Jahilo Mein Shaadi Kar Li ಸಾನಿಯಾ ಮಿರ್ಜಾ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್‌ ಮಲೀಕ್‌ರಿಂದ ವಿಚ್ಛೇದನ ಪಡೆದು ಹಲವು ತಿಂಗಳಾಗಿದೆ. ಇತ್ತೀಚೆಗೆ ದ ಗ್ರೇಟ್‌ ಇಂಡಿಯನ್‌ ಕಪಿಲ್‌ ಶೋನಲ್ಲಿ ಭಾಗವಹಿಸಿದ್ದ ಸಾನಿಯಾ ಮಿರ್ಜಾ ಮಲೀಕ್‌ ಕುಟುಂಬಕ್ಕೆ ಟಾಂಗ್ ನೀಡಿದ್ದಾರೆ.

ಹೈದರಾಬಾದ್‌ (ಜೂ.14): ಭಾರತದ ಪ್ರಖ್ಯಾತ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ ದ ಗ್ರೇಟ್‌ ಇಂಡಿಯನ್‌ ಕಪಿಲ್‌ ಶೋನಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಅವರು ಮಾಡಿರುವ ಕಾಮೆಂಟ್‌ ಸಾಕಷ್ಟು ವೈರಲ್‌ ಆಗಿದೆ ಸಾನಿಯಾ ಮಿರ್ಜಾ ಮಾಡಿರುವ ಕಾಮೆಂಟ್‌ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ತುಂಬಾ ಚರ್ಚೆಯಾಗುತ್ತಿದೆ. ಈ ಶೋನ ವೈರಲ್‌ ಕ್ಲಿಪ್‌ ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇದರಲ್ಲಿ ಸಾನಿಯಾ ಮಿರ್ಜಾ ಹಾಗೂ ಕಾರ್ಯಕ್ರಮದ ನಿರೂಪಕ ಕಪಿಲ್‌ ಶರ್ಮ ಒಂದು ಫನ್ನಿ ಆಕ್ಟ್‌ಅನ್ನು ಮಾಡಿದ್ದಾರೆ. ಇದರಲ್ಲಿ ಸಾನಿಯಾ ಮಿರ್ಕಾ ಸೊಸೆ ಪಾತ್ರವನ್ನ ಮಾಡಿದ್ದರೆ, ಕಪಿಲ್‌ ಶರ್ಮ ಅತ್ತೆಯ ಪಾತ್ರ ಮಾಡಿದ್ದರು. ನಟನೆಎ ಮಾಡುವ ವೇಳೆ ಸಾನಿಯಾ ಮಿರ್ಜಾ, ಇದ್ಯಾವ ದಡ್ಡ ಶಿಖಾಮಣಿ ಕುಟುಂಬಕ್ಕೆ ಮದುವೆಯಾಗಿ ಬಂದುಬಿಟ್ಟೆ ಎಂದು ಹೇಳಿರುವುದೇ ಚರ್ಚೆಗೆ ಕಾರಣವಾಗಿದೆ. 'ಕಿನ್‌ ಜಾಹಿಲೋ ಮೇನ್‌ ಮೇ ನೇ ಶಾದಿ ಕರ್‌ ಲೀ..' ಎಂದು ಅವರು ಹೇಳಿದ್ದಾರೆ. ಆ ಬಳಿಕ ಅತ್ತೆಯ ಪಾತ್ರದಲ್ಲಿ ನಟಿಸುತ್ತಿದ್ದ ಕಪಿಲ್‌ ಶರ್ಮಗೆ ಚಹಾ ನೀಡುತ್ತಾರೆ. ಇವರಿಬ್ಬರ ನಡುವಿನ ಅತ್ತೆ-ಸೊಸೆ ಮಾತುಕತೆಗಳು ತಮಾಷೆಯಾಗಿದ್ದು ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸಿದೆ.

ಈ ಹಂತದಲ್ಲಿ ಕಪಿನ್‌ ಶರ್ಮ ಇದು ಚಹಾವೋ ವಿಷವೋ ಎಂದು ಕೇಳಿದಾಗ ಸೊಸೆ ಪಾತ್ರದಲ್ಲಿನ ಸಾನಿಯಾ ಮಿರ್ಜಾ, ನಾನು ಚಹಾವನ್ನೇ ಮಾಡಿದ್ದೆ. ಆದರೆ, ನಿಮ್ಮ ಬಾಯಿ ತಾಗಿತಲ್ಲ ಅದೀಗ ವಿಷವಾಗಿರಬೇಕು ಎಂದು ಟಾಂಟ್‌ ನೀಡಿದ್ದಾರೆ. ಈ ವಿಡಿಯೋವನ್ನು ನೋಡಿದ ಅಭಿಮಾನಿಗಳು ಸಾನಿಯಾ ಮಿರ್ಜಾ ತನ್ನ ಮಾಜಿ ಪತಿ ಶೋಯೆಬ್‌ ಮಲೀಕ್‌ ಹಾಗೂ ಅವರ ಕುಟುಂಬದ ಹೆಸರು ಹೇಳದೆ ಚೆನ್ನಾಗಿ ರೋಸ್ಟ್‌ ಮಾಡಿದ್ದಾರೆ. ಇನ್ನೂ ಕೆಲವರು ಸಾನಿಯಾ ಮಿರ್ಜಾ ತನಗೆ ಆಗಿರುವ ಅನುಭವವನ್ನೇ ಇಲ್ಲಿ ಹೇಳುತ್ತಿದ್ದಾರೆ ಎಂದಿದ್ದಾರೆ. ಜೋಕ್‌ನ ಮೂಲಕ ಸಾನಿಯಾ ಮಿರ್ಜಾ ತಮ್ಮ ಹಿಂದಿನ ಸಂಸಾರದ ಸತ್ಯವನ್ನು ತಿಳಿಸಿದ್ದಾಳೆ ಎಂದು ಬರೆದಿದ್ದಾರೆ.

ಸಾನಿಯಾ ಮಿರ್ಜಾ ಹಾಗೂ ಶೋಯೆಬ್‌ ಮಲೀಕ್‌ ಬೇರೆ ಬೇರೆಯಾಗಿ ಹಲವು ತಿಂಗಳುಗಳೇ ಕಳೆದಿವೆ. ಶೋಯೆಬ್‌ ಮಲೀಕ್‌ಗೆ ಸಾನಿಯಾ ಮಿರ್ಜಾ ಖುಲಾ ನೀಡಿದ್ದಾಗಿ ಅವರ ತಂದೆ ಇಮ್ರಾನ್‌ ಮಿರ್ಜಾ ಖಚಿತಪಡಿಸಿದ್ದಾರೆ. ಪಾಕಿಸ್ತಾನಿ ನಟಿ ಸನಾ ಜಾವೇದ್‌ರನ್ನು ಶೋಯೆಬ್‌ ಮಲೀಕ್‌ ಮೂರನೇ ಮದುವೆಯಾದ ಬಳಿಕ ವಿಚ್ಛೇದನದ ಸುದ್ದಿ ಹೊರಬಿದ್ದಿತ್ತು. ಇದು ಹಲವರ ಅಚ್ಚರಿಗೆ ಕಾರಣವಾಗಿತ್ತು. ಪ್ರಸ್ತುತ, ಸಾನಿಯಾ ಮಿರ್ಜಾ ಅವರು ತಮ್ಮ ಸಹೋದರಿ ಅನಮ್ ಮಿರ್ಜಾ ಮತ್ತು ಆಕೆಯ ಗಂಡ ಅಸಾದುದ್ದೀನ್ ಅವರೊಂದಿಗೆ ಹಜ್‌ನ ಆಧ್ಯಾತ್ಮಿಕ ಪ್ರಯಾಣಕ್ಕೆ ತಯಾರಿ ನಡೆಸುತ್ತಿರುವುದರಿಂದ ಮತ್ತೆ ಸುದ್ದಿಯಲ್ಲಿದ್ದಾರೆ.

'ನಾನು ಇನ್ನಷ್ಟೇ ಪ್ರೀತಿ ಹುಡುಕಬೇಕು': ಮಲಿಕ್ ಜತೆಗಿನ ವಿಚ್ಛೇದನದ ಬಳಿಕ ಸಾನಿಯಾ ಮಿರ್ಜಾ ಅಚ್ಚರಿ ಮಾತು..!

ಪಾಕಿಸ್ತಾನಿ ಪತ್ರಕರ್ತ ನಯೀಮ್ ಹನೀಫ್ ಪಾಡ್‌ಕಾಸ್ಟ್‌ನಲ್ಲಿ ಶೋಯೆಬ್ ಮಲಿಕ್ ನಟಿ ಸನಾ ಜಾವೇದ್ ಅವರೊಂದಿಗೆ ಮೂರು ವರ್ಷಗಳಿಂದ ಲಿವ್‌ ಇನ್‌ನಲ್ಲಿದ್ದಾರೆ ಎಂದು ಬಹಿರಂಗಪಡಿಸಿದ್ದರು. ಜೀತೋ ಪಾಕಿಸ್ತಾನ್ ಕಾರ್ಯಕ್ರಮದಲ್ಲಿ ಇಬ್ಬರೂ ಭೇಟಿಯಾಗಿದ್ದರು. ಬೇರೆ ಮದುವೆಯಾಗಿದ್ದರೂ ಇಬ್ಬರೂ ಒಬ್ಬರನ್ನೊಬ್ಬರು ನೋಡಲು ಆರಂಭಿಸಿದರು. ನಂತರ ಇವರ ಸಂಬಂಧ ಇನ್ನಷ್ಟು ದೊಡ್ಡದಾಗಿ ಮುಂದುವರಿದಿತ್ತು ಎಂದು ಹೇಳಿದ್ದರು. ವಿಚ್ಛೇದನದ ಬಳಿಕ ಹೆಚ್ಚಾಗಿ ಎಲ್ಲಿಯೂ ಕಾಣಿಸಿಕೊಳ್ಳದ ಸಾನಿಯಾ ಮಿರ್ಜಾ, ತಮ್ಮ ಖಾಸಗಿತನವನ್ನು ಗೌರವಿಸುವಂತೆ ಅಭಿಮಾನಿಗಳನ್ನು ಒತ್ತಾಯ ಮಾಡಿದ್ದರು.

ಸಾನಿಯಾ ಮಿರ್ಜಾಗೆ ಮರು ಮದುವೆ: ಅರಬ್​ ದೇಶಗಳನ್ನು ಪ್ರಸ್ತಾಪಿಸುತ್ತಲೇ ಪಾಕ್​ ನಟ ಹೇಳಿದ್ದೇನು?

View post on Instagram