ಜೀ ಕನ್ನಡ ಸರಿಗಮಪ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದಿರುವ ನಾಟಿ ಪ್ರತಿಭೆ ಹನುಮಂತು ಇತ್ತೀಚಿಗೆ ಗೋಕರ್ಣ ಹಾಗೂ ಕುಮಟಾಗೆ ಭೇಟಿ ನೀಡಿದ್ದರು ಅಲ್ಲಿನ ಬೇಕರಿವೊಂದರ ಮಾಲೀಕರ ಜೊತೆ ಮಾತನಾಡಿರುವ ವಿಚಾರಗಳು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. 

'ಸರಿಗಮಪ ಸೀಸನ್ 17 ' ವಿಜಯದ ಕಿರೀಟ ಮುಡಿಗೇರಿಸಿಕೊಂಡ ಶ್ರೀನಿಧಿ ಶಾಸ್ತ್ರಿ! 

ಹನುಮಂತು ಹೇಳಿದ್ದು ನಿಜವೇ?

ಖಾಸಗಿ ಪತ್ರಿಕೆಯೊಂದರಲ್ಲಿ ವರದಿ ಮಾಡಿರುವ ಪ್ರಕಾರ ಹನುಮಂತು ಮಾಲೀಕರ ಜೊತೆ ಮಾತನಾಡುವಾಗ ತಮ್ಮ ಕಲೆ ಮತ್ತು ಪ್ರೋತ್ಸಾಹ ಸಿಕ್ಕಿರುವುದು ಆದರೆ ಅದಕ್ಕೆ ತಕ್ಕಂತೆ ಬೆಲೆ ಸಿಗಲಿಲ್ಲ, ರನ್ನರ್ ಅಪ್ ಪಡೆದಿರುವ ಬೆಂಗಳೂರಿನ ಪ್ಲಾಟ್‌ ಇದುವರೆಗೂ ನೋಂದಣಿ ಕೆಲಸವೇ ಆಗಿಲ್ಲ ಎಂದು ಬೇಸರದಿಂದ ಮಾತನಾಡಿದರಂತೆ.

ಅಲ್ಲದೆ ಹನುಮಂತು ಮಾಲೀಕರಿಗೆ ತಮ್ಮ ಊರಿನಲ್ಲಿ ಅಥವಾ ಜಿಲ್ಲೆಯಲ್ಲಿ ಯಾವುದೇ ಕಾರ್ಯಕ್ರಮಗಳಲ್ಲಿ ಹಾಡುವ ಅವಕಾಶ ಇದ್ದರೆ ಮಾಹಿತಿ ನೀಡಿ  ಹಣದ ಮುಖ ನೋಡಿ ಬರುವ ಮನಸ್ಸಿಲ್ಲ ಆದರೆ ಕಲೆ ಜೀವಂತವಾಗಿರಲಿ ಎನ್ನುವ ಕಾರಣಕ್ಕೆ ಎಂದು ಹನುಮಂತು ಹೇಳಿದ್ದಾರೆ ಎನ್ನಲಾಗಿದೆ.

ಸರಿಗಮಪ 17ನೇ ಸಂಚಿಕೆಯಲ್ಲಿ ಹಳ್ಳಿ ಹಾಡುಗಳ ಸಮಾಗಮ! 

ಹನುಮಂತು ಸ್ಪಷ್ಟನೆ:

ಹನುಮಂತು ಗೋಕರ್ಣಕ್ಕೆ ಭೇಟಿ ನೀಡಿ ಕುಮಟಾದ ಬೇಕರಿಯಲ್ಲಿ ನೀರು ಕುಡಿದು, ಕೇಕ್‌ ಮತ್ತು ಐಸ್‌ಕ್ರೀಂ ತಿಂದು ಬಂದಿರುವ ವಿಚಾರವನ್ನು ಒಪ್ಪಿಕೊಂಡಿದ್ದಾರೆ ಅಲ್ಲದೆ ಅಲ್ಲಿನ ಜನರು ಚೆನ್ನಾಗಿ ಮಾತನಾಡಿ ಸೆಲ್ಫಿ ತೆಗೆದುಕೊಂಡಿರುವ ವಿಚಾರವನ್ನು ಸ್ಪಷ್ಟ ಮಾಡಿದ್ದಾರೆ ಆದರೆ ರಿಯಾಲಿಟಿ ಶೋ ಬಗ್ಗೆ ಹೇಳಿರುವ ಮಾತುಗಳು ಸುಳ್ಳು ದಯವಿಟ್ಟು  ಈ ರೀತಿ ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.