Asianet Suvarna News Asianet Suvarna News

ಸೀರೆಯಲ್ಲಿ ಅಮೃತಧಾರೆ ಮಲ್ಲಿ ರ್‍ಯಾಂಪ್‌ವಾಕ್‌: ಗಂಡನ ಮೇಲೆ ಕಣ್ಣಿಡಮ್ಮಾ ಅಂತಿರೋ ಅಭಿಮಾನಿಗಳು!

ಅಮೃತಧಾರೆ ಸೀರಿಯಲ್‌ನಲ್ಲಿ ಕೆಲಸದಾಕೆ ಮಲ್ಲಿ ಪಾತ್ರ ಮಾಡ್ತಿರೋ ರಾಧಾ ಭಗವತಿ ಸೀರೆಯಲ್ಲಿ ರ್‍ಯಾಂಪ್‌ವಾಕ್‌ ಮಾಡಿದ್ದು, ನೆಟ್ಟಿಗರು ಏನು ಹೇಳ್ತಿದ್ದಾರೆ ನೋಡಿ...
 

Radha Bhagwati who playing the role of Malli in Amrutadhare serial walked the ramp in a saree suc
Author
First Published Sep 1, 2024, 4:45 PM IST | Last Updated Sep 1, 2024, 4:48 PM IST

ಮಲ್ಲಿ ಎಂದಾಕ್ಷಣ ಸೀರಿಯಲ್‌ ಪ್ರೇಮಿಗಳಿಗೆ ನೆನಪಾಗೋದು,  ಅಮೃತಧಾರೆ ಸೀರಿಯಲ್​ ಪೆದ್ದು ಮಲ್ಲಿ. ಗಂಡನ ಕುತಂತ್ರವನ್ನೂ ಅರಿಯದ ಮುಗ್ಧ ಹೆಣ್ಣು. ಇವರ ನಿಜವಾದ ಹೆಸರು ರಾಧಾ ಭಗವತಿ. ಅಮೃತಧಾರೆ ಸೀರಿಯಲ್​ನಲ್ಲಿ ಕೆಲಸಗಾರಳಾಗಿ ಸೇರಿಕೊಂಡು ಮನೆಯ ಮಾಲೀಕನ ಪುತ್ರನ ಮೋಸದ ಜಾಲಕ್ಕೆ ಬಿದ್ದು ಗರ್ಭಿಣಿಯಾಗಿದ್ದಾಳೆ ಈ ಮಲ್ಲಿ. ಆದರೆ, ನಾಯಕಿ ಭೂಮಿಕಾಳ ಸಮಯ ಪ್ರಜ್ಞೆಯಿಂದಾಗಿ ಈಗ ಮನೆಯ ಯಜಮಾನಿಯಾಗಿದ್ದಾಳೆ. ಆದರೆ ಆಕೆಯನ್ನು  ಕೊಲ್ಲಲು ಪ್ರತಿಹಂತವೂ ಗಂಡ ಮತ್ತು ಅತ್ತೆ ಸಂಚು ರೂಪಿಸುತ್ತಲೇ ಇದ್ದಾರೆ. ಮಲ್ಲಿಗೆ ಆಧಾರವಾಗಿ ನಿಂತಿದ್ದಾಳೆ ಭೂಮಿಕಾ. ಈ ರೀತಿ ಪೆದ್ದು ಪೆದ್ದು ಪಾತ್ರದಲ್ಲಿ ಸೈ ಎನಿಸಿಕೊಂಡಿರುವ ಮಲ್ಲಿಯ ನಿಜವಾದ ಹೆಸರು ರಾಧಾ ಭಗವತಿ. ಸೋಷಿಯಲ್‌ ಮೀಡಿಯಾದಲ್ಲಿ ಸಕತ್‌ ಆಕ್ಟೀವ್‌ ಆಗಿರುವ ಮಲ್ಲಿ ಕ್ಯೂಟ್‌ ಫೋಟೋಗಳನ್ನು ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ನಟಿ,  ಸುಂದರವಾಗಿ ಹಾಡಿರುವ ವಿಡಿಯೋ ಶೇರ್‍ ಮಾಡಿಕೊಂಡಿದ್ದರು. ಇವರ ಅದ್ಭುತ ಕಂಠಕ್ಕೆ ಅಭಿಮಾನಿಗಳು ಮನಸೋತಿದ್ದರು. 

 

ಇದೀಗ ರಾಧಾ ಅವರು ಮಾದಕ ನೋಟದೊಂದಿಗೆ  ಸೀರೆಯಲ್ಲಿ ರ್‍ಯಾಂಪ್‌ವಾಕ್‌ ಮಾಡಿದ್ದಾರೆ. ಇದಕ್ಕೆ ಥಹರೇವಾರಿ ಕಮೆಂಟ್ಸ್​ ಸುರಿಮಳೆಯಾಗಿದೆ. ನಿಮ್ಮ ನಟನೆಯಷ್ಟೇ ಕ್ಯೂಟ್‌ ಆಗಿದೆ ನಿಮ್ಮ ಈ ಸೌಂದರ್ಯ ಎನ್ನುತ್ತಿದ್ದಾರೆ ಫ್ಯಾನ್ಸ್​. ಇನ್ನು ಸೀರಿಯಲ್‌ನಲ್ಲಿ ಈಕೆ ಗರ್ಭಿಣಿಯಾಗಿರೋ ಕಾರಣ, ಹುಷಾರ್‍ ಕಣಮ್ಮಾ, ನಿಧಾನ ಹೋಗು ಅಂತಿದ್ದರೆ, ಮತ್ತೆ ಕೆಲವು ಹೊಟ್ಟೆ ಎಲ್ಲಿ ಬಿಟ್ಟು ಬಂದ್ಯಮ್ಮಾ ಕೇಳ್ತಿದ್ದಾರೆ. ನಿಮ್ಮ ಕಣ್ಣೋಟದಲ್ಲಿಯೇ ಕೊಲ್ಲಬೇಡಮ್ಮಾ ಎಂದು ಹಲವರು ಕಮೆಂಟ್​ ಮಾಡಿದ್ದಾರೆ.  ಅದೇ ರೀತಿ ಕೆಲವರು ನಿಮ್ಮ ಗಂಡ (ಜೈದೇವ) ಒಳ್ಳೆಯವನಲ್ಲ, ಸ್ವಲ್ಪ ಎಚ್ಚರಿಕೆಯಿಂದ ಇರಿ ಎಂದೂ ಹೇಳುತ್ತಿದ್ದಾರೆ. ಅಲ್ಲಿ ಗಂಡ ಬೇರೊಬ್ಬಳ ಹಿಂದೆ ಹೋಗುತ್ತಿದ್ದಾನೆ, ಕಣ್ಣಿಡು ಎಂದು ಕೆಲವರು ಹೇಳ್ತಿದ್ದಾರೆ.
ಅಂದಹಾಗೆ, ರಾಮ್​ಜಿ ನಿರ್ದೇಶನದ ‘ರಾಮಾಚಾರಿ’ ಧಾರಾವಾಹಿಯಲ್ಲಿ ಸಹೋದರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಾಧಾ ಅವರು ಇದೀಗ ಮಲ್ಲಿಯ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಕಿರುತೆರೆಯಿಂದ ಕಳೆದ ವರ್ಷ ರಿಲೀಸ್​ ಆದ ವಸಂತಕಾಲದ ಹೂವುಗಳು ಚಿತ್ರದಲ್ಲಿ ಇವರು ಅಭಿನಯಿಸುವ ಮೂಲಕ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟರು. ವಿಜಯಪುರದ ರಾಧಾ ಅವರು, ಈ ಚಿತ್ರದಲ್ಲಿ  ಸುಮಾ ಹೆಸರಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  

ದೀಪಿಕಾ ಡೆಲಿವರಿ ಡೇಟ್‌ ರಿವೀಲ್‌! ಮಗುವಿಗೂ- ನಟಿಯ ಎಕ್ಸ್‌ ರಣಬೀರ್‌ ಕಪೂರ್‌ಗೂ ಇದೆಂಥ ನಂಟು!

ಇದಾದ ಬಳಿಕ ಈಗ ಮತ್ತೆ ಕಿರುತೆರೆಗೆ ಪ್ರವೇಶ ಪಡೆದು ಅಮೃತಧಾರೆಯಲ್ಲಿ ನಟಿಸುತ್ತಿದ್ದಾರೆ. ಮಾಡೆಲ್ ಕೂಡ ಆಗಿರುವ ಇವರಿಗೆ  ಚಿತ್ರರಂಗದಲ್ಲಿ   ದೊಡ್ಡ ಹೆಸರು ಮಾಡುವ ಆಸೆ ಎಂದಿದ್ದಾರೆ. ಎಂಥ ಪಾತ್ರ ಕೊಟ್ಟರೂ ಸಲೀಸಾಗಿ ಮಾಡುವ ಇವರಿಗೆ ಉಜ್ವಲ ಭವಿಷ್ಯವಿದೆ ಎನ್ನುವುದು ಸಿನಿ ಪ್ರಿಯರ ಅಭಿಮತ. 
 ರಾಧಾ ಅವರು ನಟಿ ರಾಧಾ ಭಗವತಿ ಅವರು ‘ಆ 90 ದಿನಗಳು’, ‘ವಸಂತ ಕಾಲದ ಹೂಗಳು’, ‘ಅಪಾಯವಿದೆ ಎಚ್ಚರಿಕೆ’ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯಲ್ಲಿಯೂ ನಟಿಸಿದ್ದರು. ಇನ್ನು ‘ಬಾನಿಗೊಂದು ತಾರೆ’ ಮ್ಯೂಸಿಕ್ ವಿಡಿಯೋದಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ. ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ 'ಅಪಾಯವಿದೆ ಎಚ್ಚರಿಕೆ' ಸಿನಿಮಾದಲ್ಲಿ ನಟಿಸಿದ್ದಾರೆ.  ಇದರ ಜೊತೆಗೆ ಎಸ್. ನಾರಾಯಣ್ ನಿರ್ದೇಶನದ 'ಒಂದ್ಸಲ ಮೀಟ್ ಮಾಡೋಣ' ಸಿನಿಮಾದಲ್ಲಿ ನಾಯಕನ ತಂಗಿಯಾಗಿ ನಟಿಸುತ್ತಿದ್ದಾರೆ. ಸದ್ಯ ಒಂದಾದ ಮೇಲೆ ಒಂದರಂತೆ ಅವಕಾಶಗಳನ್ನು ಪಡೆಯುತ್ತಿದ್ದಾರೆ.


ಅಂದಹಾಗೆ ರಾಧಾ ಅವರ ಕುಟುಂಬದವೇ ಕಲಾವಿದರ ಕುಟುಂಬ. ಇವರ ಅಜ್ಜ  ರಂಗಭೂಮಿ ಕಲಾವಿದರು. ಇದರ ಜೊತೆಗೆ ಸವರು ಹರಿಕಥೆ ದಾಸರೂ ಕೂಡಾ ಆಗಿದ್ದರು. ರಾಧಾ ಅವರ ತಾಯಿಯೂ  ಜನಪದ ಗೀತೆಗಳಿಗೆ ದನಿಯಾದವರು.  ಮನೆಯಲ್ಲಿ ಕಲೆಯ ವಾತಾವರಣವಿದ್ದ ಕಾರಣದಿಂದಲೋ ಏನೋ ರಾಧಾ ಭಗವತಿ ಅವರಿಗೆ ನಟನೆಯತ್ತ ಎಳೆ ವಯಸ್ಸಿನಲ್ಲಿಯೇ ಆಸಕ್ತಿ ಮೂಡಿದೆ. ಕಿರುತೆರೆ, ಹಿರಿತೆರೆ, ಮ್ಯೂಸಿಕ್ ಆಲ್ಬಂ ಮಾತ್ರವಲ್ಲದೇ ರಾಧಾ ಅವರು, ಹಿನ್ನೆಲೆ ಗಾಯಕಿಯೂ ಹೌದು. ಈಗಾಗಲೇ ಎರಡು ಸಿನಿಮಾಗಳಲ್ಲಿ ಹಾಡಿರುವ ಈಕೆ ಕಂಠದಾನಕ್ಕೂ ಸೈ. 'ಮದುಮಗಳು' ಧಾರಾವಾಹಿಯಲ್ಲಿನ ನಾಯಕಿಯ ಪಾತ್ರಕ್ಕೆ ಕಂಠದಾನ ಮಾಡುತ್ತಿರುವ ರಾಧಾ ಅವರಿಗೆ ಕಲೆ ಎಂಬುದು ರಕ್ತಗತವಾಗಿಯೇ ಒಲಿದು ಬಂದಿದೆ.

ಎಐ ತಂತ್ರಜ್ಞಾನದಲ್ಲಿ ಕಾಣಿಸಿಕೊಂಡ ನಟ ಸುಧೀರ್‌! ಕಳೆದುಕೊಂಡ ಅಪ್ಪನನ್ನು ನೋಡಿ ತರುಣ್‌ ಕಣ್ಣೀರು

Latest Videos
Follow Us:
Download App:
  • android
  • ios