ಪುಟ್ಟಕ್ಕನ ಮಕ್ಕಳು ರಾಜಿ, ಕಾಳಿ ಭರ್ಜರಿ ಡ್ಯಾನ್ಸ್​: ಗಂಡ ಕೈಕೊಟ್ಟ ಖುಷಿಗೆ ಕುಣೀತಿದ್ಯಾ ಕೇಳಿದ ಫ್ಯಾನ್ಸ್​

ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ವಿಲನ್ಸ್​ ರಾಜೇಶ್ವರಿ ಮತ್ತು ಕಾಳಿ ಅಕ್ಕ-ಅಮ್ಮ  ಹಾಡೊಂದಕ್ಕೆ ಸಕತ್ ಸ್ಟೆಪ್​ ಮಾಡಿದ್ದರೆ, ಫ್ಯಾನ್ಸ್​ ಇವರ ಕಾಲೆಳೆಯುತ್ತಿದ್ದಾರೆ. 
 

Puttakka Makkalu Serial  villians Rajeshwari and Kali step to the music suc

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಟಿಆರ್​ಪಿಯಲ್ಲಿಯೂ ಸದಾ ಟಾಪೆಸ್ಟ್​ ಸ್ಥಾನವನ್ನು ಉಳಿಸಿಕೊಂಡು ಬಂದಿದೆ. ಗಂಡ ಬಿಟ್ಟು ಇನ್ನೊಂದು ಮದುವೆಯಾದರೂ ಪುಟ್ಟಕ್ಕ ತನ್ನ ಮೂರು ಹೆಣ್ಣುಮಕ್ಕಳಾದ  ಸಹನಾ,  ಸ್ನೇಹಾ ಮತ್ತು  ಸುಮಾ ಅವರನ್ನು ಹೇಗೆ ಕಷ್ಟಪಟ್ಟು ಸಾಕುತ್ತಿದ್ದಾಳೆ ಎನ್ನುವ ಕಥಾಹಂದರವನ್ನು ಈ ಧಾರಾವಾಹಿ ಹೊಂದಿದೆ. ಚಿಕ್ಕದೊಂದು ಕ್ಯಾಂಟೀನ್​ ನಡೆಸಿಕೊಂಡು ಮಕ್ಕಳನ್ನು ಈಕೆ ಸಾಕುವ ಪರಿಯಿಂದ ಉತ್ತೇಜನಗೊಂಡು ನಿಜ ಜೀವನದಲ್ಲಿ ಎಷ್ಟೋ ತಾಯಂದಿರು ತಮಗೆ ಇದು ಸ್ಫೂರ್ತಿ ಕೊಟ್ಟಿದೆ ಎಂದೂ ಹೇಳಿದ್ದುಂಟು. ತಮ್ಮ ಕಥೆ ಕೂಡ ಪುಟ್ಟಕ್ಕನ ಕಥೆಗಿಂತ ಭಿನ್ನವಾಗಿಲ್ಲ ಎಂದು ಮಾಧ್ಯಮದ ಮುಂದೆ ಬಂದು ಕಣ್ಣೀರಾಕಿದ್ದೂ ಇದೆ. ಹಾಗೆ ಪುಟ್ಟಕ್ಕನಲ್ಲಿ ತಮ್ಮತನವನ್ನು ಕಂಡುಕೊಳ್ಳುವಷ್ಟರ ಮಟ್ಟಿಗೆ ಈ ಧಾರಾವಾಹಿ ಮನೆಮಾತಾಗಿದ್ದು ಟಿಆರ್​ಪಿಯಲ್ಲಿಯೂ ಮುಂದಿದೆ. 

ಇದೀಗ ಧಾರಾವಾಹಿ ಕುತೂಹಲ ಹಂತಕ್ಕೆ ತಲುಪಿದೆ. ಸದ್ಯ ಪುಟ್ಟಕ್ಕ ತೀರ್ಮಾನ ಕೊಡುವ ಸ್ಥಾನದಲ್ಲಿ ಕುಳಿತಿದ್ದಾಳೆ. ಬಂಗಾರಮ್ಮನ ಜಾಗದಲ್ಲಿ ಕುಳಿತು ತೀರ್ಪು ನೀಡುವ ಪರಿಸ್ಥಿತಿ ಬಂದಿದೆ. ಆದರೆ ಆಕೆ, ತೀರ್ಪು ನೀಡುವ ಖುರ್ಚಿಗೆ ಕೈಮುಗಿದು ನಿಂತಲ್ಲಿಂದಲೇ ತೀರ್ಪು ಕೊಡಲು ರೆಡಿಯಾಗಿದ್ದಾಳೆ. ಅಷ್ಟಕ್ಕೂ ಅಲ್ಲಿ ಈಗ ತೀರ್ಪು ನಡೆಯುತ್ತಿರುವುದು ಬಂಗಾರಮ್ಮನ ಮಗಳು ಅತ್ತೆಯ ಜೊತೆ ಹೋಗಬೇಕೋ,ಬೇಡವೋ ಎಂಬ ಬಗ್ಗೆ. ಇಲ್ಲಿಯೂ ರಾಜಿಯ ಕಿತಾಪತಿ ಕಾಣುತ್ತಿದೆ. ನಂಜಮ್ಮ ತನ್ನ ಮಗ ಮತ್ತು ಸೊಸೆಯನ್ನು ಮನೆಗೆ ಕರೆದುಕೊಂಡು ಬರುವಂತೆ ಮಾಡಲು ರಾಜಿ ಕಿತಾಪತಿ ಮಾಡಿದ್ದು, ನಡುವೆ ಪುಟ್ಟಕ್ಕನನ್ನು ಸಿಲುಕಿಸಿದ್ದಾರೆ. ಈಗ ಪುಟ್ಟಕ್ಕ ಹೇಗೆ ತೀರ್ಮಾನ ಕೊಡುತ್ತಾಳೆ, ತೀರ್ಪು ಯಾರ ಪರ ಬರುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. 

ಅತಿ ಒಳ್ಳೆಯತನ ಒಳ್ಳೆಯದಲ್ಲ... ಕೇಡು ಬಯಸೋರಿಗೇ ಜಯ ಸಿಗೋ ಕಾಲವಿದು- ತುಳಸಿಗೆ ಬುದ್ಧಿಮಾತು

ಈ ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರಧಾರಿ, ನಟಿ ಉಮಾಶ್ರಿ ಅವರಷ್ಟೇ ಸಕತ್​ ಫೇಮಸ್​ ಆಗಿರೋ ನಟಿಯೆಂದರೆ ಪುಟ್ಟಕ್ಕನ ಸವತಿ ಅರ್ಥಾತ್​ ಪತಿಯ ಎರಡನೆಯ ಪತ್ನಿಯ ಪಾತ್ರದಲ್ಲಿ ನಟಿಸ್ತಿರೋ ರಾಜೇಶ್ವರಿ.  ರಾಜೇಶ್ವರಿ ಎಂದಾಕ್ಷಣ ಧಾರಾವಾಹಿ ಪ್ರಿಯರ ಕಣ್ಣಮುಂದೆ ಈ ಪುಟ್ಟಕ್ಕನ ಮಕ್ಕಳ ಧಾರಾವಾಹಿಯ ವಿಲನ್​ ಪಾತ್ರವೇ ಹಾದುಹೋಗುವಷ್ಟರ ಮಟ್ಟಿಗೆ ರಾಜೇಶ್ವರಿ (Rajeshwari) ಪಾತ್ರ ಜೀವ ತುಂಬಿದೆ. ಗಂಡ ಇಲ್ಲದಿದ್ದರೂ ಕ್ಷಣ ಕ್ಷಣಕ್ಕೂ ನೋವನ್ನೇ ಪುಟ್ಟಕ್ಕ ಅನುಭವಿಸುತ್ತಿದ್ದರೂ ಅವರ ಮನೆಯ ಸಮೀಪವೇ ಇದ್ದು, ಕ್ಷಣ ಕ್ಷಣಕ್ಕೂ ಆಕೆಗೆ ತೊಂದರೆ ಕೊಡುವಲ್ಲಿ ಈ ಸವತಿ ರಾಜೇಶ್ವರಿಯದ್ದು ಎತ್ತಿದ ಕೈ. ಪುಟ್ಟಕ್ಕನ ಪತಿಯನ್ನು ಬುಟ್ಟಿಗೆ ಹಾಕಿಕೊಂಡು ಮದುವೆಯಾದರೂ ಪುಟ್ಟಕ್ಕನಿಗೆ ತೊಂದರೆ ಕೊಡುವುದು ಎಂದರೆ ಈಕೆಗೆ ಅದೇನೋ ಖುಷಿ. ರಾಜೇಶ್ವರಿ ಬಂದರೆ ಅದೆಷ್ಟೋ ಮನೆಯಲ್ಲಿ ಆಕೆಗೆ ಹಿಡಿಶಾಪ ಹಾಕುವುದೂ ಇದೆ. ಥೇಟ್​ ವಿಲನ್​ನಂತೆ ಪಾತ್ರ ಮಾಡಿ ಆ ಪಾತ್ರಕ್ಕೆ ಜೀವ ತುಂಬುತ್ತಿರುವ ಈ ರಾಜೇಶ್ವರಿಯವರ ನಿಜವಾದ ಹೆಸರು ಹಂಸ ನಾರಾಯಣಸ್ವಾಮಿ @ ಹಂಸ ಪ್ರತಾಪ್​ (Hamsa Pratap)

ಅದೇ ಇನ್ನೊಂದೆಡೆ, ರಾಜೇಶ್ವರಿ ತಮ್ಮನ ಪಾರ್ಟ್​ ಮಾಡುತ್ತಿರುವ ಕಾಳಿಯ ನಿಜವಾದ ಹೆಸರು ಅನಿರಿಶ್​. ಈ ಧಾರಾವಾಹಿಯಲ್ಲಿ ರಾಜೇಶ್ವರಿ ಹಾಗೂ ಅನಿರಿಶ್​ ಅವರದ್ದು ಅಕ್ಕ-ತಮ್ಮನ ಪಾತ್ರ. ಇದೀಗ ಈ ಅಕ್ಕ-ತಮ್ಮ ಸೇರಿ ಸಕತ್​ ರೀಲ್ಸ್​ ಮಾಡಿದ್ದಾರೆ.  Premika Ne Pyar Se (With Jhankar Beats) ಹಾಡಿಗೆ ಇಬ್ಬರೂ ಸಕತ್​ ಸ್ಟೆಪ್​ ಹಾಕಿದ್ದಾರೆ. ಅದಕ್ಕೆ ಫ್ಯಾನ್ಸ್​ ಹಂಸ ಅವರ ಕಾಲೆಳೆಯುತ್ತಿದ್ದಾರೆ. ಸದ್ಯ ಪುಟ್ಟಕ್ಕನ ಗಂಡ, ರಾಜಿಯ ಕುತಂತ್ರ ತಿಳಿದು ಪುಟ್ಟಕ್ಕನ ಜೊತೆಯಲ್ಲಿ ವಾಸಿಸುತ್ತಿದ್ದಾನೆ. ತನಗೆ ರಾಜಿ, ಕಾಳಿಯ ನೆನಪೇ ಇಲ್ಲ ಎನ್ನುವಂತೆ ನಾಟಕ ಮಾಡುತ್ತಿದ್ದಾನೆ. ಇದೇ ಕಾರಣಕ್ಕೆ ಗಂಡ ಕೈಕೊಟ್ಟ ಎನ್ನುವ ಖುಷಿಯಲ್ಲಿ ಡ್ಯಾನ್ಸ್​ ಮಾಡುತ್ತಿರುವಿರಾ ಎಂದು ನೆಟ್ಟಿಗರು ರಾಜಿಯ ಕಾಲೆಳೆಯುತ್ತಿದ್ದಾರೆ. ಅಕ್ಕನ ಸ್ಥಿತಿ ಅಧೋಗತಿಗೆ ತಲುಪಿರುವಾಗ ಅಕ್ಕನ ಜೊತೆ ನೀನೂ ಡ್ಯಾನ್ಸ್​  ಮಾಡುತ್ತೀಯಾ ಎಂದು ಕಾಳಿಯ ಕಾಲೂ ಎಳೆಯುತ್ತಿದ್ದಾರೆ. 
 

Latest Videos
Follow Us:
Download App:
  • android
  • ios