ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸುದೀಪ್ ಇತ್ತೀಚೆಗೆ ಅಭಿಮಾನಿಗಳೊಂದಿಗೆ ಪ್ರಶ್ನೋತ್ತರ ಕಾರ್ಯಕ್ರಮ ನಡೆಸಿದರು. ಈ ವೇಳೆ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ರಶ್ಮಿಕಾ ಮಂದಣ್ಣ ಅವರ ಶ್ರೀವಲ್ಲಿ ಪಾತ್ರದಲ್ಲಿರಲು ಬಯಸುವುದಾಗಿ ಹೇಳಿದ್ದಾರೆ.
ಕಿಚ್ಚ ಸುದೀಪ್ ಪುತ್ರ ಸಾನ್ವಿ ಸುದೀಪ್ ಈಗ ಏಕಾಂಗಿಯಾಗಿ ಸೋಶಿಯಲ್ ಮೀಡಿಯಾವನ್ನು ಎದುರಿಸುವಷ್ಟು ಶಕ್ತರಾಗಿದ್ದಾರೆ. ಈಗಾಗಲೇ ಗಾಯಕಿಯಾಗಿ ಗುರುತಿಸಿಕೊಂಡಿರುವ ಸಾನ್ವಿ ಸುದೀಪ್ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿದ್ದು, ತಮನೆ ಅನಿಸಿರುವ ವಿಚಾರವನ್ನ ಅತ್ಯಂತ ಮುಕ್ತವಾಗಿ ಹೇಳಿಕೊಳ್ಳುತ್ತಾರೆ. ಅದರೊಂದಿಗೆ ಪೋಟೋ, ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಫಾಲೋವರ್ಸ್‌ಗಳೊಂದಿಗೆ ಎಂಗೇಜ್ ಆಗಿರುತ್ತಾರೆ. ಇತ್ತೀಚೆಗೆ ಇನ್ಸ್‌ಟಾಗ್ರಾಮ್‌ನಲ್ಲಿ ಅವರು ನನಗೆ ಏನಾದರೂ ಪ್ರಶ್ನೆ ಕೇಳಿ ಅನ್ನೋ ಫ್ಯಾನ್ ಎಂಗೇಜ್‌ಮಂಟ್‌ಅನ್ನು ನಡೆಸಿದ್ದರು. ಈ ವೇಳೆ ತಮ್ಮ ಫಾಲೋವರ್ಸ್‌ಗಳು ಕೇಳಿರುವ ಪ್ರಶ್ನೆಗೆ ತಮಾಷೆಯಾಗಿ ಉತ್ತರ ಮಾಡಿದ್ದಾರೆ.
ವಾಟ್ಸ್ ಬೀನ್ ಅಪ್ ಎಂದು ಸಾನ್ವಿ ಸುದೀಪ್ Q & A ಸೆಷನ್ ನಡೆಸಿದ್ದು, ಬಹುತೇಕ ಫಾಲೋವರ್ಸ್‌ಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಯಾವುದೇ ಮುಜುಗರವಿಲ್ಲದೆ ಉತ್ತರ ನೀಡಿದ್ದಾರೆ. ಈ ವೇಳೆ ಒಂದು ದಿನದ ಮಟ್ಟಿಗೆ ನೀವು ಯಾವುದಾದರೂ ಕಾಲ್ಪನಿಕ ಪಾತ್ರವಾಗಿ ಬದಲಾಗಬೇಕು ಎಂದು ಬಯಸಿದರೆ, ಯಾವ ಪಾತ್ರದಲ್ಲಿ ಬದಲಾಗ್ತೀರಿ ಎಂದು ಒಬ್ಬರು ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಸಾನ್ವಿ ಸುದೀಪ್, ಪುಷ್ಪ ಸಿನಿಮಾದಲ್ಲಿ ನಟಿ ರಶ್ಮಿಕಾ ಮಾಡಿರುವ ಶ್ರೀವಲ್ಲಿ ಪಾತ್ರದಲ್ಲಿರಲು ಬಯಸುತ್ತೇನೆ ಎಂದು ಹೇಳಿರುವುದು ಮಾತ್ರವಲ್ಲ ಅದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ.
ಶ್ರೀವಲ್ಲಿ ಆಗಲು ಬಯಸುವ ಕಾರಣ ಪುಷ್ಪರಾಜ್ ಎಂದು ಹೇಳಿದ್ದಾರೆ. ಪುಷ್ಪನಂತಹ ಗಂಡ ಸಿಕ್ಕಿದರೆ ಇದಕ್ಕಿಂತ ಹೆಚ್ಚು ಇನ್ನು ಏನು ಕೇಳುವುದು ಎಂದು ಸಾನ್ವಿ ಬರೆದುಕೊಂಡಿದ್ದಾರೆ.ತಮ್ಮ ಆಲ್‌ಟೈಮ್ ಫೇವರಿಟ್ ಪರ್ಸನ್ ಸಂಚಿತ್ ಸಂಜೀವ್ ಎಂದು ಹೇಳಿದ್ದು, ಇವನು ನನಗೆ ಅಣ್ಣ ಅಂತಲೂ ತಿಳಿಸಿದ್ದಾರೆ. ಈ ವೇಳೆ ತಂದೆ ಸುದೀಪ್ ಅಥವಾ ತಾಯಿ ಪ್ರಿಯಾ ಅವರ ಹೆಸರು ಹೇಳುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು.
ಸುದೀಪ್ ಕುಟುಂಬದಿಂದ ಬಂಪರ್ ಆಫರ್ ಪಡೆದ ಉಗ್ರಂ ಮಂಜು; ಎಷ್ಟು ಲಕ್ಷ ಎಂದ ನೆಟ್ಟಿಗರು
ಇನ್ನು ತಮಗೆ ಕಾಫಿ ಬಹಳ ಪ್ರಿಯ ಎಂದು ಅವರು ಹೇಳಿದ್ದಾರೆ. ಕಫೆಗೆ ಹೋದಾಗ ತಾವು ಮೊದಲು ಆರ್ಡರ್ ಮಾಡೋದೇ ಫಿಲ್ಟರ್ ಕಾಫಿ ಎಂದಿದ್ದಾರೆ. ನಾನು ಮಾರ್ನಿಂಗ್ ಪರ್ಸನ್ ಅಲ್ಲ. ನೈಟ್ ಪರ್ಸನ್. ರಾತ್ರಿ ಎಷ್ಟೇ ಹೊತ್ತಾದರೂ ಎಚ್ಚರ ಇರುತ್ತೇನೆ. ಆದರೆ, ಬೆಳಗ್ಗೆ ಮಾತ್ರ ಸ್ವಲ್ಪ ಬೇಗ ಏಳು ಅಂದ್ರೂ ಏಳೋಕೆ ಆಗೋದಿಲ್ಲ ಎಂದು ತಮ್ಮ ವೈಯಕ್ತಿಕ ವಿಚಾರಗಳನ್ನು ತಿಳಿಸಿದ್ದಾರೆ. ಮಸಾಲೆ ದೋಸೆ ತಮ್ಮ ಫೇವರಿಟ್ ಫುಡ್ ಎಂದಿರುವ ಸಾನ್ವಿ, ನಾನು ವ್ಲಾಗಿಂಗ್ ಮಾಡೋಕೆ ಶುರು ಮಾಡಿದರೆ, ನಿಮಗೆಲ್ಲ ಬೋರ್ ಆಗಬಹುದು ಎಂದು ಉತ್ತರಿಸಿದ್ದಾರೆ. ತಂದೆ ಸುದೀಪ್ ಚೆನ್ನಾಗಿ ಅಡುಗೆ ಮಾಡುತ್ತಾರೆ ಎಂದಿರುವ ಸಾನ್ವಿ ಸುದೀಪ್ ಇದೇ ವೇಳೆ ಅಮ್ಮನಿಗೆ ಸಾರಿ ಕೂಡ ಕೇಳಿದ್ದಾರೆ.
ಸಾನ್ವಿ ಸುದೀಪ್‌ಗೆ ಬೇಸರ ಮಾಡಿದ ಬಿಗ್ ಬಾಸ್ ರಜತ್ ಕಿಶನ್; ಕಿರಿಕ್ ಎಂದು ವಿಡಿಯೋ ವೈರಲ್

