ಬಿಗ್‌ ಬಾಸ್ ಸೀಸನ್ 12ರ ಅತ್ಯಂತ ಕಿರಿಯ ಸ್ಪರ್ಧಿ ರಕ್ಷಿತಾ ಶೆಟ್ಟಿ, ತಮ್ಮ ದಿಟ್ಟ ಆಟದಿಂದ ಗಿಲ್ಲಿ ನಟನಂತಹ ಪ್ರಬಲ ಸ್ಪರ್ಧಿಗಳಿಗೆ ಸವಾಲೆಸೆದರು. ಮೊದಲ ದಿನವೇ ಎಲಿಮಿನೇಷನ್ ಅಂಚಿನಲ್ಲಿದ್ದರೂ, ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದು ಅವರ ಜರ್ನಿಯ ವಿಶೇಷ.

ಬಿಗ್‌ ಬಾಸ್​ ಸೀಸನ್​​ 12ರಲ್ಲಿ ಹಲವು ಪವಾಡಗಳು ನಡೆದಿವೆ. ನೀವು ಊಹಿಸದ ಘಟನೆಗಳಿಗೆ ಸಾಕ್ಷಿಯಾಗಿದೆ. ದೊಡ್ಮನೆಯ ದೊರೆ ಗಿಲ್ಲಿ ನಟ ಆಗಿರಬಹುದು. ಆದ್ರೆ ಗಿಲ್ಲಿಗೆ ಟಕ್ಕರ್ ಕೊಟ್ಟಿದ್ದು ಮೂರ್ತಿ ಚಿಕ್ಕದಾದ್ರು ಕೀರ್ತಿ ದೊಡ್ಡದು ಅಂತ ಕರೆಸಿಕೊಂಡ ರಕ್ಷಿತಾ ಶೆಟ್ಟಿ. ಹಾಗಾದ್ರೆ ರಕ್ಷಿತಾ ಬಿಗ್​ಬಾಸ್​ ಮನೆಯ ರನ್ನರ್ ಅಪ್​​ ಆಗಿದ್ದು ಹೇಗೆ ನೋಡೋಣ ಬನ್ನಿ.

ರಕ್ಷಿತಾ ಶೆಟ್ಟಿ. ಬಿಗ್‌ ಬಾಸ್​ ಸೀಸನ್ 12ರಲ್ಲಿ ಸ್ಪರ್ಧೆ ಮಾಡಿದ್ದ ಅತ್ಯಂತ ಕಿರಿಯ ಕಂಟೆಸ್ಟೆಂಟ್. ಆದ್ರೆ ವಯಸ್ಸಲ್ಲಿ ಕಿರಿಯಳಾದ್ರು ಈಗ ಕೀರ್ತಿಯಲ್ಲಿ ದೊಡ್ಡವಳಾಗಿದ್ದಾರೆ. ರಕ್ಷಿತಾ ಶೆಟ್ಟಿ ಅಂದ್ರೆ ಎಲ್ಲರ ಮನಸ್ಸು ಗೆದ್ದ ಮನೆ ಮಗಳಾಗಿದ್ದಾರೆ. ಸ್ಟ್ರಾಂಗ್​ ಕಂಟೆಸ್ಟೆಂಟ್​ಗಳಿಗೆ ಮಣ್ಣು ಮುಕ್ಕಿಸಿ ಮನೆಯಿಂದ ಹೊರ ಹಾಕಿದ ಸ್ಮಾಲ್ ಕಂಟೆಸ್ಟೆಂಟ್​ ರಕ್ಷಿತಾ.

ಗಿಲ್ಲಿಗೆ ಟಕ್ಕರ್ ಕೊಟ್ಟ ಕರಾವಳಿ ಕುಡಿ ರಕ್ಷಿತಾ..!

ರಕ್ಷಿತಾ ಬಿಗ್​ಬಾಸ್​​ ಆಟ ಇಡೀ ಬಿಗ್​​ಬಾಸ್​ ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಒಂಟಿ ಮನೆಗೆ ಬಂದ ದಿನದಿಂದಲೇ ಸಹ ಸ್ಪರ್ಧಿಗಳಿಗೆ ಕೌಂಟರ್​ ಅಟ್ಯಾಕ್ ಮಾಡುತ್ತಿದ್ದ ರಕ್ಷಿತಾ, ನೋಡ ನೋಡುತ್ತಿದ್ದಂತೆ ಗಿಲ್ಲಿ ನಟನಿಗೆ ಟಕ್ಕರ್ ಕೊಡೋ ಮಟ್ಟಕ್ಕೆ ಆಟ ಆಡಿದ್ರು. ಆ ಟಕ್ಕರ್ ಹೇಗಿತ್ತು ಅಂದ್ರೆ? ಗಿಲ್ಲಿಯ ಬಿಗ್​ ಬಾಸ್ ಕನಸನ್ನೇ ನುಚ್ಚು ನೂರು ಮಾಡೋ ಹಾಗಿತ್ತು.

ಅಶ್ವಿನಿ ಹಾಕಿದ್ದ ಚಾಲೆಂಜ್​​ನಲ್ಲಿ ಗೆದ್ದ ಕಿಲಾಡಿ!

ರಕ್ಷಿತಾ ಸಿಕ್ಕಾಪಟ್ಟೆ ಸ್ಟ್ರಾಂಗ್ ಕಂಟೆಸ್ಟೆಂಟ್ ಅಂತ ಗೊತ್ತಾಗಿದ್ದೇ ಅಶ್ವಿನಿ ಗೌಡ ಅವರಿಂದ. ಸೇರಿಗೆ ಸವಾ ಸೇರು ಅನ್ನೋ ಹಾಗೆ ಇಡೀ ಮನೆಯನ್ನೇ ನಡುಗಿಸುತ್ತಿದ್ದ ಅಶ್ವಿನಿ ಗೌಡಗೆ ನಿಮ್ಮನ್ನ ಮನೆಯಿಂದ ಹೊರ ಹಾಕೇ ನಾನು ಹೋಗುತ್ತೇನೆ ಅಂತ ಚಾಲೇಂಜ್ ಹಾಕಿದ್ದು ರಕ್ಷಿತಾ. ಈಗ ರನ್ನರ್‌ ಅಪ್‌ ಆಗಿ ಆ ಚಾಲೆಂಜ್‌ನಲ್ಲೂ ಗೆದ್ದಿದ್ದಾರೆ ಈ ಕರಾವಳಿ ಪುಟ್ಟಿ.

ರಕ್ಷಿತಾ ಶೆಟ್ಟಿ ಬಿಗ್​ಬಾಸ್​ ಜರ್ನಿಯೇ ಮಿರಾಕಲ್..!

ಯೆಸ್, ರಕ್ಷಿತಾ ಶೆಟ್ಟಿ ಮೂರ್ತಿ ಚಿಕ್ಕದಾದ್ರು ಕೀರ್ತಿ ದೊಡ್ಡದು. ಯಾಕಂದ್ರೆ ಈ ಕರಾವಳಿ ಹುಡುಗಿ ಬಿಗ್‌ ಬಾಸ್​ ಮನೆಗೆ ಎಂಟ್ರಿ ಕೊಟ್ಟ ದಿನವೇ ಸಹ ಸ್ಪರ್ಧಿಗಳು ರಕ್ಷಿತಾಗೆ ಖೆಡ್ಡಾ ತೋಡಿದ್ರು. ದೊಡ್ಮನೆಗೆ ಬಂದ ಮೊದಲ ದಿನವೇ ಎಲಿಮಿನೇಷನ್ ಮಾಡಿ ಮನೆಗೆ ಕಳುಹಿಸಿದ್ರು. ಆದ್ರೆ ಅದನ್ನೇ ಚಾಲೆಂಜ್ ಆಗಿ ತೆಗೆದುಕೊಂಡ ರಕ್ಷಿತಾ ಮಿರಾಕಲ್ ಎನ್ನುವಂತೆ ಈಗ ರನ್ನರ್‌ ​ಅಪ್​ ಆಗಿ ಹೊರ ಹೊಮ್ಮಿದ್ದಾರೆ.