ರಿಯಲ್​ ಪತಿ ಜೊತೆ ಪುಟ್ಟಕ್ಕನ ಮಕ್ಕಳ ರಾಜಿ ಭರ್ಜರಿ ಡ್ಯಾನ್ಸ್​: ರೀಲ್​ ಪತಿ ಎಲ್ಲಮ್ಮಾ ಕೇಳಿದ ಫ್ಯಾನ್ಸ್​

ಪುಟ್ಟಕ್ಕನ ಮಕ್ಕಳು ರಾಜೇಶ್ವರಿ ಅರ್ಥಾತ್​ ಹಂಸ ನಾರಾಯಣಸ್ವಾಮಿ ಅವರು ರಿಯಲ್​ ಪತಿ ಜೊತೆ ಭರ್ಜರಿ ಸ್ಟೆಪ್​ ಹಾಕಿದ್ದು, ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. 
 

Puttakkana Makkalu Rajeshwari reels with her real husband and netizens reacts suc

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಟಿಆರ್​ಪಿಯಲ್ಲಿಯೂ ಸದಾ ಟಾಪೆಸ್ಟ್​ ಸ್ಥಾನವನ್ನು ಉಳಿಸಿಕೊಂಡು ಬಂದಿದೆ. ಗಂಡ ಬಿಟ್ಟು ಇನ್ನೊಂದು ಮದುವೆಯಾದರೂ ಪುಟ್ಟಕ್ಕ ತನ್ನ ಮೂರು ಹೆಣ್ಣುಮಕ್ಕಳಾದ  ಸಹನಾ,  ಸ್ನೇಹಾ ಮತ್ತು  ಸುಮಾ ಅವರನ್ನು ಹೇಗೆ ಕಷ್ಟಪಟ್ಟು ಸಾಕುತ್ತಿದ್ದಾಳೆ ಎನ್ನುವ ಕಥಾಹಂದರವನ್ನು ಈ ಧಾರಾವಾಹಿ ಹೊಂದಿದ್ದರೆ, ಕುತೂಹಲ ಘಟ್ಟದಲ್ಲಿ ಇದೀಗ ಸಹನಾ ಮೂರ್ತಿಯಂತಿದ್ದ ಸಹನಾ, ಅತ್ತೆಯ ವಿರುದ್ಧ ತಿರುಗಿ ಬಿದ್ದಿದ್ದಾಳೆ. ತನ್ನ ಮೇಲೆ ದೌರ್ಜನ್ಯ ಎಸಗುವವರಿಗೆ ತಕ್ಕ ಪಾಠ ಕಲಿಸುತ್ತಿದ್ದಾಳೆ. 
 
ಈ ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರಧಾರಿ, ನಟಿ ಉಮಾಶ್ರಿ ಅವರಷ್ಟೇ ಸಕತ್​ ಫೇಮಸ್​ ಆಗಿರೋ ನಟಿಯೆಂದರೆ ಪುಟ್ಟಕ್ಕನ ಸವತಿ ಅರ್ಥಾತ್​ ಪತಿಯ ಎರಡನೆಯ ಪತ್ನಿಯ ಪಾತ್ರದಲ್ಲಿ ನಟಿಸ್ತಿರೋ ರಾಜೇಶ್ವರಿ.  ರಾಜೇಶ್ವರಿ ಎಂದಾಕ್ಷಣ ಧಾರಾವಾಹಿ ಪ್ರಿಯರ ಕಣ್ಣಮುಂದೆ ಈ ಪುಟ್ಟಕ್ಕನ ಮಕ್ಕಳ ಧಾರಾವಾಹಿಯ ವಿಲನ್​ ಪಾತ್ರವೇ ಹಾದುಹೋಗುವಷ್ಟರ ಮಟ್ಟಿಗೆ ರಾಜೇಶ್ವರಿ (Rajeshwari) ಪಾತ್ರ ಜೀವ ತುಂಬಿದೆ. ಗಂಡ ಇಲ್ಲದಿದ್ದರೂ ಕ್ಷಣ ಕ್ಷಣಕ್ಕೂ ನೋವನ್ನೇ ಪುಟ್ಟಕ್ಕ ಅನುಭವಿಸುತ್ತಿದ್ದರೂ ಅವರ ಮನೆಯ ಸಮೀಪವೇ ಇದ್ದು, ಕ್ಷಣ ಕ್ಷಣಕ್ಕೂ ಆಕೆಗೆ ತೊಂದರೆ ಕೊಡುವಲ್ಲಿ ಈ ಸವತಿ ರಾಜೇಶ್ವರಿಯದ್ದು ಎತ್ತಿದ ಕೈ. ಪುಟ್ಟಕ್ಕನ ಪತಿಯನ್ನು ಬುಟ್ಟಿಗೆ ಹಾಕಿಕೊಂಡು ಮದುವೆಯಾದರೂ ಪುಟ್ಟಕ್ಕನಿಗೆ ತೊಂದರೆ ಕೊಡುವುದು ಎಂದರೆ ಈಕೆಗೆ ಅದೇನೋ ಖುಷಿ. ರಾಜೇಶ್ವರಿ ಬಂದರೆ ಅದೆಷ್ಟೋ ಮನೆಯಲ್ಲಿ ಆಕೆಗೆ ಹಿಡಿಶಾಪ ಹಾಕುವುದೂ ಇದೆ. ಥೇಟ್​ ವಿಲನ್​ನಂತೆ ಪಾತ್ರ ಮಾಡಿ ಆ ಪಾತ್ರಕ್ಕೆ ಜೀವ ತುಂಬುತ್ತಿರುವ ಈ ರಾಜೇಶ್ವರಿಯವರ ನಿಜವಾದ ಹೆಸರು ಹಂಸ ನಾರಾಯಣಸ್ವಾಮಿ @ ಹಂಸ ಪ್ರತಾಪ್​ (Hamsa Pratap)

ಪುಟ್ಟಕ್ಕನ ಮಕ್ಕಳು ರಾಜಿ, ಕಾಳಿ ಭರ್ಜರಿ ಡ್ಯಾನ್ಸ್​: ಗಂಡ ಕೈಕೊಟ್ಟ ಖುಷಿಗೆ ಕುಣೀತಿದ್ಯಾ ಕೇಳಿದ ಫ್ಯಾನ್ಸ್​
ಮುದ್ದು ಮೊಗದ ಹಂಸ ಅವರನ್ನು ವಿಲನ್​ ಪಾತ್ರದಲ್ಲಿ ಕಲ್ಪನೆ ಮಾಡಿಕೊಳ್ಳುವುದು ಎಷ್ಟೋ ಮಂದಿಗೆ ಅರಗಿಸಿಕೊಳ್ಳಲಾಗದ ಸತ್ಯವೇ. ಆದರೂ ರಾಜೇಶ್ವರಿ ಪಾತ್ರದೊಳಕ್ಕೆ ಹೊಕ್ಕು ಸಾಕ್ಷಾತ್​ ಖಳನಾಯಕಿಯಾಗಿ ಮಿಂಚುತ್ತಿದ್ದಾರೆ ಹಂಸ. ಹಂಸ ಅವರು ನಟನೆ ಮಾತ್ರವಲ್ಲದೇ ಇನ್​ಸ್ಟಾಗ್ರಾಮ್​ನಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಒಂದು ಪಾತ್ರವನ್ನು ತೆರೆಯ ಮೇಲೆ ನೋಡಿದವರಿಗೆ ಅವರ ಅಸಲಿ ಮುಖ ಹೇಗಿದೆ ಎಂದು ತಿಳಿಯುವುದು ಕಷ್ಟವೇ. ಆದರೆ ನಟರ ಸಾಮಾಜಿಕ ಜಾಲತಾಣದಲ್ಲಿ (Social Media) ಅವರ ನಿಜವಾದ ರೂಪವನ್ನು ತಿಳಿಯಬಹುದು. ಅದೇ ರೀತಿ ಹಂಸ ಅವರ ಇನ್​ಸ್ಟಾಗ್ರಾಮ್​ ನೋಡಿದರೆ ಅರೆರೆ ಪುಟ್ಟಕ್ಕನ ಮಕ್ಕಳಿನ ರಾಜೇಶ್ವರಿ ಇವರು ಹೌದೋ ಅಲ್ವೋ ಅನ್ನುವಷ್ಟರ ಮಟ್ಟಿಗೆ ಡಿಫರೆಂಟ್​ ಆಗಿ ಕಾಣಿಸುತ್ತದೆ. 

  ಹಂಸ ಅವರು ಇದೀಗ ತಮ್ಮ ರಿಯಲ್​ ಲೈಫ್​ ಗಂಡನ ಜೊತೆ ರೀಲ್ಸ್​ ಮಾಡಿದ್ದಾರೆ. ಪತಿ-ಪತ್ನಿಯ ರೀಲ್ಸ್​ಗೆ ಕಮೆಂಟ್​ಗಳ ಸುರಿಮಳೆಯೇ ಆಗುತ್ತಿದೆ. ಅಂದಹಾಗೆ ಹಂಸ ಅವರು, ನಟಿ, ಅನೇಕ ಆ್ಯಂಗಲ್​ಗಳಲ್ಲಿ, ಬಗೆಬಗೆಯ ಡ್ರೆಸ್​ ತೊಟ್ಟು ಹಂಸ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಲೇ ಇದ್ದಾರೆ. ಇಂದು ಕೂಡ ಹಲವಾರು ರೀತಿಯ ಡ್ರೆಸ್​ಗಳಲ್ಲಿ ಅವರು ಫೋಟೋಶೂಟ್​ (Photoshoot) ಮಾಡಿಸಿಕೊಂಡು ಅದನ್ನು ಶೇರ್​ ಮಾಡಿಕೊಂಡಿದ್ದಾರೆ. ರೆಡ್ ಬ್ಲೇಜರ್ ತೊಟ್ಟು, ಬ್ಲಾಕ್ ಕಲರ್ ಸೂಟ್, ಮಿಡಿ, ಮಿನಿ, ಫ್ರಾಕ್​, ಸಲ್ವಾರ್​, ಸೀರೆ... ಹೀಗೆ ವಿಭಿನ್ನ ಉಡುಗೆ ತೊಟ್ಟು ಅವರು ಫೋಟೋಶೂಟ್​ ಮಾಡಿಸಿಕೊಂಡಿದ್ದು ಅದರ ಫೋಟೋ ಶೇರ್​ ಮಾಡುತ್ತಿರುತ್ತಾರೆ. . ಈ ಫೋಟೋಗಳಿಗೆ ಸಕತ್​ ಕಮೆಂಟ್​ಗಳ ಸುರಿಮಳೆಯಾಗುತ್ತದೆ. ಅದೇ ರೀತಿ ಇದೀಗ ರೀಲ್​ ಪತಿ ಅಂದ್ರೆ ಪುಟ್ಟಕ್ಕನ ಮಕ್ಕಳುವಿನಲ್ಲಿ ಪತಿ, ಮೊದಲ ಪತ್ನಿ ಪುಟ್ಟಕ್ಕನ ಜೊತೆ ನೆಲೆಸುತ್ತಿರುವ ಕಾರಣ, ನೆಟ್ಟಿಗರು ಕಾಲೆಳೆದಿದ್ದಾರೆ. 

ನಟಿ ಮುಟ್ಟಿದಾಕ್ಷಣ ರೋಮಾಂಚನದಿಂದ ಕುಣಿದು ಕುಪ್ಪಳಿಸಲು ಬೆಕ್ಕೇನು ಮನುಷ್ಯರಾ? ಕರಿಷ್ಮಾ ವಿಡಿಯೋಗೆ ಸಕತ್​ ಕಮೆಂಟ್​!
 

Latest Videos
Follow Us:
Download App:
  • android
  • ios