ಹಸಿರಿನಲ್ಲಿ ಕಂಗೊಳಿಸಿದ ಪುಟ್ಟಕ್ಕನ ಮಕ್ಕಳು ಸ್ನೇಹಾ: ಕಂಠಿಯನ್ನೇ ಮದ್ವೆಯಾಗಿ ಮೆಸ್ಸು ಅಂತಿದ್ದಾರೆ ಫ್ಯಾನ್ಸ್!
ಹಸಿರು ಉಡುಗೆ ತೊಟ್ಟು ಪುಟ್ಟಕ್ಕನ ಮಕ್ಕಳು ಸ್ನೇಹಾ ಫೋಟೋಶೂಟ್: ಕಂಠಿಯನ್ನೇ ಮದ್ವೆಯಾಗಿ ಮೆಸ್ಸು ಅಂತಿದ್ದಾರೆ ಫ್ಯಾನ್ಸ್!
ಕಿರುತೆರೆಯ ಮೂಲಕ ಮನೆಮಂದಿಗೆ ಹತ್ತಿರವಾಗುವ ಕೆಲ ನಟ-ನಟಿಯರು ಸಾಮಾಜಿಕ ಜಾಲತಾಣದಲ್ಲಿಯೂ ಸಕತ್ ಆ್ಯಕ್ಟೀವ್ ಆಗಿದ್ದಾರೆ. ಅಂಥವರಲ್ಲಿ ಒಬ್ಬರು ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ಖ್ಯಾತಿಯ ಸ್ನೇಹಾ. ಸ್ನೇಹಾ ಅವರ ಅಸಲಿ ಹೆಸರು ಸಂಜನಾ ಬುರ್ಲಿ. ಈ ಧಾರಾವಾಹಿಯಲ್ಲಿ ಹೈಲೈಟ್ ಆಗಿರೋದು ಪುಟ್ಟಕ್ಕನ ಮೂವರು ಹೆಣ್ಣುಮಕ್ಕಳು. ಅದರಲ್ಲಿ ಸ್ನೇಹಾ ನಾಯಕಿಯೇ. ಧಾರಾವಾಹಿ ಪ್ರಿಯರ ಮನಸ್ಸನ್ನು ಗೆದ್ದು, ಕದ್ದು ಬೀಗುತ್ತಿರೋ ನಟಿಯರಲ್ಲಿ ಒಬ್ಬರು ಈಕೆ. ಧಾರಾವಾಹಿಯಲ್ಲಿನ ಸಂಜನಾ ಅವರ ಪಾತ್ರ ಎಷ್ಟೋ ಮಂದಿಗೆ ಮಾದರಿಯಾಗಿದೆ. ರೌಡಿ ಕಂಠಿಯ ಜೊತೆಗಿನ ಸಂಪ್ರದಾಯಸ್ಥ ಹೆಣ್ಣುಮಗಳು ಸ್ನೇಹಾಳ ಲವ್ ಸ್ಟೋರಿಯೇ ಈ ಧಾರಾವಾಹಿಯ ಬಂಡವಾಳ. ಇಂತಿಪ್ಪ ಸ್ನೇಹಾ ಅಲಿಯಾ ಸಂಜನಾ ಅವರು ಸೋಷಿಯಲ್ ಮೀಡಿಯಾದಲ್ಲಿಯೂ ಸಕತ್ ಆ್ಯಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ನಟಿ ರಾಣಿಯಂತೆ ವೇಷ ಧರಿಸಿಕೊಂಡು ಸಕತ್ ಕ್ಯೂಟ್ ಆಗಿ ಕಾಣಿಸುತ್ತಿದ್ದರು. ಆಗಿರೋ ಸಂಜನಾ ಅವರು ಇನ್ಸ್ಟಾಗ್ರಾಮ್ನಲ್ಲಿ ಇದರ ವಿಡಿಯೋ ಶೇರ್ ಮಾಡಿಕೊಂಡಿದ್ದರು. ಹಾರ್ಟ್ ಎಮೋಜಿಗಳಿಂದ ಕಮೆಂಟ್ ಬಾಕ್ಸ್ ತುಂಬಿ ಹೋಗಿತ್ತು.
ಇದರ ಮಧ್ಯೆಯೇ ಪುಟ್ಟಕ್ಕನ ಮಕ್ಕಳು ವಿಷಯಕ್ಕೆ ಬರುವುದಾದರೆ, ಸ್ನೇಹಾ ಮತ್ತು ಕಂಠಿಯ ನಡುವಿನ ಸ್ನೇಹ ಕೊನೆಗೂ ಇಬ್ಬರ ಮದುವೆಯಾಗಿದೆ. ಮದುವೆಯಾಗಿರುವ ಸ್ಥಿತಿ ಸರಿಯಿಲ್ಲದೇ ಅದು ಸ್ನೇಹಾಳ ಕೋಪಕ್ಕೆ ಕಾರಣವಾಗಿದ್ದರೂ, ಇದೀಗ ಎಲ್ಲವೂ ಸುಗಮವಾಗುವ ಹಾದಿ ಬಂದಿದೆ. ಸ್ನೇಹಾ ಮತ್ತು ಕಂಠಿಯ ಅಮ್ಮ ಬಂಗಾರಮ್ಮನ ನಡುವಿನ ಮುನಿಸಿಗೂ ಕೊನೆ ಹಾಡುವ ಕಾಲ ಬಂದಿದೆ ಎಂದೇ ಹೇಳಬಹುದು. ಅದೇನೇ ಇದ್ದರೂ ಸ್ನೇಹಾ ಮತ್ತು ಕಂಠಿಯ ಜೋಡಿಗೆ ಫ್ಯಾನ್ಸ್ ಫಿದಾ ಆಗಿದ್ದಂತೂ ಹೌದು.
JODI NO. 1 ವೇದಿಕೆಯಲ್ಲಿ ಹರಿದಾಡ್ತಿವೆ ಭಯಾನಕ ಹಾವುಗಳು! ಸರ ಸರ ನಾಗಪ್ಪ ಹೇಗಿದೆ ನೋಡಿಬಿಡಿ...
ಇದೀಗ ನಟಿ ಸಂಜನಾ, ಹಸಿರು ಡ್ರೆಸ್ ಧರಿಸಿ ಸಕತ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇದಕ್ಕೂ ಎಂದಿನಂತೆ ಫ್ಯಾನ್ಸ್ ಮೆಚ್ಚುಗೆ ಸೂಸುತ್ತಿದ್ದಾರೆ. ನೀವು ರಾಣಿ ಎಂದು ಕೆಲವರು ಹೇಳಿದ್ದರೆ, ನಿಮ್ಮ ನಟನೆ ಸೂಪರ್ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ಇದರಲ್ಲಿ ಗಮನ ಸೆಳೆದಿರುವುದು ಕೆಲವರು ಕಂಠಿಯನ್ನೇ ನಿಜ ಜೀವನದಲ್ಲಿಯೂ ಮದ್ವೆಯಾಗಿ ಎಂದು ಹೇಳುತ್ತಿರುವುದು. ಈ ಧಾರಾವಾಹಿಯಲ್ಲಿ ಸ್ನೇಹಾ ಅಮ್ಮ ಪುಟ್ಟಕ್ಕ ಮೆಸ್ ನಡೆಸುತ್ತಿರುವ ಕಾರಣ, ಸ್ನೇಹಾ ಕೂಡ ಅಲ್ಲಿಯೇ ಕೆಲಸ ಮಾಡುತ್ತಿದ್ದಳು. ಈ ಹಿನ್ನೆಲೆಯಲ್ಲಿ ಕಂಠಿ ಕೂಡ ಸ್ನೇಹಾಳನ್ನು ಮೆಸ್ಸು ಎಂದೇ ಕರೆಯೋದು. ಇದನ್ನೇ ಅಭಿಮಾನಿಗಳೂ ಹೇಳಿದ್ದು, ಮೆಸ್ಸು ದಯವಿಟ್ಟು ನಿಜ ಜೀವನದಲ್ಲೂ ಕಂಠಿಯನ್ನೇ ಮದ್ವೆಯಾಗಿ ಎಂದಿದ್ದಾರೆ. ಈ ಬಗ್ಗೆ ಹಿಂದೆ ಫ್ಯಾನ್ಸ್ ಹೇಳಿದ್ದಾಗ ನಟಿ, ನಾವಿಬ್ಬರೂ ಧಾರಾವಾಹಿಯಲ್ಲಿ ಮಾತ್ರ ಗಂಡ-ಹೆಂಡತಿ. ದಯವಿಟ್ಟು ಅರ್ಥ ಮಾಡಿಕೊಳ್ಳಿ ಎಂದಿದ್ದರು. ಈಗ ಮತ್ತೊಮ್ಮೆ ಅದನ್ನೇ ಹೇಳುತ್ತಿದ್ದಾರೆ ಫ್ಯಾನ್ಸ್.
ಇನ್ನು ಸಂಜನಾ ಅವರ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಎಂಟ್ರಿ ಕೊಟ್ಟಿರುವ ಕುರಿತು ಹೇಳುವುದಾದರೆ, ಈ ಹಿಂದೆ ಅವರೇ ಸಂದರ್ಶನವೊಂದರಲ್ಲಿ ವಿಷಯವನ್ನು ಬಹಿರಂಗಪಡಿಸಿದ್ದರು. ಇವರ ಮೊದಲ ಧಾರಾವಾಹಿ 'ಲಗ್ನಪತ್ರಿಕೆ'. ಕಾರಾಣಾಂತರಗಳಿಂದ ಪ್ರಸಾರ ನಿಲ್ಲಿಸಿತ್ತು. ನಂತರ ಧಾರಾವಾಹಿಯ ಉಸಾಬರಿ ಬೇಡ ಎಂದು ವಿದ್ಯಾಭ್ಯಾಸದ ಕಡೆ ಗಮನ ಕೊಟ್ಟಿದ್ದರು ನಟಿ. ಆರೂರು ಜಗದೀಶ್ ಅವರು 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ನಟಿಸುವಂತೆ ಕೇಳಿದ್ದರೂ ಸ್ನೇಹಾ ಅದಕ್ಕೆ ಒಪ್ಪಿರಲಿಲ್ಲ. ಕೊರೋನಾ ಮುಗಿದು ಕಾಲೇಜು ಶುರುವಾಗಿದ್ದರಿಂದ ವಿದ್ಯಾಭ್ಯಾಸಕ್ಕೆ ಕಷ್ಟ ಆಗುತ್ತೆ ಎಂದು ಬೇಡ ಎಂದರು. ನಂತರ ಪುನಃ ಕೊರೋನಾದಿಂದ ಆನ್ಲೈನ್ ತರಗತಿ ಶುರುವಾದ ಕಾರಣ, ಈ ಧಾರಾವಾಹಿಗೆ ಅವರು ಒಪ್ಪಿದರು. ನಟನೆ ಮತ್ತು ಓದನ್ನು ಬ್ಯಾಲೆನ್ಸ್ ಮಾಡಬಹುದು ಎಂದು ಧೈರ್ಯ ಮಾಡದೇ ಹೋಗಿದ್ದರೆ ಪಾತ್ರದ ಯಶಸ್ಸನ್ನು ನಾನು ಕಳೆದುಕೊಳ್ಳುತ್ತಿದ್ದೆ ಎನ್ನುತ್ತಾರೆ ಸಂಜನಾ.
'ಸೀತಾ ರಾಮ' ತಂಡದ ಬಾಯಲ್ಲಿ ಕೇಳಿ ಸಪ್ತಸಾಗರದಾಚೆಯಲ್ಲೋ ಹಾಡು: ಸಿಹಿನೇ ಸೂಪರ್ ಎಂದ ಫ್ಯಾನ್ಸ್!