ಸೀರಿಯಲ್ನಲ್ಲಿ ಲವರ್ ಸಿಗ್ಲಿಲ್ಲ ಎಂದು ಸಾಯಲು ಹೊರಡೋದಾ ಶ್ರೇಷ್ಠಾ? ಶಾಕಿಂಗ್ ವಿಡಿಯೋ ವೈರಲ್
ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ನಟಿಸುತ್ತಿರುವ ಶ್ರೇಷ್ಠಾ ಪಾತ್ರಧಾರಿ ಕಾವ್ಯ ಗೌಡ ಅವರು ಏಣಿಯ ಮೇಲೆ ಹತ್ತಿ ಸಾಯಲು ಹೊರಟಿರುವ ವಿಡಿಯೋ ವೈರಲ್ ಆಗಿದೆ. ಏನಿದರ ಅಸಲಿಯತ್ತು?
ಕಲರ್ಸ್ ಕನ್ನಡ ಚಾನೆಲ್ನಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್ ಇದೀಗ ಕುತೂಹಲ ಘಟ್ಟ ತಲುಪಿದೆ. ತಾಂಡವ್ ಮತ್ತು ಶ್ರೇಷ್ಠಾಳ ಅಕ್ರಮ ಸಂಬಂಧ ಬಯಲಾಗುವ ಕಾಲ ಬಂದಾಗಿದೆ. ಈಗ ಏನಿದ್ದರೂ ಸೀರಿಯಲ್ನಲ್ಲಿ ಭಾಗ್ಯಳದ್ದೇ ಹವಾ. ಅಳುಮುಂಜಿ ಭಾಗ್ಯ ಬದಲಾಗಿದ್ದಾಳೆ. ಲವರ್ ಶ್ರೇಷ್ಠಾಳಿಗೂ ಕುತ್ತು ಬಂದಿದೆ. ಈಗ ಏನಿದ್ರೂ ಪತ್ನಿ ಭಾಗ್ಯಳದ್ದೇ ಕಾಲವಾಗಿದೆ. ಸ್ಟಾರ್ ಹೋಟೆಲ್ನಲ್ಲಿ ಕೆಲಸ ಗಿಟ್ಟಿಸಿಕೊಂಡಿರೋ ಭಾಗ್ಯ ಸಂಪೂರ್ಣ ಬದಲಾಗಿದ್ದಾಳೆ. ಅವಳ ವರಸೆಯೇ ಬದಲಾಗಿದೆ. ಈಗ ಏನಿದ್ರೂ ಅವಳು ಸ್ಟಾರ್ ಹೋಟೆಲ್ನ ಚೀಫ್ ಶೆಫ್. ಓಡಾಡಲು ಕಾರು ಇದೆ. ತಿಂಗಳಿಗೆ ಲಕ್ಷ ಲಕ್ಷ ದುಡಿಯುತ್ತಿದ್ದಾಳೆ. ಮನೆಯಲ್ಲಿ ಎಲ್ಲರ ಪ್ರೀತಿ ಗಳಿಸಿದ್ದಾಳೆ. ಸರಿಯಾಗಿ ಇಂಗ್ಲಿಷ್ ಮಾತನಾಡಲೂ ಬರದಿದ್ದ ಭಾಗ್ಯ ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಲು ಸಾಧ್ಯ ಎನ್ನುವ ಮೂಲಕ ಹಲವರಿಗೆ ಮಾದರಿಯಾಗಿದ್ದಾಳೆ. ಈಕೆ ಹತ್ತನೇ ಕ್ಲಾಸ್ ಪರೀಕ್ಷೆ ಬರೆದದ್ದರಿಂದ ಸ್ಫೂರ್ತಿಗೊಂಡು, ನಿಜ ಜೀವನದಲ್ಲಿಯೂ ಮಹಿಳೆಯರು ಮಕ್ಕಳ ಜೊತೆ ಪರೀಕ್ಷೆ ಬರೆದಿದ್ದಾಳೆ. ಹೆಣ್ಣು ಅದರಲ್ಲಿಯೂ ಗೃಹಿಣಿ ಎಂದರೆ ತೀರಾ ಕಡೆಗಣನೆಯಿಂದ ನೋಡುತ್ತಿದ್ದವರಿಗೆಲ್ಲರಿಗೂ ಭಾಗ್ಯ ಬದುಕಿನ ಹೊಸ ದಿಸೆ ತೋರಿಸುತ್ತಿದ್ದಾಳೆ.
ಇದೀಗ ಪೂಜಾ ಮತ್ತು ಹಿತಾ ಮಂತ್ರವಾದಿ ಪ್ಲ್ಯಾನ್ ಮಾಡಿ, ಭಾಗ್ಯಳಿಗೆ ಅಸಲಿಯತ್ತು ಗೊತ್ತು ಮಾಡಲು ಪಣ ತೊಟ್ಟಿದ್ದಾರೆ. ಅದರಂತೆ ಯಶಸ್ವಿ ಕೂಡ ಆಗಿದ್ದಾರೆ. ಶ್ರೇಷ್ಠಾ ಇಬ್ಬರು ಮಕ್ಕಳ ತಂದೆಯನ್ನು ಮದುವೆಯಾಗುತ್ತಿರುವ ವಿಷಯ ಭಾಗ್ಯಳಿಗೆ ತಿಳಿದಿದೆ. ಆದರೆ ಅದು ತನ್ನದೇ ಗಂಡ ಎಂದು ಗೊತ್ತಾಗಿಲ್ಲ. ಆಗಿದ್ದು ಆಗಿ ಹೋಗಲಿ ಎಂದು ಶ್ರೇಷ್ಠಾ ಭಾಗ್ಯಳ ಮನೆಗೇ ಬಂದು ಎಲ್ಲಾ ವಿಷಯ ಹೇಳುವ ತಯಾರಿ ನಡೆಸಿದ್ದಾಳೆ. ಆದರೆ ಪೂಜಾ ಅದನ್ನು ತಡೆಯುವ ಪ್ರಯತ್ನದಲ್ಲಿದ್ದಾಳೆ. ಮುಂದೇನು ಎನ್ನುವ ಕುತೂಹಲ ಇರುವ ಸಮಯದ ನಡುವೆಯೇ ಭಾಗ್ಯ ಪಾತ್ರಧಾರಿ ಸುಷ್ಮಾ ರಾವ್ ಅವರು ಶ್ರೇಷ್ಠಾ ಏಣಿ ಏರಿ ಸಾಯಲು ಹೊರಟಿರುವ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ.
ವೀಳ್ಯದೆಲೆ ವ್ಯಾಪಾರಕ್ಕಿಳಿದುಬಿಟ್ಟಳಾ ಭಾಗ್ಯ? ಕಮೆಂಟ್ಸ್ಗೆಲ್ಲಾ ಉತ್ತರ ಕೊಡುತ್ತಲೇ ಹೃದಯ ಕದ್ದ ನಟಿ...
ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಸುಷ್ಮಾ ಅವರು, ತೆರೆಯ ಹಿಂದಿನ ನಟರ ಸರ್ಕಸ್ ಕುರಿತು ಇದರಲ್ಲಿ ತೋರಿಸಿದ್ದಾರೆ. ಇದರಲ್ಲಿ ಶ್ರೇಷ್ಠಾ ಪಾತ್ರಧಾರಿ ಕಾವ್ಯಾ ಗೌಡ ಅವರು, ಏಣಿಯನ್ನು ಏರಿ ಹೋಗುತ್ತಿದ್ದಾರೆ. ಎಲ್ಲರೂ ಸಹಾಯಕರಾಗಿ ನಿಂತಿದ್ದಾರೆ. ಆದರೆ ಕಾವ್ಯಾ ಅವರಿಗೆ ಏಣಿ ಏರುವುದು ಕಷ್ಟವಾಗುತ್ತಿದೆ. ಈ ಏಣಿ ಏರುತ್ತಿರುವ ರೀತಿ ನೋಡಿದರೆ ಆಕೆ ಸಾಯಲು ಹೊರಟಿರುವ ದೃಶ್ಯ ಬಹುಶಃ ಸೀರಿಯಲ್ನಲ್ಲಿ ಇದ್ದಂತಿದೆ. ಶೂಟಿಂಗ್ ಸಮಯದಲ್ಲಿ ನಟ-ನಟಿಯರು ಎಷ್ಟು ರಿಸ್ಕ್ ತೆಗೆದುಕೊಳ್ಳುತ್ತಾರೆ ಎಂದು ತೋರಿಸಲು ಸುಷ್ಮಾ ಅವರು ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಕುತೂಹಲದ ವಿಷಯ ಎಂದರೆ ಕಮೆಂಟ್ನಲ್ಲಿ ಎಲ್ಲರೂ ನೀನು ಆದಷ್ಟು ಬೇಗ ಸಾಯಿ ಎಂದು ಶ್ರೇಷ್ಠಾಳಿಗೆ ಹೇಳುತ್ತಿದ್ದಾರೆ. ಆ ಪರಿಯಲ್ಲಿ ಇವರ ನಟನೆ ಜನರ ಮನದಾಳಕ್ಕೆ ಮುಟ್ಟಿದೆ.
ಅಂದಹಾಗೆ ಕಾವ್ಯಾ ಗೌಡ ಕುರಿತು ಹೇಳುವುದಾದರೆ, ಇವರು ಐದು ವರ್ಷ ತೆಲುಗು ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ.ಬೆಂಗಳೂರು ಮೂಲದ ಕಾವ್ಯಾ, ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ವಿಲನ್ ರೋಲ್ ಮೂಲಕ ಮನೆ ಮಾತಾಗಿದ್ದಾರೆ. 3 ವರ್ಷಗಳ ಹಿಂದೆ ಉದಯ ಟಿವಿಯಲ್ಲಿ ಮೂಡಿ ಬಂದ ದೇವಯಾನಿ ಧಾರಾವಾಹಿಯಲ್ಲಿ ನಟಿಸಿದ್ದರು. ವಿಜಯ್ ರಾಘವೇಂದ್ರ ನಟನೆಯ ರಿಂಗ ರಿಂಗ ರೋಸ್ ಎಂಬ ಸಿನಿಮಾಗೂ ಇವರು ನಟಿಸಿದ್ದಾರೆ. ಇದಕ್ಕೂ ಮುನ್ನ ಜೀ ಕನ್ನಡ ವಾಹಿನಿಯ 'ಮಿಸ್ಟರ್ & ಮಿಸ್‌ಸ್ ರಂಗೇಗೌಡ' ಧಾರಾವಾಹಿಯಲ್ಲಿ ಲೀಡ್ ಆಗಿ 100 ಎಪಿಸೋಡ್‌ಲ್ಲಿ ನಟಿಸಿದ್ದರು. ಆಮೇಲೆ ಸೀರಿಯಲ್ ಬಿಟ್ಟಿದ್ದರು. ಆದರೆ ಈಗ ಭಾಗ್ಯಲಕ್ಷ್ಮಿ ಸೀರಿಯಲ್ ಯಾವ ರೀತಿ ಟರ್ನ್ ತೆಗೆದುಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ಇವನೇ ಸರ್ವಸ್ವ, ನನ್ನ ಜೀವದ ಗೆಳೆಯ ಎಂದು ಫ್ರೆಂಡ್ಷಿಪ್ ಡೇಗೆ ಸ್ನೇಹಿತನ ಹೀಗೆ ಪರಿಚಯಿಸಿದ ಅನುಪಮಾ ಗೌಡ