ಸರ್ಕಾರಿ ಆಸ್ಪತ್ರೆ, ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಜನ ಸರ್ಕಾರಿ ನೌಕರಿಗೆ ಮಾತ್ರ ಮುಗಿಬೀಳುತ್ತಾರೆ. ಆದರೆ ನಮ್ಮೂರಿನ ಸರ್ಕಾರಿ ಆಸ್ಪತ್ರೆ ನಮ್ಮ ಹೆಮ್ಮೆ ಎನ್ನುವುದನ್ನು ಸಾಬೀತು ಮಾಡಿ ಮಾದರಿಯಾಗಿದ್ದಾರೆ ಬಿಗ್‌ಬಾಸ್ ಖ್ಯಾತಿಯ ಅಕ್ಷತಾ ಪಾಂಡವಪುರ.

ಬಾಯಲ್ಲಿ ಸುಮ್ಮನೆ ಹೆಮ್ಮೆ ಅನ್ನೋದಲ್ಲ. ಪುಟ್ಟ ಕಂದನ ಬರಮಾಡಿಕೊಂಡ ಅಕ್ಷತಾ ಅವರ ಡೆಲಿವರಿಯಾಗಿದ್ದು ಸರ್ಕಾರಿ ಆಸ್ಪತ್ರೆಯಲ್ಲೇ. ಪುಟ್ಟ ಕಂದಮ್ಮನನ್ನು ಬರ ಮಾಡಿಕೊಂಡ ಅಕ್ಷತಾ ಸೋಶಿಯಲ್ ಮೀಡಿಯಾದಲ್ಲಿ ಪೋಟೋ  ಶೇರ್ ಮಾಡಿ  ಹೆಣ್ಣು ಮಗುವಿನ ಆಶೀರ್ವಾದ ಎಂದು ಬರೆದಿದ್ದರು.

ಹೆಣ್ಣು ಮಗುವಿಗೆ ತಾಯಾದ ಅಕ್ಷತಾ... ಹೆಸರು ಆಗಲೆ ಇಟ್ಟಾಗಿದೆ!

ನಮ್ಮೂರ ಸರ್ಕಾರಿ ಆಸ್ಪತ್ರೆ ನಮ್ಮ ಹೆಮ್ಮೆ.. ತಾಲೂಕು ಅರೋಗ್ಯ ಅಧಿಕಾರಿ ಎಲ್ಲಾ ವೈದ್ಯ, ದಾದಿಗಳ ಆರೈಕೆಯಿಂದ ಮಗಳೊಂದೊಂದಿಗೆ ಮನೆ ಸೇರಿದೆ ಎಂದು ಬರೆದಿದ್ದಾರೆ ಅಕ್ಷತಾ.

ಮಕ್ಕಳ ವಿಷ್ಯದಲ್ಲಿ ತಮಾಷೆನಾ....! ನಿಜ್ವಾಗ್ಲೂ ಸರ್ಕಾರಿ ಆಸ್ಪತ್ರೆ ಯೋಚನೆ ಸರಿನಾ? ಎಷ್ಟೇ ವೆಚ್ಚವಾದರೂ ಸರಿಯೇ ಒಳ್ಳೆಯ ಹಾಸ್ಪಿಟಲ್‌ಗೆ ತೋರಿಸಬೇಕು. ಕಾಸು ಕೊಟ್ಟಂತೆ ಕಜ್ಜಾಯ. ಏನೋ ಮಾಡೋಕೆ ಹೋಗಿ ಇನ್ನೇನೋ ಆಗ್ಬಿಟ್ಟದು. ಸರ್ಕಾರಿ ಆಸ್ಪತ್ರೆಯಲ್ಲಿ ಅಡ್ಡ ದಿಡ್ಡಿ ನಾರ್ಮಲ್ ಮಾಡಿ ಕಳಿಸ್ತಾರೆ ಅದು ತಡೆದುಕ್ಕೊಳ್ಳೋ ಶಕ್ತಿ ಇರಬೇಕು. ಡಿಲಿವರಿ ಏನೋ ಆಗುತ್ತೆ ಮುಂದೆ ಮಗುವಿನ ಆರೈಕೆ ಬಗ್ಗೆ ಎಲ್ಲಾ ಏನೂ ಹೇಳಲ್ಲ, ರೋಗಗಳು ಅಂದ್ರೆ ಸ್ವಲ್ಪನೂ ಕೇರ್ ಇಲ್ಲಾ, ಎಲ್ಲೆಲ್ಲೋ ದುಡ್ಡು ಖರ್ಚು ಮಾಡ್ತೀವಿ, ಮಗು ಆಗುವಾಗ ಒಂದೊಳ್ಳೆ ಹಾಸ್ಪಿಟಲ್ ಬೇಡ್ವಾ ಎಂದು ಬಹಳಷ್ಟು ಚುಚ್ಚು ಮಾತುಗಳನ್ನು ಕೇಳಿಯೂ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ ಈಕೆ.

ಗುಜರಿ ಸಾಮಾನು ಕಲೆ ಹಾಕುತ್ತಿರುವ ಗರ್ಭಿಣಿ ಅಕ್ಷತಾ ಪಾಂಡವಪುರ!

ಅಬ್ಬಾ ಹೀಗೆ ನಾನು ನನ್ನ ಡಿಲಿವರಿ ನಮ್ಮೂರಿನ ಸರ್ಕಾರಿ ಆಸ್ಪತ್ರೆಲೇ ಅಂತಾ ನಿರ್ಧಾರ ಮಾಡಿದಾಗ ಕೇಳಿಸಿದ ಮಾತು ಒಂದೋ, ಎರಡೋ... ಇವೆಲ್ಲದರ ಮದ್ಯೆ ಅಂತೂ ಇಂತೂ ನಮ್ಮ ಸರ್ಕಾರಿ ಆಸ್ಪತ್ರೆ ನಮ್ಮ ಹೆಮ್ಮೆ ಅಂತಾ ಹೇಳಬಲ್ಲೇ ಅಂದರೆ ಅದಕ್ಕೆ ಇಡೀ ಸಿಬ್ಬಂದಿವರ್ಗವೇ ಕಾರಣ ಧನ್ಯವಾದಗಳು ಎಂದಿದ್ದಾರೆ ಅಕ್ಷತ ಪಾಂಡವಪುರ.