ಮುಂಬೈ(ಮಾ.20): ಬಾಲಿವುಡ್ ನಟಿ ಕತ್ರಿನಾ ಕೈಫ್ ಮನೆಗೆ ಹೊಸ ಕರೆ ತಂದಿದ್ದಾರೆ. ಹೌದು, ಕತ್ರಿನಾ ಕೈಫ್ ನೂತನ ರೇಂಜ್ ರೋವರ್ Vogue LWB SE ಕಾರು ಖರೀದಿಸಿದ್ದಾರೆ. ಈ ಮೊದಲು ಕತ್ರಿನಾ ಕೈಫ್ ಆಡಿ Q7 ಕಾರು ಉಪಯೋಗಿಸುತ್ತಿದ್ದರು. ಇದೀಗ ಬರೋಬ್ಬರಿ 2.33 ಕೋಟಿ ರೂಪಾಯಿ ಮೌಲ್ಯದ ರೇಂಜ್ ರೋವರ್ Vogue LWB SE ಖರೀದಿಸಿದ್ದಾರೆ.

ಇದನ್ನೂ ಓದಿ: ದುಬಾರಿ ಕಾರು ಖರೀದಿಸಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್!

ಕತ್ರಿನಾ ಬಳಿ ಇರುವ ಆಡಿ Q7 ಕಾರು ಹಾಗೂ ನೂತನ ರೇಂಜ್ ರೋವರ್ Vogue LWB SE ಕಾರಿನ ನಂಬರ್ 8822. ಈ ಮೂಲಕ ಎರಡು ಕಾರಿಗೂ ಸೇಮ್ ನಂಬರ್ ಖರೀದಿಸುವಲ್ಲಿ ಕತ್ರಿನಾ ಯಶಸ್ವಿಯಾಗಿದ್ದಾರೆ. ಇತ್ತೀಚೆಗೆ ಬಾಲಿವುಡ್ ನಟ ಸಿದ್ದಾರ್ಥ್ ಮಲ್ಹೋತ್ರ ರೇಂಜ್ ರೋವರ್ ಖರೀದಿಸಿದ್ದರು. ಇನ್ನು ಶಾರುಕ್ ಖಾನ್, ಸಲ್ಮಾನ್ ಖಾನ್, ಆಲಿಯಾ ಭಟ್ ಸೇರಿದಂತೆ ಬಹುತೇಕ ಬಾಲಿವುಡ್ ನಟರು ರೇಂಜ್ ರೋವರ್ ಕಾರು ಉಪಯೋಗಿಸುತ್ತಾರೆ.

 

 

ಇದನ್ನೂ ಓದಿ: ಮಡದಿಗೆ ಐಷಾರಾಮಿ ಕಾರು ಗಿಫ್ಟ್ ನೀಡಿದ ಪುನೀತ್!

ರೇಂಜ್ ರೋವರ್ Vogue LWB SE ಕಾರು 4.4 ಲೀಟರ್, ಡೀಸೆಲ್ ಎಂಜಿನ್ ಹಾಗೂ 3 ಲೀಟರ್ ಎಂಜಿನ್ ವೇರಿಯೆಂಟ್ ಕಾರು ಲಭ್ಯವಿದೆ. ಕತ್ರಿನಾ ಕೈಫ್ ಖರೀದಿಸಿರುವ ಕಾರು 4.4 ಲೀಟರ್ ಡೀಸೆಲ್ ಎಂಜಿನ್ ಕಾರು. 4367 cc,4.4 L SDV8 ಡಿಸೆಲ್ ಎಂಜಿನ್, 335 bhp (@ 3500 rpm) ಹಾಗೂ 740 Nm (@ 1750 rpm), ಟರ್ಬೋಚಾರ್ಜ್ಡ್‌ ಎಂಜಿನ್ ಹೊಂದಿದೆ. 

ಗರಿಷ್ಠ ಸುರಕ್ಷತೆ ಹೊಂದಿರು ರೇಂಜ್ ರೋವರ್ Vogue LWB SE ಕಾರಿನಲ್ಲಿ ಒಟ್ಟು 8 ಏರ್‌ಬ್ಯಾಗ್ ಇವೆ. ಡ್ಯುಯೆಲ್ ಸ್ಟೇಜ್ ಏರ್‌ಬ್ಯಾಗ್, ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್), EBD(ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಶನ್, BA(ಬ್ರೇಕ್ ಅಸಿಸ್ಟ್), ESP(ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೊಗ್ರಾಂ), 4 ವೀಲ್ಹ್ ಡ್ರೈವ್, ಹಿಲ್ ಹೋಲ್ಡ್ ಕಂಟ್ರೋಲ್, TCS(ಟ್ರಾಕ್ಷನ್ ಕಂಟ್ರೋಲ್) ತಂತ್ರಜ್ಞಾನ ಹೊಂದಿದೆ.

ಇದನ್ನೂ ಓದಿ: ಅಮಿತಾಬ್ ಬಚ್ಚನ್ ರೋಲ್ಸ್ ರಾಯ್ಸ್ ಮಾರಾಟ- ಬೆಂಗಳೂರಿಗೆ ಬಂತು ದುಬಾರಿ ಕಾರು!

ಸೆಂಟ್ರಲ್ ಲಾಕಿಂಗ್, ಚೈಲ್ಡ್ ಸೇಫ್ಟಿ ಲಾಕಿಂಗ್, ಕ್ರ್ಯೂಸ್ ಕಂಟ್ರೋಲ್, ಪಾರ್ಕಿಂಗ್ ಸೆನ್ಸಾರ್, ಪಾರ್ಕಿಂಗ್ ಅಸಿಸ್ಟ್, ಆ್ಯಂಟಿ ಗ್ಲೇರ್ ಮಿರರ್, ರೈನ್ ವೈಪರ್ ಸೆನ್ಸಾರ್, ಅಟೋಮ್ಯಾಟಿಕ್ ಹೆಡ್‌ಲ್ಯಾಂಪ್ಸ್ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ.