Asianet Suvarna News Asianet Suvarna News

ಶೆರ್ಲಿನ್​ ಬರ್ತ್​ಡೇ ಆಚರಿಸಿಕೊಂಡದ್ದು ಹೀಗೆ- ಹುಟ್ಟುಡುಗೆಯಲ್ಲಿ ಬರೋದೊಂದೇ ಬಾಕಿ ಎಂದ ನೆಟ್ಟಿಗರು!

ರಾಹುಲ್​ ಗಾಂಧಿಯನ್ನು ಮದ್ವೆಯಾಗುವುದಾಗಿ ಹೇಳುವ ಮೂಲಕ ಸುದ್ದಿಯಾಗಿದ್ದ ಹಾಟ್​ ಬ್ಯೂಟಿ ಶೆರ್ಲಿನ್​ ಚೋಪ್ರಾ ಹೀಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ನೆಟ್ಟಿಗರು ಹೇಳಿದ್ದೇನು ನೋಡಿ...
 

Hot beauty Sherlyn Chopra has celebrated her birthday like this fans reacts suc
Author
First Published Feb 9, 2024, 12:38 PM IST

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಯವರನ್ನು ಮದ್ವೆಯಾಗಲು ರೆಡಿ ಎನ್ನುವ ಮೂಲಕ ಹಲ್​ಚಲ್​ ಸೃಷ್ಟಿಸಿದ್ದ ನಟಿ ಶೆರ್ಲಿನ್​ ಚೋಪ್ರಾ ಇದೀಗ ತಮ್ಮ 40ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಗೂಗಲ್​ ದಾಖಲೆ ಪ್ರಕಾರ ನಟಿಯ ಹುಟ್ಟುಹಬ್ಬ ಫೆಬ್ರುವರಿ 11. 1984ರಲ್ಲಿ ಹುಟ್ಟಿರುವ ಶೆರ್ಲಿನ್​​ಗೆ ಇದೀಗ 40 ವರ್ಷ. ಎರಡು ದಿನ ಮುಂಚಿತವಾಗಿಯೇ ಅಂದರೆ, ಇಂದು ಹುಟ್ಟುಹಬ್ಬವನ್ನು ಪಾಪರಾಜಿಗಳ ಜೊತೆ ಸೆಲೆಬ್ರೇಟ್​ ಮಾಡಿದ್ದಾರೆ ನಟಿ. ಕೈಯಲ್ಲಿ ಕೇಕ್​ ಹಿಡಿದುಕೊಂಡು, ಮೋಂಬತ್ತಿ ಇಟ್ಟು ತಮ್ಮನ್ನು ತಾವು ಬೇಬಿ ಡಾಲ್​ ಎಂದು ಕರೆದುಕೊಂಡು ತಮಗೇ ತಾವು ವಿಷ್​ ಮಾಡಿಕೊಂಡಿದ್ದಾರೆ. ಇವರ ಹಿಂದೆ ಮುಂದೆ ಸುತ್ತಾಡುವ ಪಾಪರಾಜಿಗಳು ಕ್ಯಾಮೆರಾ ಹಿಡಿದುಕೊಂಡು ವಿಡಿಯೋಶೂಟ್​ ಮಾಡುತ್ತಾ ಶೆರ್ಲಿನ್​ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಇದರ ವಿಡಿಯೋ ವೈರಲ್​ ಆಗುತ್ತಿದೆ.

ಅಷ್ಟಕ್ಕೂ ಬಹುತೇಕ ಬಾಲಿವುಡ್​ ಪ್ರಿಯರಿಗೆ ತಿಳಿದಿರುವಂತೆ ಬಳಕುವ ಬಳ್ಳಿಯಂತೆ ಇರುವ ನಟಿ ಶೆರ್ಲಿನ್​ ಚೋಪ್ರಾ ಫೇಮಸ್​ ಆಗಿರೋದು ಅವರ ಮಾದಕವಾಗಿರುವ ಎದೆಯ ಗಾತ್ರದಿಂದ. ಎದೆ ಭಾಗಕ್ಕೆ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡು ಧಾರಾಳವಾಗಿ ಪ್ರದರ್ಶನ ಮಾಡುತ್ತಿರುವ ಕೆಲವು ನಟಿಯರ ಪೈಕಿ ಮೊದಲ ಸ್ಥಾನದಲ್ಲಿರುವವರು ನಟಿ ಶೆರ್ಲಿನ್​ ಚೋಪ್ರಾ. ಇನ್ನೋರ್ವ ಡ್ರಾಮಾ ಕ್ವೀನ್​ ರಾಖಿ ಸಾವಂತ್​ ಸ್ನೇಹಿತೆಯೆಂದು ಪೋಸ್​ ಕೊಟ್ಟು ಕೊನೆಗೆ ಆಕೆಯ ಗಂಡ ಆದಿಲ್​ ಖಾನ್​ ದುರ್ರಾನಿಯ ಜೊತೆ ಕಾಣಿಸಿಕೊಂಡು ಸುದ್ದಿಯಾಗಿದ್ದ ಶೆರ್ಲಿನ್​, ಅಂಗಾಂಗ ಪ್ರದರ್ಶನದಿಂದಲೇ ಸದ್ದು ಮಾಡುತ್ತಿರುವ ನಟಿ. ಯಾವುದೇ ಸಂಕೋಚವಿಲ್ಲದೇ ತನ್ನ ಖಾಸಗಿ ಜೀವನದ ಕುರಿತು ಮಾತನಾಡಿದ್ದ ಶೆರ್ಲಿನ್​,  ಹಣಕ್ಕಾಗಿ ಹಲವು ಜನರೊಂದಿಗೆ ಮಲಗಿರುವುದಾಗಿ ಹೇಳಿಕೊಂಡಿದ್ದರು.   'ನಾನು ಈ ಹಿಂದೆ ಹಣಕ್ಕಾಗಿ ಹಲವರ ಜೊತೆ ಮಲಗಿದ್ದೆ, ನಿಮ್ಮನ್ನು ನಿರಾಶೆಗೊಳಿಸಿದ್ದಕ್ಕಾಗಿ ಕ್ಷಮಿಸಿ, ಆದರೆ ನಾನು ಇನ್ನು ಮುಂದೆ ಹಣಕ್ಕಾಗಿ ಇಂತಹ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ' ಎಂದು ಹೇಳಿದ್ದರು. ಅದೇ ಇನ್ನೊಮ್ಮೆ,  ರಾಹುಲ್ ಗಾಂಧಿಯವರನ್ನು ಮದುವೆಯಾಗಲು ರೆಡಿ ಎಂದು ಮಾಧ್ಯಮಗಳ ಮುಂದೆ ಹೇಳಿದ್ದ ನಟಿ,   ಒಂದು ಕಂಡೀಷನ್​ ಹಾಕಿದ್ರು. ಅದೇನೆಂದ್ರೆ,  ರಾಹುಲ್ ಗಾಂಧಿಯವರನ್ನು ಮದ್ವೆಯಾಗಲು ರೆಡಿ. ಆದ್ರೆ  ನನ್ನ ಸರ್​ನೇಮ್​ ಮಾತ್ರ ಗಾಂಧಿ ಆಗಲ್ಲ, ಚೋಪ್ರಾನೇ ಆಗಿರುತ್ತದೆ. ಈ ಕಂಡೀಷನ್​ಗೆ ಒಪ್ಪಿದ್ರೆ ನಾನು ರೆಡಿ ಎಂದಿದ್ದರು.

ಹಸಿ ಮೆಣಸಿನಕಾಯಿ ಥರ ಕಾಣಿಸ್ತಿದ್ದೀನಾ ಎಂದು ಕೇಳಿದ ನಟಿ ಶೆರ್ಲಿನ್​ ಚೋಪ್ರಾ: ಫ್ಯಾನ್ಸ್​ ಏನ್​ ಹೇಳಿದ್ರು ಕೇಳಿ...

ಅದಾದ ಬಳಿಕ,  ಉದ್ಯಮಿಯೊಬ್ಬರ ವಿರುದ್ಧ  ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿ ಸುದ್ದಿಯಾಗಿದ್ದರು, ಪತ್ರಿಕಾಗೋಷ್ಠಿ ಕರೆದಿದ್ದ ನಟಿ, ತಮ್ಮ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯದ ಕುರಿತು ಸವಿಸ್ತಾರವಾಗಿ ಹೇಳಿಕೆ ನೀಡಿದ್ದರು. ಮುಂಬೈ ಮೂಲದ ಉದ್ಯಮಿ ಸುನಿಲ್ ಪರಸ್ಮಾನಿ ಲೋಧಾ (Sunil Lodha) ತಮ್ಮ ವಿರುದ್ಧ ತೀರಾ ಕೆಟ್ಟದ್ದಾಗಿ ನಡೆಸಿಕೊಂಡಿರುವ ಬಗ್ಗೆ ಅವರು ಹೇಳಿದ್ದರು. ವಿಡಿಯೋ ಚಿತ್ರೀಕರಣಕ್ಕೆ ಹಣ ನೀಡುವ ನೆಪದಲ್ಲಿ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದು, ಅದನ್ನು ವಿರೋಧಿಸಿದಾಗ  ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ  ನಟಿ ದೂರಿನಲ್ಲಿ ತಿಳಿಸಿದ್ದರು.  

ಇದೀಗ ನಟಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇವರ ವೇಷ ನೋಡಿದ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ನಿಮ್ಮ ಈ ಡ್ರೆಸ್​ ನೋಡಿ ನೋಡಿ ಬೇಸರ ಬಂತು. ಹೇಗೋ ಹುಟ್ಟುಹಬ್ಬ ಇರೋದು. ಹುಟ್ಟುಡುಗೆಯಲ್ಲಿಯೇ ಬಂದು ಬಿಡಿ ಎಂದಿದ್ದರೆ, ಇನ್ನು ಕೆಲವರು ಹುಟ್ಟುಡುಗೆಯಲ್ಲಿ ಎಲ್ಲರ ಎದುರು ಕಾಣಿಸಿಕೊಳ್ಳೋದೊಂದೇ ಬಾಕಿ ಎಂದಿದ್ದಾರೆ. 

ಆಗ ನನಗಿನ್ನೂ 19 ವರ್ಷ... ಸೌತ್​ ನಿರ್ಮಾಪಕ ಮಂಚಕ್ಕೆ ಕರೆದ್ರು... ಅನುಭವ ಹೇಳಿದ ಬಿಗ್​ಬಾಸ್​ ಅಂಕಿತಾ
 

Follow Us:
Download App:
  • android
  • ios