Actress Kavya Gowda Controversy: ರಾಧಾ ರಮಣ ಧಾರಾವಾಹಿ ನಟಿ ಕಾವ್ಯಾ ಗೌಡ ಮನೆಯ ಕಲಹ ಬೀದಿಗೆ ಬಿದ್ದಿದೆ. ಕಾವ್ಯಾ ಗೌಡ ಅವರು ರವಿಕುಮಾರ್ ವಿರುದ್ಧ ದೂರು ನೀಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ನಟಿ ಕಾವ್ಯಾ ಗೌಡ ( Kavya Gowda ) ಮನೆ ಕಲಹ ಬೀದಿಗೆ ಬಿದ್ದಿದೆ. ಈ ಮನೆ ಕಲಹದ ಬಗ್ಗೆ ರವಿಕುಮಾರ್ ಅವರು ಮಾತನಾಡಿದ್ದಾರೆ. ರವಿಕುಮಾರ್ ಅವರು ಹಲ್ಲೆ ಮಾಡಿದರು, ರೇ*ಪ್ ಮಾಡ್ತೀವಿ ಎಂದು ಬೆದರಿಕೆ ಹಾಕಿದರು ಎಂದು ಕಾವ್ಯಾ ಆರೋಪ ಮಾಡಿದ್ದರು. ಈಗ ಈ ಬಗ್ಗೆ ರವಿಕುಮಾರ್ ಅವರು ಎಷಿಯಾನೆಟ್ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.
ದೂರು-ಪ್ರತಿದೂರು ದಾಖಲು
ಕಾವ್ಯಾ ಗೌಡ ಅವರ ಮನೆ ಕೆ ಆರ್ ಪುರಂನಲ್ಲಿದೆ. ಸೋಮಶೇಖರ್ ಎನ್ನುವ ಉದ್ಯಮಿಯನ್ನು ಕಾವ್ಯಾ ಮದುವೆ ಆಗಿದ್ದಾರೆ. ಸೋಮಶೇಖರ್ ಅಣ್ಣ ನಂದೀಶ್, ಅತ್ತಿಗೆ ಪ್ರೇಮಾ ಕೂಡ ಅಲ್ಲಿಯೇ ವಾಸವಿದ್ದಾರೆ. ಜನವರಿ 26ರಂದು ನಡೆದ ಜಗಳದಲ್ಲಿ ಪ್ರೇಮಾ ತಂಗಿ, ತಂದೆ ರವಿಕುಮಾರ್ ಎಂಟ್ರಿಯಾಗಿದೆ. ಈಗ ಕಾವ್ಯಾ ಅವರು ರವಿಕುಮಾರ್, ಪ್ರಿಯಾ, ಪ್ರೇಮಾ ವಿರುದ್ಧ ದೂರು ನೀಡಿದ್ದಾರೆ. ಪ್ರೇಮಾ ಅವರು ಕಾವ್ಯಾ ಗೌಡ ವಿರುದ್ಧ ದೂರು ನೀಡಿದ್ದಾರೆ.
ರವಿಕುಮಾರ್ ಹೇಳಿದ್ದೇನು?
ರವಿಕುಮಾರ್ ಅವರು, “ಆಸ್ತಿಗೋಸ್ಕರ ಈ ಕಲಹ ನಡೆದಿದೆ. ನನ್ನ ಮಗಳನ್ನು ಹೊರಗಡೆ ಹಾಕಬೇಕು ಎಂದು ಈ ರೀತಿ ಮಾಡಲಾಗಿದೆ. ನಮಗೆ ಮನೆ ಬಿಟ್ಟುಕೊಡಿ ಎಂದು ಕಾವ್ಯಾ ಗೌಡ ಗಲಾಟೆ ಮಾಡಿದ್ದಾರೆ. ನನ್ನ ಮಗಳು ಮನೆಯಲ್ಲಿ ಊಟ ಮಾಡುವಾಗ ಕಾವ್ಯಾ. ರೇವಣ್ಣ ಅವರು ಕಾರ್ಪೋರೇಟರ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದರು. ಕಾವ್ಯಾ ಮದುವೆ ಆದಾಗಿನಿಂದಲೂ ಈ ಜಗಳ ನಡೆಯುತ್ತಿದೆ” ಎಂದು ಹೇಳಿದ್ದಾರೆ.
ಅರಮನೆ ಥರ ಮನೆ ಕಟ್ಟಿದ್ದಾರೆ
ರೇವಣ್ಣ ಅವರು ಒಂದು ಫ್ಲೋರ್‌ನಲ್ಲಿದ್ದರು. ಸೋಮಶೇಖರ್, ನನ್ನ ಮಗಳ ಗಂಡ ಕೂಡ ಇನ್ನೊಂದು ಫ್ಲೋರ್‌ನಲ್ಲಿದ್ದರು. ನಂದೀಶ್ ಅವರಿಗೆ ಶೀಟ್ ಮನೆ ಕಟ್ಟಿಕೊಡಲಾಗುತ್ತಿದೆ. ಈ ಮನೆ ಕೆಲಸ ಮುಗಿಯುವವರೆಗೂ ಇಲ್ಲಿಯೇ ಇರಬೇಕು ಎಂದು ರೇವಣ್ಣ ಹೇಳಿದ್ದರು. ಅಂದಹಾಗೆ ಇವರ ಅಡುಗೆ ಎಲ್ಲವೂ ಸಪರೇಟ್ ಆಗಿ ನಡೆಯುತ್ತಿತ್ತು. 16 ವರ್ಷದಿಂದ ಮನೆ ಕೆಲಸ ನಡೆಯುತ್ತಿದ್ದು, ಅರಮನೆ ಥರ ಮನೆ ಕಟ್ಟಿದ್ದಾರೆ. ಈ ಮನೆ 100 ಕೋಟಿ ರೂಪಾಯಿ ಮೀರಿದೆ. ನನ್ನ ಅಳಿಯ ಕುಳ್ಳ ಎಂದು ಕಾವ್ಯಾ ಟ್ರಿಗರ್ ಮಾಡಿದ್ದಾರೆ. ಈ ಜಗಳ ನಿನ್ನೆ ಮೊನ್ನೆಯದಲ್ಲ, ಮೂರು ವರ್ಷದಿಂದಲೂ ನಡೆಯುತ್ತಿದೆ. ಅದಾದ ನಂತರ ಸೋಮಶೇಖರ್ ಅವರು ನನ್ನ ಚಿಕ್ಕ ಮಗಳ ಮೇಲೆ ಹಲ್ಲೆ ಮಾಡಿದ್ದಾರೆ. ಆಮೇಲೆ ಅವರೇ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ" ಎಂದು ರವಿಕುಮಾರ್ ಅವರು ಎಷಿಯಾನೆಟ್ ಸುವರ್ಣ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.


