ಹಣ, ಖ್ಯಾತಿ, ಹೆಸರು ಬಿಟ್ಟು ಹಿಜಾಬ್ ಆಯ್ಕೆಯ ಕಾರಣ ಬಿಚ್ಚಿಟ್ಟು ಕಣ್ಣೀರಾಕಿದ ನಟಿ ಸನಾ ಖಾನ್
ನಟಿ, ಬಿಗ್ ಬಾಸ್ ಖ್ಯಾತಿಯ ಸನಾ ಖಾನ್ ಹಣ, ಹೆಸರು, ಖ್ಯಾತಿ ಬಿಟ್ಟು ಹಿಜಬ್ ಧರಿಸಲು ಕಾರಣ ಬಿಚ್ಚಿಟ್ಟು ಕಣ್ಣೀರಾಕಿದ್ದಾರೆ.
ಕಿರುತೆರೆ ನಟಿ, ಬಿಗ್ ಬಾಸ್ ಖ್ಯಾತಿಯ ಸನಾ ಖಾನ್ ಬಣ್ಣದ ಲೋಕ ತ್ಯಜಿಸಿ ಮೂರು ವರ್ಷಗಳಾಗಿವೆ. ಸಿನಿಮಾರಂಗ ತೆರೆಯುವ ನಿರ್ಧಾರದ ಬಗ್ಗೆ ಮಾತನಾಡಿ ಭಾವುಕರಾಗಿದ್ದರು. ಸನಾ ಖಾನ್ ಈ ಹಿಂದೆ ಹಿಜಾಬ್ ಧರಿಸಲು ನಿರ್ಧರಿಸಿದ್ದ ಬಗ್ಗೆ ಬಹಿರಂಗ ಪಡಿಸಿ ಕಣ್ಣೀರಿಟ್ಟದ ವಿಡಿಯೋ ಇದೀಗ ಮತ್ತೆ ವೈರಲ್ ಆಗಿದೆ. ಸಮಾಜ ಸೇವೆ ಮಾಡಲು ಮತ್ತು ಸೃಷ್ಟಿಕರ್ತನ ಆದೇಶವನ್ನು ಅನುಸರಿಸುವ ಕಾರಣಕ್ಕೆ ಬಣ್ಣದ ಲೋಕ ತೆರೆಯಬೇಕಾಯಿತು ಎಂದು ಹೇಳಿದ್ದರು. ಈ ಬಗ್ಗೆ ವಿಡಿಯೋ ಸಂದರ್ಶನ ನೀಡಿದ್ದ ಸನಾ ಖಾನ್ ಆಧ್ಯಾತ್ಮಿಕ ದಾರಿ ಹಿಡಿಯಲು ಹಿಂದಿನ ಕಾರಣವೇನು ಎಂದು ವಿವರಿಸಿದ್ದಾರೆ. ಹೆಸರು, ಖ್ಯಾತಿ, ಹಣ ಬಿಟ್ಟು ಹಿಜಾಬ್ ಧರಿಸಲು ಪ್ರಾರಂಭಿಸಿದ್ದೇಕೆ ಎಂದು ಬಹಿರಂಗ ಪಡಿಸಿದ್ದಾರೆ.
ಶಾಂತಿ ಕಳೆದುಕೊಂಡಿದ್ದೆ
'ನನ್ನ ಹಳೆಯ ಜೀವನದಲ್ಲಿ ಸಹಜವಾಗಿ ಎಲ್ಲವೂ ಇತ್ತು. ಹಣ, ಹೆಸರು, ಖ್ಯಾತಿ ಎಲ್ಲಾ ಇತ್ತು. ನಾನು ಏನು ಬೇಕಾದರೂ ಮತ್ತು ಎಲ್ಲವನ್ನೂ ಮಾಡಬಹುದಿತ್ತು. ಆದರೆ ಒಂದು ವಿಷಯ ಮಾತ್ರ ಕಳೆದು ಹೋಗಿತ್ತು ನನ್ನ ಹೃದಯದ ಶಾಂತಿ. ನಾನು ಎಲ್ಲವನ್ನೂ ಹೊಂದಿದ್ದೆ ಆದರೆ ಸಂತೋಷ ಇರಲಿಲ್ಲ, ಯಾಕೆ? ಅದು ತುಂಬಾ ಕಠಿಣವಾಗಿತ್ತು ಮತ್ತು ಖಿನ್ನತೆಯ ದಿನಗಳು ಇತ್ತು. ನಾನು ದೇವರ ಸಂದೇಶವನ್ನು ದಿನಗಳು ಇದ್ದವು' ಎಂದು ಹೇಳಿದ್ದಾರೆ.
24K ಚಿನ್ನದ ಕಾಫಿಯನ್ನು ನೋಡಿದ್ದೀರಾ ? ಇದ್ರ ಬೆಲೆ ಭರ್ತಿ 3190 ರೂ. !
ನನ್ನ ಕನಸಿನಲ್ಲಿ ನನ್ನದೇ ಸಮಾಧಿ ನೋಡಿದ್ದೆ
'ನನಗಿನ್ನು ನೆನಪಿದೆ 2019 ರಂಜಾನ್ ನಲ್ಲಿ ನಾನು ನನ್ನ ಕನಸಿನಲ್ಲಿ ಸಮಾಧಿಯನ್ನು ನೋಡುತ್ತಿದ್ದೆ. ನಾನು ಸುಡುವ, ಉರಿಯುತ್ತಿರುವ ಸಮಾಧಿಯನ್ನು ನೋಡುತ್ತಿದ್ದೆ, ನಾನು ಸಮಾಧಿಯಲ್ಲಿ ನನ್ನನ್ನೇ ನೋಡುತ್ತಿದ್ದೆ. ನಾನು ಖಾಲಿ ಸಮಾಧಿಯನ್ನು ನೋಡಿದೆ, ನಾನು ಅಲ್ಲಿ ನನ್ನನ್ನು ನೋಡಿದೆ. ನಾನು ಬದಲಾಗದಿದ್ದರೆ, ನನ್ನ ಅಂತ್ಯ ಇದೇ ಆಗಲಿದೆ ಎಂಬುದಕ್ಕೆ ದೇವರು ನನಗೆ ನೀಡುತ್ತಿರುವ ಸಂಕೇತವಾಗಿದೆ ಎಂದು ನಾನು ಭಾವಿಸಿದೆ. ಅದು ನನಗೆ ಸ್ವಲ್ಪ ಆತಂಕವನ್ನುಂಟುಮಾಡಿತು' ಎಂದು ಹೇಳಿದ್ದಾರೆ.
ಹಿಜಾಬ್ ಧರಿಸಿದ್ದಕ್ಕೆ ಟ್ರೋಲ್: ಖಡಕ್ ಉತ್ತರ ಕೊಟ್ಟ ಸನಾ ಖಾನ್
ಹಿಜಾಬ್ ಧರಿಸಲು ನಿರ್ಧರಿಸಿದೆ
'ನಾನು ಎಲ್ಲಾ ಸ್ಪೂರ್ತಿದಾಯಕ ಭಾಷಣಗಳನ್ನು ಕೇಳುತ್ತಿದ್ದೆ ಎಂದು ಹೇಳಿದರು. ಹಿಬಾಜ್ ಧರಿಸುವುದನ್ನು ಎಂದಿಗೂ ಬಿಡುವುದಿಲ್ಲ ಎಂದು ಸನಾ ಹೇಳಿದ್ದಾರೆ. 'ನಿಮ್ಮ ಕೊನೆಯ ದಿನವು ಹಿಜಾಬ್ ಧರಿಸಿದ ಮೊದಲ ದಿನವಾಗಿರಲು ನೀವು ಬಯಸುವುದಿಲ್ಲ ಎಂದು ಸಂದೇಶದಲ್ಲಿ ಕೇಳಿದೆ. ಅದು ನನ್ನನ್ನು ತುಂಬಾ ಆಳವಾಗಿ ಸ್ಪರ್ಶಿಸಿದ ವಿಷಯ. ಮರುದಿನದಿಂದನೇ ನಾನು ಹಿಜಾಬ್ ಧರಿಸಲು ಪ್ರಾರಂಭಿಸಿದೆ. ಇನ್ನು ಯಾವುತ್ತು ತೆಗಿಯಲ್ಲ ಎಂದು ನಿರ್ಧಸಿದೆ' ಎಂದು ಹೇಳುವ ಮೂಲಕ ಭಾವುಕರಾದರು.
ಸನಾ ಖಾನ್ 2020ರಲ್ಲಿ ಮುಫ್ತಿ ಅನಾಸ್ ಎಂಬವರ ಕೈಹಿಡಿದರು. ಅನಾಸ್ ಸೈಯದ್ ಸೌಂದರ್ಯವರ್ಧಕ, ಪರ್ಸನಲ್ ಕೇರ್ ಲೈನ್ ನ ಸಂಸ್ಥಾಪರಾಗಿದ್ದಾರೆ.