ನಟಿ ದೀಪಿಕಾ ಪಡುಕೋಣೆ ಅವರ ಡೆಲಿವರಿ ಡೇಟ್‌ ರಿವೀಲ್‌ ಆಗಿದೆ. ಮಗುವಿಗೂ ದೀಪಿಕಾ ಮಾಜಿ ಬಾಯ್‌ಫ್ರೆಂಡ್‌ ರಣಬೀರ್‌ ಕಪೂರ್‌ಗೂ ಇದೆಂಥ ನಂಟು!  

ದೀಪಿಕಾ ಪಡುಕೋಣೆಗೆ ಮಗುವಾಗಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಆದರೆ ಇವರ ಹೊಟ್ಟೆಯ ಬಗೆಗೆ ಮಾತ್ರ ಇನ್ನೂ ಚರ್ಚೆಗಳು ನಡೆಯುತ್ತಲೇ ಇವೆ. ದಿನಕ್ಕೊಂದರಂತೆ ನಟಿಯ ಹೊಟ್ಟೆ ಕಾಣಿಸುತ್ತಿರುವ ಕಾರಣ, ನಟಿ ಗರ್ಭಿಣಿಯೇ ಅಲ್ಲ ಎಂಬ ಬಗ್ಗೆ ಹೇಳಲಾಗುತ್ತಿದೆ. ಮುಂದಿನ ತಿಂಗಳು ಡೆಲವರಿ ಎಂದರೆ ಈಗ ದೀಪಿಕಾ ತುಂಬು ಗರ್ಭಿಣಿಯಾಗಿರಬೇಕು. ಆದರೆ ಇಲ್ಲಿಯವರೆಗೂ ಅವರ ಹೊಟ್ಟೆಯ ಸೈಜ್‌ನಲ್ಲಿ ವ್ಯತ್ಯಾಸ ಆಗ್ತಿಲ್ಲ, ಅದರ ಶೇಪ್‌ ಮಾತ್ರ ಅಡ್ಡಾದಿಡ್ಡಿ ಆಗುತ್ತಿದೆ ಎನ್ನುವುದು ನೆಟ್ಟಿಗರ ಅಭಿಮತ. ಅದೇನೇ ಇದ್ದರೂ ನಟಿಯ ಡೆಲವರಿ ಡೇಟ್‌ ಫಿಕ್ಸ್‌ ಆಗಿದೆ. ಇದರ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಇದಾಗಲೇ ಸಾಕಷ್ಟು ಚರ್ಚೆ ಕೂಡ ನಡೆಯುತ್ತಿದೆ. 

ಮಗು ಹುಟ್ಟುವ ದಿನಕ್ಕೂ, ರಣಬೀರ್‌ ಕಪೂರ್‌ಗೂ ವಿಶೇಷ ಸಂಬಂಧವಿದ್ದು, ಇದರ ಬಗ್ಗೆ ಇದೀಗ ರಿವೀಲ್‌ ಆಗಿದೆ. ಅಂದಹಾಗೆ ದೀಪಿಕಾ ಅವರ ಮಗು ಸೆಪ್ಟೆಂಬರ್‌ 28ರಂದು ಮುಂಬೈನಲ್ಲಿ ಜನಿಸಲಿದೆ ಎಂದು ಹೇಳಲಾಗುತ್ತಿದೆ. ಈ ಹುಟ್ಟಿದ ದಿನಕ್ಕೂ ರಣಬೀರ್‌ ಕಪೂರ್‌ಗೂ ಏನಪ್ಪಾ ಸಂಬಂಧ ಎಂದರೆ, ರಣಬೀರ್‌ ಕಪೂರ್‌ ಅವರ ಹುಟ್ಟಿದ ದಿನವೂ ಸೆಪ್ಟೆಂಬರ್‌ 28! ಈ ಹಿನ್ನೆಲೆಯಲ್ಲಿ ಇವರಿಬ್ಬರಿಗೂ ಒಂದು ರೀತಿಯ ಅವಿನಾಭಾವ ಸಂಬಂಧ ಎಂದೇ ಹೇಳಲಾಗುತ್ತಿದೆ.

ಕಲ್ಕಿಯಲ್ಲಿ ಗರ್ಭಿಣಿ ರೋಲ್‌ ಮಾಡಿದ್ದ ದೀಪಿಕಾ ಅದೇ ನಕಲಿ ಹೊಟ್ಟೆ ತೋರಿಸ್ತಿದ್ದಾರಾ? ವೈದ್ಯೆ ಹೇಳಿರೋದು ನಿಜವಾಯ್ತಾ?

ಅಷ್ಟಕ್ಕೂ ದೀಪಿಕಾ ಮತ್ತು ರಣಬೀರ್ ಕಪೂರ್‌ ಅವರ ಲವ್‌ ಸ್ಟೋರಿ ಬಿ-ಟೌನ್‌ನಲ್ಲಿ ಸಕತ್‌ ಸೌಂಡ್‌ ಮಾಡಿತ್ತು. 2007ರಲ್ಲಿಯೇ ದೀಪಿಕಾ ಮತ್ತು ರಣಬೀರ್‌ ಪ್ರೀತಿಸಲು ಶುರುಮಾಡಿದ್ದರು. ರಣಬೀರ್‌ ಅವರದ್ದು ಮೋಸ ಮಾಡುವ ವ್ಯಕ್ತಿತ್ವ ಎಂದು ಅವರಿವರಿಂದ ಕೇಳಿಸಿಕೊಂಡಿದ್ದರೂ ಅದನ್ನು ದೀಪಿಕಾ ನಂಬಿರಲಿಲ್ಲವಂತೆ. ಆದರೆ ಮತ್ತೊಬ್ಬ ಹುಡುಗಿಯ ಜೊತೆ ರಣಬೀರ್‌ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಹಾಕಿಕೊಂಡಾಗ ದೀಪಿಕಾ ಕಂಗಾಲಾಗಿ ಹೋಗಿದ್ದರು. ನಂತರ ರಣಬೀರ್ ಕಪೂರ್‌ಗೆ ಇನ್ನೊಂದು ಚಾನ್ಸ್‌ ಕೂಡ ನೀಡಿದ್ದರು. ಆದರೆ ಪ್ರೀತಿ-ಮೋಸ ಎಲ್ಲವೂ ರಣಬೀರ್ ಕಪೂರ್‌ಗೆ ಮಾಮೂಲಾಗಿದ್ದರಿಂದ ಅವರು ಕೇಳದ್ದ ಕಾರಣ, ದೀಪಿಕಾ ಸಂಬಂಧ ಕಡಿದುಕೊಂಡರು ಎನ್ನಲಾಗುತ್ತಿದೆ.

ಇದರ ಹೊರತಾಗಿಯೂ ಮದುವೆಯ ಬಳಿಕವೂ ದೀಪಿಕಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಕೆಲವು ಥ್ರೋಬ್ಯಾಕ್ ಚಿತ್ರಗಳನ್ನು ಒಳಗೊಂಡಿರುವ ಕೊಲಾಜ್ ಅನ್ನು ಹಂಚಿಕೊಂಡಿದ್ದರು. ಇದರಲ್ಲಿ ಒಂದು ರಣಬೀರ್ ಕಪೂರ್‌ ಅವರ ಜೊತೆಯೂ ಇತ್ತು. ಅವರೊಂದಿಗೆ ಪ್ರಾಮಾಣಿಕ ನಗುವನ್ನು ಹಂಚಿಕೊಂಡಿದ್ದರು. ಇದು ಯೇ ಜವಾನಿ ಹೈ ದೀವಾನಿ ಚಿತ್ರದ ಕ್ಲಿಕ್‌. ಇದನ್ನು ನೋಡಿ ಮತ್ತೆ ಲವ್‌ ಸ್ಟೋರಿಯನ್ನು ನೆಟ್ಟಿಗರು ಎಳೆದು ತಂದಿದ್ದರು.

ದೀಪಿಕಾ ಪಡುಕೋಣೆಯ ಒಂದೇ ಒಂದು ಸೆಕೆಂಡ್‌ನ ವಿಡಿಯೋ ನೋಡಲು ಮುಗಿ ಬಿದ್ದ ನೆಟ್ಟಿಗರು! ಅಂಥದ್ದೇನಿದೆ ನೋಡಿ...