Asianet Suvarna News Asianet Suvarna News

ಸೀರಿಯಲ್​ ಶೂಟಿಂಗ್​ನಲ್ಲಿ ಹೀಗಿರತ್ತೆ ರೊಮಾನ್ಸ್! ತಬ್ಬಿಕೊಂಡ ನಟ-ನಟಿಯನ್ನು ಎಬ್ಬಿಸಲು ಹರಸಾಹಸ

ಟಿವಿ ಸೀರಿಯಲ್​ಗಳಲ್ಲಿ ರೊಮಾನ್ಸ್​ ದೃಶ್ಯಗಳ ಶೂಟಿಂಗ್​ ಹೇಗೆ ಮಾಡುತ್ತಾರೆ? ಇದರ ವಿಡಿಯೋ ವೈರಲ್​ ಆಗಿದ್ದು ಥಹರೇವಾರಿ ಕಮೆಂಟ್​ಗಳ ಸುರಿಮಳೆಯಾಗಿದೆ. 
 

romance scenes shooting in TV serials video gone viral with floods of comments suc
Author
First Published Aug 5, 2024, 11:14 AM IST | Last Updated Aug 5, 2024, 11:14 AM IST

ತೆರೆಯ ಮೇಲೆ ಒಂದು ದೃಶ್ಯವನ್ನು ತೋರಿಸುವಾಗ ಅದರ ಹಿಂದೆ ನಟ-ನಟಿಯರು ಎಷ್ಟೆಲ್ಲಾ ಸರ್ಕಸ್​ ಮಾಡಿರುತ್ತಾರೆ. ಎಷ್ಟೋ ಸಂದರ್ಭದಲ್ಲಿ ಜೀವಕ್ಕೆ ಅಪಾಯ ತಂದುಕೊಂಡಿರುವ ಉದಾಹರಣೆಗಳೂ ಸಾಕಷ್ಟು ಇವೆ. ಅದರಲ್ಲಿಯೂ ಆ್ಯಕ್ಷನ್​ ದೃಶ್ಯಗಳನ್ನು ಮಾಡುವಾಗ ನಟ-ನಟಿಯರಿಗೆ ಗಂಭೀರ ಸ್ವರೂಪದ ಗಾಯಗಳಾಗುವ ಸುದ್ದಿಗಳೂ ಆಗ್ಗಾಗ್ಗೆ ಬರುತ್ತಲೇ ಇರುತ್ತವೆ. ಆದರೆ ಒಂದು ಚಿತ್ರ ಯಶಸ್ಸು ಆಗಬೇಕಾದರೆ ನಟರು ಇವೆಲ್ಲಾ ಮಾಡುವುದು ಅನಿವಾರ್ಯವೇ. ಇಷ್ಟು ಮಾಡಿದ ಮೇಲೂ ಚಿತ್ರ ಯಶಸ್ವಿ ಆಗಿಯೇ ಆಗುತ್ತದೆ ಎಂದೂ ಹೇಳುವುದು ಕಷ್ಟ. ಇದು ಸಿನಿಮಾದ ಮಾತಾದರೆ, ಇಂದು ಸೀರಿಯಲ್​ಗಳೂ ಯಾವ ಸಿನಿಮಾಕ್ಕೂ ಕಮ್ಮಿ ಏನಿಲ್ಲ. ಸಿನಿಮಾಗಳ ಮಾದರಿಯಲ್ಲಿಯೇ ದೃಶ್ಯಗಳ ಶೂಟಿಂಗ್​ ನಡೆಯುತ್ತದೆ. ಇದು ಆ್ಯಕ್ಷನ್​ ಸೀನ್​ ಕಥೆಯಾದ್ರೆ ರೊಮಾನ್ಸ್​ ಇಲ್ಲದೇ ಯಾವಾಗ್ಲೂ ಸಿನಿಮಾ ನಡೆದದ್ದೇ ಇಲ್ಲ. ರೊಮಾನ್ಸ್​ ಪರಿಕಲ್ಪನೆ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ. ಆದರೆ ಇದೀಗ ಸೀರಿಯಲ್​ಗಳಲ್ಲಿಯೂ ರೊಮಾನ್ಸ್​ಗೆ ಮಹತ್ವ ಕೊಡಲಾಗುತ್ತಿದೆ.

ಇದೀಗ ವೈರಲ್​ ಆಗಿರೋ ಶೂಟಿಂಗ್​ ವಿಡಿಯೋ ಒಂದರಲ್ಲಿ ಸೀರಿಯಲ್​ಗಳಲ್ಲಿ ರೊಮಾನ್ಸ್ ದೃಶ್ಯಗಳನ್ನು ಹೇಗೆ ಶೂಟ್​ ಮಾಡುತ್ತಾರೆ ಎಂದು ತೋರಿಸಲಾಗಿದೆ. ಇದರಲ್ಲಿ ನಟ-ನಟಿ ಇಬ್ಬರೂ ಒಬ್ಬರ ಮೇಲೊಬ್ಬರು ಉರುಳಿ ಹಾಗೆಯೇ ಮಲಗಿಕೊಂಡಿರುವುದನ್ನು ನೋಡಬಹುದು. ಕಟ್​ ಎನ್ನುವವರೆಗೆ ಅವರು ಅಲ್ಲಿಂದ ಏಳುವಂತೆ ಇಲ್ಲ. ಈ ಶೂಟಿಂಗ್​ನಲ್ಲಿ ಕೆಲವು ನಿಮಿಷಗಳ ಕಾಲ ಇಬ್ಬರೂ ಅಲ್ಲಿಯೇ ತಬ್ಬಿಕೊಂಡು ಮಲಗಿದ್ದಾರೆ. ಹೀಗೆ ಉರುಳುವಾಗ ನಟಿಯ ದುಪ್ಪಟ್ಟಾ ನಟನ ಕೆಳಭಾಗಕ್ಕೆ ಸಿಲುಕಿದೆ. ನಂತರ ಅದನ್ನು ಸಹಾಯಕರು ಬಂದು ತೆಗೆದಿದ್ದಾರೆ. ಆದರೆ ಇಲ್ಲಿ ನಿಜಕ್ಕೂ ಹೀಗೆಲ್ಲಾ ನಡೆಯುತ್ತಾ ಎನ್ನುವುದನ್ನು ನೋಡಿ ಹಲವು ನೆಟ್ಟಿಗರು ನಿಬ್ಬೆರಗಾಗಿದ್ದಾರೆ.

ಸೀರಿಯಲ್​ಗಳಲ್ಲಿ ಮಹಡಿ, ಬಾಲ್ಕನಿ ಮೇಲಿಂದ ಹೇಗೆ ಬೀಳ್ತಾರೆ ನಟರು? ಶೂಟಿಂಗ್​ ಹೀಗೆ ನಡೆಯತ್ತೆ ನೋಡಿ...

ಈ ಶೂಟಿಂಗ್​ ಮಾಡುವ ಸಮಯದಲ್ಲಿ ದುಪ್ಪಟ್ಟಾ ಸರಿ ಮಾಡುವಂತೆ ನಿರ್ದೇಶಕರು ಹೇಳಿದಾಗ ನಟ-ನಟಿ ಇಬ್ಬರೂ ಮಲಗಿನಿಂದ ಏಳಲು ನೋಡುತ್ತಾರೆ. ಆದರೆ ಹಾಗೆ ಮಾಡಲು ಆಗದೇ ಒದ್ದಾಡುವುದನ್ನು ನೋಡಬಹುದು. ಇದನ್ನು ನೋಡಿದ ನೆಟ್ಟಿಗರು ಥಹರೇವಾರಿ ಕಮೆಂಟ್ಸ್​ ಹಾಕುತ್ತಿದ್ದಾರೆ. ನಟಿಗೆ  ಏಳಲು ಮನಸ್ಸೇ ಇರಲಿಲ್ಲ ಎಂದು ಕೆಲವರು ಟ್ರೋಲ್​ ಮಾಡಿದ್ದರೆ, ನಟ ಆಕೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಏಳಲು ಕೊಟ್ಟೇ ಇಲ್ಲ ಮತ್ತೆ ಕೆಲವರು ಕಾಲೆಳೆದಿದ್ದಾರೆ. ಒಟ್ಟಿನಲ್ಲಿ ಸೀರಿಯಲ್​ನಲ್ಲಿಯೂ ಈ ಪರಿಯ ರೋಮಾನ್ಸ್​ ಶೂಟಿಂಗ್​ ಇದೆ ಎಂಬ ಬಗ್ಗೆ ಹಲವರು ವಿಭಿನ್ನ ರೀತಿಯ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಕೆಲ ದಶಕಗಳ ಹಿಂದೆ ಕಿಸ್​ ಸೀನ್​ ಅಥವಾ ಯಾವುದೇ ರೀತಿಯ ಇಂಟಿಮೇಟ್​ ದೃಶ್ಯಗಳು ಇದ್ದಾರೆ ನಡುವೆ ತೆಳುವಾದ   ಜನರಿಗೆ ಕಾಣಿಸದ ಪಾರದರ್ಶಕ ಗ್ಲಾಸ್​ ಇಟ್ಟು ಲಿಪ್​ಲಾಕ್​  ಮಾಡುತ್ತಿದ್ದರು ಎನ್ನಲಾಗಿದೆ. ಆದರೆ ಬರಬರುತ್ತಾ ಆ ಗ್ಲಾಸ್​ ಮಾಯವಾಗಿದೆ. ಆದರೆ ಈಗ ಇಂಟಿಮೇಟ್​ ದೃಶ್ಯಗಳು ಹೇಗಿರುತ್ತವೆ ಎಂದರೆ ಕೆಲವೊಮ್ಮೆ ಅದನ್ನು ನೋಡಲಾಗದೇ ವೀಕ್ಷಕರೇ ಕಣ್ಣುಮುಚ್ಚಿಕೊಳ್ಳುವ ಪ್ರಸಂಗ ಬಂದಿದೆ. ಅರೆ ನಗ್ನ ಹೋಗಿ ನಟಿಯರು ಪೂರ್ಣ ನಗ್ನರಾಗಲೂ ಹಿಂಜರಿಯದ ದಿನಗಳು ಇವು. ಆದರೆ ಆ ಮಟ್ಟಿಗೆ ಸದ್ಯ ಸೀರಿಯಲ್​ಗಳು ಒಂದು ಹಂತದ ಮರ್ಯಾದೆ ಕಾಪಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಏನಾಗುತ್ತದೋ ಆ ದೇವರೇ ಬಲ್ಲ ಎಂದು ನೆಟ್ಟಿಗರು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. 

ಸೀರಿಯಲ್​ನಲ್ಲಿ ಲವರ್​ ಸಿಗ್ಲಿಲ್ಲ ಎಂದು ಸಾಯಲು ಹೊರಡೋದಾ ಶ್ರೇಷ್ಠಾ? ಶಾಕಿಂಗ್​ ವಿಡಿಯೋ ವೈರಲ್​

Latest Videos
Follow Us:
Download App:
  • android
  • ios