’ಕನ್ನಡ ಕೋಗಿಲೆ’ ಗೆ ಅನುಪಮಾ ಬದಲು ಆರ್‌ಜೆ ಸಿರಿ ಆ್ಯಂಕರ್

ಕನ್ನಡ ಕೋಗಿಲೆ ಸೀಸನ್-2 ಮತ್ತೆ ಶುರುವಾಗಲಿದೆ | ಅನುಪಮಾ ಬದಲು ಆರ್ ಜೆ ಸಿರಿ ಆ್ಯಂಕರ್ | ಇದೇ ಮಾರ್ಚ್ 23 ರಿಂದ ಮತ್ತೆ ಶುರುವಾಗಲಿದೆ 

RJ Siri leads Kannada Kogile reality show

ಬೆಂಗಳೂರು (ಮಾ. 20): ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಮ್ಯೂಸಿಕ್ ರಿಯಾಲಿಟಿ ಶೋ ’ಕನ್ನಡ ಕೋಗಿಲೆ’ ಯಶಸ್ವಿಯಾಗಿ ಮೊದಲ ಸೀಸನ್ ಮುಗಿಸಿದೆ.  ಸಾಕಷ್ಟು ಪ್ರತಿಭೆಗಳನ್ನು ಸಂಗೀತ ಲೋಕಕ್ಕೆ ಪರಿಚಯಿಸಿದ ಹೆಗ್ಗಳಿಕೆ ಈ ವೇದಿಕೆಯದ್ದು. 

ಕತ್ರಿನಾ ಕೈಫ್ ಮನೆಗೆ ಹೊಸ ಅತಿಥಿ - 2.33 ಕೋಟಿ ಖರ್ಚು!

ಇದೀಗ ಕನ್ನಡ ಕೋಗಿಲೆ ಸೀಸನ್ 2 ಶುರುವಾಗಲಿದೆ. ಈ ಸೀಸನ್ ನಲ್ಲಿ ಸ್ವಲ್ಪ ಬದಲಾವಣೆಯಾಗಲಿದೆ. ಕಾರ್ಯಕ್ರಮದ ನಿರೂಪಕಿ ಅನುಪಮಾ ಗೌಡರನ್ನು ಬದಲಾಯಿಸಲಾಗಿದೆ. ನಟಿ ಅನುಪಮಾ ಬದಲಿಗೆ ಆರ್ ಜೆ ಸಿರಿ ಕಾರ್ಯಕ್ರಮವನ್ನು ಮುನ್ನಡೆಸಲಿದ್ದಾರೆ. 

ಕನ್ನಡಕ್ಕೆ ಬರಲಿದೆ ಬಾಲಿವುಡ್ ಬ್ಲಾಕ್ ಬಸ್ಟರ್ ’ಬದಾಯಿ ಹೋ’

ಆರ್ ಜೆ ಸಿರಿ ರೇಡಿಯೋ ಜಗತ್ತಿನಲ್ಲಿ ಹೆಸರು ಮಾಡಿದ್ದಾರೆ.  ಇನ್ನು ಮುಂದೆ ಇವರು ಕನ್ನಡ ಕೋಗಿಲೆಯನ್ನು ಮುನ್ನಡೆಸಲಿದ್ದಾರೆ.  ಇದೇ ಮಾರ್ಚ್ 23 ರಿಂದ ಮತ್ತೆ ಶುರುವಾಗಲಿದೆ. ಶನಿವಾರ, ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.  ಈ ಬಾರಿಯೂ ತೀರ್ಪುಗಾರರಾಗಿ ಸಾಧು ಕೋಕಿಲ, ಗಾಯಕಿ ಅರ್ಚನಾ ಉಡುಪ ಹಾಗೂ ಚಂದನ್ ಶೆಟ್ಟಿ ಇರಲಿದ್ದಾರೆ. 

Latest Videos
Follow Us:
Download App:
  • android
  • ios