ಪುಟ್ಟಕ್ಕನ ಮಕ್ಕಳು ಸೀರಿಯಲ್​ ತಂಡ ಸ್ನೇಹಾಳ ಭರತನಾಟ್ಯ ಸ್ಟೆಪ್​ಗೆ ತಮ್ಮದೇ ಆದ ರೀತಿಯಲ್ಲಿ ಡ್ಯಾನ್ಸ್​ ಮಾಡಿದ್ದಾರೆ 

ಝೀ ಟಿ.ವಿಯಲ್ಲಿ ಪ್ರಸಾರ ಆಗ್ತಿರೋ ಪುಟ್ಟಕ್ಕನ ಮಕ್ಕಳು (Puttakkana Makkalu) ಸದಾ ಟಿಆರ್​ಪಿಯಲ್ಲಿ ಟಾಪ್​ಮೋಸ್ಟ್​ ಸ್ಥಾನ ಪಡೆದು ಮುನ್ನುಗ್ಗುತ್ತಿದೆ. ದಿನದಿಂದ ದಿನಕ್ಕೆ ವೀಕ್ಷಕರ ಸಂಖ್ಯೆಯನ್ನು ಈ ಧಾರಾವಾಹಿ ಪಡೆದುಕೊಳ್ಳುತ್ತಿದೆ. ಗಂಡ ತನ್ನನ್ನು ಬಿಟ್ಟು ಇನ್ನೊಂದು ಮದುವೆಯಾದರೂ ಪುಟ್ಟಕ್ಕ ತನ್ನ ಮೂರು ಹೆಣ್ಣುಮಕ್ಕಳಾದ ಸಹನಾ, ಸ್ನೇಹಾ ಮತ್ತು ಸುಮಾ ಅವರನ್ನು ಹೇಗೆ ಕಷ್ಟಪಟ್ಟು ಸಾಕುತ್ತಿದ್ದಾಳೆ ಎನ್ನುವ ಕಥಾಹಂದರವನ್ನು ಈ ಧಾರಾವಾಹಿ ಹೊಂದಿದೆ. ಚಿಕ್ಕದೊಂದು ಕ್ಯಾಂಟೀನ್​ ನಡೆಸಿಕೊಂಡು ಮಕ್ಕಳನ್ನು ಈಕೆ ಸಾಕುವ ಪರಿಯಿಂದ ಉತ್ತೇಜನಗೊಂಡು ನಿಜ ಜೀವನದಲ್ಲಿ ಎಷ್ಟೋ ತಾಯಂದಿರು ತಮಗೆ ಇದು ಸ್ಫೂರ್ತಿ ಕೊಟ್ಟಿದೆ ಎಂದೂ ಹೇಳಿದ್ದುಂಟು. ತಮ್ಮ ಕಥೆ ಕೂಡ ಪುಟ್ಟಕ್ಕನ ಕಥೆಗಿಂತ ಭಿನ್ನವಾಗಿಲ್ಲ ಎಂದು ಮಾಧ್ಯಮದ ಮುಂದೆ ಬಂದು ಕಣ್ಣೀರಾಕಿದ್ದೂ ಇದೆ. ಹಾಗೆ ಪುಟ್ಟಕ್ಕನಲ್ಲಿ ತಮ್ಮತನವನ್ನು ಕಂಡುಕೊಳ್ಳುವಷ್ಟರ ಮಟ್ಟಿಗೆ ಈ ಧಾರಾವಾಹಿ ಮನೆಮಾತಾಗಿದೆ.

ಇದು ಒಂದೆಡೆಯಾದರೆ, ಪುಟ್ಟಕ್ಕನ ಮಕ್ಕಳು ಟೀಮ್​ ಸಾಮಾಜಿಕ ಜಾಲತಾಣದಲ್ಲಿಯೂ ಸಕತ್​ ಆ್ಯಕ್ಟೀವ್​. ಅದರಲ್ಲಿಯೂ ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ ಆಗಾಗ್ಗೆ ರೀಲ್ಸ್​ ಶೇರ್​ ಮಾಡುತ್ತಲೇ ಇರುತ್ತಾರೆ. ಇದೀಗ ತಂಡದ ಹಲವು ಕಲಾವಿದರು ಭರ್ಜರಿ ಸ್ಟೆಪ್​ ಹಾಕಿದ್ದಾರೆ. ಮೊದಲಿಗೆ ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ ಅವರು ಭರತನಾಟ್ಯದ ಸ್ಟೈಲ್​ನಲ್ಲಿ ಒಂದು ಸ್ಟೆಪ್​ ಹಾಕಿ ಎಲ್ಲರಿಗೂ ಮಾಡಲು ಹೇಳಿದ್ದಾರೆ. ಇವರು ಮಾಡಿದಂತೆಯೇ ಇನ್ನುಳಿದ ಕಲಾವಿದರೂ ತಮ್ಮದೇ ಆದ ರೀತಿಯಲ್ಲಿ ಹೆಜ್ಜೆ ಹಾಕಿದ್ದು, ಇವರ ಫ್ಯಾನ್ಸ್​ ಬಿದ್ದೂ ಬಿದ್ದೂ ನಗುವಂತಿದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಸ್ಟೆಪ್​ ಹಾಕಿದ್ದಾರೆ.

ಹಸಿರಿನಲ್ಲಿ ಕಂಗೊಳಿಸಿದ ಪುಟ್ಟಕ್ಕನ ಮಕ್ಕಳು ಸ್ನೇಹಾ: ಕಂಠಿಯನ್ನೇ ಮದ್ವೆಯಾಗಿ ಮೆಸ್ಸು ಅಂತಿದ್ದಾರೆ ಫ್ಯಾನ್ಸ್‌!

ಇದಕ್ಕೆ ಥಹರೇವಾರಿ ಕಮೆಂಟ್ಸ್​ ಸುರಿಮಳೆಯಾಗಿದೆ. ಒಬ್ಬೊಬ್ಬರು ತಮ್ಮಿಷ್ಟದ ಕಲಾವಿದರ ಡ್ಯಾನ್ಸ್​ ಸೂಪರ್ ಎನ್ನುತ್ತಿದ್ದಾರೆ. ಇದರಲ್ಲಿ ಹೆಚ್ಚಿನವರು ಕಂಠಿಯ ಡ್ಯಾನ್ಸ್​ಗೆ ಫಿದಾ ಆಗಿದ್ದಾರೆ. ಪಟಾಲಮ್ಮನ ಡ್ಯಾನ್ಸ್​ಗೆ ಭರ್ಜರಿ ಎನ್ನುವ ಶೀರ್ಷಿಕೆಯೊಂದಿಗೆ ಈ ರೀಲ್ಸ್​ ಶೇರ್​ ಆಗಿದ್ದು, ಹಲವರು ಕಂಠಿಗೆ ಕೊಂಡಾಡುತ್ತಿದ್ದಾರೆ. 

ಅಂದಹಾಗೆ ಕಂಠಿ ಪಾತ್ರಧಾರಿಯ ನಿಜವಾದ ಹೆಸರು ಧನುಷ್​. ಇದಾಗಲೇ ಇವರು ಕಿರುಚಿತ್ರಗಳಲ್ಲಿ ನಟಿಸಿದ್ದಾರೆ. 'ನನ್ನ ನಗು'ಎಂಬ ಹಾಡಿನ ಆಲ್ಬಂ ಕೂಡ ಮಾಡಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ನಾಯಕನಾಗಬೇಕು ಎಂಬ ಕನಸು ಕಂಡವರು. ಕೋಲಾರ ಜಿಲ್ಲೆಯ ಸಂತೆಹಳ್ಳಿ ಇವರ ಊರು. ಧನುಷ್ ಅವರು ಎಂಜಿನಿಯರಿಂಗ್ ಮುಗಿಯುತ್ತಿದ್ದಂತೆಯೇ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಆಡಿಷನ್‌ನಲ್ಲಿ ಆಯ್ಕೆಯಾದರು. ಇತ್ತೀಚೆಗಷ್ಟೇ ಧನುಷ್ ಗೌಡ ಕಾಣಿಸಿಕೊಂಡಿದದ 'ಮನಸೆಲ್ಲಾ ನೀನೇ' ಆಲ್ಬಂ ರಿಲೀಸ್ ಆಗಿತ್ತು.

ಅಮ್ಮ ಎಂದ್ರೆ ಹೀಗಿರ್ಬೇಕು ನೋಡಿ... ಒಲವಿನ ನಿಲ್ದಾಣದ ಪ್ರಾಚಿ ತಾಯಿಗೆ ಭೇಷ್​ ಭೇಷ್​ ಅಂತಿದ್ದಾರೆ ನೆಟ್ಟಿಗರು

View post on Instagram