ಜೀ ಕನ್ನಡದ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಕಾರ್ಯಕ್ರಮದಲ್ಲಿ ಒಳ್ಳೆ ಹುಡ್ಗ ಪ್ರಥಮ್‌ ಒಂದು ಶಾಕಿಂಗ್‌ ನ್ಯೂಸ್‌ ಬಿಚ್ಚಿಟ್ಟಿದ್ದಾರೆ. ಇದುವರೆಗೂ ಯಾರಿಗೂ ಗೊತ್ತಿಲದೇ ಈ ಸಂಗತಿಯನ್ನು ಕೇಳಿ ಸ್ವತಃ ವೇದಿಕೆಯಲ್ಲಿದ್ದ ಶಿವರಾಜ್‌ ಕುಮಾರ್‌ ಅವರೇ ದಂಗಾಗಿದ್ದಾರೆ. ಏನದು ಆ ಅಚ್ಚರಿದಾಯಕ ವಿಷಯ?‌


ಬಿಗ್ ಬಾಸ್ ಖ್ಯಾತಿಯ ನಟ, ಒಳ್ಳೆ ಹುಡುಗ ಪ್ರಥಮ್ ಒಂದು ಸತ್ಯ ಹೇಳಿಕೊಂಡಿದ್ದಾರೆ. ಇದನ್ನು ಅವರು ಹೇಳಿರೋದು ಜೀ ಕನ್ನಡದ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ವೇದಿಕೆಯಲ್ಲಿ. ಅವರು ಹೇಳಿದ ಮಾತನ್ನು ಕೇಳಿ ಅಲ್ಲಿದ್ದ ಶಿವರಾಜ್‌ ಕುಮಾರ್‌, ಆಂಕರ್‌ ಅನುಶ್ರೀ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಇದು ರಾಘವೇಂದ್ರ ರಾಜ್‌ಕುಮಾರ್‌ ಅವರಿಗೆ ಗೊತ್ತಿದೆಯಂತೆ. ಹಾಗೆಯೇ ಗೀತಾ ಶಿವರಾಜ್‌ ಕುಮಾರ್‌ ಅವರಿಗೂ ಗೊತ್ತಿದೆಯಂತೆ. ಬೇರ್ಯಾರಿಗೂ ತಿಳಿದಿಲ್ಲವಂತೆ. ಹಾಗಾದರೆ ಏನದು ಅಂಥಾ ನ್ಯೂಸ್‌ ಅಂತೀರಾ?

ಪ್ರಥಮ್ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಕಾರ್ಯಕ್ರಮಕ್ಕೆ ಬಂದಿದಾರೆ. ನಾನ್ ಡ್ಯಾನ್ಸರ್ (Non-Dancer) ಕಾನ್ಸೆಪ್ಟ್‌ನಲ್ಲಿ ಪ್ರಥಮ್ ಇಲ್ಲಿಗೆ ಬಂದು ತಮ್ಮದೇ ರೀತಿಯಲ್ಲಿ ಡ್ಯಾನ್ಸ್ ಕೂಡ ಮಾಡುತ್ತಿದ್ದಾರೆ. ಡ್ಯಾನ್ಸ್‌ಗಿಂತ ಪ್ರಥಮ್‌ ತಮ್ಮ ಮಾತಿಗೇ ಖ್ಯಾತಿ ಎಂದು ಬೇರೆ ಹೇಳಬೇಕಾಗಿಲ್ಲ. ಹಲವು ಬಾರಿ ಶಾಕಿಂಗ್‌ ಅನ್ನಿಸುವ ಹಾಗೆ ಮಾತಾಡುವುದು ಅವರಿಗೆ ಸಿದ್ಧಿಸಿದ ಕಲೆ. ಇತ್ತೀಚೆಗೆ ದರ್ಶನ್‌ ಕುರಿತು ಒಂದು ಮಾತು ಹೇಳಿ ದರ್ಶನ್‌ ಅಭಿಮಾನಿಗಳ ಕೋಪಕ್ಕೂ ಗುರಿಯಾಗಿದ್ದರು. ಆ ಮಾತು ಬೇರೆ. 

ಈ ಕಾರ್ಯಕ್ರಮದಲ್ಲಿ ಪ್ರಥಮ್ ತಮ್ಮ ಬದುಕಿನ ಇದುವರೆಗೆ ಬಚ್ಚಿಟ್ಟಿದ್ದ ಸತ್ಯವನ್ನು ಹೇಳಿಕೊಂಡರು. ಇದನ್ನು ಕೇಳಿದ ಅನುಶ್ರೀ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೀಗೆ ಅಲ್ಲಿದ್ದವರೆಲ್ಲ ಅಚ್ಚರಿಗೊಂಡರು. ಶಿವಣ್ಣ "ಇದು ನನಗೆ ಗೊತ್ತೇ ಇರಲಿಲ್ಲ. ಇದು ಸರ್ಪ್ರೈಸಿಂಗ್ ಆಗಿದೆ" ಅಂತ ಹೇಳಿಕೊಂಡರು. ಅದೇನು ಅಂದರೆ, ಪ್ರಥಮ್‌ ಬೆಂಗಳೂರಿಗೆ ಬಂದ ಹೊಸದರಲ್ಲಿ ಒಂದು ಸ್ಟಾರ್‌ ಹೋಟೆಲಿನಲ್ಲಿ ಸೆಕ್ಯುರಿಟಿ ಆಗಿ ಕೆಲಸ ಮಾಡುತ್ತಿದ್ದಂತೆ. ಆ ಹೋಟೆಲ್‌ ಬೇರ್ಯಾರದೂ ಅಲ್ಲ, ಸ್ವತಃ ರಾಜ್‌ಕುಮಾರ್‌ ಫ್ಯಾಮಿಲಿಯದು. ಬೆಂಗಳೂರಿನ ಗಾಂಧಿನಗರದಲ್ಲಿ ಈ ಹೋಟೆಲ್ ಇದೆ. ಅದರ ಹೆಸರು ʼರಾಜ್‌ಕುಮಾರ್ ಇಂಟರ್ನ್ಯಾಷನಲ್ʼ. ಈಗ ಅದು ಶಿವಣ್ಣನವರ ಒಡೆತನದಲ್ಲಿದೆ. ಇದೇ ಹೋಟೆಲ್‌ನಲ್ಲಿ ಪ್ರಥಮ್ ಕೆಲಸ ಮಾಡುತ್ತಿದ್ದರಂತೆ. 

ಅಮೃತಧಾರೆ: ಫಸ್ಟ್ ನೈಟಲ್ಲಿ ಆಗ್ಬೇಕಾಗಿರೋದು ಬಿಟ್ಟು ಮತ್ತೇನೋ ಆಗ್ತಿದೆ!

ನಾನು ಸೆಕ್ಯೂರಿಟಿ ಗಾರ್ಡ್ ಆಗಿದ್ದ ವಿಷಯ ಗೀತಾ ಶಿವರಾಜ್‌ಕುಮಾರ್ ಅವರಿಗೆ ಗೊತ್ತಿದೆ. ರಾಘವೇಂದ್ರ ರಾಜ್‌ಕುಮಾರ್ ಅವರಿಗೂ ತಿಳಿದಿದೆ ಅಂತ ಪ್ರಥಮ್‌ ಹೇಳಿದರು. ಅವರಿಗೆ ಮಾತ್ರ ಹೇಗೆ ಗೊತ್ತು, ಶಿವಣ್ಣನಿಗೆ ಯಾಕೆ ಗೊತ್ತಿಲ್ಲ, ಇದು ಎಷ್ಟು ವರ್ಷಗಳ ಹಿಂದಿನ ಕತೆ, ಎಷ್ಟು ವರ್ಷ ಕಾಲ ಪ್ರಥಮ್‌ ಅಲ್ಲಿ ಸೆಕ್ಯುರಿಟಿ ಆಗಿದ್ದರು- ಈ ವಿವರಗಳನ್ನು ಪ್ರಥಮ್‌ ಹೇಳಿಲ್ಲ. ಆದರೆ ಶಿವಣ್ಣಗೆ ಅಚ್ಚರಿ ಆಗಿದ್ದಂತೂ ನಿಜ. ಅದು ಅವರ ಎಕ್ಸ್‌ಪ್ರೆಶನ್‌ನಲ್ಲಿ ಗೊತ್ತಾಗುವಂತಿತ್ತು. 

ಹೀಗೆ ಅವರ ಹೋಟೆಲ್‌ನಲ್ಲಿ ಸೆಕ್ಯುರಿಟಿ ಆಗಿದ್ದ ನಾನು ಇಂದು ಅವರ ಮುಂದೆ ಡ್ಯಾನ್ಸ್‌ ಪರ್ಪಾರ್ಮ್‌ ಮಾಡ್ತಾ ಇದೇನೆ. ಹಾಗೇ ರಾಘಣ್ಣನ ಸಿನಿಮಾ ಡೈರೆಕ್ಷನ್‌ ಮಾಡ್ತಾ ಇದೇನೆ. ಇದು ನಂಗೆ ಹೆಮ್ಮೆಯ ವಿಷಯ ಅಂತ ಹೇಳಲು ಪ್ರಥಮ್‌ ಮರೆಯಲಿಲ್ಲ. ಆ ಮಾತಿನಲ್ಲಿ ಅವರು ತಮ್ಮ ಬಗ್ಗೆ ಹೆಮ್ಮೆ ಪಟ್ಟುಕೊಂಡದ್ದು ಚೆನ್ನಾಗಿಯೇ ಗೊತ್ತಾಗುವ ಹಾಗೆ ಇತ್ತು.

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಶೂಟಿಂಗ್ ಸೆಟ್‌ಗೆ ರಾಕಿಂಗ್ ಸ್ಟಾರ್ ಯಶ್ ಸರ್‌ಪ್ರೈಸ್ ಭೇಟಿ..!

ಅದಿರಲಿ, ‘ಬಿಗ್ ಬಾಸ್’ ವಿನ್ನರ್ ಪ್ರಥಮ್‌ಗೆ ಇತ್ತೀಚೆಗೆ ದರ್ಶನ್ ಫ್ಯಾನ್ಸ್‌ಗಳಿಂದ ಬೆದರಿಕೆ ಕರೆ ಬಂದ ಬೆನ್ನಲ್ಲೇ ನಟ ಠಾಣೆ ಮೆಟ್ಟಿಲೇರಿದ್ದರು. ನಂತರ ಆ ಪ್ರಕರಣದ ವಿಚಾರವಾಗಿ ಪ್ರಥಮ್ ಸೋಷಿಯಲ್ ಮೀಡಿಯಾದಲ್ಲಿ ಕಿಡಿಕಾರಿದ್ದರು. ನಟ ದರ್ಶನ್ ಬಂಧನ ಬೆನ್ನಲ್ಲೇ ಪ್ರಥಮ್ ನೀಡಿದ ಹೇಳಿಕೆಯೊಂದು ವೈರಲ್ ಆಗಿತ್ತು. ಪ್ರಥಮ್ ಮಾಧ್ಯಮಗಳ ಜೊತೆ ಮಾತನಾಡುತ್ತಾ, ದರ್ಶನ್ ಅವರನ್ನು ಬಂಧಿಸಿಟ್ಟಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಎದುರು ನಿಂತಿರುವ ಕೆಲ ಅಂಧಾಭಿಮಾನಿಗಳನ್ನು ಲಾಠಿ ತೆಗೆದುಕೊಂಡು ಹೊಡೆಯಬೇಕು ಅನಿಸುತ್ತದೆ. ಅಲ್ಲಿರುವ ಒಬ್ಬರೂ ಸಹ ಅವರ ಅಪ್ಪ-ಅಮ್ಮನಿಗೆ ಒಂದೊತ್ತು ಊಟ ಹಾಕುವ ಯೋಗ್ಯತೆ ಇಲ್ಲದವರು. ಮೊದಲು ಅವರನ್ನು ಬಾರಿಸಿ ಓಡಿಸಬೇಕು ಎಂದು ಹೇಳಿದ್ದರು.

View post on Instagram