ಪುಟ್ಟಕ್ಕನ ಮಕ್ಕಳು ಸ್ನೇಹಾ ಸತ್ತರೂ ಸೋಷಿಯಲ್ ಮೀಡಿಯಾದಲ್ಲಿ ನಟಿಯ ಹವಾ ಜೋರಾಗಿದೆ. ಇದೀಗ ಸಂಜನಾ ಇದ್ದೋಳು ಸ್ನೇಹಾ ಆಗಿ ಬದಲಾಗಿದ್ದು ಹೇಗೆ ಎನ್ನುವುದನ್ನು ತಿಳಿಸಿದ್ದಾರೆ. 

ಪುಟ್ಟಕ್ಕನ ಮಕ್ಕಳು ಸೀರಿಯಲ್‌ನ ನಾಯಕಿ ಎಂದೇ ಬಿಂಬಿತವಾಗಿದ್ದ ಸ್ನೇಹಾ ಪಾತ್ರವನ್ನು ಸಾಯಿಸಲಾಗಿದೆ. ನಟಿ ಸಂಜನಾ ಬುರ್ಲಿ ಅವರು ಸೀರಿಯಲ್‌ ಬಿಡಬೇಕಾಗಿದ್ದ ಹಿನ್ನೆಲೆಯಲ್ಲಿ ಕಥೆಯನ್ನು ಬದಲಿಸಿ ಆ ಪಾತ್ರಕ್ಕೆ ಬೇರೊಬ್ಬರನ್ನು ತರದೇ ಪಾತ್ರವನ್ನೇ ಸಾಯಿಸಲಾಗಿದೆ. ಸ್ನೇಹಾಳ ಹೃದಯವನ್ನು ಇನ್ನೊಬ್ಬಳು ಸ್ನೇಹಾಕ್ಕೆ ಅಳವಡಿಸಲಾಗಿದ್ದು, ಇದೀಗ ಈ ಸ್ನೇಹಾಳ ರೂಪದಲ್ಲಿ ಆ ಸ್ನೇಹಾ ಮುಂದೆ ಬರುತ್ತಿದ್ದಾಳೆ. ಆದರೆ ಕೆಲವು ವರ್ಷ ಒಂದು ಪಾತ್ರವನ್ನು ನೋಡಿದ ಅಭಿಮಾನಿಗಳಿಗೆ ಆ ಪಾತ್ರ ಇನ್ನಿಲ್ಲ ಎಂದು ಗೊತ್ತಾದಾಗ ನೋವಾಗುವುದು ಸಹಜ. ಅದೇ ರೀತಿ ಸಂಜನಾ ಬುರ್ಲಿ ಅವರು ಸೀರಿಯಲ್‌ ಬಿಟ್ಟು ಹೋಗಿರುವುದಕ್ಕೂ ಅಭಿಮಾನಿಗಳಿಗೆ ಬೇಸರ ತರಿಸಿದೆ. 

ಸೀರಿಯಲ್‌ ಬಿಟ್ಟ ಮೇಲೆ ಸಂಜನಾ, ಸೋಷಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಲವಾರು ವಿಡಿಯೋ ಶೇರ್‍‌ ಮಾಡುತ್ತಿದ್ದಾರೆ. ಇದೀಗ ಅವರು ತಾವು ಸಂಜನಾಳಿಂದ ಸ್ನೇಹಾ ಆಗಿ ಬದಲಾಗಿದ್ದು ಹೇಗೆ ಎನ್ನುವ ಬಗ್ಗೆ ಮಾತನಾಡಿದ್ದಾರೆ. ಮೊದಲಿಗೆ ಸ್ನೇಹಾ ಹಳ್ಳಿಯ ಪಾತ್ರವಾಗಿತ್ತು. ಅದಕ್ಕಾಗಿ ಸಂಜನಾ ತಮ್ಮನ್ನು ತಾವು ಬದಲಾಯಿಸಿಕೊಂಡಿದ್ದರು. ಈ ಕುರಿತು ಮಾತನಾಡಿದ್ದ ನಟಿ, ಹಳ್ಳಿ ಹುಡುಗಿ ರೀತಿ ಕಾಣಿಸಬೇಕು, ಎಂದು ನಾನು ಲುಕ್ ಬದಲಾಯಿಸಿಕೊಂಡೆ. ಆ್ಯಕ್ಟಿಂಗ್ ಕ್ಲಾಸ್‌ನಲ್ಲಿ (Acting Class) ಭಾಗಿಯಾಗಿ ಪಾತ್ರಕ್ಕೆ ರೆಡಿಯಾದೆ. ಉಮಾಶ್ರೀ ಅಮ್ಮ ಅವರ ಜತೆ ತೆರೆ ಹಂಚಿಕೊಳ್ಳುವುದಕ್ಕೆ ತುಂಬಾನೇ ಸಂತೋಷವಾಗುತ್ತದೆ. ಮೊದಲ ದಿನದ ಚಿತ್ರೀಕರಣ ವೇಳೆ ಅಮ್ಮ ಅವರು ನನಗೆ ಹಾಯ್ ಹೇಳಿದ ಕ್ಷಣ ನಾನು ಮರೆಯುವುದಿಲ್ಲ. ಒಂದು ದಿನ ದೊಡ್ಡ ಸನ್ನಿವೇಶ ಚಿತ್ರೀಕರಣ ಮಾಡಬೇಕಿತ್ತು. ಆಗ ಸೆಟ್‌ನಲ್ಲಿ ಒಂದು ಸಣ್ಣ ಶಬ್ದವೂ ಇರಲಿಲ್ಲ. ಪಿನ್ ಡ್ರಾಪ್ ಸೈಲೆನ್ಸ್‌ (Pin-Drop silence) ಇತ್ತು. ನಾನು ನಟಿಸಿದ ನಂತರ ಉಮಾಶ್ರೀ ಅಮ್ಮ ಅವರು ಎದ್ದು ಚಪ್ಪಾಳೆ ತಟ್ಟಿ ಹೊಗಳಿದರು. ಆ ಕ್ಷಣ ಅವರು ಹೇಳಿದ ಮಾತು ನನಗೆ ಸ್ಫೂರ್ತಿಯಾಗಿತ್ತು,' ಎಂದಿದ್ದರು ಸಂಜನಾ. 

ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಕಂಠಿ ಫೈಟಿಂಗ್‌ ಶೂಟಿಂಗ್‌ ವೇಳೆ ಆಗಿದ್ದೇನು? ತೆರೆಮರೆ ಹಿಂದಿನ ಕಥೆಯಿದು...

ಇದೀಗ ನಟಿ, ತಮ್ಮ ಸೀರಿಯಲ್‌ ದಿನಗಳನ್ನು ಮತ್ತೆ ಮೆಲುಕು ಹಾಕಿದ್ದಾರೆ. ಸಂಜನಾಳಿಂದ ಸ್ನೇಹಾ ಆಗಿ ಹೇಗೆ ಬದಲಾದೆ ಎನ್ನುವುದನ್ನು ತೋರಿಸಿದ್ದಾರೆ. ಇದರಲ್ಲಿ ಮೇಕಪ್‌ ಟಚ್‌ ನೋಡಬಹುದು. ಬಳಿಕ ನಟಿ ಮದುಮಗಳಂತೆ ಕಂಗೊಳಿಸುವುದನ್ನು ಕೂಡ ನೋಡಬಹುದಾಗಿದೆ. ಇನ್ನು ಸ್ನೇಹಾ ಸತ್ತಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳೂ ವ್ಯಕ್ತವಾಗುತ್ತಿವೆ. ಈ ಕುರಿತು ಖುದ್ದು ನಿರ್ದೇಶಕ ಆರೂರು ಜಗದೀಶ್‌ ಮಾತನಾಡಿದ್ದರು. ಸ್ನೇಹಾ ಅಂದ್ರೆ ನಟಿ ಸಂಜನಾ ಬುರ್ಲಿಯನ್ನು ಸಾಯಿಸಿದ್ದಕ್ಕೆ ವೀಕ್ಷಕರು ನನಗೆ ಹಾಕಿರೋವಷ್ಟು ಹಿಡಿ ಶಾಪ ಯಾರಿಗೂ ಹಾಕಿಲ್ಲ ಅನ್ನಿಸತ್ತೆ. ಆದ್ರೆ ಏನು ಮಾಡುವುದು, ಒಳಗೆ ಏನು ಆಗ್ತಿರುತ್ತೋ ಅವರಿಗೆ ಗೊತ್ತಾಗಲ್ಲ. ಹೊಗಳಿದಾಗ ಹೊಗಳಿಸಿಕೊಳ್ತೀವಿ, ಅದೇ ರೀತಿ ವೀಕ್ಷಕರಿಂದ ಬೈಸಿಕೊಳ್ಳುವುದೂ ನಡೆಯುತ್ತಲೇ ಇರುತ್ತದೆ. ಏನೂ ಮಾಡಲು ಆಗುವುದಿಲ್ಲ ಎನ್ನುತ್ತಲೇ ಪುಟ್ಟಕ್ಕನ ಮಗಳು ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ ಸೀರಿಯಲ್ ಬಿಟ್ಟ ಅಸಲಿ ಕಾರಣವನ್ನು ಆರೂರು ಜಗದೀಶ್​ ತೆರೆದಿಟ್ಟಿದ್ದರು. 

ಸಂಜನಾ ಅವರಿಗೆ ಹೈಯರ್​ ಎಜುಕೇಷನ್​ ಮಾಡುವ ಆಸೆ ಇತ್ತು. ತುಂಬಾ ಓದಬೇಕು, ನಾನು ಬ್ರಿಲಿಯೆಂಟ್​ ಇದ್ದೇನೆ. ದೊಡ್ಡ ವ್ಯಕ್ತಿ ಆಗಬೇಕು ಎಂದು ವರ್ಷದ ಹಿಂದೆಯೇ ಹೇಳಿದ್ರು. ಆ್ಯಕ್ಟಿಂಗ್​ ತುಂಬಾ ಚೆನ್ನಾಗಿ ಬರುತ್ತದೆ. ಸಿನಿಮಾದಲ್ಲಿ ಅವಕಾಶ ಸಿಗುತ್ತದೆ, ನಟನೆಯಲ್ಲಿಯೇ ಮುಂದುವರೆಯಲು ಹೇಳಿದ್ವಿ. ಆದರೆ ಸಿನಿಮಾ ಆಕೆಯ ಕೈಹಿಡಿಯಲಿಲ್ಲ. ಪುಟ್ಟಕ್ಕನ ಮಕ್ಕಳು ಇಷ್ಟು ಹಿಟ್​ ಆಯ್ತು ಅಂದ ಮಾತ್ರಕ್ಕೆ ಬೇರೆ ಸೀರಿಯಲ್ಲೂ ಹಿಟ್​ ಆಗತ್ತೆ ಎನ್ನಲು ಆಗಲಿಲ್ಲ. ಆದ್ದರಿಂದ ಆಕೆ ಬೇರೆ ಸೀರಿಯಲ್​ಗೂ ಹೋಗಲು ಇಷ್ಟಪಡಲಿಲ್ಲ. ಉನ್ನತ ವ್ಯಾಸಂಗನೇ ಮಾಡುವ ಆಸೆ ವ್ಯಕ್ತಪಡಿಸಿದ್ರು. ನಾನು ಚಾನೆಲ್​ ಜೊತೆ ಮಾತನಾಡಿ ಪರ್ಮಿಷನ್​ ಕೊಟ್ಟೆ. ಅವರ ಭವಿಷ್ಯಕ್ಕೆ ಧಕ್ಕೆ ಮಾಡುವ ಮನಸ್ಸು ಇರಲಿಲ್ಲ. ಆದ್ದರಿಂದ ಅನಿವಾರ್ಯವಾಗಿ ಸ್ನೇಹಾ ಪಾತ್ರವನ್ನು ಸಾಯಿಸಬೇಕಾಯಿತು ಎಂದಿದ್ದರು.

ಕನಸಿನ ಹುಡುಗನಿಗಾಗಿ ಕಾಯ್ತಿರೋ ಬಿಗ್‌ಬಾಸ್‌ ಅನುಷಾ: ನಿಮ್ಮಲ್ಲಿ ಈ ಕ್ವಾಲಿಟಿ ಇದ್ರೆ ಟ್ರೈ ಮಾಡ್ಬೋದು!

ನಾನು ಸಂಜನಾ ಇಂದ ಸ್ನೇಹ ಆಗಿ ಬದ್ಲಾಗದನ್ನ ನೋಡಿ! | Sanjana Burli #shorts