Asianet Suvarna News Asianet Suvarna News

ಮಗುವಿಗೆ 4 ತಿಂಗಳು ತುಂಬಿಲ್ಲ ಆಗಲೇ ಹಣಕ್ಕೆ ಆಸೆ ಬಿದ್ದು ಕೆಲಸಕ್ಕೆ ಬಂದ್ಲು; ಕೊಂಕು ಮಾಡಿದವರಿಗೆ ಅದಿತಿ ಪ್ರಭುದೇವ ತಿರುಗೇಟು

ತಾಯಿತನವನ್ನು ಎಂಜಾಯ್ ಮಾಡುತ್ತಲೇ ಕೆಲಸ ಶುರು ಮಾಡಿದ ಅದಿತಿ ಪ್ರಭುದೇವ. ನೆಗೆಟಿವ್ ಕಾಮೆಂಟ್ಸ್‌ಗೆ ಉತ್ತರ ಕೊಟ್ಟ ನಟಿ......
 

Actress Aditi Prabhudeva talks about mother in rapid rashmi youtube channel just curious vcs
Author
First Published Sep 5, 2024, 12:38 PM IST | Last Updated Sep 5, 2024, 12:48 PM IST

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಅದಿತಿ ಪ್ರಭುದೇವ ಕಿರುತೆರೆ ಮೂಲಕವೇ ತಮ್ಮ ಜರ್ನಿ ಆರಂಭಿಸಿದ್ದು. ಸೀರಿಯಲ್, ಸಿನಿಮಾ ಮತ್ತೆ ಸೀರಿಯಲ್ ಮತ್ತೆ ಸಿನಿಮಾ ಮಾಡಿದ ಸರ್ಕಲ್ ಮಾಡಿದ ಮೇಲೆ ಹಿಟ್ ಕಂಡಿದ್ದು ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಅದ್ಯ ಕಿರುತೆರೆ ರಾಜಾ ರಾಣಿ ರಿಯಾಲಿಟಿ ಶೋ ಜಡ್ಜ್ ಆಗಿರುವ ಅದಿತಿ ತಮ್ಮ ಮದರ್‌ಹುಡ್‌ ಬಗ್ಗೆ ಹಂಚಿಕೊಂಡಿದ್ದಾರೆ.

'ನನ್ನ ಕೈಯಲ್ಲಿ ಆಗುವಷ್ಟು ನನ್ನ ಮಗಳಿಗೆ ನಾನು ಮಾಡಬೇಕು ಆಕೆಗೆ ಒಳ್ಳೆಯ ಬದುಕು ಕಟ್ಟಿಕೊಳ್ಳಬೇಕು. ಮಗಳು ಹುಟ್ಟಿದ ಮೇಲೆ ನನ್ನ ಎಮೋಷನ್‌ಗಳು ಎಕ್ಸ್‌ಟ್ರೀಮ್ ಆಗಿದೆ. ಮಗಳು ನಕ್ಕರೆ ನನಗೆ ಅಳು ಬರುತ್ತೆ, ಹಾಲು ಕುಡಿದರೆ ಅಳು ಬರುತ್ತೆ...ಚೆನ್ನಾಗಿ ರೆಡಿಯಾಗಿರುವುದನ್ನು ನೋಡಿ ಅಳು ಬರುತ್ತೆ. ಇಷ್ಟೋಂದು ಕಷ್ಟ ಪಟ್ಟು ಕೆಲಸ ಮಾಡಿಕೊಂಡು ಆಕ್ಟಿವ್ ಆಗಿದ್ರು ನನ್ನ ಅಮ್ಮ ಅಂತ ಮಗಳು ಖುಷಿ ಪಡಬೇಕು. ನಾನು ಹೊರಗಿನಿಂದ ಕೆಲಸ ಮುಗಿಸಿಕೊಂಡು ಬಂದಾಗ ಅಮ್ಮ ಟೀ ಮಾಡಿ ಕೊಡ್ಲಾ ಅಂತ ಕೇಳಬೇಕು...ಹೊರಗಿನಿಂದ ಅವರ ತಂದೆ ಬಂದಾಗ ಅಪ್ಪ ನೀರು ಕುಡಿಯಿರಿ ತಗೋಳಿ ಅಂತ ಹೇಳಬೇಕು..ಹಾಗೆ ಆಕೆಯನ್ನು ಬೆಳಸಬೇಕು' ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ಅದಿತಿ ಮಾತನಾಡಿದ್ದಾರೆ. 

ಕರ್ನಾಟಕದಲ್ಲಿ ಕೋಟ್ಯಾಂತರ ಅಭಿಮಾನಿಗಳು ನನಗಿದ್ದರೂ ನಾನು ನಿನ್ನ ಅಭಿಮಾನಿ; ಅಣ್ಣಾವ್ರ ತೊಡೆಯ ಮೇಲಿರುವ

ನನ್ನ ಶೆಡ್ಯೂಲ್‌ಗೆ ತಕ್ಕಂತೆ ಕೆಲಸ ಮಾಡಿಕೊಳ್ಳುತ್ತೀನಿ. ಈಗ ನನ್ನ ಮಗಳಿಗೆ ಹಾಲು ಕುಡಿಸಿ ಮಲಗಿಸಿರುವೆ ಇನ್ನು ಒಂದು ಗಂಟೆಯಲ್ಲಿ ನಾನು ಹೊರಗಡೆ ಹೋಗಿ ಬರಬಹುದು ಅನ್ನೋ ಟೈಮ್ ಲೆಕ್ಕಾಚಾರ ಮಾಡಿ ನಾನು ದಿನ ಪ್ಲ್ಯಾನ್ ಮಾಡುತ್ತೀನಿ. ನನ್ನ ಬ್ಯಾಗಿನಲ್ಲಿ ಒಂದು ಸಣ್ಣ ಬುಕ್ ಇದೆ ಅದರಲ್ಲಿ ನನ್ನ ದಿನ ಹೇಗೆ ಇರಬೇಕು ಎಂದು ಬರೆದುಕೊಳ್ಳುತ್ತೀನಿ, 90% ಟೈಂ ಫಾಲೋ ಮಾಡುತ್ತೀನಿ. ರಾಜಾ ರಾಣಿ ರಿಯಾಲಿಟಿ ಶೋ ಜಡ್ಜ್‌ ಆಫರ್ ಬಂದಾಗ ನಾನು ಯೋಚನೆ ಮಾಡಲು ಶುರು ಮಾಡಿದೆ ಆದರೆ ಧೈರ್ಯ ಬರಲಿಲ್ಲ. ನನ್ನ ಗಂಡ ಯಶಸ್ ಆಫೀಸ್‌ಗೆ ಬಂದು ಆಕೆ ಮಗುವಿಗೆ ಫಾರ್ಮೂಲ ಹಾಲ ಅಭ್ಯಾಸ ಮಾಡಿಲ್ಲ ಅವಳ ಹಾರೈಕೆಗೆ ನಾನು ಅಡ್ಡ ಬರಲ್ಲ ಹೀಗಾಗಿ ನಮಗೆ ಸಣ್ಣ ಪುಟ್ಟ ವ್ಯವಸ್ಥೆಗಳು ಬೇಕು ಎಂದು ಕೇಳಿದ್ದಕ್ಕೆ ಕಲರ್ಸ್ ಕನ್ನಡದವರು ಯೋಚನೆ ಮಾಡದೆ ಒಪ್ಪಿಕೊಂಡರು ಎಂದು ಅದಿತಿ ಹೇಳಿದ್ದಾರೆ.

ಗಂಡು ಮಗುವಿಗೆ ಜನ್ಮ ನೀಡಿದ ಪ್ರಣಿತಾ ಶುಭಾಷ್; ಈ ಸಲ ಯಾರ ಸಲಹೆನೂ ತೆಗೆದುಕೊಳ್ಳಲ್ಲ ಎಂದ ನಟಿ!

ಮಗಳು ಹುಟ್ಟಿದ ನಾಲ್ಕು ತಿಂಗಳಿಗೆ ನನಗೆ ಆಫರ್ ಬಂತು. 4 ತಿಂಗಳು ಆಗುತ್ತಿದ್ದಂತೆ ನಾನು ಕೆಲಸ ಮಾಡಲು ಶುರು ಮಾಡಿದ್ದಕ್ಕೆ ಜನರು ನೆಗೆಟಿವ್ ಆಗಿ ಮಾತನಾಡಿದ್ದರು. ನಮ್ಮ ಮನೆ ಕಟ್ಟುವಾಗ ಗಾರೆ ಕೆಲಸ ಮಾಡುತ್ತಿದ್ದ ಹೆಣ್ಣುಮಗಳು ತನ್ನ ಎರಡು ತಿಂಗಳ ಮಗುವನ್ನು ಮರಕ್ಕೆ ಜೋಳಿ ಮಾಡಿ ಕಟ್ಟಿ ಪಕ್ಕದಲ್ಲಿ ಕೆಲಸ ಮಾಡುತ್ತಿದ್ದರು. ಅವರ ಧೈರ್ಯ ಮತ್ತು ಗಟ್ಟಿನದ ಮುಂದೆ ನಾನು ಏನೂ ಇಲ್ಲ ಎಂದಿದ್ದಾರೆ ಅದಿತಿ. 

Latest Videos
Follow Us:
Download App:
  • android
  • ios