ಕನ್ನಡದ ಹೊಂಗನಸು, ತೆಲುಗಿನ ಗುಪ್ಪೆಡಂಥ ಮನಸು ಸೀರಿಯಲ್‌ನ ಪಾಪ್ಯುಲರ್ ಪಾತ್ರ ರಿಷಿ ಸರ್ ರಿ ಎಂಟ್ರಿ ಆಗಿದೆ. ಮಾಸ್ ಅವತಾರ್‌ನಲ್ಲಿ ಕಾಣಿಸಿಕೊಂಡ ನಟ ಮುಖೇಶ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ರಿಷಿ ಸಾರ್!

ಹೀಗೊಂದು ಹೆಸರು ಹೇಳಿದ ತಕ್ಷಣ ಲಕ್ಷಾಂತರ ಸೀರಿಯಲ್ ಫ್ಯಾನ್ಸ್ ಮುಖ ಅರಳುತ್ತೆ. ಮರು ಕ್ಷಣ ಬಾಡಿ ಹೋಗುತ್ತೆ. ಇದಕ್ಕೊಂದು ಕಥೆ ಇದೆ. ತೆಲುಗಿನಲ್ಲಿ ಸಖತ್ ಫೇಮಸ್ 'ಗುಪ್ಪೆಡಂಥಾ ಮನಸು' ಸೀರಿಯಲ್. ಇದರ ನಾಯಕ ನಾಯಕಿ ನಮ್ ಕನ್ನಡದವರೇ. ಮೈಸೂರು ಮೂಲದ ಮುಖೇಶ್ ಗೌಡ ಹಾಗೂ ರಕ್ಷಾ ಗೌಡ ಈ ಸೀರಿಯಲ್ ಹೀರೋ ಮತ್ತು ಹೀರೋಯಿನ್. ಈ ಜೋಡಿ ಈ ಸೀರಿಯಲ್‌ನಿಂದ ಗಳಿಸಿದ ನೇಮ್, ಫೇಮ್ ಅಷ್ಟಿಷ್ಟಲ್ಲ. ಈ ಸೀರಿಯಲ್ ಮೂಲ ತೆಲುಗು ಆದರೂ ಇದಕ್ಕೆ ದೇಶಾದ್ಯಂತ ಫ್ಯಾನ್ ಫಾಲೋವಿಂಗ್ ಇದೆ. ಇದಕ್ಕೆ ಕಾರಣ ಈ ಫೇಮಸ್ ಜೋಡಿ ಅನ್ನೋದರಲ್ಲಿ ಸುಳ್ಳಿಲ್ಲ.

ಹಾಗಂತ ತೆಲುಗಿನ 'ಗುಪ್ಪೆಡಂಥಾ ಮನಸು' ಸೀರಿಯಲ್‌ನ ಕಥೆ ಶುರುವಿಗೆ ಹೊಸ ಕಾನ್ಸೆಪ್ಟಿನಲ್ಲಿ ಸೊಗಸಾಗಿಯೇ ಇತ್ತು. ಆದರೆ ಶಿಕ್ಷಣದ ಮಹತ್ವ ಸಾರುವಂಥಾ ಅನೇಕ ಅಂಶಗಳು ಈ ಸೀರಿಯಲ್‌ನಲ್ಲಿ ಬಂದವು. ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡುವ ಪ್ರಮುಖ ಯೋಜನೆಯ ಬಗ್ಗೆಯೂ ಉತ್ತಮ ಸಂದೇಶವಿತ್ತು. ಆದರೆ ಒಂದು ಹಂತದ ಬಳಿಕ ಈ ಸೀರಿಯಲ್‌ ಕಥೆ ಅಧಃಪತನಕ್ಕೆ ಇಳಿಯಿತು. ಹೊಡಿ, ಬಡಿ ಕೊಲ್ಲು ಅನ್ನೋ ಸವಕಲು ಅಂಶವನ್ನಿಟ್ಟುಕೊಂಡು ಮುಂದೆ ಹೋಯ್ತು. ಇದು ಈ ಸೀರಿಯಲ್‌ ವೀಕ್ಷಿಸುತ್ತಿದ್ದವರಿಗೆ ಕೊಂಚವೂ ಇಷ್ಟವಾಗಲಿಲ್ಲ.

ಸೀತಾರಾಮ ಬಾಳಲ್ಲಿ ಮತ್ತೆ ಬಿರುಗಾಳಿ- ಏನ್ರೀ ಡೈರೆಕ್ಟರ್​ ಸಾಹೇಬ್ರೇ... ನಿಮ್​ ಗೋಳು ಅಂತ ರೊಚ್ಚಿಗೆದ್ದ ಫ್ಯಾನ್ಸ್​!

ಏಕೆಂದರೆ ಶಿಕ್ಷಣದ ಪ್ರಾಮುಖ್ಯತೆ ಸಾರುವ ಈ ಸೀರಿಯಲ್ ವೀಕ್ಷಕರಲ್ಲಿ ಹೆಚ್ಚಿನವರು ಶಿಕ್ಷಕರು, ಉಪನ್ಯಾಸಕರು ವಿದ್ಯಾರ್ಥಿಗಳು ಇದ್ದರು. ಒಮ್ಮೆಯಂತೂ ಬಹಳ ಕೆಟ್ಟ ಪದ ಪ್ರಯೋಗ ಈ ಸೀರಿಯಲ್ ಕುರಿತ ಅಭಿಮಾನವೆಲ್ಲ ಕೊಚ್ಚಿಕೊಂಡು ಹೋಗುವ ಹಾಗೆ ಮಾಡಿತು. ಇಷ್ಟೆಲ್ಲ ಆದರೂ ಈ ಸೀರಿಯಲ್ ಫ್ಯಾನ್ ಫಾಲೋವಿಂಗ್ ಕಡಿಮೆ ಆಗಲಿಲ್ಲ. ಅದಕ್ಕೆ ಕಾರಣ ವೀಕ್ಷಕರ ಮನಸ್ಸನ್ನು ಸೆರೆ ಹಿಡಿದ ಈ ಸೀರಿಯಲ್ ನಾಯಕ, ನಾಯಕಿ.

ಸೀರಿಯಲ್‌ನಲ್ಲಿ ಒಂದು ಹಂತದ ಪಾಪ್ಯುಲಾರಿಟಿ ಬಂದ ಮೇಲೆ ನಟ, ನಟಿಯರು ಸಿನಿಮಾ ಕಡೆ ಮುಖ ಮಾಡೋದು ಕಾಮನ್. ಹಾಗೆ ನೋಡಿದರೆ ಶಾರೂಖ್ ಖಾನ್ ರಿಂದ ಹಿಡಿದು ಯಶ್‌ವರೆಗೆ ಎಲ್ಲ ಸೀರಿಯಲ್ ಹಿನ್ನೆಲೆಯಿಂದ ಬಂದು ಸಿನಿಮಾ ನಾಯಕರಾಗಿ ವರ್ಲ್ಡ್ ಲೆವೆಲ್‌ಗೆ ಹೈಪ್‌ ಕ್ರಿಯೇಟ್ ಮಾಡಿದವರೇ. ಈ ಸೀರಿಯಲ್ ಹೀರೋ ಕೂಡ ಸಿನಿಮಾ ಕಾರಣಕ್ಕೆ ಸೀರಿಯಲ್‌ನಿಂದ ಹೊರ ನಡೆಯಬೇಕಾಯ್ತು. ಬಹುಶಃ ಸೀರಿಯಲ್ ಇತಿಹಾಸದಲ್ಲೇ ದಾಖಲೆ ಇರಬಹುದೇನೋ. ಈ ಸೀರಿಯಲ್ ಹೀರೋ ಇಲ್ಲದೆ ಐದಾರು ತಿಂಗಳು ನಡೆಯಿತು. ಇಡೀ ಕಥೆ ನಾಯಕಿಯ ಮೇಲೆ ಫೋಕಸ್ ಆಯ್ತು. ಸಂಜೆ ಬರುತ್ತಿದ್ದ ಸೀರಿಯಲ್ ಮಧ್ಯಾಹ್ನಕ್ಕೆ ಶಿಫ್ಟ್ ಆಯ್ತು.

ಅಭಿಮಾನಿಗಳೇ ಈಗಾದ್ರೂ ಖುಷಿನಾ..? ನಿಮ್ಮಾಸೆ ಕೊನೆಗೂ ನೆರವೇರಿತು ಅಂತಿದೆ ಶ್ರೀರಸ್ತು- ಶುಭಮಸ್ತು

ಇದೀಗ ಐದಾರು ತಿಂಗಳ ಬಳಿಕ ನಾಯಕ ರಿಷಿಯ ಮರು ಆಗಮನವಾಗಿದೆ. ಇದರ ಜೊತೆಗೆ ಮಧ್ಯಾಹ್ನ ಬರುತ್ತಿದ್ದ ಸೀರಿಯಲ್ ಟೈಮಿಂಗ್ ಸಂಜೆಗೆ ಶಿಫ್ಟ್ ಆಗಿದೆ. ಈ ಸೀರಿಯಲ್ ನಾಯಕ ರಿಷಿಯ ಆಗಮನ ಪ್ರೋಮೋ ಕ್ಷಣ ಮಾತ್ರದಲ್ಲೇ ಲಕ್ಷಾಂತರ ವೀಕ್ಷಣೆ ದಾಖಲಿಸಿದೆ. ಇದು ಈ ಸೀರಿಯಲ್ ಹೀರೋ ರಿಷಿಗೆ ಯಾವ ಲೆವೆಲ್‌ನಲ್ಲಿ ಫ್ಯಾನ್ ಫಾಲೋವಿಂಗ್ ಇದೆ ಅನ್ನೋದಕ್ಕೂ ಉದಾಹರಣೆಯಂತಿದೆ.

View post on Instagram

ಸೋ ರಿಷಿ ಸಾರ್‌ ಬರೋದೇನೋ ಪಕ್ಕಾ ಆಯ್ತು. ಆದ್ರೆ ಮತ್ತೆ ಕೈ ಕೊಡಲ್ಲ ತಾನೇ, ಅವರ ಪಾತ್ರಕ್ಕೆ ಎದುರು ನೋಡೋ ಲಕ್ಷಾಂತರ ವೀಕ್ಷಕರಿಗೆ ಮತ್ತೆ ನಿರಾಸೆ ಮಾಡಲ್ಲ ತಾನೇ? ಅಂತ ವೀಕ್ಷಕರು ರಿಷಿ ಪಾತ್ರ ಮಾಡುವ ನಟ ಮುಖೇಶ್ ಅವರ ಬಳಿ ಮತ್ತೆ ಮತ್ತೆ ಕೇಳುತ್ತಿದ್ದಾರೆ. ಸದ್ಯ ಆಟೋ ಡ್ರೈವರ್ ಲುಕ್‌ನಲ್ಲಿ ರಿಷಿ ಆಗಮನವಾಗಿದೆ. ಇದರಲ್ಲಿ ಇವರ ಈಗಾಗಲೇ ಶೂಟ್ ಮುಗಿಸಿರುವ ಸಿನಿಮಾದ ಲುಕ್ಕೇ ಇದೆ. ಹಾಗಿದ್ದರೆ ರಿಷಿ ಸಿನಿಮಾ ಪ್ರೊಮೋಶನ್‌ಗೆ ಸೀರಿಯಲ್‌ಗೆ ಎಂಟ್ರಿ ಕೊಡ್ತಿಲ್ಲ ತಾನೇ ಅನ್ನೋ ಅನುಮಾನವೂ ವೀಕ್ಷಕರಿಗೆ ಇದೆ.