Bhagya Lakshmi Serial: ಭಾಗ್ಯನ್ನ ತಾಂಡವ್‌ಗೆ ಬೇಕಾದಂಗೆ ಬದಲಿಸ್ತಾಳಂತೆ ಕುಸುಮಾ! ಏನಂತಾರೆ ವೀಕ್ಷಕರು!

ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಕುಸುಮಾ ಮಗನ ಮುಂದೆ ಶಪಥ ಮಾಡಿದ್ದಾಳೆ. ಇನ್ನೊಂದು ತಿಂಗಳಲ್ಲಿ ಭಾಗ್ಯಾಳನ್ನು ನಿಂಗೆ ಬೇಕಾದಂತೆ ಬದಲಿಸ್ತೀನಿ ಅಂತ. ಆದ್ರೆ ಮೊದ್ಲು ನಿಮ್ ಮನೆಹಾಳ್ ಮಗನ್ನ ಬದಲಾಯ್ಸಿ ಅಂತಿದ್ದಾರೆ ನೆಟ್ಟಿಗರು.
 

relation of Bhagya and Kusuma in Bhagya Lakshmi Serial bni

ಕಲರ್ಸ್ ಕನ್ನಡದ (Colors Kannada) ಭಾಗ್ಯಲಕ್ಷ್ಮೀ ಸೀರಿಯಲ್‌ಗೆ (Bhagya Lakshmi Serial) ಆರಂಭದಿಂದಲೂ ಕಾಮೆಂಟ್‌ ಮೇಲೆ ಕಾಮೆಂಟ್ ಬರ್ತಾನೇ ಇದೆ. ಇದಕ್ಕೆ ಕಾರಣಗಳು ಹಲವು. ಕಥೆ ಸ್ಲೋ ಆಗಿ ಮುಂದುವರೀತಿರೋದು ಒಂದು ರೀಸನ್ ಆದ್ರೆ, ಭಾಗ್ಯಳ ಅತಿಯಾದ ಒಳ್ಳೆತನ ಇನ್ನೊಂದು ಕಾರಣ. ಬಹಳ ನಿಧಾನಕ್ಕೆ ಭಾಗ್ಯ ಬದಲಾಗಿ ಎಸ್‌ಎಸ್‌ಎಲ್‌ಸಿ ಎಕ್ಸಾಂ ಬರೆದು ತನ್ನ ಅಡುಗೆ ಸ್ಕಿಲ್‌ನಿಂದ ಸ್ಟಾರ್ ಹೊಟೇಲ್ ಶೆಫ್ ಆದದ್ದು ಬಹಳ ಲಾಂಗ್ ಪ್ರೊಸೆಸ್ ಆಯ್ತು. ಇದೀಗ ತಾಂಡವ್ ಶ್ರೇಷ್ಠಳನ್ನ ಮದುವೆ ಆಗೋದಕ್ಕೆ ಹೊರಟಿದ್ದ. ಅದನ್ನು ತಿಂಗಳಾನುಗಟ್ಟಲೆ ಎಳೆದರು. ಅದಕ್ಕೆ ವೀಕ್ಷಕರು ಒಂದಿಷ್ಟು ಉಗಿದರು. ಆಮೇಲೆ ಈ ವಿಚಾರ ತಾಂಡವ್‌ ತಾಯಿ ಕುಸುಮಾಗೆ ತಿಳಿದು ಅವಳು ಒಂದಿಷ್ಟು ಕಾಲ ರೋದಿಸುವುದನ್ನು ಎಳೆದೆಳೆದು ತೋರಿಸಲಾಯ್ತು. ಸರಿ ಇನ್ಮೇಲಾದ್ರೂ ಎಲ್ಲ ಸರಿ ಹೋಗುತ್ತ ಅಂದ್ಕೊಂಡ್ರೆ ಖಂಡಿತಾ ಇಲ್ಲ ಅಂತಿದೆ ಸೀರಿಯಲ್ ಟೀಮ್. ಈ ಟೀಮ್ ಇದೀಗ ಕುಸುಮಾಗೆ ಹೊಸ ಟಾಸ್ಕ್‌ ಕೊಟ್ಟಿದೆ. ಆ ಪ್ರಕಾರ ಕುಸುಮಾ ಇನ್ನೊಂದು ತಿಂಗಳಲ್ಲಿ ಭಾಗ್ಯಳನ್ನ ಬದಲಿಸಬೇಕಿದೆ.

ಅಷ್ಟಕ್ಕೂ ಆದದ್ದೇನು ಅಂದರೆ, ಶ್ರೇಷ್ಠಾ ಜೊತೆ ಮದುವೆ ಆಗುವುದನ್ನು ನಿಲ್ಲಿಸುವ ಕುಸುಮಾ ಮಗನನ್ನು ಎಳೆದು ತರುತ್ತಾಳೆ. ಮದುವೆ ಮನೆಯಿಂದ ಸುಮ್ಮನೆ ಹೊರಡುವ ತಾಂಡವ್‌, ರಸ್ತೆಯಲ್ಲಿ ಮತ್ತೆ ವರಸೆ ಬದಲಿಸುತ್ತಾನೆ. ನೀನು ಏನು ಮಾಡಿದರೂ ಭಾಗ್ಯಾ ನನಗೆ ಇಷ್ಟವಿಲ್ಲ ಎನ್ನುತ್ತಾನೆ. ನಾನು ಶ್ರೇಷ್ಠಾಳನ್ನು ಲವ್‌ ಮಾಡಲು, ಅವಳನ್ನು ಮದುವೆ ಆಗುವಂತೆ ಮಾಡಲು ನೀನೇ ಕಾರಣ, ನಿನ್ನ ಸಂಸ್ಕಾರ, ನಾನು ಹೇಳಿದಂತೆ ನಡೆಯಬೇಕು ಅನ್ನೋ ನಿನ್ನ ದರ್ಪವೇ ಕಾರಣ ಎಂದು ತಾಂಡವ್‌, ತನ್ನ ತಪ್ಪಿಗೆ ಅಮ್ಮನನ್ನು ಹೊಣೆ ಮಾಡುತ್ತಾನೆ. ನಿನ್ನನ್ನು ಸಂಸ್ಕಾರವಂತನನ್ನಾಗಿ ಬೆಳೆಸಿದ್ದು ತಪ್ಪಾ? ನೀನು ಹೆಂಡತಿಗೆ ಮೋಸ ಮಾಡು ಅಂತ ಹೇಳಿದ್ದು ನಾನಾ? ಬೇರೆ ಮದುವೆ ಆಗು ಅಂತ ಹೇಳಿದ್ದು ನಾನಾ? ಭಾಗ್ಯಾಳಂತ ಹೆಂಡತಿ ಸಿಗಬೇಕಾರೆ ಪುಣ್ಯ ಮಾಡಿರಬೇಕು ಎಂದು ಕುಸುಮಾ ತಾಂಡವ್‌ಗೆ ಹೇಳುತ್ತಾಳೆ.ಎಂದು ಕುಸುಮಾ ಮಗನನ್ನು ಪ್ರಶ್ನಿಸುತ್ತಾಳೆ. ಇದಕ್ಕೆ ಉತ್ತರಿಸುವ ತಾಂಡವ್.‌ ನನಗೆ ಈ ಮಾತು ಕೇಳಿ ಕೇಳಿ ಸಾಕಾಯ್ತು, ದಯವಿಟ್ಟು ನಿಲ್ಲಿಸು ನೀನು ಎಷ್ಟು ಹೇಳಿದರೂ ನನಗೆ ಭಾಗ್ಯಾ ಮೇಲೆ ನನಗೆ ಮನಸ್ಸಾಗುವುದಿಲ್ಲ ಎನ್ನುತ್ತಾನೆ.‌

ನಿಜವಾಗ್ಲೂ ಈ ಭೂಮಿ ಮೇಲೆ ಇಂಥ ಹೆಂಡ್ತಿ ಇರೋಕೆ ಸಾಧ್ಯನಾ ಅಂತಿರೋದ್ಯಾಕೆ ಭಾಗ್ಯಲಕ್ಷ್ಮಿ ಫ್ಯಾನ್ಸ್​!

ಭಾಗ್ಯಾ, ನಾನು ಇಷ್ಟಪಟ್ಟ ಹುಡುಗಿ ಅಲ್ಲ, ನನ್ನ ಹುಡುಗಿ ಯಾವ ರೀತಿ ಇರಬೇಕು ಎಂದುಕೊಂಡಿದ್ದೇನೋ ಆ ರೀತಿ ಇಲ್ಲ. ಅವಳಿಗೆ ಸರಿಯಾಗಿ ಫ್ಯಾಷನ್‌ ಸೆನ್ಸ್‌ ಇಲ್ಲ, ಹಳ್ಳಿ ಗುಗ್ಗು ಅವಳಿಂದ ನನ್ನ ಜೀವನ ಹಾಳಾಯ್ತು ಎನ್ನುತ್ತಾನೆ. ಮಗನ ಮಾತಿಗೆ ಬೇಸರವಾದರೂ ಸರಿ, ನನಗೆ ಒಂದು ತಿಂಗಳು ಸಮಯ ಕೊಡು , ಭಾಗ್ಯಾಳನ್ನು ನೀನು ಮೆಚ್ಚುವಂತೆ ತಯಾರು ಮಾಡುತ್ತೇನೆ. ಇವಳೇ ನನ್ನ ಹೆಂಡತಿ ಎಂದು ನೀನು ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಮಾಡುತ್ತೇನೆ ಎನ್ನುತ್ತಾಳೆ. ಇದನ್ನು ಕೇಳಿ ತಾಂಡವ್‌ ವ್ಯಂಗ್ಯವಾಗಿ ನಗುತ್ತಾನೆ. ಸಾಧ್ಯವೇ ಇಲ್ಲ, ಭಾಗ್ಯಾ ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ ಎನ್ನುತ್ತಾನೆ. ಈ ಕುಸುಮಾ ಒಮ್ಮೆ ಮಾತು ನೀಡಿದರೆ ಮುಗಿಯಿತು ಅದನ್ನು ಸಾಧಿಸುತ್ತಾಳೆ ಎಂದು ಕುಸುಮಾ ಹೇಳುತ್ತಾಳೆ.

ಇದೀಗ ಸೀರಿಯಲ್ ಟೀಮ್‌ಗೆ ವೀಕ್ಷಕರು ವ್ಯಂಗ್ಯ ಮಾಡುತ್ತಿದ್ದಾರೆ. 'ಕುಸುಮಾ ಮೊದಲು ನಿಮ್ ಮನೆಹಾಳು ಮಗನನ್ನ ಸರಿ ಮಾಡಿ, ಭಾಗ್ಯ ಸರಿಯಾಗೇ ಇದ್ದಾಳೆ' ಅಂತಿದ್ದಾರೆ. ಇನ್ನೊಂದಿಷ್ಟು ಮಂದಿ, 'ಬರೀ ಭಾಗ್ಯನನ್ನೇ ಬದಲಿಸ್ತಾ ಕೂರೋಕೆ ಅವಳೇನು ಮೇಣದ ಗೊಂಬೆನಾ? ಅವಳಿಗೊಂದು ವ್ಯಕ್ತಿತ್ವ ಇಲ್ವಾ?' ಅಂತ ಕೇಳ್ತಿದ್ದಾರೆ. ಒಟ್ಟಿನಲ್ಲಿ ಬರೀ ಹೆಣ್ಣೇ ಬದಲಾಗಬೇಕು ಅನ್ನೋ ಸೀರಿಯಲ್‌ನವರ ಧೋರಣೆಗೆ ವೀಕ್ಷಕರು ಸರಿಯಾಗಿಯೇ ಕ್ಲಾಸ್ ತಗೊಳ್ತಿದ್ದಾರೆ.

ದೀಪಾ ಜೊತೆ ಕೃಷ್ಣನ ಮದ್ವೆಯಾದ್ರು ನಡೆಯುತ್ತೆ ಅಂದ್ರೆ… ಕಿಟ್ಟಿನ ಹುಡ್ಕೊಂಡು ಬಂದೇ ಬಿಟ್ಲು ಸುಂದ್ರಿ ರುಕ್ಮಿಣಿ !
 

Latest Videos
Follow Us:
Download App:
  • android
  • ios