ಪುಟ್ಟಕ್ಕನ ಮಕ್ಕಳು: ದೊಡ್ಡಮರದಲ್ಲಿ ನೇತಾಡ್ತಿದ್ದ ಎರಡು ಹೆಣಗಳು ಯಾರವು? ಕಂಠಿ ಕೆಲ್ಸನಾ ಇದು!

 ತನ್ನ ಪತ್ನಿ ಸ್ನೇಹಾ ಸಾವಿನ ನಂತರ ಹೂ ಮನಸ್ಸಿನ ಕಂಠಿ ಬಂಡೆಯಂಥಾಗಿದ್ದಾನೆ. ದೊಡ್ಮರದಲ್ಲಿ ನೇತಾಡ್ತಿದ್ದ ಎರಡು ಹೆಣಗಳ ಹಿಂದೆ ಕಂಠಿ ಕೈವಾಡ ಇದೆಯಾ?

puttakkana makkalu serial  two shrouds hanging on the big tree, Kanthi is likely to be involved in this

ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ದೊಡ್ಡಮರದ ಎರಡು ಹೆಣಗಳು ಬೆಚ್ಚಿಬೀಳಿಸಿವೆ. ದೊಡ್ಡ ಮರದಲ್ಲಿ ಹೆಣಗಳು ನೇತಾಡ್ತಿವೆ ಎಂಬ ಮಾತನ್ನ ಕೇಳಿ ಬಂದ ಪುಟ್ಟಕ್ಕ ಮತ್ತವಳ ಮನೆಯವರಿಗೆ ಅಕ್ಷರಶಃ ಆ ಹೆಣ ಕಂಡು ಎದೆಬಡಿತ ನಿಂತ ಹಾಗಾಗಿದೆ. ಇದನ್ನು ನೋಡಿ ನೆಟ್ಟಿಗರು ಏನೇನೆಲ್ಲ ಕಾಮೆಂಟ್ ಮಾಡ್ತಿದ್ದಾರೆ. ಅವರಿಗೆ ಸ್ನೇಹ ಪಾತ್ರ ತೀರಿಕೊಂಡದ್ದನ್ನು ಇನ್ನೂ ಅರಗಿಸಿಕೊಳ್ಳೋದಕ್ಕೆ ಆಗಿಲ್ಲ ಅನ್ನೋದಕ್ಕಿಂತಲೂ ಆಕೆಯ ಹೆಸರಿನಲ್ಲಿ ಬಂದಿರೋ ಹೊಸ ಪಾತ್ರವನ್ನು ಒಪ್ಪಿಕೊಳ್ಳೋದಕ್ಕೆ ಕಷ್ಟ ಆಗ್ತಿದೆ. ಹೊಸ ಪಾತ್ರಗಳು ಬಂದಾಗ ಈ ಥರ ಆಗೋದು ಸಹಜವೇ. ಹಾಗೆ ನೋಡಿದರೆ ಈ ಸೀರಿಯಲ್ ನಿರ್ದೇಶಕ ಆರೂರು ಜಗದೀಶ್ ಅವರಲ್ಲಿ ಬಹಳ ಮಂದಿ ಕೇಳಿದ್ದರು, 'ಈ ಸೀರಿಯಲ್‌ಗೆ ಸ್ನೇಹಾ ಪಾತ್ರಕ್ಕೆ ಮತ್ಯಾರನ್ನಾದರೂ ರಿಪ್ಲೇಸ್ ಮಾಡಬಹುದಿತ್ತಲ್ವಾ, ಸಾಯಿಸಿರೋದು ಯಾಕೆ?' ಅಂತ. ಅದಕ್ಕೆ ನಿರ್ದೇಶಕರು ನೀಡಿರೋ ಉತ್ತರ ವಾಸ್ತವವೇ ಆಗಿದೆ.

ಅದೇನೆಂದರೆ ಒಂದು ಪಾತ್ರವನ್ನು ಇನ್ನೊಬ್ರು ಮಾಡಿದ್ರೆ ಅದನ್ನು ವೀಕ್ಷಕರಿಗೆ ಒಪ್ಪಿಸೋದು ಸುಲಭ ಅಲ್ಲ. ಅದರ ಬದಲು ಆ ಪಾತ್ರ ಸಾಯಿಸಿ ಹೊಸ ಪಾತ್ರ ಸೃಷ್ಟಿ ಮಾಡೋದು ಸರಿ' ಅಂತ. ಆದರೆ ಈ ಸೀರಿಯಲ್‌ನಲ್ಲಿ ಅದೂ ವರ್ಕೌಟ್ ಆಗಿಲ್ಲ. ಮುಂದೆ ಕಂಠಿಗೆ ಪೇರ್ ಆಗಲಿರೋ ಹೊಸ ಸ್ನೇಹನ ಪಾತ್ರ ಯಾಕೋ ವೀಕ್ಷಕರಿಗೆ ಕನೆಕ್ಟ್ ಆಗಿಲ್ಲ.

ಲಕ್ಷ್ಮೀ ಬಾರಮ್ಮ ಡೈರೆಕ್ಟ್ರು ಜ್ಯೂನಿಯರ್ ಸಿಎಸ್‌ಪಿ ಥರ ಕೋರ್ಟ್‌ನಲ್ಲಿ ವಾದ ಮಾಡೋದು ನೋಡಿ! ಇವರ ಅಸಲಿ ಕಥೆ ಏನು?

ಹಾಗೆ ನೋಡಿದರೆ ಹಳೇ ಸ್ನೇಹಾ ಸಿಕ್ಕಾಪಟ್ಟೆ ಜೋರು. ನೀನು ಅಂದ್ರೇ ನಿಮ್ಮ ಅಪ್ಪ ಅನ್ನೋ ತರಹದ ಪಾತ್ರ ಅದು. ಹೊಸ ಸ್ನೇಹಾಳ ಪಾತ್ರ ಸೌಮ್ಯ ಸ್ವಭಾವ. ಮುಗ್ಧ ಮನಸ್ಸಿನ ಹುಡುಗಿ. ಈ ಪಾತ್ರಕ್ಕೆ ಅಪೂರ್ವ ಜೀವ ತುಂಬೋ ಪ್ರಯತ್ನ ಮಾಡ್ತಿದ್ದಾರೆ. ಎಷ್ಟೋ ವೀಕ್ಷಕರಿಗೆ ಒಂದು ಡೌಟ್​ ಇದೆ. ಸ್ನೇಹಾ ಪಾತ್ರ ರಿಪ್ಲೇಸ್ಮೆಂಟ್​ ಆಗಿರೋದು ಅಂತ. ಆದ್ರೇ ರಿಪ್ಲೇಸ್ ಆಗಿರೋದಲ್ಲ. ಆ ಸ್ನೇಹಾನೇ ಬೇರೆ. ಈ ಸ್ನೇಹಾನೇ ಬೇರೆ. ಆದ್ರೇ ಇಬ್ಬರ ಹೃದಯನೂ ಒಂದೇ. ಸ್ನೇಹಾ ಪಾತ್ರದಿಂದ ಸಂಜನಾ ಬುರ್ಲಿ ಅವರು ಹೊರ ಬರ್ತಾರೆ ಅನ್ನೋ ಟಾಕ್​ ಶುರುವಾದಾಗಲೇ ನಿರ್ದೇಶಕ ಆರೋರು ಜಗದೀಶ್​ ಅವರು ಹೊಸ ಮುಖಕ್ಕೆ ಹುಡುಕಾಟ ನಡೆಸಿದ್ರು. ಆಗ ಸಿಕ್ಕಿದ್ದೇ ನಟಿ ಅಪೂರ್ವ ನಾಗರಾಜ್. ಸ್ಟೋರಿಯಲ್ಲಿ ವಿಭಿನ್ನ ಪ್ರಯತ್ನ ಮಾಡಿದ ಪುಟ್ಟಕ್ಕನ ಮಕ್ಕಳು ತಂಡ ಸಿಂಗಾರಮ್ಮನ ದುಷ್ಟತನಕ್ಕೆ ಮುಗ್ಧ ಎರಡು ಜೀವಗಳು ಸಿಲುಕಿರೋ ರೀತಿ ಗಂಗಾಧರ ಮತ್ತು ಸ್ನೇಹಾ ಎಂಬ ಎರಡು ಹೊಸ ಪಾತ್ರಗಳನ್ನ ಪರಿಚಯಿಸಿದ್ದರು.

ಪುಟ್ಟಕ್ಕ ತನ್ನ ಮೂವರು ಮಕ್ಕಳ ಜೊತೆಗೆ ಇವಳು ನನ್ನ ನಾಲ್ಕನೇ ಮಗಳು ಎಂದು ಸಿಂಗಾರಮ್ಮನ ಸೆರೆಯಿಂದ ಗಂಗಾಧರ ಮತ್ತು ಸ್ನೇಹಾನ ರಕ್ಷಣೆ ಮಾಡ್ತಾಳೆ. ಈ ನಡುವೆ ಸ್ನೇಹಾಗೆ ಹಾರ್ಟ್​ನಲ್ಲಿ ತೊಂದರೆ ಇರೋದು ಗೊತ್ತಾಗುತ್ತೆ. ಇದಕ್ಕೆ ಹೃದಯ ಕಸಿ ಒಂದೇ ಮಾರ್ಗ ಅಂತ ವೈದ್ಯರು ಹೇಳ್ತಾರೆ. ಅದಕ್ಕೆ ಸರಿಯಾಗಿ ಅಪಘಾತದಲ್ಲಿ ಸಾವನ್ನಪ್ಪಿರೋ ಸ್ನೇಹಾ ಹೃದಯ ಹೊಸ ಸ್ನೇಹಾಗೆ ಸಮಯಕ್ಕೆ ಸರಿಯಾಗಿ ಲಭ್ಯವಾಗುತ್ತೆ. ಆಪರೇಷನ್ ಕೂಡ ಸಕ್ಸಸ್​ ಆಗುತ್ತೆ. ಇದಿಷ್ಟು ಹೊಸದಾಗಿ ಪುಟ್ಟಕ್ಕನ ಮಕ್ಕಳು ಜಾಯಿನ್​ ಆಗಿರೋ ಸ್ನೇಹಾ ಪಾತ್ರದ ಬಗೆಗಿನ ಹಿಸ್ಟರಿ.

ಅತ್ತೆ ಮಾವನ ಜೊತೆ ಮನೆಯಿಂದ ಹೊರ ನಡೆದ ಭಾಗ್ಯಾ, ಭೇಷ್ ಎಂದ ವೀಕ್ಷಕರು!

ಆದರೆ ಈ ಪಾತ್ರ ವೀಕ್ಷಕರಿಗೆ ಸೆಟ್ ಆಗಿಲ್ಲ. ಸದ್ಯ ಕಂಠಿಗೆ ಈ ಅಪ್ಪ ಮಗಳನ್ನು ಕಂಡರೆ ಕೆಂಡದಂಥಾ ಕೋಪ. ಇವರು ಅಡ್ಡ ಬರದಿದ್ದರೆ ಅಂದು ಸ್ನೇಹಾ ಸಾಯ್ತಿರಲಿಲ್ಲ ಅನ್ನೋ ನೋವು. ಹೀಗಾಗಿ ಇವರ ಮೇಲೆ ಕೆಂಡ ಕಾರುತ್ತಲೇ ಇರುತ್ತಾನೆ. ಆದರೆ ಇದೀಗ ದೊಡ್ಡ ಮರದ ಮೇಲೆ ಎರಡು ಹೆಣಗಳು ನೇತಾಡುತ್ತಿವೆ. ಅದು ಬಂಗಾರಮ್ಮನದಾ ಅನ್ನೋ ಪ್ರಶ್ನೆ ಎದುರಾಗಿದೆ. ಜೊತೆಗೆ ಈ ಕೊಲೆ ಮಾಡಿದವನು ಕಂಠಿನಾ ಅನ್ನೋ ಗೊಂದಲವೂ ಶುರುವಾಗಿದೆ. ಇದಕ್ಕೆ ಸರಿಯಾಗಿ ಕಂಠಿಯನ್ನು ಕರೆತರುವಂತೆ ಇನ್ಸ್‌ಪೆಕ್ಟರ್‌ ಪುಟ್ಟಕ್ಕನಿಗೆ ತಾಕೀತು ಮಾಡಿದ್ದಾರೆ. ಸೋ ಎಲ್ಲರ ಕಣ್ಣಿಂದ ಮರೆಯಾಗಿ ಕಂಠಿನೇ ಈ ಕೊಲೆ ಮಾಡಿರಬಹುದಾ ಎಂಬ ಅನುಮಾನವಿದೆ. ಜೊತೆಗೆ ಈತನನ್ನು ಈ ಕೇಸ್‌ಗೆ ಫಿಟ್‌ ಮಾಡುವ ಹುನ್ನಾರ ಇರಬಹುದು ಅನ್ನೋ ಮಾತೂ ಕೇಳಿಬರ್ತಿದೆ.

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Latest Videos
Follow Us:
Download App:
  • android
  • ios