ಅಗ್ರಿಮೆಂಟ್‌ಗೆ ಸಹಿ ಹಾಕುತ್ತೀನಿ ದಯವಿಟ್ಟು ನನ್ನನ್ನು ಬಿಗ್ ಬಾಸ್‌ಗೆ ಕಳುಹಿಸಿ ಸಹಾಯ ಮಾಡಿ; ರೀಲ್ಸ್ ಮಂಜಣ್ಣ ಕಣ್ಣೀರು!
ಒಮ್ಮೆ ಬಿಗ್ ಬಾಸ್‌ಗೆ ನನ್ನನ್ನು ಕಳುಹಿಸಿ ಎಂದು ವಿಡಿಯೋ ಮೂಲಕ ಮನವಿ ಮಾಡಿಕೊಂಡ ರೀಲ್ಸ್ ಮಂಜಣ್ಣ.....
ಇತ್ತೀಚಿನ ದಿನಗಳಲ್ಲಿ ಜನ ಸಾಮಾನ್ಯರು ತಮ್ಮಲ್ಲಿರುವ ಟ್ಯಾಲೆಂಟ್ ಪ್ರದರ್ಶನ ಮಾಡಲು ಸೋಷಿಯಲ್ ಮೀಡಿಯಾವನ್ನು ಬಳಸಿಕೊಳ್ಳುತ್ತಿದ್ದಾರೆ. ಇನ್‌ಸ್ಟಾಗ್ರಾಂ ರೀಲ್ಸ್ ಮತ್ತು ಯೂಟ್ಯೂಬ್ ಶಾರ್ಟ್ ಆಂಡ್ ವ್ಲಾಗ್ ಮಾಡುವ ಮೂಲಕ ಜನಪ್ರಿಯತೆ ಪಡೆಯುತ್ತಿದ್ದಾರೆ. ಮೊಬೈಲ್‌ನಲ್ಲಿ ಜನಪ್ರಿಯತೆ ಪಡೆದವರು ಸೀರಿಯಲ್, ರಿಯಾಲಿಟಿ ಶೋ ಮತ್ತು ಸಿನಿಮಾಗಳಲ್ಲಿ ಆಫರ್ ಪಡೆಯುತ್ತಿದ್ದಾರೆ. ನನಗೂ ಆಫರ್ ಕೊಡಿ ಒಂದು ಚಾನ್ಸ್ ಬೇಕು ಎಂದು ವಿಡಿಯೋ ಮೂಲಕ ಮಂಜಣ್ಣ ಮನವಿ ಮಾಡಿಕೊಂಡಿದ್ದಾರೆ.
ಜೋರಾಗಿ ಕಿರುಚಾಡಿ ರೀಲ್ಸ್ ಮಾಡುವ ಮಂಜಣ್ಣ ನನ್ನನ್ನು ಬಿಗ್ ಬಾಸ್ ಮನೆಗೆ ಕಳುಹಿಸಿ ಎಂದು ಬೇಡಿಕೆ ಇಟ್ಟಿದ್ದಾರೆ. 'ನಾನು ಎರಡು ಮಾತು ಹೇಳಬೇಕು...ನನ್ನಲ್ಲಿ ನಿಜಕ್ಕೂ ಸ್ವಾರ್ಥ ಇಲ್ಲ. ನನ್ನನ್ನು ಬಿಗ್ ಬಾಸ್‌ಗೆ ಕರೆದುಕೊಳ್ಳಿ ಸರ್ ನಾನು ತುಂಬಾ ಓಪನ್ ಆಗಿ ಮಾತನಾಡುತ್ತೀನಿ ಅದಿಕ್ಕೆ ಬಿಗ್ ಬಾಸ್‌ಗೆ ಕರೆದುಕೊಳ್ಳಿ ಸರ್. ಸಮುದ್ರದಲ್ಲಿ ಎಷ್ಟೋ ಜನ ನೀರು ಪಾಲಾಗುತ್ತಿದ್ದಾರೆ ಅಂತವರಿಗೆ ನಾನು ಹೋಗಿ ಸಹಾಯ ಮಾಡಬೇಕು ಅನ್ನೋ ಆಸೆ ಇದೆ. ಅನಾಥಾಶ್ರಮದಲ್ಲಿ ಅಣ್ಣ ತಮ್ಮಂದಿರು ಅಮ್ಮ ಅಪ್ಪ ಇದ್ದಾರೆ ಅವರಿಗೆ ಊಟದ ಸಹಾಯ ಮಾಡಬೇಕು ಅನ್ನೋ ಆಸೆ ಇದೆ..ಎಷ್ಟು ಅನಾಥಾಶ್ರಮಗಳು ಇದೆ ಅವರಿಗೆ ಸಹಾಯ ಮಾಡಬೇಕು ಅನ್ನೋ ಆಸೆ. ದುಡ್ಡು ಬೇಕು ಸರ್ ಜೀವನಕ್ಕೆ ದುಡ್ಡು ಬೇಕು ಹಾಗಂತ ಹೆಚ್ಚಾಗಿ ದುಡ್ಡು ಬೇಡ ಸರ್ ನನಗೆ. ಬಿಗ್ ಬಾಸ್ ಗೆದ್ದು ಬಂದ್ರೆ ನಾನು ಅಗ್ರಿಮೆಂಟ್ ಪೇಪರ್ ಮೇಲೆ ಸೈನ್ ಮಾಡುತ್ತೀನಿ ...ಅಷ್ಟು ದುಡ್ಡು ನನಗೆ ಬೇಡ ಎಂದು' ಎಂದು ವಿಡಿಯೋದಲ್ಲಿ ಮಂಜಣ್ಣ ಮಾತನಾಡಿದ್ದಾರೆ.
'ಬಿಗ್ ಬಾಸ್‌ನಲ್ಲಿ ಕೊಡುವಷ್ಟು ದುಡ್ಡು ನನಗೆ ಕೊಟ್ಟರೆ ಖಂಡಿತಾ ಕಾಯಿಲೆ ಬರುತ್ತದೆ ಹೀಗಾಗಿ ದಾನ ಧರ್ಮಗಳನ್ನು ಮಾಡುತ್ತೀನಿ ಎಂದು ಸೈನ್ ಹಾಕುತ್ತೀನಿ. ಊಟ ನೀರು ಇಲ್ಲದೆ ಅದೆಷ್ಟೋ ಜನ ಕೊಚ್ಚಿ ಹೋಗುತ್ತಿದ್ದಾರೆ ಅವರಿಗೆ ನಾನು ಸಹಾಯ ಮಾಡಬೇಕು. ಜೀವನಕ್ಕೆ ಎಷ್ಟು ದುಡ್ಡು ಬೇಕು ಅಷ್ಟು ಇಟ್ಟುಕೊಂಡು ಉಳಿದ ಹಣದಿಂದ ಸಹಾಯ ಮಾಡುತ್ತೀನಿ. ಈಗ ಈ ರೀತಿ ಮಾತುಗಳನ್ನು ಹೇಳುತ್ತಾರೆ ಗೆದ್ದ ಮೇಲೆ ಬದಲಾಗುತ್ತಾರೆ ಅಂತ ಕೆಲವರು ಅಂದುಕೊಳ್ಳುತ್ತಾರೆ ಆದರೆ ನಾನು ಉಲ್ಟಾ ಮಾಡುವುದಿಲ್ಲ. ಬಿಗ್ ಬಾಸ್‌ಗೆ ನನ್ನನ್ನು ಕರೆದುಕೊಂಡು ಒಂದು ಸಹಾಯ ಮಾಡಿ, ಬಡವನನ್ನು ಗೆಲ್ಲಿಸಬೇಕು ನಾನು ಜನರ ಜೊತೆ ಸೇರಿಕೊಂಡು ಸಹಾಯ ಮಾಡಲು ಆಸೆ ಇದೆ. ವೃದ್ಧಾಶ್ರಮಕ್ಕೂ ಸಹಾಯ ಮಾಡೋಣ. ಏನೇ ಇದ್ದರೂ ನಾನು ಅಗ್ರಿಮೆಂಟ್ ಪೇಪರ್ ಹಿಡ್ಕೊಂಡು ಮಾತನಾಡುತ್ತೀನಿ. ನಾನು ಓಪನ್ ಆಗಿ ಹೇಳುತ್ತಿದ್ದೀನಿ....ನನಗೆ ಜನರು ಮುಖ್ಯ...ನನ್ನ ಅಭಿಮಾನಿಗಳು ನನಗೆ ದೇವರು. ನನ್ನ ಅಭಿಮಾನಿಗಳಿಗೋಸ್ಕರ ಬಿಗ್ ಬಾಸ್‌ಗೆ ಹೋಗಬೇಕು.' ಎಂದು ಮಂಜಣ್ಣ ಹೇಳಿದ್ದಾರೆ.