ಪುಟ್ಟಕ್ಕನ ಮಕ್ಕಳು ಕಂಠಿ ನಿಗೂಢ ಕಣ್ಮರೆ ! ಪೊಲೀಸ್ ಇಲಾಖೆಯಿಂದ ಹೀಗೊಂದು ನೋಟಿಸ್‌ ಜಾರಿ...

ಪುಟ್ಟಕ್ಕನ ಮಕ್ಕಳು ಕಂಠಿ ಕಾಣೆಯಾಗಿದ್ದಾನೆ. ಪೊಲೀಸ್‌ ಇಲಾಖೆಯಿಂದ ನೋಟಿಸ್‌ ಜಾರಿಯಾಗಿದೆ. ಏನಿದು ವಿಷ್ಯ? 
 

Puttakkana Makkalu Kanthi is  missing A notice has been issued by the police department suc

ಪುಟ್ಟಕ್ಕನ ಮಕ್ಕಳು ಸೀರಿಯಲ್‌ನ ಕಂಠಿ ಮಿಸ್ಸಿಂಗ್‌ ಆಗಿದ್ದಾನೆ. ಪೊಲೀಸ್‌ ಇಲಾಖೆಗೆ ಬೇಕಾಗಿದ್ದಾನೆ. ಹಲವರ ಮೇಲೆ ಹಲ್ಲೆ ಮಾಡಿರುವ  ಗಂಭೀರ ಆರೋಪ ಆತನ ಮೇಲಿದೆ. ಇವನನ್ನು ಸದ್ಯದ ಮಟ್ಟಿಗೆ ಬಚಾವ್‌ ಮಾಡಿ ಸ್ನೇಹಾ ಜೈಲು ಸೇರಿದ್ದಾಳೆ. ಆದರೆ ಮರದ ಮೇಲೆ ಎರಡು ಹೆಣಗಳು ನೇತಾಡಿರುವುದು ಕಂಡುಬಂದಿದ್ದು, ಇದರ ಹಿಂದೆ ಕಂಠಿಯದ್ದೇ ಕೈವಾಡ ಇದೆ ಎನ್ನುವುದು ಪೊಲೀಸ್‌ ಇಲಾಖೆಯ ಗುಮಾನಿ. ಅದೇ ಇನ್ನೊಂದೆಡೆ ಕಂಠಿ ಕೂಡ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಇದರಿಂದಾಗಿ ಸದ್ಯ ಪೊಲೀಸ್‌ ಇಲಾಖೆಯ ವಾಂಟೆಡ್‌ ಲಿಸ್ಟ್‌ನಲ್ಲಿ ಕಂಠಿ ಇದ್ದಾನೆ!

ಹೌದು. ಸದ್ಯ ಪುಟ್ಟಕ್ಕನ ಮಕ್ಕಳು ಕಥೆ ತೀವ್ರ ಕುತೂಹಲ ಪಡೆದುಕೊಂಡಿದೆ. ಪ್ರೀತಿಯ ಮಡದಿ ಸ್ನೇಹಾ ಸಾವಿನಿಂದ ಕಂಠಿ ಕಂಗಾಲಾಗಿದ್ದಾನೆ. ಒಳ್ಳೆಯವರಿಗೆ ಕಾಲ ಇಲ್ಲ ಎನ್ನುವುದು ಅವನಿಗೆ ಅರಿವಾಗಿದೆ.  ಸದ್ಯ ಹೊಸ ಸ್ನೇಹಾಳ ಎಂಟ್ರಿಯಾಗಿದ್ದು, ಕಂಠಿ ಮತ್ತು ಈಕೆ ಯಾವಾಗ ಒಂದಾಗ್ತಾರೆ ಎಂದು ಫ್ಯಾನ್ಸ್‌ ಕಾತರದಿಂದ ಕಾಯುತ್ತಿದ್ದಾರೆ. ಆದರೆ ಸದ್ಯದ ಸ್ಥಿತಿಯಲ್ಲಿ ಈ ಸ್ನೇಹಾಳನ್ನು ಕಂಡರೆ ಕಂಠಿ ಕೊತ ಕೊತ ಕುದಿಯುತ್ತಿದ್ದಾನೆ. ತನ್ನ ತಾಯಿ ಬಂಗಾರಮ್ಮನ ಸಾಯಿಸಲು ಹೋದ ಹಾಗೂ ಪತ್ನಿ ಸ್ನೇಹಾಳನ್ನು ಸಾವಿಗೆ ಕಾರಣರಾಗಿರುವ ಸಿಂಗಾರಮ್ಮ ಮತ್ತು ಆತನ ಮಗನನ್ನು ಮುಗಿಸಿಬಿಡಲು ಹೋಗುವಾಗ ಹೊಸ ಸ್ನೇಹಾ ತಡೆದಿದ್ದಾಳೆ. ಇದಾಗಲೇ ಕೆಲವರಿಗೆ ಚೂರಿ ಇರಿತ ಮಾಡಿದ್ದ ಕಂಠಿ. ಪೊಲೀಸರು ಬಂದಾಗ ಸ್ನೇಹಾ, ತನ್ನ ಕೈಗೆ ಚೂರಿಯನ್ನು ತೆಗೆದುಕೊಂಡು ತಾನೇ ಅಪರಾಧ ಮಾಡಿದಂತೆ ಬಿಂಬಿಸಿದ್ದಾಳೆ. ಸದ್ಯ ಸ್ನೇಹಾ ಜೈಲುಪಾಲಾಗಿದ್ದಾಳೆ. ಇದರಿಂದ ಕಂಠಿ ಅವಳ ಮೇಲೆ ಪ್ರೀತಿ ತೋರ್‍ತಾನಾ ಕಾದು ನೋಡುವಷ್ಟರಲ್ಲಿಯೇ ಇಬ್ಬರ ಕೊಲೆ ಮಾಡಿರುವ ಆರೋಪ ಅವನ ಮೇಲೆ ಬಂದಿದೆ! 

ಅವ್ರ ಹೆಸರನ್ನೇನಾದ್ರೂ ಹೇಳಿದ್ದಿದ್ರೆ, ಕಟ್ಕೊಂಡಾಕೆ ಜೀವ ಕಳ್ಕೋತಿದ್ರು: ಲೀಲಾವತಿ ಹಳೇ ವಿಡಿಯೋ ವೈರಲ್‌

ಸ್ನೇಹಾ ಸುಳ್ಳು ಹೇಳುತ್ತಿದ್ದಾಳೆ ಎನ್ನುವುದು ಲೇಡಿ ಪೊಲೀಸ್‌ಗೆ ತಿಳಿದಿದೆ. ಆದರೂ ಸ್ನೇಹಾ ತನ್ನದೇ ತಪ್ಪು ಎಂದು ವಾದಿಸುತ್ತಿದ್ದಾಳೆ. ಕಂಠಿಯನ್ನು ಬಚಾವ್‌ ಮಾಡುವುದು ಆಕೆಗೆ ಇರುವ ಗುರಿ. ಎಷ್ಟೆಂದರೂ ಕಂಠಿಯ ಪ್ರೀತಿಯ ಮಡದಿಯ ಹೃದಯವನ್ನು ಹೊತ್ತುಕೊಂಡಿದ್ದಾಳಲ್ಲ ಈ ಸ್ನೇಹಾ. ಇದೇ ಕಾರಣಕ್ಕೆ ಕಂಠಿ ಸಾಹೇಬ್ರು ಎಂದ್ರೆ ಅವಳಿಗೆ ಅಕ್ಕರೆ. ಆದರೆ ಪೊಲೀಸ್‌ಗೆ ಕಂಠಿಯದ್ದೇ ಎಲ್ಲಾ ಕಿತಾಪತಿ ಎನ್ನುವ ವಿಷಯ ತಿಳಿದಿದೆ. ಇದೇ ಕಾರಣಕ್ಕೆ ಕಂಠಿಯನ್ನು ಹುಡುಕಿಯೇ ತೀರುವ ಪಣ ತೊಟ್ಟಿದ್ದಾಳೆ ಲೇಡಿ ಇನ್ಸ್‌ಪೆಕ್ಟರ್‍‌.

ಇದೀಗ ಆಕೆ ಪುಟ್ಟಕ್ಕನ ಮನೆಗೂ ಎಂಟ್ರಿ ಕೊಟ್ಟಿದ್ದಾಳೆ. ಆದರೆ ಪುಟ್ಟಕ್ಕ ಮತ್ತು ಮನೆಯವರಿಗೆ ಕಂಠಿಯನ್ನು ಈಕೆ ಯಾಕೆ ಹುಡುಕುತ್ತಾ ಇದ್ದಾಳೆ ಎನ್ನುವುದೇ ತಿಳಿದಿಲ್ಲ. ತಮ್ಮ ಅಳಿಯ ಯಾವುದೇ ತಪ್ಪು ಮಾಡಿಲ್ಲ ಎನ್ನುವುದು ಅವರ ಮಾತು. ಆದರೆ ಇನ್ಸ್‌ಪೆಕ್ಟರ್‍‌ ಬಿಡಬೇಕಲ್ಲ. ನನ್ನ ಮೇಲೆ ರೇಗಾಡಿದ್ದಾನೆ. ಕಣ್ಣು ತಪ್ಪಿಸಿ ಜೈಲಿಗೆ ಬಂದಿದ್ದಾನೆ. ಒದ್ದು ಒಳಗೆ ಹಾಕ್ತೇನೆ ಎಂದಿದ್ದಾಳೆ. ತಪ್ಪು ಮಾಡಿಲ್ಲ ಅಂದರೆ ತಲೆ ಮರೆಸಿಕೊಂಡುಓಡಾಡುವ ಅಗತ್ಯವಿಲ್ಲ ಎಂದಿದ್ದಾಳೆ. 24 ಗಂಟೆ ಟೈಮ್ ಕೊಡುತ್ತೇನೆ. ಅವನು ಎಲ್ಲಿದ್ದರೂ ಹುಡುಕಿ ಹೇಳಬೇಕು. ಇಲ್ಲದೇ ಹೋದರೆ, ಅವನನ್ನು ಒಳಗೆ ಹಾಕಿ, ಹೊರಗೆ ಬರದ ರೀತಿಯಲ್ಲಿ ಕೇಸ್‌ ಫಿಟ್‌ ಮಾಡುತ್ತೇನೆ ಎಂದು ಎಚ್ಚರಿಕೆ ಕೊಟ್ಟು ಹೋಗಿದ್ದಾಳೆ. ಪೊಲೀಸ್‌ ಇಲಾಖೆಯಿಂದ ಮಿಸ್ಸಿಂಗ್‌ ಪಾಂಪ್ಲೆಟ್‌ ಕೂಡ ಹಂಚಲಾಗುತ್ತಿದೆ! ಮುಂದೇನು ಎನ್ನುವುದು ಸದ್ಯದ ಕುತೂಹಲ.

ಕಳೆದ ವಾರ ಗಂಡ-ಹೆಂಡ್ತಿ ಗೋವಾಕ್ಕೆ ಹೋಗಿದ್ರು: ನಟಿ ಶೋಭಿತಾ ಸಾವಿಗೆ ನಟ ಹರ್ಷ ಹೇಳಿದ್ದೇನು?

Latest Videos
Follow Us:
Download App:
  • android
  • ios