Asianet Suvarna News Asianet Suvarna News

ಈಗಲೂ ಭಾವನೆ ಇದ್ಯಾ?; ಹೊರ ಬರ್ತಿದ್ದಂತೆ ಸಾನ್ಯಾ ತಬ್ಬಿಕೊಂಡು ಈ ಪ್ರಶ್ನೆ ಕೇಳಬೇಕಂತೆ ರೂಪೇಶ್

ಫಿನಾಲೆ ದಿನ ಸಾನ್ಯಾ ಧ್ವನಿ ಕೇಳಿ ಈ ಮಾತನ್ನು ಕೇಳಬೇಕು ಎಂದು ಕಿಚ್ಚ ಸುದೀಪ್ ಬಳಿ ಹೇಳಿಕೊಂಡ ರೂಪೇಶ್ ಶೆಟ್ಟಿ..... 

Roopesh Shetty misses Sanya Iyer on Bigg boss kannada 9 finale day vcs
Author
First Published Dec 31, 2022, 10:49 AM IST

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 9 ಇಂದು 100 ದಿನ ಪೂರೈಸಿದೆ. ಗ್ರ್ಯಾಂಡ್‌ ಫಿನಾಲೆ ಅದ್ಧೂರಿಯಾಗಿ ನಡೆಯುತ್ತಿದೆ. ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ರೂಪೇಶ್ ರಾಜಣ್ಣ ಮತ್ತು ದೀಪಿಕಾ ದಾಸ್ ಫಿನಾಲೆ ದಿನಕ್ಕೆ ಕಾಲಿಟ್ಟಿದ್ದಾರೆ. ವಿನ್ನರ್ ಟ್ರೋಫಿ ಯಾರ ಕೈ ಸೇರಲಿದೆ ಎಂದು ತಿಳಿಯಲು ವೀಕ್ಷಕರು ಕಾಯುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿನ್ನರ್ ಪಟ್ಟದ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಎಲಿಮಿನೇಟ್ ಆಗಿರುವ ಸ್ಪರ್ಧಿಗಳು ವಿಶೇಷ ಡ್ಯಾನ್ಸ್‌ ಪರ್ಫಾರ್ಮೆನ್ಸ್‌ ಮಾಡಿದ್ದಾರೆ ಹಾಗೂ ಒಳಗಿರುವ ಫೈನಲಿಸ್ಟ್‌ ಜೊತೆ ಮಾತನಾಡಿದ್ದಾರೆ. 

ಬಿಗ್ ಬಾಸ್ ಕನ್ನಡ ಒಟಿಟಿಯಿಂದ ಟಿವಿ ಸೀಸನ್ 9ಕ್ಕೆ ಕಾಲಿಟ್ಟ ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡರು. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದರು, ಅಲ್ಲದೆ ಅವರಿಬ್ಬರ ಲವ್ ಕಮ್ ಫ್ರೆಂಡ್‌ಶಿಪ್‌ ಕ್ಯೂಟ್ ಆಗಿದೆ ಎಂದು ಹೇಳುತ್ತಾರೆ. ಸಾನ್ಯಾ ಎಲಿಮಿನೇಟ್ ಅಗಿ ಹೊರ ಬರುವ ದಿನ ರೂಪೇಶ್ ಬಿಕ್ಕಿಬಿಕ್ಕಿ ಅಳುತ್ತಾರೆ ದಯವಿಟ್ಟು ಬದಲಾಗಬೇಡ ನನಗೆ ಕಾಯುತ್ತಿರುವ ಹೊರಗಡೆ ಬಂದು ಭೇಟಿ ಮಾಡುತ್ತೀನಿ ಎಂದು ಮನವಿ ಮಾಡಿಕೊಳ್ಳುತ್ತಾರೆ. ಈ ನೆಟ್ಟಿನಲ್ಲಿ ಫಿನಾಲೆ ದಿನವೂ ರೂಪೇಶ್‌ ಸಾನ್ಯಾ ಅವರನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.

Roopesh Shetty misses Sanya Iyer on Bigg boss kannada 9 finale day vcs

'ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಮೊದಲಿಗೆ ಹೋಗಿ ನಾನು ಸಾನ್ಯಾನ ತಬ್ಬಿಕೊಳ್ಳುತ್ತೀನಿ. ಹೇಗಿದ್ದೀಯಾ ಎಂದು ಕೇಳುತ್ತೀನೆ. ಪ್ರೀತಿ ಹಾಗೂ ಸ್ನೇಹಕ್ಕಿಂತಲೂ ಮುಖ್ಯವಾಗಿ ಮೊದಲಿದ್ದ ಕಾಳಜಿ ಈಗಲೂ ಇದ್ಯಾ ಅಂತ ಕೇಳುತ್ತೀನಿ. ಯಾಕಂದರೆ ಈ ಮನೆಯಲ್ಲಿ ಅವರ ಜೊತೆ ಇದ್ದ ಅನುಭವ ನನಗಿದೆ ಆದರೆ ಮನೆಯ ಹೊರಗಿನ ಅನುಭವ ಇಲ್ಲ. ಮನೆಯಲ್ಲಿ ಇದ್ದ ಭಾವನೆ ಈಗಲೂ ಹಾಗೆಯೇ ಇದ್ಯಾ? ಲೈಫ್‌ ಹೇಗೆಲ್ಲ ಬದಲಾಗಿದೆ? ನಾನು ನಿಮಗೆ ಈ ಮನೆಯಲ್ಲಿ ಇದ್ದಷ್ಟೇ ಮುಖ್ಯವಾ ಅಂತ ಕೇಳುತ್ತೀನಿ' ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ. 

Big Boss9: ಸಾನ್ಯಾ- ರೂಪೇಶ್ ಮೇಲೆ ಕಿಚ್ಚ ಗರಂ, ಬಿಗ್‌ಬಾಸ್ ಬಗ್ಗೆ ಮಾತಾಡಿದ್ದಕ್ಕೆ ಖಡಕ್ ಎಚ್ಚರಿಕೆ!

ಸಂಬರಗಿ ಭವಿಷ್ಯ:

ಇಂಥಾ ಟೈಮಲ್ಲಿ ಈ ಬಾರಿ ಬಿಗ್‌ಬಾಸ್ ವಿನ್ನರ್ ಯಾರಾಗಬಹುದು ಅನ್ನೋದನ್ನು ಸಂಬರಗಿ ಪ್ರೆಡಿಕ್ಟ್ ಮಾಡಿದ್ದಾರೆ. ಅವರ ಪ್ರಕಾರ ಈ ಬಾರಿ ರೂಪೇಶ್ ಶೆಟ್ಟಿ ವಿನ್ನರ್. ರಾಕೇಶ್ ಅಡಿಗ ರನ್ನರ್‌ ಅಪ್. ದಿವ್ಯಾ ಉರುಡುಗ ಕೊನೇವರೆಗೆ ನಿಲ್ಲೋದು ಡೌಟು. ಏಕೆಂದರೆ ಅವರ ಆಟ ಇತ್ತೀಚೆಗೆ ಡಲ್ ಹೊಡೀತಿದೆ.ಸಂಬರಗಿ ಭವಿಷ್ಯ ನಿಜವಾಗಬಹುದು ಅಂತ ನೆಟಿಜನ್ಸ್(Netizens) ಕೂಡ ಹೇಳ್ತಿದ್ದಾರೆ. ಏಕೆಂದರೆ ರೂಪೇಶ್‌ ಶೆಟ್ಟಿ ಬಹಳ ಚೆನ್ನಾಗಿ ಆಟ ಆಡ್ತಿದ್ದಾರೆ. ರಾಕೇಶ್ ಅಡಿಗ ಕೂಡ ತಾನೇನು ಕಮ್ಮಿ ಇಲ್ಲ ಅನ್ನೋದನ್ನು ತೋರಿಸುತ್ತಲೇ ಇದ್ದಾರೆ ಎಂದು ಹೇಳಿದ್ದಾರೆ. 

100 ದಿನಕ್ಕೆ ಕಾಲಿಡುವ ಮುನ್ನವೇ ದಿವ್ಯಾ ಉರುಡುಗ ಹೊರ ಬಂದಿರುವುದು ಕೊಂಚ ಬೇಸರ ವಿಷಯ. ದಿವ್ಯಾಗೆ ಸಪೋರ್ಟ್ ಮಾಡಲು ಕೆಪಿ ಅರವಿಂದ್ ಮತ್ತು ಟೀಂ ಭಾಗಿಯಾಗಿದ್ದರು. ನೆಟ್ಟಿಗರು ಚರ್ಚೆ ಮಾಡುತ್ತಿರುವ ಪ್ರಕಾಶ ರೂಪೇಶ್ ಶೆಟ್ಟಿ ಮೊದಲ ಸ್ಥಾನ, ರಾಕೇಶ್ ಅಡಿಗ ಎರಡನೇ ಸ್ಥಾನ, ದೀಪಿಕಾ ದಾಸ್ ಮೂರನೇ ಸ್ಥಾನ ಹಾಗೂ ರಾಪೇಶ್ ರಾಜಣ್ಣ ನಾಲ್ಕನೇ ಸ್ಥಾನ ಎನ್ನಲಾಗಿದೆ. ಆದರೆ ಇದು ಎಷ್ಟು ನಿಜ ಎಷ್ಟು ಸುಳ್ಳು ಎಂದು ಕಾದು ನೋಡಬೇಕಿದೆ.

Follow Us:
Download App:
  • android
  • ios