ಅಮೃತಧಾರೆ: ಫಸ್ಟ್ ನೈಟಲ್ಲಿ ಆಗ್ಬೇಕಾಗಿರೋದು ಬಿಟ್ಟು ಮತ್ತೇನೋ ಆಗ್ತಿದೆ!
ಜೀ ಕನ್ನಡದ 'ಅಮೃತಧಾರೆ'ಯಲ್ಲಿ ಅಮೃತಧಾರೆಯಲ್ಲಿ ಪಾರ್ಥ ಮತ್ತು ಅಪೇಕ್ಷಾಳ ಮದುವೆ ಅನಿರೀಕ್ಷಿತವಾಗಿ ನಡೆದು ಹೋಗಿದೆ. ಈಗ ಪಾರ್ಥ ಅಪ್ಪಿ ಫಸ್ಟ್ ನೈಟ್ ಸೀನ್ ನಡೀತಿದೆ. ಆದರೆ ಏನೋ ನಡೀಬೇಕಾದ ಕಡೆ ಮತ್ತೇನೋ ನಡೀತಿದ್ಯಾ? ಏನ್ ಕಥೆ!
ಈ ಸೀರಿಯಲ್‌ಗಳಲ್ಲಿ ಮೇಜರ್ ಪಾತ್ರಗಳ ಮದುವೆ, ಶೋಭನಾ ಮತ್ತೇನೋ ಶುಭ ಕಾರ್ಯ ಇದೆಲ್ಲ ಅಂದ್ಕೊಂಡ ಹಾಗೆ ನಡೆದದ್ದು ಇತಿಹಾಸದಲ್ಲೇ ಇಲ್ಲ. ವಿಘ್ನ, ಅಡ್ಡಿ ಆತಂಕಗಳೆಲ್ಲ ಇರೋದು ಕಾಮನ್. ಅದು ಇಲ್ಲಾಂತಂದ್ರೇ ಸರ್ಪ್ರೈಸ್. ಈಗ ಝೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್ ಅನ್ನೇ ತಗೊಳ್ಳಿ. ಈ ಸೀರಿಯಲ್‌ನ ಹೀರೋ ತಮ್ಮ ಪಾರ್ಥ ಮತ್ತು ಹೀರೋಯಿನ್ ತಂಗಿ ಅಪೇಕ್ಷ ಮದುವೆ ಯಾರೂ ಇಮ್ಯಾಜಿನ್ ಮಾಡದ ಹಾಗೆ ನಡೆದುಹೋಗಿದೆ. ಇದು ಎರಡೂ ಮನೆಯವರಿಗೆ ಇಷ್ಟವಿಲ್ಲದೇ, ಅವರ ಅನುಮತಿಯಿಲ್ಲದೇ ದೇವಸ್ಥಾನದಲ್ಲಿ ನಡೆದ ಮದುವೆ. ಇದಾಗಿ ಅಸಮಾಧಾನದ ಹೊಗೆಯಾಡುತ್ತಿರುವಾಗಲೇ ನವ ದಂಪತಿ ಮನೆಗೆ ಬಂದಿದ್ದಾರೆ. ಶಕುಂತಲಾ ದೇವಿ ಸಂಚಿನಿಂದಾಗಿ ಕಳೆದ ಕೆಲವು ದಿನಗಳಿಂದ ಅಮೃತಧಾರೆಯಲ್ಲಿ ಅಕ್ಕ ತಂಗಿ ನಡುವೆ ವಿಷಬೀಜ ಮೊಳಕೆಯೊಡೆದಿತ್ತು. ಶಕುಂತಲಾದೇವಿ ಮತ್ತು ಅವಳ ತಮ್ಮನ ಕೆಟ್ಟ ಉದ್ದೇಶ ಅರಿಯದ ಅಪೇಕ್ಷಾ ಭೂಮಿಕಾಳ ವಿರುದ್ಧ ಮಾತನಾಡಿದ್ದಳು. ಇದು ಅಪ್ಪಿ ಮನಸ್ಸಲ್ಲಿ ಗಟ್ಟಿಯಾಗಿ ಕೂತು ಬಿಟ್ಟಿದೆ. ಇದು ಅಷ್ಟು ಬೇಗ ಮನಸ್ಸಿಂದ ಹೋಗೋ ಹಾಗೇ ಕಾಣ್ತಿಲ್ಲ.
ಇದೆಲ್ಲ ಶಕುಂತಲಾ ಆಡುತ್ತಿರುವ ನಾಟಕ ಎಂದು ಅಪೇಕ್ಷಾಗೆ ಗೊತ್ತಿಲ್ಲ. ಅಕ್ಕ ತಂಗಿ ನಡುವೆ ಜಗಳ ತಂದು ಖುಷಿ ಪಡ್ತಾ ಇದ್ದಾರೆ ಶಕುಂತಲಾ. ಯಾಕೆ ಇವರಿಬ್ಬರ ಮದುವೆ ಮಾಡಿದ್ರಿ ಎಂದು ಭೂಮಿಕಾ ಕೇಳಿದಾಗ 'ಪಾರ್ಥನ ನೋವು ನೋಡಲಾಗಲಿಲ್ಲ' ಎಂದು ಶಕುಂತಲಾ ಹೇಳುತ್ತಾರೆ. ಇದೇ ಸಮಯದಲ್ಲಿ ಈ ಹಿಂದೆ ರೆಕಾರ್ಡ್ ಮಾಡಿದ ವಿಡಿಯೋವನ್ನು ಅಪೇಕ್ಷಾ ನೋಡುವಂತೆ ಮಾಡು ಎಂದು ಸಹೋದರನಿಗೆ ಹೇಳುತ್ತಾರೆ. "ನಿಮ್ಮಿಬ್ಬರ ಮದುವೆ ನಡೆದದ್ದು ನಿನ್ನ ಅಕ್ಕನಿಗೆ ಇಷ್ಟವಿಲ್ಲ. ಇದೆಲ್ಲ ಆದದ್ದು ನಿನ್ನ ಅತ್ತೆಯ ಸಪೋರ್ಟ್‌ನಿಂದ ಎಂದು ಹೇಳು" ಎಂದು ಶಕುಂತಲಾದೇವಿ ಲಕ್ಷ್ಮಿಕಾಂತ್‌ಗೆ ಹೇಳುತ್ತಾರೆ. ಇದೇ ರೀತಿ ಅಪೇಕ್ಷಾಳ ಮುಂದೆ ಮನೆಹಾಳ ಮಾವ ತಿಳಿಸುತ್ತಾನೆ. ಅಪೇಕ್ಷಾಳ ಮನಸ್ಸಲ್ಲಿ ವಿಷಬೀಜ ಸಸಿಯಾಗಿದೆ.
ಮತ್ತೆ ಕಿರುತೆರೆಯಲ್ಲಿ ವಿಜಯ್ ಸೂರ್ಯ ಕಮಾಲ್, ಸದ್ದು ಮಾಡ್ತಿದೆ Sannidi-Siddhu ಫೋಟೋಸ್
ಇನ್ನೊಂದು ಕಡೆ ಶಕುಂತಲಾದೇವಿಯೇ ಮುಂದೆ ನಿಂತು ಪಾರ್ಥ ಮತ್ತು ಅಪೇಕ್ಷಾರ ಫಸ್ಟ್‌ನೈಟ್‌ಗೆ ಎಲ್ಲಾ ವ್ಯವಸ್ಥೆ ಮಾಡಿದ್ದಾರೆ. ಭೂಮಿಕಾಳಿಗೆ ಈ ವಿಚಾರ ಕೊನೆ ಕ್ಷಣದಲ್ಲಿ ತಿಳಿಯುತ್ತದೆ. ಇಲ್ಲೂ ಅವಳ ವರ್ತನೆಯನ್ನು ತಪ್ಪಾಗಿ ಕಾಣುವಂತೆ ಅತ್ತೆ ಶಕುಂತಳಾ ನಾಟಕ ಆಡುತ್ತಾಳೆ. ತಾನು ಬಹಳ ಒಳ್ಳೆಯವಳಂತೆ, ಭೂಮಿಕಾ ಕೆಟ್ಟವಳಂತೆ ಅರ್ಪಿತಾ ಮುಂದೆ ತೋರಿಸಿಕೊಳ್ಳುತ್ತಾಳೆ. ಈ ಸನ್ನಿವೇಶದಲ್ಲೇ ಪ್ರಸ್ತದ ಕೊಠಡಿಗೆ ಬಂದ ಅಪೇಕ್ಷಾಳಿಗೆ ಪಾರ್ಥ ಮಂಕಾಗಿರುವುದು ಕಾಣಿಸುತ್ತದೆ. 'ಯಾಕೆ ಭಾವನ ತಮ್ಮ, ಯಾಕೆ ಹೀಗಿದ್ದೀರ?' ಎಂದು ಅಪೇಕ್ಷಾ ಕೇಳುತ್ತಾಳೆ. "ನಾವು ಮದುವೆ ಆಗಿರೋದು ಮನೆಯಲ್ಲಿ ಯಾರಿಗೂ ಖುಷಿ ಇಲ್ಲ' ಎಂಬ ನೋವನ್ನು ಪಾರ್ಥ ಹೊರ ಹಾಕುತ್ತಾನೆ. ಆದರೆ ಇದಕ್ಕೆಲ್ಲ ಅಪೇಕ್ಷಾ ತಲೆಕೆಡಿಸಿಕೊಳ್ಳುವುದಿಲ್ಲ. 'ಈ ಮದುವೆಯಿಂದ ನನ್ನನ್ನು ನಿಮ್ಮನ್ನು ಬಿಟ್ಟು ಬೇರೆ ಯಾರೂ ಖುಷಿಯಾಗಿಲ್ಲ. ಹೀಗಿದ್ದ ಮೇಲೆ ನಾವು ಖುಷಿಯಾಗಿರಲು ಹೇಗೆ ಸಾಧ್ಯ. ನೀವು ಅತ್ತಿಗೆ ಜತೆ ಮಾತನಾಡಿದ್ದನ್ನು ನಾನು ಕೇಳಿಸಿಕೊಂಡೆ. ತುಂಬಾ ರೂಡ್ ಆಗಿ ಮಾತನಾಡ್ತಾ ಇದ್ದೀರಿ. ಅದು ನನಗೆ ಸ್ವಲ್ಪನೂ ಇಷ್ಟವಾಗಿಲ್ಲ. ಅತ್ತಿಗೆ ಬೇರೆಯವರ ತರಹ ಅಲ್ಲ. ಅವರು ತುಂಬಾ ಡಿಫರೆಂಟ್" ಎಂದು ಪಾರ್ಥ ಹೇಳಿದಾಗ ಕೋಪದಿಂದ ಅಪೇಕ್ಷಾ ಎದ್ದು ನಿಲ್ಲುತ್ತಾಳೆ. ತಾನು ಮನೆಗೆ ಹಿಂತಿರುಗುದುದಾಗಿ ಹೇಳುತ್ತಾಳೆ. ತಕ್ಷಣ ಅಪೇಕ್ಷಾ ಎಂದು ಪಾರ್ಥ ಆಕೆಯ ಕೈ ಹಿಡಿಯುತ್ತಾನೆ. ಸೋ ಈಗ ನಮ್ಮ ಮುಂದಿರುವ ಪ್ರಶ್ನೆ ಮುಂದೇನಾಗಬಹುದು ಅನ್ನೋದು.
ನಿನ್ನ ಸೌಂದರ್ಯ ಭಲೆ ಭಲೆ ಎಂದು ಚಂದನ್ ಶೆಟ್ಟಿ ರೀಲ್ಸ್: ಗುಡ್ ನ್ಯೂಸಾ ಕೇಳ್ತಿದ್ದಾರೆ ಫ್ಯಾನ್ಸ್!
'ಈ ಜನರೇಶನ್‌ನ ಹುಡುಗಿಯರೇ ಹಾಗೆ. ಅವ್ರಿಗೆ ತಮ್ಮ ಸ್ವಾರ್ಥ ಅಷ್ಟೇ ಮುಖ್ಯ' ಅಂತ ಒಂದಿಷ್ಟು ಜನ ಅಪೇಕ್ಷಾ ನೆವದಲ್ಲಿ ಇಡೀ ಜನರೇಶನ್ ಮೇಲಿನ ತಮ್ಮ ಸಿಟ್ಟನ್ನೆಲ್ಲ ಹೊರಹಾಗಿದ್ದಾರೆ. ಅಂದಹಾಗೆ ಈ ಸೀರಿಯಲ್‌ನಲ್ಲಿ ಅಮೃತಾ ನಾಯಕ್ ಅಪೇಕ್ಷ ಪಾತ್ರವನ್ನು, ಕರಣ್ ಪಾರ್ಥನ ಪಾತ್ರವನ್ನು ಅಭಿನಯಿಸಿದ್ದಾರೆ.