ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡಿದ ಭಿಕ್ಷುಕನೋರ್ವ, ಆಹಾರ ತಲುಪಿಸಿದ ಡೆಲಿವರಿ ಬಾಯ್‌ಗೆ ಟಿಪ್ಸ್ ಕೂಡ ನೀಡಿದ್ದಾನೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಬಗ್ಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ.
ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡಿದ ಭಿಕ್ಷುಕ:
ಭಿಕ್ಷುಕನೋರ್ವ ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡಿ ತನಗೆ ಆಹಾರ ತಂದು ಕೊಟ್ಟ ಡೆಲಿವರಿ ಬಾಯ್‌ಗೆ ಟಿಪ್ಸ್ ನೀಡಿದಂತಹ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದು ವೈರಲ್ ಆಗುತ್ತಿದ್ದು, ಅನೇಕರು ಇದು ಬಹುಶಃ ಸ್ಕ್ರಿಫ್ಟೆಡ್ ಆಗಿರಬಹುದು ಎಂದು ಹೇಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಆನ್‌ಲೈನ್ ಫುಡ್ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುವ ವ್ಯಕ್ತಿಯೊಬ್ಬರು ಹೀಗೆ ಹೇಳಿಕೊಂಡು ವೀಡಿಯೋ ಪೋಸ್ಟ್ ಮಾಡಿದ್ದಾರೆ. ಅವರ ವೀಡಿಯೋದ ಪ್ರಕಾರ ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡಿದ ಭಿಕ್ಷುಕನೋರ್ವ ಡೆಲಿವರಿ ಬಾಯ್ ಆದ ಅವರಿಗೆ ಆಹಾರ ತಂದು ಕೊಟ್ಟಿದ್ದಕ್ಕೆ 50 ರೂಪಾಯಿ ಟಿಪ್ಸ್ ಕೂಡ ನೀಡಿದ್ದಾನೆ ಎಂದು ಅವರು ಹೇಳಿಕೊಂಡಿದ್ದಾರೆ.
ತಂದು ಕೊಟ್ಟ ಡೆಲಿವರಿ ಬಾಯ್‌ಗೆ 50 ರೂ. ಟಿಪ್ಸ್
ಇದು ನಿಜಾನೋ ಸುಳ್ಳೋ ಗೊತ್ತಿಲ್ಲ, ಆದರೆ ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ಭಾರಿ ವೈರಲ್ ಆಗಿದೆ. ಫರ್ದಿನ್ ಖಾನ್ ಎಂಬುವರು ಸೋಶಿಯಲ್ ಮೀಡಿಯಾ ಇನ್ಸ್ಟಾಗ್ರಾಮ್‌ನಲ್ಲಿ ಈ ವೀಡಿಯೋ ಪೋಸ್ಟ್ ಮಾಡಿದ್ದಾರೆ. ಡೆಲಿವರಿ ಏಜೆಂಟ್ ಪರಿಚಯವಿಲ್ಲದ ಸ್ಥಳಕ್ಕೆ ಹೋಗಿ ಗ್ರಾಹಕನಿಗೆ ಕರೆ ಮಾಡಿ ತಾನು ಬಂದಿದ್ದು, ಸರಿಯಾದ ಸ್ಥಳಕ್ಕಾ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾನೆ. ಕೆಲವು ಕ್ಷಣಗಳ ನಂತರ, ರಸ್ತೆಬದಿಯಲ್ಲಿ ಒಬ್ಬ ವ್ಯಕ್ತಿ ಕಂಬಳಿಯಿಂದ ಸುತ್ತುವರೆದು ಮಲಗಿರುವುದನ್ನು ಅವನು ಗಮನಿಸಿ, ಆ ವ್ಯಕ್ತಿಯೇ ಆಹಾರ ಆರ್ಡರ್ ಮಾಡಿದ ವ್ಯಕ್ತಿ ಎಂದು ತಿಳಿದು ಶಾಕ್ ಆಗಿದ್ದಾನೆ. ಆಘಾತಕ್ಕೊಳಗಾದ ಡೆಲಿವರಿ ಏಜೆಂಟ್ ವೀಡಿಯೊದಲ್ಲಿ ಭಿಕ್ಷುಕ ಆಹಾರವನ್ನು ಆರ್ಡರ್ ಮಾಡಿದ್ದಾನೆ ಎಂದು ಹೇಳುವುದನ್ನು ಕೇಳಬಹುದು.
ಇದನ್ನೂ ಓದಿ: ಡ್ರೈವಿಂಗ್ ಹೇಳಿಕೊಡ್ತಿದ್ದ ಗಂಡ: ಬ್ರೇಕ್ ಬದಲು ಆಕ್ಸಿಲರೇಟ್ ಮೇಲೆ ಕಾಲಿಟ್ಟ ಪತ್ನಿ: ದೇಗುಲದ ಕೆರೆಗೆ ಬಿದ್ದ ಕಾರು
ಡೆಲಿವರಿ ಏಜೆಂಟ್ ಆ ವ್ಯಕ್ತಿಯನ್ನು ನೀವು ನಿಜವಾಗಿಯೂ ಆರ್ಡರ್ ಮಾಡಿದ್ದೀರಾ ಎಂದು ಕೇಳಿದಾಗ, ಆ ವ್ಯಕ್ತಿ ಶಾಂತವಾಗಿ ಹೌದು ಎಂದು ಹೇಳುತ್ತಾನೆ ಹಾಗೂ ಆಹಾರವನ್ನು ನಾನು ಏಕೆ ಆರ್ಡರ್ ಮಾಡಬಾರದು ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಪ್ರತಿಕ್ರಿಯಿಸಿದ ಡೆಲಿವರಿ ಏಜೆಂಟ್, ಯಾಕೆ ಮಾಡಬಾರದು ಖಂಡಿತ ಮಾಡಬಹುದು ಎಂದು ಹೇಳುತ್ತಾನೆ. ನಂತರ ಆ ಭಿಕ್ಷುಕನಂತಿದ್ದ ವ್ಯಕ್ತಿ ತಕ್ಷಣ 50 ರೂಪಾಯಿ ಟಿಪ್ ಬೇರೆ ನೀಡುತ್ತಾನೆ. ಇದರಿಂದ ಡೆಲಿವರಿ ಏಜೆಂಟ್ ಮತ್ತಷ್ಟು ಆಶ್ಚರ್ಯಪಟ್ಟಿದ್ದಾನೆ.
ಈ ವೀಡಿಯೋ ಈಗ ಭಾರಿ ವೈರಲ್ ಆಗಿದ್ದು, ಮಿಲಿಯನ್‌ಗೂ ಹೆಚ್ಚು ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. ಈ ವೀಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ಈ ವೀಡಿಯೋ ಸ್ಕ್ರಿಫ್ಟೆಡ್ (ಬೇಕೆಂದಲೇ ಮಾಡಿದ ಡ್ರಾಮಾ) ಇರಬಹುದು ಎಂದು ಭಾವಿಸಿದರೆ ಮತ್ತೆ ಕೆಲವರು ಆನ್‌ಲೈನ್‌ನಲ್ಲಿ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಅನೇಕರು ಈಗ ತಾಂತ್ರಿಕವಾಗಿ ಭಿಕಾರಿ ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ಈ ವಿಡಿಯೋ ಅಪ್‌ಲೋಡ್ ಮಾಡಿದ ವ್ಯಕ್ತಿ ತನ್ನ ಇನ್‌ಸ್ಟಾಗ್ರಾಮ್ ಬಯೋದಲ್ಲಿ ತನ್ನನ್ನು ಡೆಲಿವರಿ ಏಜೆಂಟ್ ಎಂದು ಗುರುತಿಸಿಕೊಂಡಿದ್ದಾನೆ. ತನಗೆ ಅನೇಕ ಭಾರಿ ವಿಚಿತ್ರ ಎನಿಸುವ ಈ ರೀತಿಯ ಅನುಭವ ಆಗಿದೆ ಎಂದು ಅವರು ಹೇಳಿಕೊಂಡಿದ್ದು, ಅವರ ಸಾಮಾಜಿಕ ಜಾಲತಾಣದಲ್ಲಿ ಇದೇ ರೀತಿಯ ಶಾಕಿಂಗ್ ಎನಿಸುವ ಹಲವು ವೀಡಿಯೋಗಳನ್ನು ನೋಡಬಹುದಾಗಿದೆ.
ಇದನ್ನೂ ಓದಿ: ಆಂಬುಲೆನ್ಸ್‌ನಲ್ಲಿ 2.6 ಕೋಟಿ ಮೌಲ್ಯದ ಗಾಂಜಾ ಸಾಗಣೆ: ಹಾವು ಹಿಡಿಯುವುದಕ್ಕೆ ಫೇಮಸ್ ಆಗಿದ್ದ ಯುಟ್ಯೂಬರ್ ಅಂದರ್
ಒಬ್ಬ ಬಳಕೆದಾರರು ಭಾಯ್ ವೋ ದಿಲ್ ಸೆ ಗರೀಬ್ ನಹಿ ಹೈ, ಲೇಕಿನ್ ಆಪ್ನೆ ಅಪ್ನಿ ಸೋಚ್ ದಿಖಾ ದಿ ಉನ್ಹೆ ಭಿಖಾರಿ ಬೋಲ್ ಕರ್ (ಸಹೋದರ, ಅವನು ಹೃದಯದಲ್ಲಿ ಬಡವನಲ್ಲದಿರಬಹುದು, ಆದರೆ ನೀವು ಅವನನ್ನು ಭಿಕ್ಷುಕ ಎಂದು ಕರೆಯುವ ಮೂಲಕ ನಿಮ್ಮ ಮನಸ್ಥಿತಿಯನ್ನು ಬಹಿರಂಗಪಡಿಸಿದ್ದೀರಿ) ಎಂದು ಒಬ್ಬರು ಬರೆದಿದ್ದಾರೆ. ಮತ್ತೊಬ್ಬರು ತಮಾಷೆಯಾಗಿ ಭಿಕಾರಿಯೂ ನಿಮಗೆ ಭಿಕ್ಷೆ ನೀಡಿದ ಎಂದು ತಮಾಷೆ ಮಾಡಿದ್ದಾರೆ. ಅವನು ಭಿಕ್ಷುಕನಾಗಿದ್ದರೂ ಹೃದಯದಲ್ಲಿ ಶ್ರೀಮಂತ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.


