ಪುಟ್ಟಕ್ಕನ ಮಕ್ಕಳು ಖ್ಯಾತಿಯ ಸ್ನೇಹಾ ಅಂದ್ರೆ ಸಂಜನಾ ಅವರು ರೀಲ್ಸ್​ ಮಾಡಿದ್ದು, ಅಭಿಮಾನಿಗಳು ನಟಿಯ ಕಾಲೆಳೆಯುತ್ತಿದ್ದಾರೆ. ಏನಂತಿದ್ದಾರೆ ಫ್ಯಾನ್ಸ್​? 

ಧಾರಾವಾಹಿ ಪ್ರಿಯರ ಮನಸ್ಸನ್ನು ಗೆದ್ದು, ಕದ್ದು ಬೀಗುತ್ತಿರೋ ನಟಿಯರಲ್ಲಿ ಒಬ್ಬರು ಸಂಜನಾ ಬುರ್ಲಿ. ಸಂಜನಾ ಬುರ್ಲಿ ಎಂದರೆ ಬಹುಶಃ ಯಾರಿಗೂ ಅರ್ಥವಾಗಲಿಕ್ಕಿಲ್ಲ. ಅದೇ ಸ್ನೇಹಾ ಎಂದರೆ ಸಾಕು, ತಮ್ಮ ಪರಿಚಯಸ್ಥರಲ್ಲಿ ಸ್ನೇಹಾ ಎನ್ನುವ ಹೆಸರು ಇದ್ದವರಿದ್ದರೂ ಮೊದಲಿಗೆ ನೆನಪಿಗೆ ಬರುವುದು ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿ ಖ್ಯಾತಿಯ ಸ್ನೇಹಾ ಅಲ್ಲವೆ? ಸದಾ ಟಿಆರ್​ಪಿಯಲ್ಲಿ ಮುಂದೆ ಇರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾಳೇ ಹೈಲೈಟ್​. ಎಷ್ಟೋ ಮಂದಿಗೆ ಮಾದರಿ ಹೆಣ್ಣೀಕೆ. ರೌಡಿ ಕಂಠಿಯ ಜೊತೆಗಿನ ಸಂಪ್ರದಾಯಸ್ಥ ಹೆಣ್ಣುಮಗಳು ಸ್ನೇಹಾಳ ಲವ್​ ಸ್ಟೋರಿಯೇ ಈ ಧಾರಾವಾಹಿಯ ಬಂಡವಾಳ. ಇದರಲ್ಲಿ ಸ್ನೇಹಾಳ ಅಸಲಿ ಹೆಸರೇ ಸಂಜನಾ ಬುರ್ಲಿ. ಕಂಠಿ ಪಾತ್ರಧಾರಿ ಧನುಷ್ ಎನ್ ಎಸ್. ಧಾರಾವಾಹಿಯ ಈ ಕ್ಯೂಟ್​ ಜೋಡಿ ಅದೆಷ್ಟು ಫೇಮಸ್​ ಎಂದರೆ, ಇಬ್ಬರೂ ನಿಜ ಜೀವನದಲ್ಲಿಯೂ ಮದ್ವೆಯಾಗಲಿ ಅಂತಿದ್ದಾರೆ ಫ್ಯಾನ್ಸ್​! 

 ಸ್ನೇಹಾ ಅಲಿಯಾಸ್​ ಸಂಜನಾ ಅವರು ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಇದೀಗ ಅವರು ಲುಟ್​ ಪುಟ್​ ಗಯಾಗೆ ಹಾಡಿಗೆ ಸಕತ್​ ಡ್ಯಾನ್ಸ್​ ಮಾಡಿದ್ದಾರೆ. ಸಂಜನಾ ಅವರ ನೃತ್ಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ನೀವು ಸ್ನೇಹಾ ಆಗಿಯೂ ಸೂಪರ್​, ಸಂಜನಾ ಆಗಿಯೂ ಸೂಪರ್​ ಎಂದು ಹೊಗಳುತ್ತಿದ್ದಾರೆ. ಬಂಗಾರಮ್ಮನ ಮನೆಯಲ್ಲಿಯೂ ನಿಮ್ದೇ ಹವಾ, ಸೋಷಿಯಲ್​ ಮೀಡಿಯಾದಲ್ಲಿಯೂ ನಿಮ್ದೇ ಹವಾ ಮೇಡಂ ಎಂದು ಹಲವರು ಕಮೆಂಟ್​ ಮೂಲಕ ಶ್ಲಾಘಿಸುತ್ತಿದ್ದಾರೆ. ಹಲವರು ಹಾರ್ಟ್​​ ಇಮೋಜಿಗಳಿಂದ ಸಂಜನಾ ಅವರಿಗೆ ಪ್ರೀತಿಯ ಧಾರೆ ಹರಿಸುತ್ತಿದ್ದಾರೆ. 

ಅಮೃತಧಾರೆಗೆ ನಟಿ ಸಪ್ತಮಿ ಗೌಡ ಎಂಟ್ರಿ! ಭೂಮಿಕಾ ತಂಗಿ ಜೊತೆ ಜೈದೇವನ ಮದ್ವೆ- ಇದೇನಿದು?

ಸ್ನೇಹಾ ಪಾತ್ರದಲ್ಲಿ ನಿಮ್ಮನ್ನು ನೋಡಿದಾಗ ರಿಯಲ್​ ಲೈಫ್​ನಲ್ಲಿ ನೀವು ಇಷ್ಟೊಂದು ಚೆನ್ನಾಗಿ ನೃತ್ಯ ಮಾಡುತ್ತೀರಿ ಎಂದು ಹೇಳುವುದೇ ಕಷ್ಟ ಎಂದಿದ್ದಾರೆ. ಇನ್ನು ಕೆಲವರು ಮೊದ್ಲು ಕಂಠಿ ಮೇಲೆ ಪೀರುತಿ ತೋರಿ ಮೇಡಂ ಎನ್ನುತ್ತಿದ್ದಾರೆ. ಪಾಪ ಕಂಠಿ ನಿಮಗಾಗಿ ಎಷ್ಟೆಲ್ಲಾ ಕಷ್ಟಪಡುತ್ತಿದ್ದರೂ ಪ್ರೀತಿಯ ಬಗ್ಗೆ ಬಹಿರಂಗನೇ ಪಡಿಸಲಿಲ್ವೆ ಅಂತಿದ್ದಾರೆ. ವಸು ಬದ್ಲು ನೀವೇ ಪ್ರೆಗ್ನೆಂಟ್​ ಅಂತ ಹೇಳಿ ಆಗಿದೆ. ಬೇಗ ನೀವು ಪ್ರೆಗ್ನೆಂಟ್​ ಆಗಿ ಅಂತಿದ್ದಾರೆ ಫ್ಯಾನ್ಸ್​. 

ಇನ್ನು ಪುಟ್ಟಕ್ಕನ ಮಕ್ಕಳು ಸೀರಿಯಲ್​ ವಿಷ್ಯಕ್ಕೆ ಬರುವುದಾದರೆ, ಸ್ನೇಹಾ ಮತ್ತು ಕಂಠಿ ನಡುವೆ ಪ್ರೀತಿ ಶುರುವಾಗಿದೆ. ಕಂಠಿಗೆ ಮೊದಲಿನಿಂದಲೂ ಸ್ನೇಹಾಳ ಮೇಲೆ ಪ್ರೀತಿ. ಆದರೆ ಕೆಲವು ಕಾರಣಗಳಿಂದ ಕಂಠಿಯನ್ನು ಕಂಡರೆ ಸ್ನೇಹಾ ಉರವರ ಅನ್ನುತ್ತಿದ್ದಳು. ಇದೀಗ ಪತಿಯ ಮೇಲೆ ಪ್ರೀತಿ ಮೂಡಿದೆ. ಕಂಠಿ ರೈತನಾಗಿ ಹೊಲದಲ್ಲಿ ದುಡಿಯುತ್ತಿದ್ದರೆ, ಸ್ನೇಹಾ ಬುತ್ತಿ ತಂದು ಕೊಡುತ್ತಿದ್ದಾಳೆ. 

ಶೆರ್ಲಿನ್​ ಬರ್ತ್​ಡೇ ಆಚರಿಸಿಕೊಂಡದ್ದು ಹೀಗೆ- ಹುಟ್ಟುಡುಗೆಯಲ್ಲಿ ಬರೋದೊಂದೇ ಬಾಕಿ ಎಂದ ನೆಟ್ಟಿಗರು!

View post on Instagram