ಸ್ಯಾಂಡಲ್ ವುಡ್ ಸ್ಟಾರ್ ನಟ ರಮೇಶ್ ಅರವಿಂದ್ ಪುಟ್ಟ ಗಾಯಕಿ ದಿಯಾ ಹೆಗ್ಡೆ ಅವರ ಆಟೋಗ್ರಾಫ್ ಪಡೆದುಕೊಂಡರು. ವಿಡಿಯೋ ಅಭಿಮಾನಿಗಳ ಹೃದಯ ಗೆದ್ದಿದೆ. 

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಸಿಂಗಿಂಗ್ ರಿಯಾಲಿಟಿ ಶೋ ‘ಸರಿಗಮಪ’ಗೆ ಅದ್ದೂರಿ ತೆರೆ ಬಿದ್ದಿದೆ. ಏಪ್ರಿಲ್ 15 ಹಾಗೂ 16ರಂದು ‘ಸರಿಗಮಪ ಲಿಟಲ್​ ಚಾಂಪ್ಸ್​ ಸೀಸನ್ 19ರ’ ಫಿನಾಲೆ ಸಂಚಿಕೆ ಪ್ರಸಾರ ವಾಗಿದೆ. ಅಂದಹಾಗೆ ಈ ಬಾರಿಯ ಸರಿಗಮಪ ಲಿಟಲ್​ ಚಾಂಪ್ಸ್​ ಸೀಸನ್ 19 ಪಟ್ಟ ಪ್ರಗತಿ ಬಡಿಗೇರ್ ಅವರಿಗೆ ಸಿಕ್ಕಿದೆ. ಸರಿಗಮಪ ಫಿನಾಲೆ ಕಾರ್ಯಕ್ರಮ ಸಾಕಷ್ಟು ವಿಶೇಷತೆಗಳಿಂದ ಕೂಡಿತ್ತು. ಗ್ರ್ಯಾಂಡ್ ಫಿನಾಲೆಯಲ್ಲಿ ಖ್ಯಾತ ನಟ ರಮೇಶ್ ಅರವಿಂದ್ ಕೂಡ ಭಾಗಿಯಾಗಿದ್ದರು. ಶಿವಾಜಿ ಸೂರತ್ಕಲ್-2 ಸಿನಿಮಾದ ಪ್ರಮೋಷನಲ್ಲಿರುವ ರಮೇಶ್ ಅರವಿಂದ್ ಅಂಡ್ ಟೀಂ ‘ಸರಿಗಮಪ’ ಫಿನಾಲೆ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. 

ಈ ಬಾರಿಯ ಸರಿಗಮಪ ಶೋನಲ್ಲಿ ಗಮನಸೆಳೆದ ಸ್ಪರ್ಧಿಗಳಲ್ಲಿ ದಿಯಾ ಹೆಗ್ಡೆ ಕೂಡ ಒಬ್ಬರು. ಪುಟ್ಟ ಪೋರಿ ದಿಯಾ ಅದ್ಭುತ ಗಾಯನದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಪ್ರತಿಭಾವಂತ ಗಾಯಕಿ ದಿಯಾ ಖ್ಯಾತ ನಟ ರಮೇಶ್ ಅರವಿಂದ್ ಅವರ ಹೃದಯವನ್ನೂ ಗೆದ್ದಿದ್ದಾರೆ. ದಿಯಾ ಈಗಾಗಲೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಫಿನಾಲೆ ವೇದಿಕೆಯಲ್ಲಿ ಮಾತನಾಡಿದ ದಿಯಾ, ರಮೇಶ್ ಎಂದರೆ ಏನು ಅಂತ ವಿವರಿಸಿದರು. 'ರ' ಎಂದರೆ ರಂಜಿಸುವ ರೂಪವಂತ, 'ಮೇ' ಎಂದರೆ ಮೇರು ವ್ಯಕ್ತಿತ್ವದ 'ಶಾ' ಎಂದರೆ ಶಾರದೆಯ ಸುಪುತ್ರ ಅವರೇ ನಮ್ಮ ರಮೇಶ್ ಅರವಿಂದ್ ಸರ್ ಎಂದು ಹೇಳಿದ್ದಾರೆ. 

Sarigampa Little Champs: ರಸ ಋಷಿ ಕುವೆಂಪುಗೆ ದಿಯಾ ಹೆಗ್ಡೆ ಅಕ್ಷರ ನಮನ ಸಲ್ಲಿಸಿದ್ದು ಹೀಗೆ!

ಪುಟ್ಟ ಪೋರಿ ದಿಯಾ ಮಾತುಗಳಿಂದ ಇಂಪ್ರೆಸ್ ಆದ ರಮೇಶ್ ಅರವಿಂದ್ ವೇದಿಕೆಗೆ ಎಂಟ್ರಿ ಕೊಟ್ಟರು. ವೇದಿಕೆಗೆ ಬಂದ ರಮೇಶ್ ಅರವಿಂದ್, ದಿಯಾ ಅವರನ್ನು ತಬ್ಬಿಕೊಂಡರು. 'ದಿಯಾರನ್ನು ಹಾಗೆ ಎತ್ತಿಕೊಂಡು ವೀಕೆಂಡ್ ಕುರ್ಚಿಯಲ್ಲಿ ಕೂರಿಸಿ ಕೊಂಡಾಡೋಣ' ಎಂದರು. ಬಳಿಕ ಎಲ್ಲರ ಪರವಾಗಿ ತಾನು ದಿಯಾ ಬಳಿ ಆಟೋಗ್ರಾಫ್ ತೆಗೆದುಕೊಳ್ಳುತ್ತೇನೆ ಎಂದು ಪುಟ್ಟ ಗಾಯಕಿ ದಿಯಾ ಹೆಗ್ಡೆ ಆಟೋಗ್ರಾಫ್ ತೆಗೆದುಕೊಂಡರು. ದಿಯಾ ಎಂದು ಆಟ್ರೋಗ್ರಾಫ್ ಹಾಕಿ ಕೊಟ್ಟಳು. ದಿಯಾ ಸಂತಸದಿಂದ ಆಟೋಗ್ರಾಫ್ ಹಾಕಿದರು.

View post on Instagram

Shivaji Surathkal 2 review: ಕಳೆದುಹೋಗಲು ಒಂದೊಳ್ಳೆ ಸಿನಿಮಾ

ಸರಿಗಮಪ ಲಿಟಲ್​ ಚಾಂಪ್ಸ್​ ಸೀಸನ್ 19ರ ವಿನ್ನರ್ ಪ್ರಗತಿಯಾದರೆ ಶಿವಾನಿ ಮೊದಲ ರನ್ನರ್ ಅಪ್ ಆಗಿದ್ದಾರೆ. ಮಂಗಳೂರಿನ ಪ್ರತಿಭೆ ತನುಶ್ರೀ ಎರಡನೇ ರನ್ನರ್ ಅಪ್ ಹೊರಹೊಮ್ಮಿದರು. ಹಂಸಲೇಖ ಅವರು ಮಹಾಗುರುಗಳಾಗಿ ವೇದಿಕೆ ಮೇಲಿದ್ದರು. ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಜಡ್ಜ್​ ಸ್ಥಾನದಲ್ಲಿದ್ದರು. ವಿನ್ನರ್ ಆದ ಪ್ರಗತಿ ಬಡಿಗೇರ್​ಗೆ 21 ಲಕ್ಷ ಮೌಲ್ಯದ 30-40 ಅಡಿಯ ಸೈಟ್ ಸಿಕ್ಕಿದೆ. ಇದರ ಜೊತೆಗೆ 4 ಲಕ್ಷ ರೂಪಾಯಿ ನಗದು ದೊರೆತಿದೆ.