Asianet Suvarna News Asianet Suvarna News

Ramachari serial ಕಣ್ಣಿಲ್ಲದ ಚಾರುವಿಗೀಗ ಚಾರಿಯೇ ಕಣ್ಣು, ಇದೇ ಪರ್ಮನೆಂಟಾ?

ರಾಮಾಚಾರಿ ಸೀರಿಯಲ್‌ನಲ್ಲಿ ಟಾಮ್‌ ಆಂಡ್ ಜೆರ್ರಿಯಂತಿದ್ದ ರಾಮಾಚಾರಿ ಚಾರುಲತಾ ಇದೀಗ ಒಂದೇ ದೋಣಿಯಲ್ಲಿ ಸಾಗುತ್ತಿದ್ದಾರೆ. ಕಣ್ಣಿಲ್ಲದ ಚಾರುವಿಗೆ ಚಾರಿಯೇ ಕಣ್ಣಾಗಿದ್ದಾನೆ. ಇದೇ ಪರ್ಮನೆಂಟಾ, ಚಾರುವಿಗಿನ್ನು ಕಣ್ಣೇ ಬರಲ್ವಾ ಅಂತ ವೀಕ್ಷಕರು ಕೇಳ್ತಿದ್ದಾರೆ.

Ramachari is the eye for the eyeless Charu in Ramachari serial
Author
First Published Jan 19, 2023, 4:15 PM IST

ರಾಮಾಚಾರಿ ಮತ್ತು ಚಾರುಲತಾ ಇವರಿಬ್ಬರೂ ರಾಮಾಚಾರಿ ಸೀರಿಯಲ್‌ನ ಲೀಡ್ ಪಾತ್ರಗಳು. ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಸೀರಿಯಲ್‌. ಇದಕ್ಕೆ ಆರಂಭದಲ್ಲಿ ದೊಡ್ಡ ಫ್ಯಾನ್ ಫಾಲೋವಿಂಗ್‌ ಇತ್ತು. ಆದರೆ ಈಗ ಯಾಕೋ ಈ ಸೀರಿಯಲ್‌ ಕಥೆ ಮೇಲೆ ಜನಕ್ಕೆ ಬೇಜಾರು ಬಂದ ಹಾಗಿದೆ. ಜನರ ಗಮನ ಸೆಳೆಯಲು ಸೀರಿಯಲ್‌ ಟೀಮ್‌ ಏನೇನೆಲ್ಲ ಸರ್ಕಸ್ ಮಾಡ್ತಿದೆ. ಈ ಹಿಂದೆಯೂ ವಿಎಫ್‌ಎಕ್ಸ್‌ನಲ್ಲಿ ಬಾಹುಬಲಿ ಸಿನಿಮಾ ರೇಂಜ್‌ಗೆ ಸೀನ್‌ ಕ್ರಿಯೇಟ್ ಮಾಡಿತ್ತು. ಆ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್‌ಗಳಾಗಿದ್ದವು. ಆ ಬಳಿಕವೂ ಏನೇನೆಲ್ಲ ಸಾಹಸಗಳು ನಡೆದವು. ಇದೀಗ ಚಾರುವಿನ ಕಣ್ಣುಗಳನ್ನೇ ಹೋಗುವಂತೆ ಮಾಡಿ ಆ ಮೂಲಕ ರಾಮಾಚಾರಿಯೇ ಚಾರುವಿಗೆ ಕಣ್ಣಾಗಿ ಮುನ್ನಡೆಸೋ ಎಪಿಸೋಡ್ ಪ್ರಸಾರ ಮಾಡ್ತಿದ್ದಾರೆ. ಆದರೆ ಯಾಕೋ ಗೊತ್ತಿಲ್ಲ, ಟಾಮ್‌ ಆಂಡ್ ಜೆರ್ರಿ ಥರ ಈ ಜೋಡಿಯನ್ನು ಇಷ್ಟ ಪಟ್ಟಿರೋ ಜನ ಯಾಕೋ ಈ ಹೊಸ ಅವತಾರ್‌ಗೆ ಇನ್ನೂ ಅಡ್ಜೆಸ್ಟ್ ಆದ ಹಾಗಿಲ್ಲ.

ರಾಮಾಚಾರಿ ಸೀರಿಯಲ್‌ನಲ್ಲಿ ಆರಂಭದಲ್ಲಿ ಚಾರು ಚಾರಿ ನಡುವೆ ಬರೀ ಭಿನ್ನಾಭಿಪ್ರಾಯಗಳೇ ಇದ್ದವು. ಇಬ್ಬರೂ ಉಲ್ಟಾ ಡೈರೆಕ್ಷನ್‌ನಲ್ಲೇ(Direction) ಸಾಗ್ತಾ ಇದ್ರು. ಆದ್ರೆ ಈಗ ಇಬ್ಬರ ಡೈರೆಕ್ಷನ್‌ ಒಂದೇ ಆದ ಹಾಗಿದೆ. ಈ ಮೊದಲು ಅತ್ತಿಗೆ ಅಪರ್ಣಾಗೆ ಸಾವಿಗೆ ಕಾರಣವಾದ ಚಾರು ಮೇಲೆ ರಾಮಾಚಾರಿಗೆ ತುಂಬಾ ಕೋಪ ಇತ್ತು. ಅದಕ್ಕೆ ಆಕೆಯನ್ನು ದೂರ ಇಟ್ಟಿದ್ದ. ಆದ್ರೆ ಚಾರುಗೆ ರಾಮಾಚಾರಿ ಮೇಲೆ ಲವ್ ಆಗಿದೆ. ರಾಮಾಚಾರಿ ಹಿಂದೆ ಬಿದ್ದು ಬಿದ್ದು ನನ್ನ ಪ್ರೀತಿ ಮಾಡು ಎಂದು ಕಾಡಲು ಶುರು ಮಾಡಿದ್ದಳು. ಆದರೆ ರಾಮಾಚಾರಿ ಇದಕ್ಕೆ ಸೊಪ್ಪೆ ಹಾಕುತ್ತಿರಲಿಲ್ಲ. ಆದರೆ ಇದೀಗ ರಾಮಾಚಾರಿ ಆವೇಶದಲ್ಲಿ ಮಾಡಿದ ಒಂದು ಕೆಲಸದಿಂದ ಚಾರು ಶಾಶ್ವತವಾಗಿ ಕಣ್ಣು(Eyes) ಕಳೆದುಕೊಂಡಿದ್ದಾಳೆ. ರಾಮಾಚಾರಿ ಕಣ್ಣೀರು ಹಾಕುತ್ತಿದ್ದಾನೆ. ತಾನೇ ಕಣ್ಣಾಗಿ ಅವಳನ್ನು ಕಾಯುತ್ತಿದ್ದಾನೆ.

ಸೀರಿಯಲ್‌ನಲ್ಲಿ ಇಬ್ರು ಹೆಂಡ್ರು ಇದ್ದೋರೆಲ್ಲಾ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡ್ರಾ?

ಚಾರುವಿಗೆ ಆಘಾತ ಆಗಬಾರದು ಅನ್ನೋ ಕಾರಣಕ್ಕೆ ಒಂದು ವಾರದ ಮಟ್ಟಿಗೆ ಕಣ್ಣು ಹೋಗಿದೆ ಎಂದು ಆಕೆಗೆ ಹೇಳಲಾಗಿತ್ತು. ಆಕೆ ಅದು ಸತ್ಯ(Truth) ಎಂದೇ ತಿಳಿದುಕೊಂಡಿರುತ್ತಾಳೆ. ಅದಕ್ಕೆ ಮನೆಯಲ್ಲಿ ಒಂದು ವಾರ ಬೇರೆ ಊರಿಗೆ ಹೋಗುವುದಾಗಿ ಹೇಳಿ, ರಾಮಾಚಾರಿ ಮನೆಯಲ್ಲಿ ಇರ್ತಾಳೆ. ರಾಮಾಚಾರಿ ಆಕೆಯನ್ನು ತುಂಬಾ ಕಾಳಜಿಯಿಂದ ನೋಡಿಕೊಂಡಿದ್ದಾನೆ. ಅದಕ್ಕಾಗಿ ಮನೆಯವರ ವಿರೋಧ ಕಟ್ಟಿಕೊಂಡಿದ್ದಾನೆ. ಇನ್ನೊಂದೆಡೆ ಚಾರುವಿಗೆ ಕಣ್ಣು ಬರಲು ಚಾರಿ ಏನು ಮಾಡಲೂ ಸಿದ್ಧ ಅನ್ನೋ ಹಾಗಿದ್ದಾನೆ. ಅಮೆರಿಕಾ ವೈದ್ಯರನ್ನು ಸಂಪರ್ಕ ಮಾಡಿ ಚಾರುಗೆ ಕಣ್ಣು ಕಾಣುವ ರೀತಿ ಮಾಡಿ ಎಂದು ಕೇಳಿಕೊಂಡಿದ್ದ, ಅವರು ಸಹ ಓಕೆ ಎಂದಿದ್ದರು. ಅದಕ್ಕೆ ರಾಮಾಚಾರಿ ಖುಷಿಯಾಗಿದ್ದ.

ಚಾರುಗೆ ಆಸ್ಪತ್ರೆ ಸೇರಿಸಿ, ಕಣ್ಣಿನ ಪರೀಕ್ಷೆ ಮಾಡಿದ್ದಾರೆ. ಆಪರೇಷನ್ ಮಾಡಿದ್ದಾರೆ. ಕಣ್ಣು ಬರುತ್ತೆ ಎಂದುಕೊಂಡು ಆಸೆಯಿಂದ ಕಾಯ್ತಾ ಇದ್ದಾರೆ. ಆದ್ರೆ ಬ್ಯಾಂಡೇಜ್ ತೆಗೆದ್ರೆ, ಚಾರುಗೆ ಏನೂ ಕಾಣ್ತ ಇಲ್ಲ. ಅಂದ್ರೆ ಚಾರು ಶಾಶ್ವತವಾಗಿ ಕಣ್ಣು ಕಳೆದುಕೊಂಡಳಾ? ವೈದ್ಯರ ಚಿಕಿತ್ಸೆ(Treatment) ಕೆಲಸ ಮಾಡಲಿಲ್ವಾ? ರಾಮಾಚಾರಿ ತನ್ನಿಂದ ಇದು ಆಗಿದ್ದು ಎಂದು ಕಣ್ಣೀರಿಡುತ್ತಿದ್ದಾನೆ.

ಸದ್ಯಕ್ಕೀಗ ಕಣ್ಣಿಲ್ಲದ ಚಾರುವಿಗೆ ಚಾರಿಯೇ ಕಣ್ಣಾಗಿದ್ದಾನೆ. ಆದರೆ ಆತನ ನಡೆ ನುಡಿಯಲ್ಲಿ ಆಕೆಯ ಬಗೆಗೆ ಕರುಣೆ ಕಾಣುತ್ತಿದೆಯೇ ಹೊರತು ಪ್ರೇಮ ಕಾಣುತ್ತಿಲ್ಲ. ಆತನಿಗೆ ಚಾರು ಮೇಲೆ ಪ್ರೀತಿ ಹುಟ್ಟಿರೋದು ಎಲ್ಲೂ ಕಾಣ್ತಾ ಇಲ್ಲ. ಆದರೆ ಆತನಿಗೆ ತನ್ನನ್ನು ಮದುವೆ ಆಗಲು ದುಂಬಾಲು ಬೀಳುತ್ತಿರುವ ಹುಡುಗಿ ಬಗ್ಗೆ ಅಸಹನೆ ಇದೆ. ಚಾರು ಬಗ್ಗೆ ಕಾಳಜಿ ಇದೆ. ಇದು ಎಲ್ಲಿ ಹೋಗಿ ಮುಟ್ಟುತ್ತೆ ಅನ್ನೋದು ಸದ್ಯದ ಕುತೂಹಲ.

ವಿದಾಯ ಹೇಳ್ತಿದೆ 'ಕನ್ನಡತಿ' ಧಾರಾವಾಹಿ; ಕ್ಲೈಮ್ಯಾಕ್ಸ್ ಶೂಟಿಂಗ್‌ನಲ್ಲಿ ಬಿಕ್ಕಿ ಬಿಕ್ಕಿ ಅತ್ತ ಕಲಾವಿದರು

Follow Us:
Download App:
  • android
  • ios