ಬಿಗ್ ಬಾಸ್ ಸೀಸನ್‌ 6ರ ಸ್ಪರ್ಧಿ ಅಕ್ಷತಾ ಪಾಂಡವಪುರ ಜನವರಿ  15ರಂದು ಪುಟ್ಟ ಕಂದಮ್ಮನನ್ನು ಬರ ಮಾಡಿಕೊಂಡಿದ್ದಾರೆ.  ಸೋಷಿಯಲ್ ಮೀಡಿಯಾದಲ್ಲಿ ಮಗಳ ಬಗ್ಗೆ ಅಭಿಮಾನಿಗಳಿಗೆ ಅಪ್ಡೇಟ್ ನೀಡುವ ಅಕ್ಷತಾ, ಸ್ಪೆಷಲ್ ಗೆಸ್ಟ್ ಆಗಮನದ ಬಗ್ಗೆಯೂ ಬರೆದುಕೊಂಡಿದ್ದಾರೆ. 

ಸರ್ಕಾರಿ ಆಸ್ಪತ್ರೆಯಲ್ಲೇ ಡೆಲಿವರಿ: ಮಾದರಿಯಾದ ಬಿಗ್‌ಬಾಸ್ ಹುಡುಗಿ ಅಕ್ಷತಾ 

ಹೌದು! ಅಕ್ಷತಾ ಸದ್ಯಕ್ಕೆ ಪುತ್ರಿಯನ್ನು ಲಕ್ಷ್ಮಿ ಹೆಸರಿನಿಂದಲೇ ಕರೆಯುತ್ತಿದ್ದಾರೆ. ಲಕ್ಷ್ಮಿಯನ್ನು ಭೇಟಿ ಮಾಡಲು ಖ್ಯಾತ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಆಗಮಿಸಿದ್ದರು. ವಿಜಯ್ ಮಗುವನ್ನು ಮುದ್ದಾಡುತ್ತಿರುವ ಫೋಟೋ ಹಂಚಿಕೊಂಡು, 'ಇವರು ಯಾರು ಬಲ್ಲಿರೇನು? ನಿನ್ನೆ ಮನೆಗೆ ಬಂದಿದ್ದ ನನ್ನ ನೆಚ್ಚಿನ ವ್ಯಕ್ತಿ,' ಎಂದು ಅಕ್ಷತಾ ಬರೆದುಕೊಂಡಿದ್ದಾರೆ. 

ಪಾಂಡವಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಅಕ್ಷತಾ ಮಗಳಿಗೆ ಜನ್ಮ ನೀಡಿದ್ದರು. ಸರ್ಕಾರಿ ಆಸ್ಪತ್ರೆ ಬಗ್ಗೆ ಜನರಿಗೆ ಇರುವ ಕಲ್ಪನೆ ಹಾಗೂ ಅಕ್ಕಪಕ್ಕದವರು ಹುಟ್ಟಿಸುವ ಭಯದ ನಡುವೆಯೂ ಅಕ್ಷತಾ ಕೈಗೊಂಡ ನಿರ್ಧಾರದ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಂಡಿದ್ದರು.  

ಅಕ್ಷತಾ ಪೋಸ್ಟ್‌ಗೆ ನೆಟ್ಟಿಗರು ಕಾಮೆಂಟಿನಲ್ಲಿ ಸಂಚಾರಿ ವಿಜಯ್ ಎಂದು ಹೆಸರು ಗೆಸ್ ಮಾಡುತ್ತಿದ್ದಾರೆ. ಮೊದಲ ಚಿತ್ರ 'ನಾನು ಅವನಲ್ಲ, ಅವಳು'ಗೇ ರಾಷ್ಟ್ರ ಪ್ರಶಸ್ತಿ ಪಡೆದ ವಿಜಯ್ ರಂಗಭೂಮಿ ಕಲಾವಿದ, ಚಿತ್ರರಂಗದ ಅದ್ಭುತ ನಟ, ಎಲ್ಲರೂ ನಮ್ಮವರು, ತಮ್ಮವರು ಎಂದು ಕಾಣುವ ಪರಿಶುದ್ಧ ಹೃದಯವಂತ, Down to earth ವ್ಯಕ್ತಿ ಎಂದರೆ  ತಪ್ಪಾಗದು.

ಅಕ್ಷತಾ ಪಾಂಡವಪುರ ಮಗಳ ಫೋಟೋ ವೈರಲ್; ಹೇಗಿದ್ದಾಳೆ ಲಕ್ಷ್ಮಿ?