Asianet Suvarna News Asianet Suvarna News

BBK9 ದೇವ್ರೆ! ಎಷ್ಟೊಂದು ಬದಲಾವಣೆ, ಹೊರಗಡೆ ಸಂಬಂಧ ಉಳಿಸಿಕೊಳ್ಳಬೇಕು: ರೂಪೇಶ್- ರಾಕೇಶ್ ಟಾಕ್

ಬಿಗ್ ಬಾಸ್ ಮನೆ ಒಬ್ಬ ವ್ಯಕ್ತಿಯನ್ನು ಎಷ್ಟು ಬದಲಾಯಿಸಬಹುದು ಎನ್ನುವುದಕ್ಕೆ ರೂಪೇಶ್ ಮತ್ತು ರಾಕೇಶ್ ಕೊಟ್ಟಿರುವ ಉದಾಹರಣೆ ಇದು...

Roopesh shetty Rakesh adiga talks  about changes in behaviour from colors kannada bigg boss 9 vcs
Author
First Published Dec 9, 2022, 3:47 PM IST

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 9 ರಿಯಾಲಿಟಿ ಶೋ 73ನೇ ದಿನಕ್ಕೆ ಕಾಲಿಟ್ಟಿದೆ. ಬಿಗ್ ಬಾಸ್ ಸೀಸನ್ ಓಟಿಟಿ 1ರಿಂದ ಟಿವಿ ಸೀಸನ್‌ವರೆಗೂ ಜರ್ನಿ ದಾಟಿಕೊಂಡು ಬಂದಿರುವ ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಅಡಿಗ ತಮ್ಮ ವ್ಯಕ್ತಿತ್ವದಲ್ಲಿ ಏನೆಲ್ಲಾ ಬದಲಾಗಿದೆ ಎಂದು ಚರ್ಚಿಸಿದ್ದಾರೆ. ಅವರಿಬ್ಬರ ನಡುವೆ ನಡೆದ ಮಾತುಕತೆಯನ್ನು ಕೇಳಿ ವೀಕ್ಷಕರು ಕೂಡ ಹೌದು ಹೌದು ಎಂದಿದ್ದಾರೆ.  

ರೂಪೇಶ್: ನಾನು ಸುಮ್ಮನೆ ಆಲೋಚನೆ ಮಾಡುತ್ತಿದ್ದೆ ಓಟಿಟಿಯಿಂದ, ಓಟಿಟಿ ಎಂಟ್ರಿ ಅಲ್ಲಿಂದ ಟಿವಿ ಇಲ್ಲಿನವರೆಗೂ ಎಷ್ಟು ದೊಡ್ಡ ಜರ್ನಿ.

ರಾಕೇಶ್: ಹೌದು! ಓಟಿಟಿಗೆ ನೀನು ಎಂಟ್ರಿ ಕೊಟ್ಟಾಗ ಯಾವ ರೂಪೇಶ್ ಶೆಟ್ಟಿ ಆಗಿದ್ದೆ ಹೋಗ್ತಾ ಹೋಗ್ತಾ ಡಿಫರೆಂಟ್ ರೂಪೇಶ್ ಶೆಟ್ಟಿ ಆಗಿ ಹೊರ ಹೋಗುತ್ತೀನಿ. 

ರೂಪೇಶ್: ತುಂಬಾ ವಿಚಾರಗಳಲ್ಲಿ ಬದಲಾವಣೆಗಳು ಆಗಿದೆ. 100% ಆಗಿದೆ. 

ರಾಕೇಶ್: ನಿನ್ನ ಲೈಫ್ ಲೀಡ್ ಮಾಡಲು ತುಂಬಾ ಸುಲಭ ಅಗುತ್ತೆ ಅನ್ಸುತ್ತೆ. ಅಥವಾ ನೀನು ಲೈಫ್‌ ನೋಡುವ ರೀತಿ ತುಂಬಾ ಬದಲಾಗುತ್ತಿದೆ ಅಲ್ವಾ?

ರೂಪೇಶ್: ಬದಲಾಗುತ್ತೆ ಬದಲಾಗುತ್ತೆ... ಏಕೆಂದರೆ ಪರ್ಸನಲ್ ಲೈಫ್‌ ಬಗ್ಗೆ ಇಷ್ಟೊಂದು ಪಿನ್ ಟು ಪಿನ್‌ ಥಿಂಕ್ ಮಾಡಿಲ್ಲ. ಇಲ್ಲಿ ನಾನು ಯೋಜನೆ ಮಾಡುವ ರೀತಿ ಬದಲಾಗಿದೆ.  ಹೊರಗಡೆ ಇದೆಲ್ಲಾ ಸಣ್ಣ ವಿಚಾರ ಕೆಲವ ಒಂದೇ ದೊಡ್ಡ ವಿಚಾರ. ಈಗ ಹೊರ ಹೋದ ಮೇಲೆ ಪರ್ಸನಲ್‌ ಲೈಫ್‌ನಲ್ಲಿ ತುಂಬಾ ಬದಲಾವಣೆಗಳು ಆಗುತ್ತದೆ. ಕೆಲಸ ವಿಚಾರದಲ್ಲಿ ನಿರ್ಧಾರ ಮಾಡುವ ರೀತಿ ಬದಲಾಗಬಹುದು. 

Roopesh shetty Rakesh adiga talks  about changes in behaviour from colors kannada bigg boss 9 vcs

ರಾಕೇಶ್: ಬೇರೆ ಅವರ ಜೊತೆ ಒಡನಾಟ ಕೂಡ ಬದಲಾಗುತ್ತದೆ. 

ರೂಪೇಶ್: ನಾನು ಹೊರಗಡೆ ಹೋದ ಮೇಲೆ ಕೂಲ್ ಹಾಗೂ ಕಾಮ್‌ನೆಸ್‌ ಜಾಸ್ತಿ ಆಗಬಹುದು. 

ರಾಕೇಶ್: ನನ್ನ ಮೈನ್ಸ್‌ಗಳು ಎಷ್ಟೊಂದು ಇತ್ತು ಐಡಿಯಾನೇ ಇಲ್ಲದಷ್ಟು ಮೈನಸ್‌ಗಳಿತ್ತು. ಓ ನನ್ನಲ್ಲಿ ಈ ಸ್ವಭಾವ ತಿದ್ದಿಕೊಳ್ಳಬೇಕು ನಾನು ಈ ರೀತಿ ಇರಬಾರದು ಅಂತ ಎಷ್ಟೋ ಯೋಚನೆಗಳು ಬಂದಿದೆ. 

ರೂಪೇಶ್: ಹೊರಗಡೆ ನಮ್ಮ ಬಗ್ಗೆ ಯಾರೂ ಹೇಳುವುದಿಲ್ಲ ಇಲ್ಲಿ ತಕ್ಷಣ ಉತ್ತರ ಸಿಗುತ್ತದೆ. ಇಲ್ಲಿ ಕಳಪೆ ಅಂತ ಬಂದಾಗ ನೇರವಾಗಿ ಬಂದು ಮುಖಕ್ಕೆ ಉತ್ತರ ಕೊಡುತ್ತಾರೆ. ನಮ್ಮ ಕೆಲಸ ಮಾಡ್ಕೊಂಡು ಸುಮ್ಮನೆ ಜೀವನ ನಡೆಸುತ್ತೀವಿ. ಬಿಗ್ ಬಾಸ್ ಮನೆಯಲ್ಲಿ ನಮಗೆ ನಿರೀಕ್ಷೆ ಕಡಿಮೆ ಮಾಡಿಕೊಳ್ಳಬೇಕು ಎಂದು ಹೇಳಿಕೊಟ್ಟಿದೆ ಹೀಗಾಗಿ ಸಣ್ಣ ಪುಟ್ಟ ವಿಚಾರವೂ ಖುಷಿ ಕೊಡುತ್ತಿದೆ. 

ರೂಪೇಶ್‌ ಶೆಟ್ಟಿ ಬೇಕೆಂದು ದೂರ ಉಳಿಯುತ್ತಿದ್ದಾನೆ, ನಮ್ಮ ಸಂಬಂಧ ಬದಲಾಗುವುದಿಲ್ಲ: ಸಾನ್ಯಾ ಅಯ್ಯರ್

ರಾಕೇಶ್: ಇಷ್ಟೊಂದು  ಎನರ್ಜಿ ಇದೆ ಅಂತ ನೀನು ಯೋಚನೆ ಕೂಡ ಮಾಡಿರಲಿಲ್ವಾ?

ರೂಪೇಶ್: ನಾನು ಬಿಬಿ ಬರುವಾಗ ಓಟಿಟಿ ಮಾತ್ರ ನನ್ನ ತಲೆಯಲ್ಲಿತ್ತು. ಹೆಚ್ಚು ಅಂದ್ರೆ ಮುರ್ನಾಲ್ಕು ವಾರ ಉಳಿದುಕೊಳ್ಳಬಹುದು..ಅಲ್ಲಿಂದ ತೆಗೆದುಕೊಂಡು ಬಂದ್ರೆ 18 ವಾರ. ಇಲ್ಲಿ ಎನರ್ಜಿ ಎಲೆವೆಲ್ ಹೇಗೆ ಅಂದ್ರೆ ರಾತ್ರಿ ಗ್ಯಾಸ್‌ ಫಿಟ್ ಮಾಡುತ್ತಾರೆ ಬೆಳಗ್ಗೆ ಮತ್ತೆ ಎನರ್ಜಿ ಬರುತ್ತೆ.  ಬಿಗ್ ಬಾಸ್ ಮನೆಯಲ್ಲಿ ಆಗುವಷ್ಟು ಮೂಡ್ ವೇರಿಯೇಷನ್‌ ಅದರಲ್ಲೂ ಒಬ್ಬರು ಎಲಿಮಿನೇಟ್ ಆದಾಗ ಇರಬಹುದು .ಹೊರಗಡೆ ಇದೆಲ್ಲಾ ಅನುಭವ ಆಗಲ್ಲ ಮೊಬೈಲ್ ಇದ್ದರೆ ಸಾಕು. 

Follow Us:
Download App:
  • android
  • ios