ಬಿಗ್ ಬಾಸ್ ಸೀಸನ್ 6ರ ಮೂಲಕ ಕಿರುತೆರೆ ವೀಕ್ಷಕರ ಗಮನ ಸೆಳೆದ ಕಲಾವಿದೆ ಅಕ್ಷತಾ ಪಾಂಡವಪುರ ಜನವರಿ 15ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗಳು ಆಗಮಿಸಿರುವ ವಿಚಾರವನ್ನು ಅಕ್ಷತಾ ಡಿಫರೆಂಟ್ ಆಗಿ ತಿಳಿಸಿದ್ದಾರೆ.

ಹೆಣ್ಣು ಮಗುವಿಗೆ ತಾಯಾದ ಅಕ್ಷತಾ... ಹೆಸರು ಆಗಲೆ ಇಟ್ಟಾಗಿದೆ! 

ಪ್ರೆಗ್ನೆಂಸಿ ಫೋಟೋಶೂಟ್‌ ಹಾಗೂ ಬೇಬಿ ಶವರ್‌ನಲ್ಲಿ ಮುದ್ದಾಗಿ ಕಂಗೊಳ್ಳಿಸುತ್ತಿದ್ದ ರಕ್ಷತಾ ಬೇಬಿ ಬಂಪ್‌ಗೆ  ಪೇಂಟಿಂಗ್ ಮಾಡಿಸಿದ್ದಾರೆ. ಅದರದ್ದೇ ಫೋಟೋ ಶೇರ್ ಮಾಡಿಕೊಂಡು 'ಲಕ್ಷ್ಮಿ' ಎಂದು ಬರೆದುಕೊಂಡಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ತಾಯಿ ಮತ್ತು ಮಗಳ ಫೋಟೋ ಹರಿದಾಡುತ್ತಿದೆ.

ಮಗು ನೋಡಲು ತುಂಬಾನೇ ಮುದಾಗಿದ್ದು ಅಕ್ಷತಾ ಮುದಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಕ್ಷತಾ ಆಕ್ಟೀವ್ ಇರುವ ಕಾರಣ ಶೀಘ್ರವೇ ಮಗಳೊಟ್ಟಿಗೆ ಫೋಟೋ ಶೇರ್ ಮಾಡುತ್ತಾರೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಸದ್ಯಕ್ಕೆ ಮಗಳನ್ನು ಲಕ್ಷ್ಮಿ ಎಂದು ಕರೆದಿರುವ ಅಕ್ಷತಾ ಯಾವ ಅಕ್ಷರದಿಂದ ಹೆಸರು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂದು ಅಭಿಮಾನಿಗಳು ಗೆಸ್ ಮಾಡುತ್ತಿದ್ದಾರೆ.