನು ಕರೆಯಿಸಿ ಎಂದು ಕಾಮೆಂಟ್‌ಗಳ ಮೂಲಕ ಕೇಳಿಕೊಳ್ಳುತ್ತಿದ್ದಾರೆ.  ಬಿಗ್ ಬಾಸ್‌ ಪ್ರೋಮೋ ಎಲ್ಲೆಡೆ ವೈರಲ್ ಅಗುತ್ತಿದೆ, ಸ್ಪರ್ಧಿಗಳ ಯಾರೆಂದು ಓಪನಿಂಗ್ ದಿನವೇ ತಿಳಿಯುವುದಾದರೂ ಊಹಾಪೋಹಗಳು ಸಾಕಷ್ಟು ಹರಿದಾಡುತ್ತಿದೆ. 

ರಿಯಾಲಿಟಿ ಶೋ ವಂಚನೆ; ಮೋಸದ ವದಂತಿಗೆ ಹನುಮಂತು ಸ್ಪಷ್ಟನೆ! 

ಕೊರೋನಾ ಸವೈರಸ್ ಸೋಂಕಿನ ಕಾರಣ ಕಳೆದ ವರ್ಷ ಬಿಗ್ ಬಾಸ್‌ ಸ್ಪರ್ಧೆ ನಡೆಯಲೇ ಇಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಶೋ ಆರಂಭವಾಗಲಿದ್ದು, ಈ ಬಾರೀ ವೀಕ್ಷಕರಿಗೆ ಫುಲ್ ಮನೋರಂಜನೆ ಸಿಗುವುದರಲ್ಲಿ ಅನುಮಾನವೇ ಇಲ್ಲ. ಕೇವಲ ಸೆಲೆಬ್ರಿಟಿಗಳು ಮಾತ್ರ ಸೀರಿಯಲ್‌ನಲ್ಲಿ ಪಾಲ್ಗೊಳ್ಳುತ್ತಾರೆಂಬ ಸುಳಿವು ಸಿಕ್ಕಿದ್ದು, ಬ್ರಹ್ಮಗಂಟು ಖ್ಯಾತಿಯ ಗೀತಾ ಭಟ್ ಸಹ ಒಬ್ಬ ಸ್ಪರ್ಧಿಯಾಗಲಿದ್ದಾರೆನ್ನಲಾಗಿದೆ. ನೋಡಬೇಕು ಜೋಶ್ ಹೇಗಿರುತ್ತೆ ಅರಮನೆಯಂಥ ಸೆರೆಮನೆಯೊಳಗೆ ಅಂತ.