Asianet Suvarna News Asianet Suvarna News

'ರಾಧಾ ರಮಣ' ನಟಿಯ ಹೊಸ ಮನೆಗೆ ಕಿರುತೆರೆಯ 'ಪ್ರೀತು-ಅದಿತಿ' ದಂಪತಿ ಭೇಟಿ: ಸ್ಪೆಷಲ್​ ಗಿಫ್ಟ್​!

ಈಚೆಗೆ ಮದುವೆಯಾದ ಕಿರುತೆರೆ ಜೋಡಿ ಪ್ರಿಯಾ ಮತ್ತು ಸಿದ್ದು ಮೂಲಿಮನಿಯವರಿಗೆ ತಮ್ಮ ನೂತನ ಮನೆಯಲ್ಲಿ ಮಾಲ್ಟ್​ ಗಿಫ್ಟ್​ ಕೊಟ್ಟಿದ್ದಾರೆ ರಾಧಾರಮಣ ನಟಿ ಅಶ್ವಿನಿ.
 

Radharaman actress Ashwini presents gift of malt to  television couple Priya and Siddu suc
Author
First Published Jul 13, 2023, 5:28 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗ್ತಿರೋ ಗಟ್ಟಿಮೇಳ (Gattimela) ಮತ್ತು ಪಾರು (Paaru) ಧಾರಾವಾಹಿ ಮನೆಮನೆಗಳನ್ನು ತಲುಪಿದೆ. ಗಟ್ಟಿಮೇಳ ಧಾರಾವಾಹಿಯ ಅದಿತಿ ಪಾತ್ರ ಹಾಗೂ ಪಾರು ಧಾರಾವಾಹಿಯ ಪ್ರೀತು ಪಾತ್ರವನ್ನು ಜನ ಮೆಚ್ಚಿಕೊಂಡಿದ್ದಾರೆ. ಕಳೆದ ಫೆಬ್ರುವರಿ 12ರಂದು ರಿಯಲ್​ ಲೈಫ್​ನಲ್ಲಿ ಈ ಎರಡು ಧಾರಾವಾಹಿಗಳ ಅದಿತಿ ಮತ್ತು ಪ್ರೀತು ಜೋಡಿ ಹಸೆಮಣೆಯೇರಿದ್ದು ಎಲ್ಲರಿಗೂ ತಿಳಿದದ್ದೇ. ಅದಿತಿ ಅರ್ಥಾತ್​  ನಟಿ ಪ್ರಿಯಾ ಜೆ ಆಚಾರ್ (Priya J Achar) ಹಾಗೂ ಪ್ರೀತು ಅರ್ಥಾತ್​  ಸಿದ್ದು ಮೂಲಿಮನಿ (Siddu Moolimani)  ದಾಂಪತ್ಯ ಬದುಕಿಗೆ ಕಾಲಿಟ್ಟು ಐದು ತಿಂಗಳು ಕಳೆದಿವೆ. ಅಂದಹಾಗೆ ನಟಿ ಪ್ರಿಯಾ ದಾವಣಗೆರೆಯವರು. ಪ್ರೀತು ಬೆಂಗಳೂರಿನವರು.  ಫೆ.12ರಂದು ಬೆಂಗಳೂರಿನಲ್ಲಿ ಮದುವೆ ಮಾಡಿಕೊಂಡಿದ್ದ ಜೋಡಿ, ಅದೇ 14ರಂದು ದಾವಣಗೆರೆಯಲ್ಲಿ ಆರತಕ್ಷತೆಯನ್ನು ಹಮ್ಮಿಕೊಂಡಿತ್ತು. 2-3 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಈ ಜೋಡಿ ಈಗ  ಹೊಸ ಜೀವನ ಆರಂಭಿಸಿದ್ದು ಹೊಸ ಲೈಫ್​ ಎಂಜಾಯ್​ ಮಾಡುತ್ತಿದ್ದಾರೆ. 

ಅದೇ ಇನ್ನೊಂದೆಡೆ ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ರಾಧಾ ರಮಣ (Radha Ramana) ಧಾರಾವಾಹಿಯ ಅವನಿ ಪಾತ್ರಧಾರಿಯನ್ನೂ ಜನರು ಮರೆತಿಲ್ಲ. ಈಕೆಯ ಅಸಲಿ ಹೆಸರು ಅಶ್ವಿನಿ. ಗಟ್ಟಿಮೇಳ ಧಾರಾವಾಹಿಯ ಕೆಲ ಕಂತುಗಳಲ್ಲಿ ಆರತಿ ಪಾತ್ರವನ್ನೂ ಇವರು ಮಾಡಿದ್ದರು. ಆದರೆ ರಾಧಾ ರಮಣದಲ್ಲಿ ರಮಣನ ತಂಗಿ ಅವನಿಯ ಇನ್ನೋಸೆಂಟ್​  ಪಾತ್ರ ಇವರಿಗೆ ಸಕತ್​ ಕೀರ್ತಿ ತಂದುಕೊಟ್ಟಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅಶ್ವಿನಿ ಸಕತ್​ ಬಿಜಿಯಾಗಿದ್ದಾರೆ. ಹಲವಾರು ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಅದರಲ್ಲಿಯೂ ಅಡುಗೆಗೆ ಸಂಬಂಧಿಸಿದ ವಿಡಿಯೋಗಳನ್ನೂ ಇವರು ಶೇರ್​ ಮಾಡುತ್ತಾರೆ. ಇದರಲ್ಲಿ ಮುಖ್ಯವಾಗಿರುವುದು ಮಾಲ್ಟ್​ ಬಿಜಿನೆಸ್​. ಸಣ್ಣ ಪ್ರಮಾಣದಲ್ಲಿ ಮಾಲ್ಟ್​ ಬಿಸಿನೆಸ್​ ಶುರು ಮಾಡಿರುವ ಅಶ್ವಿನಿಯವರು ಅದರ ಬಗ್ಗೆ ಒಂದು ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ.

ಪಟಪಟ ಮಾತನಾಡುವ ಸಿಕ್ರೆ ಸಾಕಾ? ಮದ್ವೆಯಾಗುವ ಹುಡುಗನ ಬಗ್ಗೆ ಅನುಶ್ರೀ ಹೇಳಿದ್ದೇನು?

ಹೊಸ ಮನೆಗೆ ಎಂಟ್ರಿ ಕೊಟ್ಟು ಅದರಲ್ಲಿ ಹಾಲು ಉಕ್ಕಿಸುವ ದೃಶ್ಯವನ್ನು ಯೂಟ್ಯೂಬ್​ನಲ್ಲಿ (Youtube) ಅಪ್​ಲೋಡ್​  ಮಾಡಿರುವ ನಟಿ ಅಶ್ವಿನಿ, ತಾವು ಹೊಸ ಮನೆ ಕಟ್ಟಿಸಿದ್ದೇಕೆ ಎಂಬುದನ್ನು ತಿಳಿಸಿದ್ದಾರೆ. ಮಾಲ್ಟ್​ ಬಿಜಿನೆಸ್​ (Malt Business) ಶುರು ಮಾಡಿರುವ ಕಾರಣ, ಇದಕ್ಕೆ ಅಗತ್ಯವಾಗಿ ಬೇಕಾದ ಬೇಳೆ-ಕಾಳುಗಳನ್ನು ಹುರಿದು ಚೆನ್ನಾಗಿ ಮಿಶ್ರಣ ಮಾಡಲು ಹಾಗೂ ಮಾಲ್ಟ್​ ಮಾಡುವ ಮುನ್ನ ಮಾಡಬೇಕಾಗಿರುವ ಅಗತ್ಯ ಪ್ರಕ್ರಿಯೆಗಳಿಗೆ ಜಾಗದ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ತಾವು ಹೊಸ ಮನೆಗೆ ಪ್ರವೇಶ ಪಡೆದಿರುವುದಾಗಿ ನಟಿ ಹೇಳಿಕೊಂಡಿದ್ದಾರೆ. ಇದೇ ವಿಡಿಯೋದಲ್ಲಿ ತಮ್ಮ ಮಾಲ್ಟ್​ ಬಿಜಿನೆಸ್​ನ ಪ್ರಮೋಟ್​ ಕೂಡ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಪ್ರಿಯಾ ಮತ್ತು ಸಿದ್ದು (ಅದಿತಿ ಮತ್ತು ಪ್ರೀತು) ಜೋಡಿ ಇವರ ಹೊಸ ಮನೆಗೆ ಭೇಟಿ ಕೊಟ್ಟಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಇದೇ ಮೊದಲ ಬಾರಿಗೆ ತಮ್ಮ ಮನೆಗೆ ಭೇಟಿ ಕೊಟ್ಟ ಜೋಡಿಗೆ ಯಾವ ಗಿಫ್ಟ್​ ಕೊಡುವುದು ಎಂದು ಯೋಚಿಸಿದ ಅಶ್ವಿನಿಯವರು ಪ್ರಿಯಾ ಅವರಿಗೆ ಬಾಗೀನ ಕೊಟ್ಟು, ಸಿದ್ದು ಅವರಿಗೆ ಮಾಲ್ಟ್​ ಗಿಫ್ಟ್​ ಮಾಡಿದ್ದಾರೆ. ಸಿದ್ದು ಅವರು ಜಿಮ್​ನಲ್ಲಿ ವರ್ಕ್​ಔಟ್​ (Gym Workout) ಮಾಡುವ ಹಿನ್ನೆಲೆಯಲ್ಲಿ, ಅವರಿಗೆ ಈ ಮಾಲ್ಟ್​ ಅಗತ್ಯವಾಗಿ ಬೇಕಾಗುತ್ತದೆ ಎಂದಿದ್ದಾರೆ. ಇದರ ವಿಡಿಯೋವನ್ನು ಅವರು ಶೇರ್​ ಮಾಡಿಕೊಂಡಿದ್ದಾರೆ.  

Chaya Singh: 'ಅಮೃತಧಾರೆ' ಭೂಮಿಕಾ ರಿಯಲ್​ ಲೈಫ್​ ಪತಿ ಯಾರ್​ ಗೊತ್ತಾ?

ಅಂದಹಾಗೆ ಅಡುಗೆ ಮಾಡೋದು ಅಂದ್ರೆ ಅಶ್ವಿನಿಗೆ ತುಂಬ ಇಷ್ಟ ಎಂದು ಹೇಳಿದ್ದಾರೆ. ಇದರ ಜೊತೆಗೆ ಆರೋಗ್ಯದ ಕಾಳಜಿ ವಹಿಸಲೇಬೇಕು ಎನ್ನುವ ನಟಿ, ತಮ್ಮ  ಆರೋಗ್ಯದ ಗುಟ್ಟನ್ನೂ ಈ ಹಿಂದೆ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದರು.  ನಾನು ಪ್ರತಿನಿತ್ಯ ಹೆಚ್ಚು ಬಿಸಿನೀರು ಕುಡಿಯುತ್ತೇನೆ, ಯೋಗ, ವ್ಯಾಯಾಮ ಮಾಡುತ್ತೇನೆ. ಮೊಬೈಲ್ ಮಾತ್ರ ತುಂಬ ಕಡಿಮೆ ಬಳಸುತ್ತಿದ್ದೇನೆ ಎಂದಿದ್ದರು.  ಅನ್ನ ಹೆಚ್ಚು ಊಟ ಮಾಡೋದಿಲ್ಲ. ತರಕಾರಿ-ಹಣ್ಣು ಜಾಸ್ತಿ ತಿನ್ನುತ್ತೇನೆ. ಮುಖಕ್ಕೆ ಹೆಚ್ಚು ಬಿಸಿಗಾಳಿ ತೆಗೆದುಕೊಳ್ಳುತ್ತೇನೆ. ಮನೆಯವರ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದೇನೆ ಎಂದೂ ತಿಳಿಸಿದ್ದರು. 

 

Follow Us:
Download App:
  • android
  • ios