ಹೆಣ್ಣು ಹೆಚ್ಚು ಸಹಿಸಿಕೊಂಡ್ರೆ ಹೀಗೇ ಆಗೋದಮ್ಮಾ... ದಿಟ್ಟೆಯಾಗು ಇಲ್ಲವೇ ಬಲಿಯಾಗು: ಸಹನಾಗೆ ನೆಟ್ಟಿಗರ ಬುದ್ಧಿಮಾತು

'ಸಹನಾಮೂರ್ತಿ' ಎಂಬ ಹಣೆಪಟ್ಟಿ ಕಟ್ಟಿಕೊಂಡು ಹೆಣ್ಣು ಅಗತ್ಯಕ್ಕಿಂತ ಹೆಚ್ಚು ಸಹಿಸಿಕೊಂಡರೆ ಏನಾಗುತ್ತದೆ  ಎನ್ನುವುದಕ್ಕೆ ಪುಟ್ಟಕ್ಕನ ಮಗಳು ಸಹನಾನೇ ಉದಾಹರಣೆ ಎನ್ನುತ್ತಿದ್ದಾರೆ ನೆಟ್ಟಿಗರು. ಏನಿದು ವಿಷಯ?
 

Puttakkas daughter Sahanana is an example when  women tolerate than necessary suc

ಪುಟ್ಟಕ್ಕನ ಮಗಳು ಸಹನಾ ಮೇಲೆ ಇದೀಗ ಅನೈತಿಕ ಸಂಬಂಧದ ಆರೋಪ ಬಂದಿದೆ. ಖುದ್ದು ಆಕೆಯ ಅತ್ತೆಯೇ ಈ ಆರೋಪ ಮಾಡಿದ್ದಾಳೆ. ತನ್ನ ಮಗನಿಂದ ಸಹನಾಳನ್ನು ಹೇಗಾದರೂ ಮಾಡಿ ದೂರ ಮಾಡುವ ಕೆಟ್ಟ ಆಲೋಚನೆ ಆಕೆಯದ್ದು. ಇದೇ ಕಾರಣಕ್ಕೆ ರಾಜಿಯ ಮಗ ಕಾಳಿ ಮತ್ತು ಸಹನಾಳಿಗೆ ಅನೈತಿಕ ಸಂಬಂಧ ಇದೆ ಎಂದು ಬಂಗಾರಮ್ಮನ ಪಂಚಾಯಿತಿಯಲ್ಲಿ ಅತ್ತೆ ಆರೋಪಿಸಿದ್ದಾಳೆ. ಬೇಕಿದ್ದರೆ ಕಾಳಿಯನ್ನು ಕರೆಸಿ ಎಂದು ಸವಾಲು ಹಾಕಿದ್ದಾಳೆ. ಹೇಳಿ-ಕೇಳಿ ಕಾಳಿ ಆತ. ಪುಟ್ಟಕ್ಕನ ಸವತಿ ರಾಜಿಯ ತಮ್ಮ. ಈ ಮೊದಲೇ ಸಹನಾಳ ಮೇಲೆ ಕಣ್ಣು ಹಾಕಿದ್ದವ. ಆಕೆಯನ್ನು ಹೇಗಾದರೂ ಮಾಡಿ ಮದುವೆಯಾಗಬೇಕು ಎಂದು ಹರಸಾಹಸ ಪಟ್ಟವ. ಸಹನಾಳ ಮದುವೆ ಟೀಚರ್​ ಜೊತೆ ಆದ ಮೇಲೆ ಉರಿದುಕೊಂಡು ಸಹನಾಳಿಗೆ ಕೆಟ್ಟ ಹೆಸರು ಬರಬೇಕು ಎಂದು ಪ್ರಯತ್ನ ಪಡುತ್ತಿದ್ದವ.

ಅದೇ ಇನ್ನೊಂದೆಡೆ ಪುಟ್ಟಕ್ಕನ ಮೇಲೆ ಕಿಡಿಕಾರುತ್ತಿದ್ದಾಳೆ ರಾಜಿ. ಆಕೆಯನ್ನು ಯಾವ ರೀತಿಯಿಂದಲೂ ಸೋಲಿಸಲು ಸಾಧ್ಯವಿಲ್ಲದ್ದರಿಂದ ಪುಟ್ಟಕ್ಕನ ಮಗಳಿಗೆ ಕೆಟ್ಟ ಹೆಸರು ಬರುವಂತೆ ನೋಡಿಕೊಂಡಿದ್ದಾಳೆ. ಸಹನಾಳ ಅತ್ತೆಯ ಜೊತೆ ಶಾಮೀಲಾಗಿ, ತನ್ನ ತಮ್ಮನಿಗೂ ಸಹನಾಳಿಗೂ ಸಂಬಂಧ ಇದೆ ಎಂದು ಸಾಬೀತು ಮಾಡುವಲ್ಲಿ ಪ್ರಯತ್ನಿಸುತ್ತಿದ್ದಾಳೆ. ಇನ್ನು ಸಹನಾಳ ಗಂಡನೋ, ತನ್ನ ತಾಯಿಯ ಪರವೇ. ಆಕೆಯನ್ನು ನಂಬಿ ಪತ್ನಿಯನ್ನೇ ಹುಚ್ಚಿ ಎಂದವ. ತನ್ನ ತಾಯಿ ಸಹನಾಳಿಗೆ ವಿಷ ಉಣಿಸಿದರೂ ಅದನ್ನು ನಂಬದವ. ಇದೀಗ ಪತ್ನಿಗೆ ಅನೈತಿಕ ಸಂಬಂಧ ಇದೆ ಎನ್ನುವುದನ್ನು ಒಪ್ಪದಿದ್ದರೂ ಕಾಳಿಯನ್ನು ಕರೆಸುವ ಪಣ ತೊಟ್ಟಿದ್ದಾಳೆ ಅತ್ತೆ. ಆಕೆಗೆ ಚೆನ್ನಾಗಿ ಗೊತ್ತು, ಕಾಳಿ ತನಗೂ ಸಹನಾಗೂ ಸಂಬಂಧ ಇದೆ ಎಂದು ಹೇಳುತ್ತಾನೆ ಎಂದು. ಹಾಗಿದ್ದರೆ ಮುಂದೇನು?

ಸವತಿ ರಾಜಿಗೇ ಮೇಕಪ್​ ಮಾಡೋದಾ ಪುಟ್ಟಕ್ಕ? ವಿಡಿಯೋ ನೋಡಿ ಹುಷಾರ್​ ಕಣವ್ವೋ ಎಂದ ಅಭಿಮಾನಿಗಳು!
ತಾಳ್ಮೆಯ ಸಹನಾಮೂರ್ತಿಯಂತಿರುವ ಸಹನಾ, ತುಂಬಾ ಸಹನೆಯಿಂದ ಇದ್ದ ಕಾರಣವೇ ಎಲ್ಲ ತೊಂದರೆ ಅನುಭವಿಸಿದ್ದಾಳೆ. ಇದೀಗ ಅಕ್ರಮ ಸಂಬಂಧ ಹೊಂದಿರುವಾಕೆ ಎಂದೂ ಪಟ್ಟ ಕಟ್ಟಿಕೊಂಡಿದ್ದಾಳೆ. ಇನ್ನು ಸಹನೆಯಿಂದ ಇದ್ದರೆ ಸಾಲದು, ತಿರುಗೇಟು ನೀಡಲೇಬೇಕಾಗಿದೆ. ಮಾತುಗಳಿಂದಲೇ ತಾನು ತಪ್ಪಿತಸ್ಥೆ ಎಂದು ಸಾಬೀತು ಮಾಡಬೇಕಿದೆ. ಆದ್ದರಿಂದ ನೆಟ್ಟಿಗರು ಸಹನಾಳಿಗೆ ಬುದ್ಧಿಮಾತು ಹೇಳುತ್ತಿದ್ದಾರೆ. ಹೆಣ್ಣು ಸಹನಾಶೀಲೆ ಎಂದುಕೊಂಡು ಎಲ್ಲವನ್ನೂ ಸಹಿಸಿಕೊಂಡು ಹೋದರೆ ನಿನ್ನಹಾಗೆಯೇ ಆಗುತ್ತದೆ. ದಿಟ್ಟೆಯಾಗು, ದಿಟ್ಟ ಉತ್ತರ ಕೊಡು... ಇಲ್ಲದಿದ್ದರೆ ಕಳಂಕಿತೆ ಎನ್ನುವ ಪಟ್ಟ ನಿನ್ನದಾಗುತ್ತದೆ. ಎಲ್ಲದಕ್ಕೂ ಮಿತಿ ಇರಬೇಕು, ಹಾಗೆಯೇ ಸಹನೆಗೂ ಮಿತಿ ಇರಬೇಕು. ಇಲ್ಲದಿದ್ದರೆ ನಿನ್ನ ಹಾಗೆಯೇ ಪ್ರತಿ ಹೆಣ್ಣಿನ ಸ್ಥಿತಿ ಆಗುತ್ತದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

 

ಇದೀಗ ಸಹನಾಳ ಮುಂದಿನ ನಡೆ ಏನು? ಇದಾಗಲೇ ಸಾಧ್ಯವಾದಷ್ಟು ಮಟ್ಟಿಗೆ ಸಹನಾ ಗಟ್ಟಿಗಿತ್ತಿಯಾಗಿದ್ದಾಳೆ. ಇದನ್ನು ಕೇಳಿ ಅತ್ತೆ ಶಾಕ್​ಗೂಒಳಗಾಗಿದ್ದಾಳೆ. ಒಂದು ಹಂತದಲ್ಲಿ ಕರಿಮಣಿಯನ್ನು ತೆಗೆದುಕೊಡು ಎಂದಿದ್ದಾಳೆ. ಇನ್ನು ಗಂಡನೋ ಅಮ್ಮನೇ ಸರಿಯಾದಾಕೆ ಎನ್ನುತ್ತಿದ್ದಾನೆ, ಪತ್ನಿಯೇ ಸರಿಯಲ್ಲ ಎನ್ನುತ್ತಿದ್ದಾನೆ. ಇಂಥ ಸಮಯದಲ್ಲಿ ಸಹನಾಳೇ ತನ್ನನ್ನು ತಾನು ಸಮರ್ಥಿಸಿಕೊಳ್ಳಬೇಕಿದೆ. ಪುಟ್ಟಕ್ಕ, ಸ್ನೇಹಾ ಯಾರೂ ಈಗ ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ತನ್ನ ಮೇಲೆ ಬಂದಿರುವ ಈ ಆರೋಪವನ್ನು ಬಂಗಾರಮ್ಮನ ಪಂಚಾಯ್ತಿಯಲ್ಲಿ ಸಹನಾ ಹೇಗೆ ಬಗೆಹರಿಸಿಕೊಳ್ಳುತ್ತಾಳೆ ಎನ್ನುವುದು ಮುಂದಿರುವ ಪ್ರಶ್ನೆ. 

ಕಡಲ ಕಿನಾರೆಯಲ್ಲಿ ಸ್ಯಾಂಡಲ್‌ವುಡ್‌ನ ಸ್ವೀಟಿ ರಾಧಿಕಾ ಹೋಳಿ ಆಚರಣೆ: ಎದುರಿಗಿದ್ದವರು ಯಾರು ಕೇಳಿದ ಫ್ಯಾನ್ಸ್​

Latest Videos
Follow Us:
Download App:
  • android
  • ios