ಲಕ್ಷ್ಮೀ ಬಾರಮ್ಮ ಡೈರೆಕ್ಟ್ರು ಜ್ಯೂನಿಯರ್ ಸಿಎಸ್‌ಪಿ ಥರ ಕೋರ್ಟ್‌ನಲ್ಲಿ ವಾದ ಮಾಡೋದು ನೋಡಿ! ಇವರ ಅಸಲಿ ಕಥೆ ಏನು?

 ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲಿ ನಿರ್ದೇಶಕ ಯಶವಂತ್ ಪಾಂಡು ಲಾಯರ್ ಕೋಟು ಧರಿಸಿ ಜ್ಯೂನಿಯರ್ ಸಿಎಸ್‌ಪಿ ಥರ ಕೋರ್ಟ್‌ನಲ್ಲಿ ವಾದ ಮಾಡ್ತಿದ್ದಾರೆ. ಇವರ ಅಸಲಿ ಕಥೆ ಕುತೂಹಲಕಾರಿಯಾಗಿದೆ.

lakshmi baramma serial director yashavanth pandu acting as lawyer in lakshmi baramma serial

ಲಕ್ಷ್ಮೀ ಬಾರಮ್ಮ ಸೀರಿಯಲ್ ಸಖತ್ ರೋಚಕವಾಗಿದೆ. ಇದರಲ್ಲಿ ಸದ್ಯ ಕೋರ್ಟ್‌ನಲ್ಲಿ ಹಣಾಹಣಿ ನಡೀತಿದೆ. ಕೋರ್ಟ್‌ ಸೀನ್ ಅಂದಕೂಡಲೇ ನೆನಪಾಗೋದು ಟಿಎನ್‌ ಸೀತಾರಾಂ ಅವರ ಸೀರಿಯಲ್‌ಗಳು. ಅವರ ಸೀರಿಯಲ್‌ಗಳ ಹೀರೋ ಹೀರೋಯಿನ್ ಬೇರೆ ಇದ್ದರೂ ಕೋರ್ಟ್ ಸೀನ್ ಬಂದರೆ ಸಿಎಸ್‌ಪಿ ಸಾಹೇಬರೇ ಹೀರೋ. ಅಂದರೆ ಈ ಪಾತ್ರ ಮಾಡುತ್ತಿದ್ದ ಟಿಎನ್ ಸೀತಾರಾಂ ಅವರು. ಸದ್ಯ ಸೀತಾರಾಂ ಅವರು ಯಾವ ಸೀರಿಯಲ್‌ ಅನ್ನೂ ಮಾಡುತ್ತಿಲ್ಲ. ಬಹುಶಃ ಎಲ್ಲವೂ ಅತಿ ರೊಮ್ಯಾಂಟಿಸೈಸ್ ಆಗಿರೋ ಈ ಕಾಲದಲ್ಲಿ ಅವರ ವಾಸ್ತವದ ನೆಲೆಗಟ್ಟಿನ ಸೀರಿಯಲ್‌ಗಳನ್ನು ಪ್ರಸಾರ ಮಾಡೋ ವ್ಯವಧಾನ ಚಾನೆಲ್‌ಗಳಿಗೆ ಇಲ್ಲ ಅನಿಸುತ್ತೆ. ಆದರೆ ಅವರ 'ಮಾಯಾಮೃಗ' ಸೀರಿಯಲ್ ಮರು ಪ್ರಸಾರ ಆದಾಗಲೂ ಅದಕ್ಕೆ ಒಳ್ಳೆ ಟಿಆರ್‌ಪಿ ಬಂದಿತ್ತು. ಈಗ ಇಲ್ಲಿ ಟಿಎನ್‌ ಸೀತಾರಾಂ ಪ್ರಸ್ತಾಪ ಯಾಕೆ ಬಂತು ಅಂತ ಕೇಳಬಹುದು. ಅದಕ್ಕೆ ಉತ್ತರ ಲಕ್ಷ್ಮೀ ಬಾರಮ್ಮ ಎಂಬ ಕಲರ್ಸ್ ಕನ್ನಡದ ಸೀರಿಯಲ್.

ಈ ಸೀರಿಯಲ್ ನಿರ್ದೇಶಕ ಯಶವಂತ ಪಾಂಡು ಟಿಎನ್‌ ಸೀತಾರಾಮ್ ಗರಡಿಯಲ್ಲಿ ಪಳಗಿದವರು. ಅವರ ಸೀರಿಯಲ್‌ಗಳಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದವರು. ಅಷ್ಟೇ ಏಕೆ, ಟಿ ಎನ್‌ ಸೀತಾರಾಂ ಅವರ ಜೊತೆಗೆ ಸ್ಕ್ರೀನ್‌ನಲ್ಲೂ ಯಶವಂತ ಕಾಣಿಸಿಕೊಂಡಿದ್ದಾರೆ. ಅದು ಪಾಂಡುರಂಗ ಅನ್ನೋ ಸಿಎಸ್‌ಪಿ ಅವರ ಜ್ಯೂನಿಯರ್ ಲಾಯರ್ ಪಾತ್ರದಲ್ಲಿ. ಕೊಂಚ ತರಲೆ, ಕೊಂಚ ಎಡವಟ್ಟು, ಸ್ವಲ್ಪ ಕಾಮಿಡಿ ಎಲ್ಲ ಬೆರೆತಿದ್ದ ಈ ಪಾತ್ರ ಬಹಳ ಮಂದಿಗೆ ಇಷ್ಟವಾಗಿತ್ತು. ಪಾಂಡು ಪಾತ್ರ ಎಂಟ್ರಿ ಕೊಡ್ತಿದ್ದ ಹಾಗೆ ಅವರಿಲ್ಲ ನಗೋದಕ್ಕೆ ಶುರು ಮಾಡ್ತಿದ್ರು. ಆ ಪಾತ್ರದ ಹೆಸರನ್ನು ಯಶವಂತ್ ತನ್ನ ಹೆಸರಿನ ಜೊತೆ ಸೇರಿಸಿಕೊಂಡು ಯಶವಂತ್ ಪಾಂಡುವೇ ಆಗಿ ಬಿಟ್ಟಿದ್ದಾರೆ. ಸದ್ಯ ಇದೇ ಪಾಂಡು ಪಾತ್ರಧಾರಿ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದಾರೆ.

ಮಧು ಗೌಡ ಮದುವೆಯಲ್ಲಿ ಅಳಿಯನ ಮೇಲೆ ಅತ್ತೆ ರಂಪಾಟ; ಇಡೀ ಘಟನೆ ಬಗ್ಗೆ ಸ್ಪಷ್ಟನೆ ಕೊಟ್ಟ ಸಹೋದರ ಮದನ್

ತಾನು ನಿರ್ದೇಶಕ ಮಾಡುತ್ತಿರುವ 'ಲಕ್ಷ್ಮೀ ಬಾರಮ್ಮ' ಸೀರಿಯಲ್‌ನಲ್ಲಿ ಯಶವಂತ್ ಬಣ್ಣ ಹಚ್ಚಿದ್ದಾರೆ. ಹಿಂದೆಲ್ಲ ಕೋರ್ಟ್‌ ಸೀನ್‌ಗಳನ್ನು ಮಾಡಿರೋ ಅವರಿಗೆ ಇಂಟ್ರಾಗೇಶನ್ ಅನ್ನೋದು ನೀರು ಕುಡಿದಷ್ಟೇ ಸಲೀಸು. ಈ ಬಾರಿ ಅವರ ಪಾತ್ರದಲ್ಲಿ ಕಾಮಿಡಿ, ತರಲೆ ಎಲ್ಲ ಕಡಿಮೆ ಇದೆ. ಹ್ಯೂಮರ್ ಸೆನ್ಸ್ ಅಲ್ಲಲ್ಲಿ ಇದೆ. ಅದು ಬಿಟ್ಟರೆ ಕಾವೇರಿ ಎಂಬ ಪುತ್ರ ವ್ಯಾಮೋಹಿಯ ಕಥೆಯನ್ನು ಬಗೆಯೋ ಗೇಮ್ ಚೇಂಜರ್ ಲಾಯರ್ ಪಾತ್ರ. ಸದ್ಯಕ್ಕೆ ಕಾವೇರಿಯ ಕಥೆಯನ್ನು ಕಾವೇರಿ ಹಾಗೂ ಕುಟುಂಬದ ಮುಂದೆ ಒಂದೊಂದೇ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಕಾವೇರಿಯ ಪುತ್ರ ವ್ಯಾಮೋಹ. ತನ್ನ ಹಾಗೂ ಮಗನ ನಡುವೆ ಯಾರೂ ಬರಬಾರದು ಅಂತ ಆಕೆ ಕೀರ್ತಿಯನ್ನ ಮಗನಿಂದ ದೂರ ಮಾಡಿದ್ದು, ಮಗ ವೈಷ್ಣವ್‌ಗೆ ಲಕ್ಷ್ಮೀ ಎಂಬ ಕೆಳ ಮಧ್ಯಮ ವರ್ಗದ ಹುಡುಗಿ ಜೊತೆ ಮದುವೆ ಮಾಡಿದ್ದು. ಆ ಮದುವೆ ಸರಿ ನಿಲ್ಲದಂತೆ ಮಾಡಿದ್ದು, ಕೊನೆಗೆ ತನ್ನ ಈ ಕೃತ್ಯಕ್ಕೆ ಅಡ್ಡಗಾಲಾಗಿ ನಿಂತ ಕೀರ್ತಿ ಹಾಗೂ ಲಕ್ಷ್ಮೀ ಇಬ್ಬರ ಹತ್ಯೆಯನ್ನೂ ಮಾಡಲು ಯತ್ನಿಸಿದ್ದು. ಈ ಎಲ್ಲ ಕಥೆ ಲಾಯರ್ ಇಂಟ್ರಾಗೇಶನ್‌ನಲ್ಲಿ ಹೊರಬೀಳಲಿದೆ.

ಕಿಚ್ಚನ ಬಳಿ ಅತ್ತು ಗೋಗರೆದು ಬಿಗ್‌ಬಾಸ್‌ಗೆ ವಿದಾಯ ಹೇಳಿದ ಶೋಭಾ ಶೆಟ್ಟಿ! 2ವಾರದ ಸಂಭಾವನೆ ಎಷ್ಟು?

ಮೂಲತಃ ಗಡಿಜಿಲ್ಲೆ ಕಾಸರಗೋಡಿನವರಾದ ಯಶವಂತ್ ಪಾಂಡು ಈ ಹಿಂದೆ 'ಕನ್ನಡತಿ' ಸೀರಿಯಲ್ ನಿರ್ದೇಶಿಸಿದ್ದರು. ಆ ಸೀರಿಯಲ್ ಕನ್ನಡಿಗರ ನೆಚ್ಚಿನ ಸೀರಿಯಲ್ ಆಗಿತ್ತು. ಆ ಬಳಿಕ ಭಾಗ್ಯಲಕ್ಷ್ಮೀ ಅಂತ ಸೀರಿಯಲ್ ಶುರುಮಾಡಿ ಅದು ಸಿಕ್ಕಾಪಟ್ಟೆ ಪಾಪ್ಯುಲರ್ ಆದಮೇಲೆ ಆ ಸೀರಿಯಲ್‌ ಅನ್ನೇ ಎರಡು ಭಾಗವಾಗಿ ಒಡೆದು ಅದರಲ್ಲೊಂದು 'ಲಕ್ಷ್ಮೀ ಬಾರಮ್ಮ' ಆಗಿ ಅದನ್ನೀಗ ಇವರು ನಿರ್ದೇಶನ ಮಾಡುತ್ತಿದ್ದಾರೆ. ಒಳ್ಳೆ ಟಿಆರ್ಪಿ ಜೊತೆ ಫೇಮಸ್ ಕೂಡ ಆಗ್ತಿದೆ. ಸೋ ಯಶವಂತ ಪಾಂಡು ಲಾಯರ್ ಪಾತ್ರಕ್ಕೆ ಜನ ಮೆಚ್ಚುಗೆ ಸಿಕ್ಕಿದೆ. ಇನ್ಮೇಲೂ ಇವರು ತನ್ನ ಗುರು ಸಿಎಸ್‌ಪಿ ಅರ್ಥಾತ್‌ ಟಿಎನ್ಎಸ್‌ ಅವರಂತೆ ಹೆಚ್ಚೆಚ್ಚು ಲಾಯರ್ ಪಾತ್ರದಲ್ಲಿ ಮಿಂಚುತ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.

 

Latest Videos
Follow Us:
Download App:
  • android
  • ios