ಬಿಗ್ ಬಾಸ್ ಸ್ಪರ್ಧಿ ರಕ್ಷಕ್ ಬುಲೆಟ್, ಭರ್ಜರಿ ಬ್ಯಾಚುಲರ್ಸ್ ವೇದಿಕೆಯಲ್ಲಿ ದರ್ಶನ್ ಅವರ ವಿವಾದಿತ ಡೈಲಾಗ್ ಅನ್ನು ಪುನರುಚ್ಚರಿಸುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ. ಚಾಮುಂಡೇಶ್ವರಿ ದೇವಿಯ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡಿದ್ದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮ್ಮ ಮಾತಿನ ಮೂಲಕವೇ ಒಂದಲ್ಲಾ ಒಂದು ವಿವಾದಕ್ಕೆ ಈಡಾಗಿತ್ತಿರುವ ಬಿಗ್‌ ಬಾಸ್‌ ಸ್ಪರ್ಧಿ ಹಾಗೂ ಬುಲೆಟ್‌ ಪ್ರಕಾಶ್‌ ಅವರ ಪುತ್ರ ರಕ್ಷಕ್‌ ಬುಲೆಟ್‌ ಈಗ ಮತ್ತೊಮ್ಮೆ ತಮ್ಮ ಉದ್ಧಟತನದ ಮಾತಿನಿಂದಲೇ ವಿವಾದಕ್ಕೆ ಆಹಾರವಾಗಿದ್ದಾರೆ. ದರ್ಶನ್‌ ತಮ್ಮ ಬುಲ್‌ಬುಲ್‌ ಸಿನಿಮಾದಲ್ಲಿ ಹೇಳಿದ್ದ ವಿವಾದಿತ ಡೈಲಾಗ್‌ಅನ್ನೇ ಮತ್ತೊಮ್ಮೆ ಕಿರುತೆರೆ ವೇದಿಕೆಯಲ್ಲಿ ಪುನರುಚ್ಚರಿಸುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಎಲ್ಲರಿಗೂ ಗೊತ್ತಿರುವ ಹಾಗೆ ಬಿಗ್‌ಬಾಸ್‌ನಲ್ಲಿ ತಮ್ಮ ಡೈಲಾಗ್‌ಗಳ ಮೂಲಕವೇ ಹೈಲೈಟ್‌ ಆಗಿದ್ದ ರಕ್ಷಕ್‌ ಬುಲೆಟ್‌ ಆಮೇಲೆ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಈಗ ಜೀ ಕನ್ನಡದ ಭರ್ಜರಿ ಬ್ಯಾಚುಲರ್ಸ್‌-2 ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ಅವರಿಗೆ ಇಲ್ಲಿ ರಮೋಲಾ ಜೋಡಿಯಾಗಿದ್ದಾರೆ.

ಇತ್ತೀಚೆಗೆ ಈ ವೇದಿಕೆಯಲ್ಲಿ ದರ್ಶನ್ ಹಾಗೂ ರಚಿತಾ ರಾಮ್‌ ನಟನೆಯ ಬುಲ್‌ ಬುಲ್‌ ಚಿತ್ರದ ದೃಶ್ಯವನ್ನು ಜಡ್ಜ್‌ ಆಗಿದ್ದ ರಚಿತಾ ರಾಮ್‌ ಎದುರೇ ಮರುಸೃಷ್ಟಿ ಮಾಡಿದ್ದಾರೆ. ಈ ದೃಶ್ಯ ನೋಡಿ ರಚಿತಾ ರಾಮ್‌ ಖುಷಿ ಪಟ್ಟು, ಸಿನಿಮಾ ನೋಡಿದ ಹಾಗೆಯೇ ಇತ್ತು ಎಂದು ಹೊಗಳಿದ್ದರು. ಆದರೆ, ಬುಲ್‌ಬುಲ್‌ ಸಿನಿಮಾದಲ್ಲಿದ್ದ ವಿವಾದಿತ ಡೈಲಾಗ್‌ಅನ್ನೇ ಮತ್ತೊಮ್ಮೆ ಹೇಳುವ ಮೂಲಕ ರಕ್ಷಕ್‌ ಬುಲೆಟ್‌ ವಿವಾದಕ್ಕೆ ಕಾರಣರಾಗಿದ್ದಾರೆ.

ಅಷ್ಟಕ್ಕೂ ಏನಿದು ಡೈಲಾಗ್‌: ಬುಲ್‌ಬುಲ್‌ ಚಿತ್ರದಲ್ಲಿದ ದರ್ಶನ್‌ ಹಾಗೂ ರಚಿತಾ ರಾಮ್‌ ಸ್ವಿಜರ್ಲೆಂಡ್‌ನಲ್ಲಿ ಭೇಟಿಯಾಗಿ ಮಾತುಕತೆಯಾಗುವ ದೃಶ್ಯವನ್ನು ಮರು ಸೃಷ್ಟಿಸಲಾಗಿತ್ತು. ರಕ್ಷಕ್‌ ಬುಲೆಟ್‌ ಮಾತನಾಡುತ್ತಾ, 'ನಾವು ನಿಮ್ಮವರೇ ಕಣ್ರಿ. ಮಂಡ್ಯದವರು. ನಿಮ್ಮನ್ನ ನೋಡ್ತಾ ಇದ್ದ ಹಾಗೆಯೇ ಅಂದುಕೊಂಡೆ. ತಾಯಿ ಚಾಮುಂಡೇಶ್ವರಿನೇ ಬೆಟ್ಟದಿಂದ ಇಳಿದುಬಿಟ್ಟು, ಸೀರೆ-ಒಡವೆ ಎಲ್ಲಾ ಬಿಚ್ಚಿಟ್ಟು, ಪ್ಯಾಂಟು-ಶರ್ಟು ಹಾಕಿಕೊಂಡು ಸ್ವಿಜರ್ಲೆಂಡ್‌ಅಲ್ಲಿ ಒಳ್ಳೇ ಟ್ರಿಪ್‌ ಹೊಡೀತಾ ಇದ್ದಾರೆ ಅಂತಾ..' ಎಂದು ಹೇಳಿದ್ದಾರೆ. ರಕ್ಷಕ್‌ ಬುಲೆಟ್‌ ಏನೋ ಜೋಶ್‌ನಲ್ಲಿ ಈ ಡೈಲಾಗ್‌ ಹೇಳಿದ್ದಾರೆ. ಆದರೆ, ಈ ಡೈಲಾಗ್‌ ಬುಲ್‌ ಬುಲ್‌ ಸಿನಿಮಾ ಸಂದರ್ಭದಲ್ಲಿಯೂ ವಿವಾದ ಸೃಷ್ಟಿಸಿತ್ತು.

ನಟಿ ರಮೋಲಾ ಮಾತಿನಿಂದ ವೇದಿಕೆ ಮೇಲೆ ರಕ್ಷಕ್‌ಗೆ ಮುಜುಗರ

'ತಾಯಿ ಚಾಮುಂಡೇಶ್ವರಿ ಸೀರೆ-ಒಡೆವೆ ಬಿಚ್ಚಿಟ್ಟು, ಪ್ಯಾಂಟು-ಶರ್ಟು ಹಾಕಿಕೊಂಡು..' ಅನ್ನೋ ಡೈಲಾಗ್‌ ಈಗ ವಿವಾದಕ್ಕೆ ಕಾರಣವಾಗಿದೆ. ಚಾಮುಂಡೇಶ್ವರಿ ದೇವಿಯ ಬಗ್ಗೆ ರಕ್ಷಕ್‌ ಬುಲೆಟ್‌ ಮಾತನಾಡಿದ್ದು ಸರಿಯೇ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಇದೇ ವಿಚಾರವನ್ನು ಬೇರೆ ಧರ್ಮದ ಬಗ್ಗೆ ಹೇಳಿದ್ದರೆ ಅವರು ಸುಮ್ಮನೆ ಇರ್ತಾ ಇದ್ರಾ ಎಂದೂ ಪ್ರಶ್ನೆ ಮಾಡಿದ್ದಾರೆ.

ಲೇಡಿ ಡಾನ್ ಯಶಸ್ವಿನಿ ಜೊತೆ ರಕ್ಷಕ್‌ ಬುಲೆಟ್‌

'ಸೋಕಾಲ್ಡ್‌ ಆರ್‌ಬಾಸ್‌ ಮೊದಲು ಕರೆಕ್ಟ್‌ ಆಗಿ ಮಾತನಾಡೋದನ್ನ ಕಲಿ. ನಿಮ್ಮ ಚೀಪ್‌ ತೆವಲಿಗೆ ತಾಯಿ ಚಾಮುಂಡೇಶ್ವರಿ ಹೆಸರು ಯಾಕೆ ತೆಗೀತಿಯಾ. ಯಾಕೋ ನಿನಗೂ ಸಹವಾಸ ದೋಷ ಅನುಸುತ್ತದೆ' ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ.
ಈ ಬಗ್ಗೆ ಸೂಕ್ತವಾದ ನೋಟಿಸ್‌ ಜಾರಿ ಮಾಡಿ ಅವರಿಂದ ಒಂದು ಕ್ಷಮಾಪಣೆ ಹೇಳಿಸಬಹುದೇ ಎಂದು ವ್ಯಕ್ತಿಯೊಬ್ಬರು ವಕೀಲರಿಗೆ ಟ್ಯಾಗ್‌ ಮಾಡಿ ಟ್ವೀಟ್‌ ಮಾಡಿದ್ದಾರೆ.

Scroll to load tweet…